Latest Updates
-
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು -
ಬೆಂಗಳೂರು ಮಳೆ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಬೆಳಗಿನ ವ್ಯಾಯಾಮ ಮತ್ತು ಪ್ರಯಾಣಕ್ಕೆ ಇಲ್ಲಿದೆ ಸುರಕ್ಷತಾ ಟಿಪ್ಸ್ -
ಅಮೆರಿಕದಲ್ಲಿ ಸಮಯ ಬದಲಾವಣೆ: ಭಾರತ-ಯುಎಸ್ ಮೀಟಿಂಗ್ಗಳಲ್ಲಿ ಗೊಂದಲ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಬಜೆಟ್ ಬಿಸಿ ತಟ್ಟದಂತೆ ಪ್ರೋಟೀನ್, ಕ್ಯಾಲ್ಸಿಯಂ ಪಡೆಯುವುದು ಹೇಗೆ? -
ಕನ್ನಡ ರಾಜ್ಯೋತ್ಸವ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಮಹತ್ವದ ಸಲಹೆಗಳು! -
ದೆಹಲಿ ವಾಯು ಮಾಲಿನ್ಯ: 'ಸಿವಿಯರ್' AQI ನಡುವೆ ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಪಾಲಿಸಿ! -
ಅರ್ನಬ್ ಚಂಡಮಾರುತದ ಆರ್ಭಟ: ನಿಮ್ಮ ಕುಟುಂಬದ ಸುರಕ್ಷತೆಗಾಗಿ 30 ನಿಮಿಷದ ತುರ್ತು ಪ್ಲಾನ್ ಇಲ್ಲಿದೆ -
ದೀಪಾವಳಿ ಸಿಹಿ ತಿನ್ನುವ ಮುನ್ನ ಎಚ್ಚರ! ದೆಹಲಿಯಲ್ಲಿ 4,000 ಕೆಜಿ ಕಳಪೆ ಆಹಾರ ಜಪ್ತಿ, ನಿಮ್ಮ ಆರೋಗ್ಯಕ್ಕೆ ಅಪಾಯವೇ?
ಅಕ್ಕಿ- ಜೋಳದ ಹಿಟ್ಟಿನ ಸಮಾಗಮದ ರೊಟ್ಟಿ

ಅಕ್ಕಿ ರೊಟ್ಟಿಯನ್ನೂ ತಿಂದಿರುತ್ತೀರಿ, ಜೋಳದ ರೊಟ್ಟಿಯನ್ನೂ, ಮನೆಯಲ್ಲಿ ಮಾಡದಿದ್ದರೆ ಹೋಟೆಲುಗಳಲ್ಲಿ ಖಂಡಿತ ಸವಿದಿರುತ್ತೀರಿ. ಆದರೆ, ಜೋಳ ಮತ್ತು ಅಕ್ಕಿ ಮಿಶ್ರಣ ಮಾಡಿದ ರೊಟ್ಟಿ ತಿಂದಿದ್ದೀರಾ? ಖಂಡಿತ ತಿಂದಿರಲಾರಿರಿ. ಇವೆರಡು ಹಿಟ್ಟುಗಳನ್ನು ಬೆರೆಸಿ ರೊಟ್ಟಿ ತಯಾರಿಸಿದರೆ ರುಚಿಯೂ ಹೆಚ್ಚು ಮತ್ತು ಆರೋಗ್ಯಕರ ಕೂಡ.
ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ ರೊಟ್ಟಿ ತಯಾರಿಸುವಂತೆ ಈ ಅಕ್ಕಿ, ಜೋಳದ ಹಿಟ್ಟಿನ ಮಿಶ್ರಣದ ರೊಟ್ಟಿ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು
ಅಕ್ಕಿ ಹಿಟ್ಟು 2 ಬಟ್ಟಲು
ಜೋಳದ ಹಿಟ್ಟು 2 ಬಟ್ಟಲು
ಈರುಳ್ಳಿ ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
ಈರುಳ್ಳಿ ಹೂವು ಅಥವ ಸ್ಪ್ರಿಂಗ್ ಆನಿಯನ್ ಸಿಕ್ಕಿದರೆ ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಿ
ಕ್ಯಾರೆಟ್ ತುರಿ 1 ಬಟ್ಟಲು
ಹಸಿಮೆಣಸಿನ ಕಾಯಿ - 3 ಸಣ್ಣಗೆ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು - ಸಣ್ಣಗೆ ಹೆಚ್ಚಿದ್ದು
ಕರಿಬೇವಿನ ಸೊಪ್ಪು - ಸಣ್ಣಗೆ ಹೆಚ್ಚಿದ್ದು
ಇಂಗು ರುಚಿಗೆ ತಕ್ಕಷ್ಟು
ಬಿಳಿ ಎಳ್ಳು 1 ಚಮಚ
ಜೀರಿಗೆ 1 ಚಮಚ
ಓಮ್ ಕಾಳು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೇಲಿನ ಎಲ್ಲ ಪದಾರ್ಥಗಳನ್ನು ಒಂದು ಅಗಲ ಪಾತ್ರೆಗೆ ಹಾಕಿ, ಸ್ವಲ್ಪ ಸ್ವಲ್ಪವೆ ನೀರು ಹಾಕಿ ರೊಟ್ಟಿ ಹದಕ್ಕೆ ಕಲೆಸಿಕೊಳ್ಳಿ. ಆಮೇಲೆ ಬಾಣಲೆಯಲ್ಲಿ ಅಥವ ತವದ ಮೇಲೆ ಎಣ್ಣೆ ಹಾಕಿ ರೊಟ್ಟಿಯಂತೆ ತಟ್ಟಿ ಚೆನ್ನಾಗಿ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿ. ಬಾಣಲೆ ರೊಟ್ಟಿ ಬಲು ರುಚಿ.
ಇದನ್ನು ಚಟ್ನಿಪುಡಿ, ಉಪ್ಪಿನ ಕಾಯಿಯೊಂದಿಗೆ ತುಪ್ಪ ಹಾಕಿ ತಿಂದರೆ ಆಹಾ ಎಂಥ ರುಚಿ. ಇಲ್ಲವಾದರೆ ಕಾಯಿ ಚಟ್ನಿ ಜೊತೆ ಕೂಡ ತಿನ್ನಬಹುದು. ಮಾಡಲು ಸುಲಭ ಹಾಗು ದಿನಾ ಬೇರೆ ಬೇರೆ ರುಚಿ ಬಯಸುವರಿಗೆ ಇದೊಂದು ಉತ್ತಮ ಅವಕಾಶ. ಇದರ ಜೊತೆ ಸ್ವಲ್ಪ ಗೋಧಿ ಹಿಟ್ಟು ಕೂಡ ಬೆರೆಸಿ ಮಾಡಬಹುದು. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಬರಿ ಅಕ್ಕಿ ಹಿಟ್ಟಿನ ಬದಲು ಈ ರೀತಿ ಮಾಡಬಹುದು. ಜೋಳ, ಗೋಧಿ ಆರೋಗ್ಯಕ್ಕೆ ಬಹಳ ಒಳ್ಳೆಯದು.



Click it and Unblock the Notifications
