Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಕಡಲೆ ರೊಟ್ಟಿ -ಬ್ರೇಕ್ ಫಾಸ್ಟ್ ರೆಸಿಪಿ
ರೊಟ್ಟಿ ಅಡುಗೆ ಕರ್ನಾಟಕದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಜೋಳದ ರೊಟ್ಟಿ, ಅಕ್ಕಿ ರೊಟ್ಟ, ರಾಗಿ ರೊಟ್ಟಿ ಇವುಗಳನ್ನು ಇಲ್ಲಿ ಹೆಚ್ಚಾಗಿ ತಯಾರಿಸಲಾಗುವುದು. ನಮ್ಮಲ್ಲಿ ಹೆಚ್ಚಿನವರು ಈ ರೊಟ್ಟಿಯ ರುಚಿ ನೋಡಿರುತ್ತೇವೆ.
ಇಲ್ಲಿ ನಾವು ಕಡಲೆ ರೊಟ್ಟಿಯ ರೆಸಿಪಿ ನೀಡಿದ್ದೇವೆ. ಕಡಲೆ ಹಿಟ್ಟಿನಿಂದ ತಯಾರಿಸುವ ಈ ರೊಟ್ಟಿ ಕೂಡ ಇತರ ರೊಟ್ಟಿಗಳಂತೆ ರುಚಿಕರವಾಗಿದ್ದು ತಯಾರಿಸುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಕಡಲೆ ಹಿಟ್ಟು 2 ಕಪ್
ಮೈದಾ ಅರ್ಧ ಕಪ್
ಖಾರದ ಪುಡಿ (ಅರ್ಧ ಅಥವಾ ಒಂದು ಚಮಚ)
ಆಮ್ ಚೂರ್ (ಒಣ ಮಾವಿನ ಪುಡಿ) ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು (ಚಿಕ್ಕದಾಗಿ ಕತ್ತರಿಸಿದ್ದು)
ತುಪ್ಪ 1 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕಡಲೆ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಬೇಕು.
2. ಅದಕ್ಕೆ ಖಾರದ ಪುಡಿ, ಆಮ್ ಚೂರ್, ಜೀರಿಗೆ , ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಬೇಕು.
3. ಈಗ ಈ ಮಿಶ್ರಣಕ್ಕೆ ಸ್ವಲ್ಪ ಬಿಸಿ ನೀರು ಹಾಕಿ ರೊಟ್ಟಿ ಹದಕ್ಕೆ ಕಲೆಸಬೇಕು. ಒಂದು ಚಮಚ ಬಿಸಿ ತುಪ್ಪ ಹಾಕಿ ಮತ್ತೊಮ್ಮೆ ಕಲೆಸಿ.
4. ನಂತರ ಈ ಮಿಶ್ರಣದಿಂದ ಸಾಧಾರಣ ಗಾತ್ರದ ಉಂಡೆಗಳನ್ನು ಮಾಡಿ ರೊಟ್ಟಿಗೆ ತಟ್ಟಿ.
5. ತವಾವನ್ನು ಬಿಸಿ ಮಾಡಿ ಅದರಲ್ಲಿ ತಟ್ಟಿದ
ಮಿಶ್ರಣವನ್ನು ಹಾಕಿ 2 ಕಡೆ ಬೇಯಿಸಿದರೆ ಕಡಲೆ ಹಿಟ್ಟಿನ ರೊಟ್ಟಿ ರೆಡಿ.
ಇದನ್ನು ಗ್ರೇವಿ, ಖಾರ ಚಟ್ನಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ.



Click it and Unblock the Notifications