Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮನೆಯಲ್ಲಿ ಮಾಡುವ ಜ್ಯೂಸ್ ಮತ್ತಷ್ಟು ರುಚಿ ಹಾಗೂ ಆರೋಗ್ಯಕರವಾಗಿಸಲು ಟಿಪ್ಸ್
ನೀವು ಮನೆಯಲ್ಲಿ ಫ್ರೂಟ್ ಜ್ಯೂಸ್ ಮಾಡುವಾಗ ಏಕೆ ಇದು ಹೋಟೆಲ್ಗಳಲ್ಲಿ ಸಿಗುವಷ್ಟು ರುಚಿಯಾಗುತ್ತಿಲ್ಲ ಎಂದು ಅನಿಸಬಹುದು.ಅವರು ಬಳಸುವ ಸಾಮಗ್ರಿಗಳನ್ನೇ ಬಳಸಿದ್ದೇನೆ ಆದರೂ ಏನೋ ಟೇಸ್ಟ್ ವ್ಯತ್ಯಾಸವಾಗುತ್ತಿದೆಯಲ್ಲಾ ಎಂದು ಕೆಲವೊಮ್ಮೆ ಅನಿಸುವುದು. ಅದರಲ್ಲೂ ಮೂಸಂಬಿ, ಆ್ಯಪಲ್ ಜ್ಯೂಸ್ ಮಾಡುವಾಗ ಈ ರೀತಿ ಅನಿಸುವುದು ಸಹಜ ಅಲ್ವಾ?
ನಾವು ಜ್ಯೂಸ್ ಮಾಡುವಾಗ ಕೆಲವೊಂದು ಟ್ರಿಕ್ಸ್ ಬಳಸಿದರೆ ರೆಸ್ಟೋರೆಂಟ್ಗಳಲ್ಲಿ, ಜ್ಯೂಸ್ ಅಂಗಡಿಗಳಲ್ಲಿ ಸಿಗುವಷ್ಟೇ ರುಚಿಕರವಾದ ಜ್ಯೂಸ್ ಸವಿಯಬಹುದು, ಆ ಟ್ರಿಕ್ಸ್ ಏನು ಎಂಬುವುದು ಇಲ್ಲಿ ನೀಡಲಾಗಿದೆ ನೋಡಿ:

ಜ್ಯೂಸರ್ ಬಿಸಿ ಇರಬಾರದು
ಮನೆಯಲ್ಲಿ ಜ್ಯೂಸ್ ಮಾಡುವಾಗ ಜ್ಯೂಸರ್ ಬಿಸಿ ಇರಬಾರದು, ಜ್ಯೂಸರ್ ತುಂಬಾ ಬಿಸಿಯಿದ್ದರೆ ಹಣ್ಣು ಹಾಗೂ ತರಕಾರಿಗಳಲ್ಲಿರುವ ರುಚಿ ಹಾಳು ಮಾಡುವುದರ ಜೊತೆಗೆ ರುಚಿಯೂ ಅಷ್ಟು ಚೆನ್ನಾಗಿರಲ್ಲ.

ಹಣ್ಣುಗಳನ್ನು, ಜ್ಯೂಸ್ಗಳನ್ನು ಫ್ರಿಡ್ಜ್ನಲ್ಲಿ ಇಡಬೇಡಿ
ಹಣ್ಣುಗಳು ಹಾಳಾಗಬಾರದು ಎಂದು ಹೆಚ್ಚಿನವರು ಹಣ್ಣುಗಳನ್ನು ಫ್ರಿಡ್ಜ್ನಲ್ಲಿಡುತ್ತಾರೆ. ಆದರೆ ಹಣ್ಣುಗಳನ್ನು ಫ್ರಿಡ್ಜ್ನಲ್ಲಿಡುವುದರಿಂದ ಪೋಷಕಾಂಶ ಹಾಳಾಗುವುದರ ಜೊತೆ ಹಣ್ಣು, ತರಕಾರಿಗಳ ನೈಸರ್ಗಿಕ ರುಚಿಯೂ ಹಾಳಾಗುವುದು, ಅದೇ ಹಾಗೇ ಹೊರಗಿಟ್ಟು ಮಾಡಿ ನೋಡಿ ರುಚಿ ತುಂಬಾನೇ ಚೆನ್ನಾಗಿರುತ್ತದೆ.
ಇನ್ನು ಜ್ಯೂಸ್ ಮಾಡಿದ ಕೆಲವರಿಗೆ ಅದನ್ನು ಫ್ರಿಡ್ಜ್ನಲ್ಲಿಟ್ಟು ಕುಡಿಯುವ ಅಭ್ಯಾಸವಿರುತ್ತದೆ, ಆದರೆ ಜ್ಯೂಸ್ ಫ್ರಿಡ್ಜ್ನಲ್ಲಿಟ್ಟರೆ ಅದರ ಪೋಷಕಾಂಶಗಳು ಹಾಳಾಗುವುದು, ಆದ್ದರಿಂದ ಹಾಗೇ ಮಾಡಬೇಡಿ.

ಸಕ್ಕರೆ ಹಾಕಬೇಡಿ
ಜ್ಯೂಸ್ನ ರುಚಿ ಹೆಚ್ಚಾಗಿಲಿ ಎಂದು ಸಕ್ಕರೆ ಹಾಕುತ್ತೇವೆ, ಆದರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಹಣ್ಣುಗಳಲ್ಲಿಯೇ ಸಿಹಿ ಅಂಶ ಇರುತ್ತದೆ, ಆದ್ದರಿಂದ ಸಕ್ಕರೆ ಹಾಕಿ ಜ್ಯೂಸ್ ಮಾಡಬೇಡಿ. ಅದಕ್ಕೆ ಉಪ್ಪು, ಮಸಾಲೆ ಕೂಡ ಸೇರಿಸಬೇಡಿ.

ಬೀಜವನ್ನು ತೆಗೆಯಿರಿ
ಹಣ್ಣುಗಳ ಜ್ಯೂಸ್ ಮಾಡುವಾಗ ಮೊದಲು ಅದರ ಬೀಜಗಳನ್ನು ಸರಿಯಾಗಿ ತೆಗೆಯಬೇಕು, ಬೀಜಗಳಿದ್ದರೆ ಜ್ಯೂಸ್ನ ರುಚಿ ಹಾಳಾಗುವುದು ಜೊತೆಗೆ ಸೇಬು ಮುಂತಾದ ಹಣ್ಣುಗಳ ಬೀಜಗಳು ಆರೋಗ್ಯಕ್ಕೂ ಒಳ್ಳೆಯದಲ್ಲ.

ಕಹಿ ಪದಾರ್ಥ ಜೊತೆ ಸಿಹಿ ಹಣ್ಣುಗಳನ್ನು ಮಿಕ್ಸ್ ಮಾಡಿ ಜ್ಯೂಸ್ ಮಾಡಿ
ಕೆಲವೊಂದು ಸೊಪ್ಪು, ತರಕಾರಿಗಳು ತುಂಬಾನೇ ಕಹಿ, ಆದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇವುಗಳನ್ನು ಜ್ಯೂಸ್ ಮಾಡುವಾ ಸ್ವಲ್ಪ ಟೇಸ್ಟ್ ಬರುವ ರೀತಿಯಲ್ಲಿ ಅಂದ್ರೆ ಕ್ಯಾರೆಟ್ ಅಥವಾ ಇತರ ಹಣ್ಣುಗಳ ಜೊತೆ ಮಿಕ್ಸ್ ಮಾಡಿ, ಬೇಕಿದ್ದರೆ ಸ್ವಲ್ಪ ನಿಂಬೆಹಣ್ಣಿನ ರಸ ಕೂಡ ಸೇರಿಸಿದರೆ ಕುಡಿಯಲು ಸಾಧ್ಯವಾಗುವುದು.



Click it and Unblock the Notifications