Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಮಕ್ಕಳು ಮಹಾನ್ ಸಾಧಕರಾಗಬೇಕೆಂದರೆ ಈ ರೀತಿ ಮಾಡಿ!
ಯಶಸ್ವಿ ವ್ಯಕ್ತಿಯಾಗಬೇಕೆನ್ನುವ ಆಸೆ ಖಂಡಿತ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲವರು ಈ ಪ್ರಯತ್ನದಲ್ಲಿ ಗೆಲ್ಲುತ್ತಾರೆ. ಇನ್ನೂ ಕೆಲವರು ಈ ಪ್ರಯತ್ನದಲ್ಲಿ ಸೋತು ಬಿಡುತ್ತಾರೆ. ಯಾರಿಗಾದರೂ ಸರಿ ಯಶಸ್ಸು ಅನ್ನೋದು ಅಷ್ಟೊಂದು ಸುಲಭವಾಗಿ ಒಲಿದು ಬರೋದಿಲ್ಲ. ಅದಕ್ಕಾಗಿ ಶ್ರಮ ಪಡೆಲೇಬೇಕಾಗುತ್ತದೆ. ಜೊತೆಗೆ ಶ್ರದ್ಧೆಯೂ ಬೇಕಾಗಿರುತ್ತದೆ. ಈ ಎಲ್ಲಾ ಗುಣಗಳು ನಮಗೆ ಚಿಕ್ಕವರಿರಬೇಕಾದರೆ ಬಂದರೆ ಒಳ್ಳೆಯದು. ಇದ್ರಲ್ಲಿ ಪೋಷಕರ ಪಾತ್ರ ತುಂಬಾನೇ ಮುಖ್ಯವಾಗುತ್ತದೆ.
ಮಕ್ಕಳಿರಬೇಕಾದರೆ ನಾವು ಏನನ್ನೇ ಕಲಿಸಿದ್ರು ಮಕ್ಕಳು ಕಲಿತುಕೊಳ್ಳುತ್ತಾರೆ. ಹೀಗಾಗಿ ಪೋಷಕರು ಅವರಿಗೆ ಕೆಲವೊಂದು ಯಶಸ್ಸಿನ ಪಾಠ ಕಲಿಸುವುದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ಮಕ್ಕಳು ಯಶಸ್ವಿಯಾಗುವಂತೆ ಮಾಡೋದಕ್ಕೆ ಪೋಷಕರು ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.

1. ಮಕ್ಕಳನ್ನು ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳೋದಕ್ಕೆ ಬಿಡಬೇಡಿ
ಸಾಮಾನ್ಯವಾಗಿ ಪೋಷಕರು ಮಕ್ಕಳಿಂದ ಯಾವುದೇ ಕೆಲಸವನ್ನು ಮಾಡಿಸೋದಿಲ್ಲ. ಈ ರೀತಿ ಮಾಡುವುದು ತಪ್ಪು. ಮೂರು ಹೊತ್ತು ಅವರ ಕೈಗೆ ಟಿವಿ, ಮೊಬೈಲ್ ಕೊಡುವ ಬದಲು ಚಿಕ್ಕ-ಪುಟ್ಟ ಮನೆ ಕೆಲಸದಲ್ಲಿ ಅವರ ಸಹಾಯ ಪಡೆಯಿರಿ.
ಅವರನ್ನು ಸುಮ್ಮನೆ ಕುಳಿತುಕೊಳ್ಳೋದಕ್ಕೆ ಬಿಡದೆ ಏನಾದರೂ ಕೆಲಸ ಮಾಡಿಸುತ್ತಿರಿ. ಆಗ ಅವರಿಗೆ ಸಹಾಯ ಮಾಡುವ ಗುಣ ಬರುತ್ತದೆ. ಜೊತೆಗೆ ಉದಾಸಿನ ಅವರ ಮೈಗೆ ಹತ್ತೋದಿಲ್ಲ. ಇದರಿಂದ ದೊಡ್ಡವರಾದ ಮೇಲೆ ಅವರು ಏನಾದರೂ ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತದೆ.
2. ಕಷ್ಟ ಏನು ಅನ್ನೋದನ್ನು ಕಲಿಸಿ
ನೀವು ಎಷ್ಟೇ ಶ್ರೀಮಂತರಾಗಿದ್ದರೂ ಸಹ ಮಕ್ಕಳಿಗೆ ಕಷ್ಟದ ಪರಿಚಯ ಮಾಡಸಬೇಕು. ಮಕ್ಕಳಿಗೆ ಒಂದೊಂದು ರೂಪಾಯಿಯ ಬೆಲೆ ಗೊತ್ತಿರಬೇಕು. ಅವರು ಕೇಳಿದ್ದೆಲ್ಲವನ್ನೂ ಸುಲಭವಾಗಿ ತೆಗೆಸಿ ಕೊಡಬೇಡಿ.
ಮನೆಯಲ್ಲಿ ಎಲ್ಲಾ ಸೌಕರ್ಯಗಳು ಸಿಕ್ಕಾಗ ಮಕ್ಕಳು ಕಷ್ಟ ಪಡೋದಕ್ಕೆ ತಯಾರಿರೋದಿಲ್ಲ. ಹೀಗಾಗಿ ಅವರ ಎಲ್ಲಾ ಕೆಲಸವನ್ನು ಅವರೇ ಮಾಡುವಂತೆ ನೋಡಿಕೊಳ್ಳಿ. ಆಗ ಅವರು ಶಿಸ್ತನ್ನು ಕಲಿಯಲು ಸಾಧ್ಯವಾಗುತ್ತದೆ. ದೊಡ್ಡವರಾದ ಮೇಲೆ ಅವರು ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಕೂಡ ಅವರಿಗೆ ಹಣ, ಅಂತಸ್ತು ಹಾಗೂ ಹೆಸರಿನ ಅಹಂ ಹತ್ತೋದಿಲ್ಲ.
3. ಅಚ್ಚು ಕಟ್ಟಾಗಿ ಕೆಲಸವನ್ನು ಮಾಡಿ ಮುಗಿಸುವಂತೆ ನೋಡಿಕೊಳ್ಳಿ
ಚಿಕ್ಕವರಿರಬೇಕಾದರೆ ಮಕ್ಕಳು ಯಾವುದೇ ಕೆಲಸವನ್ನಾದರೂ ಸರಿಯಾಗಿ ಮಾಡೋದಿಲ್ಲ. ಊಟ ಮಾಡುವಾಗ ಅರ್ಧಕ್ಕೆ ಬಿಟ್ಟು ಹೋಗೋದು, ಟಿವಿ ನೋಡುತ್ತಿದ್ದರೆ ಅದನ್ನು ಬಿಟ್ಟು ಎಲ್ಲೋ ಹೋಗುವುದು, ಕೊಟ್ಟ ಕೆಲಸವನ್ನು ಸರಿಯಾಗಿ ಮಾಡದೇ ಇರುವುದು, ಮನೆಯಲ್ಲಿ ಓದುವಂತೆ ನಾಟಕ ಮಾಡುವುದು ಇತ್ಯಾದಿ. ಇದನ್ನೆಲ್ಲಾ ಪೋಷಕರು ಚಿಕ್ಕಂದಿನಿಂದಲೇ ಸರಿ ಪಡಿಸಬೇಕು.
ಪ್ರತಿಯೊಂದು ಕೆಲಸವನ್ನು ಅವರು ಪರ್ಫೆಕ್ಟ್ ಆಗಿ ಮಾಡುವಂತೆ ನೋಡಿಕೊಳ್ಳಿ. ಕೆಲಸದಲ್ಲಿ ಶ್ರದ್ಧೆ ಇರಲಿ ಹಾಗೂ ಮಾಡುವ ಕೆಲಸ ಪರಿಪೂರ್ಣವಾಗಿರಬೇಕು. ಚಿಕ್ಕದಿಂದಲೇ ಈ ಅಭ್ಯಾಸ ಬಂದರೆ ದೊಡ್ಡವರಾದ ಮೇಲೆ ಇದನ್ನೇ ಮೈಗೂಡಿಸಿಕೊಂಡು, ಯಶಸ್ವಿ ವ್ಯಕ್ತಿಗಳಾಗಿ ಏನಾದರೂ ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತದೆ.
4. ಕುಟುಂಬದ ಜೊತೆಗೆ ಬಾಂಧವ್ಯ ಉತ್ತಮವಾಗಿರಲಿ
ಮಕ್ಕಳಿಗೆ ಕುಟುಂಬ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಮಕ್ಕಳು ತಮ್ಮ ಕುಟುಂಬದ ಜೊತೆಗೆ ಅಂತರ ಕಾಯ್ದುಕೊಳ್ಳದಂತೆ ನೋಡಿಕೊಳ್ಳಬೇಕು. ನೀವು ಏನಾದರೂ ಕೆಲಸ ಮಾಡುತ್ತಿರುವಾಗ ಮಕ್ಕಳ ಸಹಾಯ ಪಡೆಯಿರಿ. ಮಕ್ಕಳಿಗೆ ಶಾಲಾ ಪ್ರಾಜೆಕ್ಟ್ ಮಾಡೋದಕ್ಕೆ ಪೋಷಕರು ಸಹಾಯ ಮಾಡಬೇಕು. ಮಕ್ಕಳೊಂದಿಗೆ ನಿಮ್ಮ ಶಾಲಾ ದಿನದ ಅನುಭಗಳನ್ನು ಹಂಚಿಕೊಳ್ಳಿ.
ಶಾಲೆಯಲ್ಲಿನ ಅವರ ಅನುಭದ ಬಗ್ಗೆ ಕೇಳಿ. ಹಾಗೂ ಅವರಿಗೆ ಮಾರ್ಗದರ್ಶನ ನೀಡಿ. ಹೀಗೆ ನೀವು ಮಕ್ಕಳ ಜೊತೆಗೆ ಆತ್ಮೀಯವಾಗಿ ಇದ್ದರೆ ಅವರು ನಿಮ್ಮ ಜೊತೆಗೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳೋದಕ್ಕೆ ಹಿಂಜರಿಯೋದಿಲ್ಲ. ಕುಟುಂಬದೊಂದಿಗಿನ ಉತ್ತಮ ಬಾಂಧವ್ಯ ಕೂಡ ಅವರಿಗೆ ಸಾಧನೆಯ ಶಿಖರ ಏರೋದಕ್ಕೆ ಸಹಾಯ ಮಾಡುತ್ತದೆ.
5. ಸಾಧಕರ ಕಥೆಯನ್ನು ಹೇಳಿ ಬೆಳೆಸಿ
ಭಾರತದಲ್ಲಿ ಅದೆಷ್ಟೋ ಜನ ಸಾಧಕರಿರುತ್ತಾನೆ. ಅವರ ಸಾಧನೆಯ ಕಥೆಗಳನ್ನು ಹೇಳಿ. ಅವರು ಈ ಹಂತಕ್ಕೆ ಬರೋದಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ ಅನ್ನೋದನ್ನು ವಿವರಿಸಿ. ಮಕ್ಕಳಲ್ಲಿ ಸ್ಫೂರ್ತಿ ತುಂಬಿ. ನಿಮ್ಮ ಮಾತುಗಳೇ ಅವರ ಯಶಸ್ಸಿಗೆ ಪ್ರೇರಣೆಯಾಗುವಂತೆ ಮಾಡಿ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಈ ರೀತಿ ಸ್ಫೂರ್ತಿ ತುಂಬುತ್ತಿದ್ದರೆ ಅವರೊಳಗೆ ಏನಾದರೂ ಸಾಧಿಸಲೇಬೇಕು ಅನ್ನೋ ಛಲ ಹುಟ್ಟಿಕೊಳ್ಳುತ್ತದೆ.
ಸಾಧಿಸುವವರಿಗೆ ನೂರಾರು ಹಾದಿಗಳಿದೆ. ಅದಕ್ಕೆ ಚಿಕ್ಕಂದಿನಿಂದಲೇ ನಾವು ಅಡಿಪಾಯ ಹಾಕಬೇಕು. ಆಗ ಅವರು ಖಂಡಿತ ಮುಂದೆ ಬಂದು ಯಶಸ್ಸಿನ ಗುರಿ ತಲುಪೋದಕ್ಕೆ ಸಾಧ್ಯವಾಗುತ್ತದೆ.



Click it and Unblock the Notifications













