For Quick Alerts
ALLOW NOTIFICATIONS  
For Daily Alerts

ಮಗುವಿಗಾಗಿ ಪ್ರಯತ್ನಿಸುತ್ತಿದ್ದೀರಾ? ಯಾವಾಗ ಮಾತ್ರ ಗರ್ಭಧಾರಣೆಯಾಗುತ್ತೆ?

|

ಕೆಲವೊಮ್ಮೆ ನಾವು ಹೀಗೆ ಯೋಚಿಸಿದಾಗ ಅನಿಸುತ್ತೆ, ಈ ಪ್ರಕೃತ್ತಿ ಎಷ್ಟೊಂದು ಅದ್ಭುತ ಅಲ್ವಾ... ಗಂಡಿನ ದೇಹದಿಂದ ಚಿಕ್ಕ ಕಣವಾದ ವೀರ್ಯ ಮಹಿಳೆಯ ಗರ್ಭಾಶಯದಲ್ಲಿರುವ ಚಿಕ್ಕ ಅಂಡಾಣು ಜೊತೆ ಸೇರಿದಾಗ ಮುದ್ದಾಗ ಮಗು ಉಂಟಾಗುತ್ತದೆ,,

Trying to Have a Baby? Know How You Really Get Pregnant Can Help

ಆದರೆ ಇದರ ಹಿಂದೆ ಕೆಲವೊಂದು ಪ್ರಾಕ್ಟಿಕಲ್ ಅಂಶವೂ ಇದೆ. ಹೆಣ್ಣು-ಗಂಡು ಒಂದಾದ ತಕ್ಷಣ ಗರ್ಭಧಾರಣೆಯಾಗುವುದಿಲ್ಲ. ಗರ್ಭಧಾರಣೆಗೆ ಕೆಲವೊಂದು ಸೂಕ್ತ ಸಮಯವಿದೆ, ಅದರ ಬಗ್ಗೆ ಮೊದಲು ತಿಳಿದುಕೊಂಡರೆ ಮಗು ಬೇಕೆಂದು ಪ್ರಯತ್ನಿಸುವ ದಂಪತಿಗೆ ಬೇಗನೆ ಗುಡ್‌ನ್ಯೂಸ್‌ ಸಿಗಲು ಸಾಧ್ಯ.

ಗರ್ಭಧಾರಣೆಗೆ ಸೂಕ್ತ ಸಮಯ ಯಾವಾಗ?

ಗರ್ಭಧಾರಣೆಗೆ ಸೂಕ್ತ ಸಮಯ ಯಾವಾಗ?

ಗರ್ಭಧಾರಣೆಗೆ ಸೂಕ್ತ ಸಮಯ ಅನ್ನುವುದು ಅಂಡೋತ್ಪತ್ತಿ ಅಂದರೆ ಓವ್ಯೂಲೇಷನ್ ಸಮಯ. ಈ ಸಮಯದಲ್ಲಿ ಬಲ ಅಥವಾ ಎಡ ಅಂಡಾಶವೂ ಅಂಡಾಣು ಬಿಡುಗಡೆಯಾಗುತ್ತದೆ. ಅಂಡೋತ್ಪತ್ತಿ ಸಮಯ ಎನ್ನುವುದು ಮಹಿಳೆಯ ಫಲವತ್ತತೆಯ ಸಮಯವಾಗಿದೆ. ಈ ಸಮಯದಲ್ಲಿ ದಂಪತಿ ಮಗುವಿಗಾಗಿ ಪ್ರಯತ್ನಿಸಿದರೆ ಗರ್ಭ ನಿಲ್ಲುವುದು.

ಅಂಡೋತ್ಪತ್ತಿ ಅಥವಾ ಓವ್ಯೂಲೇಷನ್ ಎನ್ನುವುದು ಮುಟ್ಟಾದ 12-14 ದಿನಗಳಲ್ಲಿ ಉಂಟಾಗುತ್ತದೆ. ಈ ಸಮಯದಲ್ಲಿ ಬಿಡುಗಡೆಯಾದ ಅಂಡಾಣು ಫಾಲೋಪೈನ್‌ ಟ್ಯೂಬ್‌ನಲ್ಲಿ ನೇತಾಡುತ್ತಿರುತ್ತದೆ. ಈ ಸಮಯದಲ್ಲಿ ಆ ಅಂಡಾಣುವಿನ ಜೊತೆ ವೀರ್ಯಾಣು ಸಂಪರ್ಕಕ್ಕೆ ಬಂದರೆ ಅದು ಜೀವವಾಗಿ ರೂಪ ತಾಳುತ್ತದೆ, ಇಲ್ಲದಿದ್ದರೆ ಆ ಅಂಡಾಣು 12-14 ಗಂಟೆಗಳಲ್ಲಿ ತನ್ನ ಕಾರ್ಯ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ನಂತರ ಲೈಂಗಿಕ ಕ್ರಿಯೆ ನಡೆಸಿದರೂ ಗರ್ಭ ನಿಲ್ಲುವುದಿಲ್ಲ.

ಓವ್ಯೂಲೇಷನ್‌ ದಿನ ಹೊರತು ಪಡಿಸಿ ಬೇರೆ ದಿನದಲ್ಲಿ ಲೈಂಗಿಕ ಕ್ರಿಯೆಯಿಂದ ಗರ್ಭಧಾರಣೆ ಸಾಧ್ಯವಿಲ್ಲವೇ?

ಓವ್ಯೂಲೇಷನ್‌ ದಿನ ಹೊರತು ಪಡಿಸಿ ಬೇರೆ ದಿನದಲ್ಲಿ ಲೈಂಗಿಕ ಕ್ರಿಯೆಯಿಂದ ಗರ್ಭಧಾರಣೆ ಸಾಧ್ಯವಿಲ್ಲವೇ?

ಓವ್ಯೂಲೇಷನ್‌ ದಿನದಲ್ಲಿ ಲೈಂಗಿಕ ಕ್ರಿಯೆ ಮಾಡಿದರೆ ಗರ್ಭಧಾರಣೆಯಾಗುವುದು, ಆದರೆ ಅಂಡಾಣು ಬಿಡುಗಡೆಯಾಗುವ ದಿನ ಲೈಂಗಿಕ ಕ್ರಿಯೆ ನಡೆಸದಿದ್ದರೂ ಅದಕ್ಕೂ ಕೆಲ ದಿನ ಮುನ್ನ ಲೈಂಗಿಕ ಕ್ರಿಯೆ ನಡೆಸಿದರೆ ಮಗುವಾಗುವ ಸಾಧ್ಯತೆ ಇದೆ. ಹೌದು ಅಂಡಾಣುವಿನಂತೆ ವೀರ್ಯಾಣು 12-14 ಗಂಟೆಗಳಲ್ಲಿ ತನ್ನ ಸಾಮರ್ಥ್ಯ ಕಳೆದುಕೊಳ್ಳುವುದಿಲ್ಲ. 3-4 ದಿನಗಳವರೆಗೆ ಅದು ಅಂಡಾಶಯದಲ್ಲೇ ಇರುತ್ತದೆ. ಆಗ ಅಂಡೋತ್ಪತ್ತಿಯಾದಾಗ ಅದರ ಸುತ್ತ ವೀರ್ಯಾಣುಗಳಿದ್ದರೆ, ಅವುಗಳಲ್ಲಿ ಒಂದು ಅಂಡಾಣು ಸಂಪರ್ಕಕಕ್ಕೆ ಬಂದಾಗ ಗರ್ಭಧಾರಣೆಯಾಗುವುದು.

ಈ ಮ್ಯಾಜಿಕ್‌ ಕೆಲವರಲ್ಲಿ ಒಂದು ಕೂಡುವಿಕೆಯಲ್ಲಿ ಉಂಟಾದರೆ ಇನ್ನು ಕೆಲವರಲ್ಲಿ ಗಂಡ-ಹೆಂಡತಿ ಇಬ್ಬರೂ ಆರೋಗ್ಯವಂತರಾಗಿದ್ದರೂ 6 ತಿಂಗಳು ಅಥವಾ ಒಂದು ವರ್ಷ ತೆಗೆದುಕೊಳ್ಳಬಹುದು.

ಫಲವತ್ತತೆ ಎಂದರೇನು?

ಫಲವತ್ತತೆ ಎಂದರೇನು?

ಮಗು ಪಡೆಯಲು ಗಂಡು-ಹೆಣ್ಣು ಕೂಡಬೇಕೆಂದು ನಿಮಗೆ ಗೊತ್ತಿರುತ್ತದೆ. ಪುರುಷನ ವೃಷಣಗಳು ಪ್ರತೀ ಗಂಟೆಗೆ 4 ಮಿಲಿಯನ್ ವೀರ್ಯಾಣುಗಳನ್ನು ಉತ್ಪಾದಿಸುತ್ತದೆ. ಸುಮಾರು 200 ಮಿಲಿಯನ್ ವೀರ್ಯಾಣುಗಳು ಯೋನಿಯೊಳಗೆ ಹೋಗುತ್ತದೆ, ಅದರಲ್ಲಿಎಲ್ಲಾ ವೀರ್ಯಾಣುಗಳು ಗರ್ಭಾಶಯ ಸೇರುವುದಿಲ್ಲ.

ವೀರ್ಯ ಎನ್ನುವುದು ಸಕ್ಕರೆಯಂಶ, ಪ್ರೊಟೀನ್, ಟ್ರೇಸ್‌ ವಿಟಮಿನ್ಸ್, ಖನಿಜಾಂಶಗಳ ಮಿಶ್ರಣವಾಗಿದೆ. ಅವುಗಳು ಯೋನಿ ಮುಖಾಂತರ ಫಾಲೋಪೈನ್ ಟ್ಯೂಬ್‌ನಲ್ಲಿರುವ ಅಂಡಾಣುಗಳನ್ನು ಸೇರುತ್ತದೆ.

ನೀವು ಗರ್ಭಿಣಿಯೆಂದು ತಿಳಿಯುವುದು ಹೇಗೆ?

ನೀವು ಗರ್ಭಿಣಿಯೆಂದು ತಿಳಿಯುವುದು ಹೇಗೆ?

ಇದರಲ್ಲಿ ವೀರ್ಯಾಣುಗಳು ಅಂಡಾಣುಗಳನ್ನು ತಲುಪಲು ಮೊದಲ ಸವಾಲೇ ಯೋನಿಯಾಗಿದೆ. ಬಿಡುಗಡೆಯಾದ ಎಲ್ಲಾ ವೀರ್ಯಗಳು ಅಂಡಾಣುವನ್ನು ತಲುಪುವುದಿಲ್ಲ. ಕೆಲವೊಂದು ಮಾತ್ರ ಗರ್ಭಕಂಠ ತಲುಪುತ್ತದೆ. ವೀರ್ಯ ಗರ್ಭಕಂಠದ ಲೋಳೆ ಮೂಲಕ ಈಜುತ್ತಾ ಅಂಡಾಣು ತಲುಪಲು ಸಾಗುತ್ತವೆ, ಆದರೆ ಅದರಲ್ಲಿ ಕೆಲವೊಂದು ತನ್ನ ಸಾಮರ್ಥ್ಯ ಕಳೆದುಕೊಳ್ಳುವುದು. ವೀರ್ಯಾಣು ಸರಿಯಾದ ದಿಕ್ಕಿನಲ್ಲಿ ಸಾಗಿ ಅಂಡಾಣು ತಲುಪಿದಾಗ ಮಾತ್ರ ಭ್ರೂಣ ಉಂಟಾಗುವುದು. ತಿಂಗಳಿನಲ್ಲಿ ಎರಡು ಫಾಲೋಪಿಯನ್ ಟ್ಯೂಬ್‌ ಇರುತ್ತದೆ, ಅದರಲ್ಲಿ ಯಾವುದಾದರೂ ಒಂದರಲ್ಲಿ ಮಾತ್ರ ವೀರ್ಯಾಣುಗೆ ಕಾಯುತ್ತಾ ಅಂಡಾಣು ಇರುತ್ತದೆ. ವೀರ್ಯಾಣು ಸರಿಯಾದ ದಿಕ್ಕಿನಲ್ಲಿ ಸಾಗಿ ಅಂಡಾಣು ತಲುಪಿದಾಗ ಮಾತ್ರ ಫಲ ಉಂಟಾಗುವುದು.

ಇದಾದ ಕೆಲವೇ ಗಂಟೆಗಳಲ್ಲಿ ಫಲವತ್ತತೆಯಾದ ಅಂಡಾಣು ವಿಭಜನೆಯಾಗಿ ಫಾಲೋಪಿಯನ್ ಟ್ಯೂಬ್‌ ಮೂಲಕ ಗರ್ಭ ಸೇರುತ್ತದೆ. ಆ ಕಣ ಗುಂಪನ್ನು ಬ್ಲಾಸ್ಟೋಸೈಟ್ಸ್ ಎಂದು ಕರೆಯಲಾಗುವುದು. ಇದಾಗಿ 5 ದಿನಗಳಲ್ಲಿ ಬ್ಲಾಸ್ಟೋಸೈಟ್ಸ್ 100 ಕಣಗಳನ್ನು ಒಳಗೊಂಡಿರುತ್ತದೆ. ಈ ಬ್ಲಾಸ್ಟೋಸೈಟ್ಸ್ ಗರ್ಭಾಶಯ ತಲುಪಿ ಎಂಡೂವರೆ ತಿಂಗಳು ಅದನ್ನು ಮನೆಯಾಗಿಸುತ್ತದೆ. ಗರ್ಭಾಶಯ ತಲುಪಿದಾಗ ಬ್ಲಾಸ್ಟೋಸೈಟ್ಸ್ ಎರಡಾಗಿ ವಿಭಜನೆಯಾಗುತ್ತದೆ ಅರ್ಧ ಪ್ಲಾಸೆಂಟಾ ಆದರೆ ಇನ್ನರ್ಧ ಮಗುವಾಗುವುದು.

English summary

Trying to Have a Baby? Know How You Really Get Pregnant Can Help

Trying to Have a Baby? Know How You Really Get Pregnant Can Help, Read on...
Story first published: Thursday, February 18, 2021, 14:33 [IST]
X
Desktop Bottom Promotion