ಸಿಸೇರಿಯನ್ ಮತ್ತು ಸಾಮಾನ್ಯ ಹೆರಿಗೆ: ಹೆಚ್ಚು ಸುರಕ್ಷಿತ ವಿಧಾನ ಯಾವುದು?

By: Divya Pandith
Subscribe to Boldsky

ತನ್ನ ಜೀವದಲ್ಲಿಯೇ ಇನ್ನೊಂದು ಜೀವವನ್ನು ಜೋಪಾನ ಮಾಡುವ ಶಕ್ತಿ ಇರುವುದು ಹೆಣ್ಣಿಗೊಂದು ವರದಾನ. ಒಂಬತ್ತು ತಿಂಗಳ ಕಾಲ ಜೀವದಲ್ಲಿಯೇ ಬೆರೆತ ಮಗು ಹೊರ ಪ್ರಪಂಚಕ್ಕೆ ಬಂದು, ನಿಧಾನವಾಗಿ ತನ್ನ ವಿಕಾಸವನ್ನು ಕಾಣುತ್ತದೆ. ತಾಯಿಯ ಜೀವದಲ್ಲಿ ಬೆರೆತು ಸೂಕ್ತ ಸಮಯದ ನಂತರ ಹೊರ ಬರುವ ನೈಸರ್ಗಿಕ ಪ್ರಕ್ರಿಯೆಯು ಬಹಳ ಪ್ರಮುಖವಾದದ್ದು. ಈ ಪ್ರಕ್ರಿಯೆಯಲ್ಲಿ ಅಥವಾ ಪ್ರಸವದ ಸಮಯದಲ್ಲಿ ಉಂಟಾಗುವ ವ್ಯತ್ಯಾಸ ಅಥವಾ ಅವಗಢದಿಂದ ತಾಯಿ ಮತ್ತು ಮಗು ಇಬ್ಬರ ಆರೋಗ್ಯ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ.

ಮಗುವಿನ ಕೋಮಲ ಸ್ಪರ್ಶ ಸೋಕುತ್ತಿದ್ದಂತೆ ಪ್ರಸವದಲ್ಲಿ ಉಂಟಾದ ನೋವುಗಳೆಲ್ಲಾ ಮಾಯವಾಗುತ್ತದೆ. ಗಂಟೆಗಳ ಕಾಲ ಅನುಭವಿಸಿದ ಪ್ರಸವದ ನೋವು ಜೀವನದ ಒಂದು ಅವಿಸ್ಮರಣೀಯ ಅನುಭವವಾಗುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಹೆಣ್ಣಿನ ಜೀವಕ್ಕೆ ಒಂದು ಸಾರ್ಥಕ ಭಾವನೆ ಮೂಡುತ್ತದೆ. ಆಧುನಿಕ ಶಸ್ತ್ರಚಿಕಿತ್ಸೆಯ ಆವಿಷ್ಕಾರ ಪ್ರಗತಿ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿಯೇ ಅನೇಕ ಮಹಿಳೆಯರು ಪ್ರಸವದ ನೋವನ್ನು ಅನುಭವಿಸದೆಯೇ ಮಗುವನ್ನು ಪಡೆಯುತ್ತಾರೆ. 

ಸಿಸೇರಿಯನ್ ಬಳಿಕ ನಾರ್ಮಲ್ ಡೆಲಿವರಿಯಾಗಬಹುದೇ?

ಹೌದು, ಈ ಪ್ರಕ್ರಿಯೆಗೆ ಸಿಸೇರಿಯನ್ ಅಥವಾ ಸಿ-ಸೆಕ್ಷನ್ ಪ್ರಸವ ಎಂದು ಹೇಳುತ್ತಾರೆ. ಸಿಸೇರಿಯನ್ ಮೂಲಕ ಮಗುವನ್ನು ತಾಯಿ ದೇಹದಿಂದ ಬಹಳ ಸುಲಭವಾಗಿ ಹೊರ ತೆಗೆಯಬಹುದು. ಹಾಗಾಗಿ ಇಂದು ಅನೇಕರು ಸಿಸೇರಿಯನ್ ರೂಪದ ಪ್ರಸವವನ್ನೇ ಆಯ್ಕೆಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಭವಿಷ್ಯದಲ್ಲಿ ತಾಯಿಯ ಆರೋಗ್ಯದ ಮೇಲೆ ಯಾವ ಬಗೆಯ ಪರಿಣಾಮ ಬೀರಬಹುದು? ಸಾಮಾನ್ಯ ಪ್ರಸವ ಅಥವಾ ಸಿಸೇರಿಯನ್ ಪ್ರಸವದಲ್ಲಿ ಯಾವುದು ಉತ್ತಮ ವಿಧಾನ ಎನ್ನುವುದನ್ನು ನಾವು ತಿಳಿದುಕೊಳ್ಳುವ ಅನಿವಾರ್ಯತೆ ಇದೆ. ಈ ವಿಚಾರದ ಬಗ್ಗೆ ನಿಮಗೂ ಗೊಂದಲ ಹಾಗೂ ಸೂಕ್ತ ವಿವರಣೆ ಬೇಕಾದರೆ ಮುಂದೆ ಓದಿ...

pregnant women

ಮಹಿಳೆಯರ ಆಯ್ಕೆ ಹೆಚ್ಚಾಗಿದೆ

ಯೋನಿಯ ಮೂಲಕ ಪ್ರಸವ ಉಂಟಾಗುವ ನೈಸರ್ಗಿಕ ಪ್ರಕ್ರಿಯೆಯಲ್ಲಿ ತಾಯಿ ಜೀವ ಸಾಕಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ಅದೇ ಪೂರ್ವ ಯೋಜಿತವಾದ ಸಿಸೇರಿಯನ್ ಪ್ರಸವದಲ್ಲಿ ತಾಯಿಗೆ ಅರವಳಿಕೆಯನ್ನು ನೀಡಲಾಗಿರುತ್ತದೆ. ಹೊಟ್ಟೆ ಭಾಗವನ್ನು ಕೊಯ್ದು/ಸಿಸೇರಿಯನ್ ಮಾಡುವ ಮೂಲಕ ಮಗುವನ್ನು ಸುಲಭವಾಗಿ ತೆಗೆಯುತ್ತಾರೆ. ಈ ಪ್ರಕ್ರಿಯೆಯಲ್ಲಿ ತಾಯಿ ನೋವನ್ನು ಅನುಭವಿಸಲಾರಳು. ಹಾಗಾಗಿ ಇಂದು ಹೆಚ್ಚಿನ ಮಹಿಳೆಯರು ಸಿ-ಸೆಕ್ಷನ್ ಪ್ರಸವವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ವೈದ್ಯರ ಆಯ್ಕೆ ಯಾವುದು?

ಸಿಸೇರಿಯನ್ ಮತ್ತು ಸಾಮಾನ್ಯ ಪ್ರಸವದ ಬಗ್ಗೆ ಚರ್ಚೆ ಮಾಡುವುದಾದರೆ ಅನೇಕ ಸಾಧಕ ಬಾಧಕಗಳು ಎರಡು ವಿಧಾನದಲ್ಲಿರುವುದನ್ನು ಕಾಣಬಹುದು. ಆದರೆ ವೈದ್ಯರು ಹೆಚ್ಚಿನದಾಗಿ ನೈಸರ್ಗಿಕ ಪ್ರಸವ ವಿಧಾನವೇ ಸೂಕ್ತ ಎಂದು ಹೇಳುತ್ತಾರೆ. ಪ್ರಸವ ವಿಧಾನ ಭವಿಷ್ಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯ/ನೈಸರ್ಗಿಕ ಪ್ರಸವ ವಿಧಾನದಿಂದ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವುದರ ಕೆಲವು ಮಾಹಿತಿ ಈ ಕೆಳಗಿದೆ.

pregnant women

ಮಗು ಆರೋಗ್ಯದಿಂದ ಇರುತ್ತದೆ

ಯೋನಿಯ ಮೂಲಕ ಪ್ರಸವ ಉಂಟಾಗುವ ವಿಧಾನದಿಂದ ಮಗು ಹೆಚ್ಚು ಆರೋಗ್ಯಕರವಾಗಿರುತ್ತದೆ. ಮಗುವಿನ ಚರ್ಮದ ಮೇಲೆ ಒಂದು ಬಗೆಯ ರಕ್ಷಣಾ ಕವಚವನ್ನು ಹೊಂದಿರುತ್ತದೆ. ಇದು ಮಗುವಿಗೆ ಯಾವುದೇ ಸೋಂಕು ತಾಗದಂತೆ ರಕ್ಷಣೆ ನೀಡುತ್ತದೆ. ಹಾಲು ಹೆಚ್ಚುವುದು ಸಾಮಾನ್ಯ ಪ್ರಸವದಿಂದ ತಾಯಿಯು ಬಹು ಬೇಗನೆ ಮಗುವಿಗೆ ಎದೆಹಾಲನ್ನು ಉಣಿಸಬಹುದು. ಪ್ರಸವದ ನಂತರ ದೇಹದಲ್ಲಾಗುವ ಕೆಲವು ಬದಲಾವಣೆಯ ಆಧಾರದ ಮೇಲೆ ಎದೆಹಾಲು ಬಹು ಬೇಗ ಉತ್ಪಾದನೆಯಾಗಲು ಪ್ರಾರಂಭಿಸುತ್ತದೆ.

C-section

ಆರೋಗ್ಯ ಉತ್ತಮವಾಗಿರುವುದು

ಸಾಮಾನ್ಯ ಪ್ರಸವದಿಂದ ಹುಟ್ಟಿದ ಮಗುವಿನ ಆರೋಗ್ಯ ಚೆನ್ನಾಗಿ ಇರುತ್ತದೆ. ನವಜಾತ ಶಿಶುವಿಗೆ ತಗಲುವ ಟ್ಯಾಚಿಪ್ನಿಯಾ ಎನ್ನುವ ರೋಗದಿಂದ ಮುಕ್ತವಾಗಿರುತ್ತವೆ. ಈ ರೋಗವು ಮಗುವಿನ ಶ್ವಾಸಕೋಶದಲ್ಲಿ ದ್ರವಗಳು ತುಂಬಿಕೊಂಡಿರುವ ಸ್ಥಿತಿಯಾಗಿರುತ್ತದೆ. ಸಾಮಾನ್ಯ ಪ್ರಸವವಾದಾಗ ಮಗುವಿನ ಶಾಸ್ವಸಕೋಶದಲ್ಲಿರುವ ಎಲ್ಲಾ ದ್ರವಗಳು ಹಿಂಡಿ ಹೊರಬರುತ್ತವೆ.

ಕಡಿಮೆ ಸಮಯದಲ್ಲಿ ಚೇತರಿಕೆ

ನೈಸರ್ಗಿಕ/ಸಾಮಾನ್ಯ ವಿಧಾನದಲ್ಲಿ ಪ್ರಸವವುಂಟಾದಾಗ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಬಹು ಬೇಗ ಚೇತರಿಕೆ ಉಂಟಾಗುತ್ತದೆ. ಈ ವಿಧಾನದಲ್ಲಿ ಕೆಲವು ತೊಡಕುಗಳಿದ್ದರೂ ಅವು ಬಹು ಬೇಗ ಗುಣಮುಖ ಹೊಂದುತ್ತವೆ ಎನ್ನುವ ಚರ್ಚೆಯ ಮಾತುಗಳಿರುವುದನ್ನು ಗಮನಿಸಬಹುದು.

ಹೆಚ್ಚು ಅಪಾಯಕಾರಿ

ಸಿಸೇರಿಯನ್ ಪ್ರಸವ ನೋವು ರಹಿತ ಪ್ರಸವ ವಿಧಾನ ವಾಗಿದ್ದರೂ ಇದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ತಾಯಿ ಮಗುವಿನ ಚೇತರಿಕೆಗೆ ಹೆಚ್ಚು ಸಮಯ ಬೇಕಾಗುವುದು. ತಾಯಿಗೆ ರಕ್ತ ಹೀನತೆ, ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಅನೇಕ ತೊಂದರೆಗಳು ಉಂಟಾಗಬಹುದು. ಸಿಸೇರಿಯನ್ ಮಾಡಿದ ಹೊಟ್ಟೆ ಭಾಗದಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಇದು ದೈನಂದಿನ ಚಟುವಟಿಕೆಗೂ ಅಡ್ಡಿಯುಂಟುಮಾಡುವುದು. ಕೆಲವೊಮ್ಮೆ ಹೊಲಿಗೆ ಹಾಕಿರುವುದು ಬಿರಿದುಕೊಳ್ಳುವುದು ಅಥವಾ ಬಹು ಬೇಗ ಗುಣಮುಖವಾಗದೆ ಇರುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಸಿಸೇರಿಯನ್ ಹೆರಿಗೆಯ ಅಡ್ಡಪರಿಣಾಮಗಳು

ಬಹು ಬೇಗ ಎದೆಹಾಲು ಉಂಟಾಗದು

ಮಗು ನೈಸರ್ಗಿಕವಾಗಿ ಬೆಳೆದಿದೆ ಹಾಗೂ ಅದು ಹೊರಬರಲು ಸೂಕ್ತ ಸಮಯ ಎಂದು ನಿರ್ಧರಿಸಲು ಯಾವುದೇ ತರಹದ ಬೇನೆಯ ಸೂಚನೆ ತಾಯಿಗೆ ಬರದು. ನೈಸರ್ಗಿಕ ಪ್ರಕ್ರಿಯೆಯಲ್ಲಿ ಜನಿಸದ ಕಾರಣ ಎದೆಹಾಲಿನ ಉತ್ಪಾದನೆಯಲ್ಲೂ ನಿಧಾನ ಪ್ರಗತಿ ಕಾಣುವುದು. ಅಲ್ಲಿಯ ತನಕವೂ ಮಗುವಿಗೆ ಬಾಟಲಿ ಹಾಲನ್ನು ಉಣಿಸಬೇಕಾಗುತ್ತದೆ.

pregnant women

ತಪ್ಪು ಕಲ್ಪನೆ

ನೈಸರ್ಗಿಕ/ ಸಾಮಾನ್ಯ ಪ್ರಸವದಿಂದ ತಾಯಿಯ ದೇಹದಲ್ಲಿ ಅನೇಕ ಬದಲಾವಣೆಯುಂಟಾಗುತ್ತದೆ. ಯೋನಿಯ ಸ್ನಾಯುಗಳು ಸಡಿಲವಾಗುತ್ತದೆ. ಮತ್ತು ಆಕಾರವನ್ನು ಕಳೆದುಕೊಳ್ಳುತ್ತದೆ ಎನ್ನುವ ತಪ್ಪು ಕಲ್ಪನೆ ಇರುತ್ತದೆ. ಸಾಮಾನ್ಯ ಪ್ರಸವದಲ್ಲಿ ಒಮ್ಮೆ ಯೋನಿಯ ಸ್ನಾಯುಗಳು ಸಡಿಲವಾದರೂ ತಾಯಿ ಮಗುವಿಗೆ ಎದೆಹಾಲು ಉಣಿಸುವ ಪ್ರಕ್ರಿಯೆಯ ಆಧಾರದ ಮೇಲೆ ಸ್ನಾಯುಗಳು ಮೊದಲಿನ ಸ್ಥಿತಿಗೆ ಮರುಕಳಿಸುತ್ತವೆ. ಲೈಂಗಿಕ ಕ್ರಿಯೆಗೂ ಯಾವುದೇ ತೊಂದರೆ ಉಂಟಾಗದು.

ಆರೋಗ್ಯದಲ್ಲಿ ತೊಂದರೆ

ಸಿಸೇರಿಯನ್ ಪ್ರಕ್ರಿಯೆಯಲ್ಲಿ ಪ್ರಸವ ಹೊಂದುವುದರಿಂದ ತಾಯಿ ಭವಿಷ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಎಂದು ಅನೇಕ ಅಧ್ಯಯನಗಳು ದೃಢಪಡಿಸಿದೆ. ಅಲ್ಲದೆ ಮಗುವಿನ ಬೆಳವಣಿಗೆಯ ಬಗ್ಗೆಯೂ ಅವಲೋಕನಾ ವಿಧಾನದಲ್ಲಿ ಇಡಬೇಕಾಗುವ ಸಾಧ್ಯತೆ ಇರುತ್ತದೆ.

stretch marks

ನೆನಪಿಡಿ

ಹೆರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಪ್ರಕೃತಿ ಹೆಣ್ಣಿಗೆ ನೀಡಿದೆ. ಹಾಗಾಗಿ ಸಿಸೇರಿಯನ್ ಪ್ರಸವದ ಆಯ್ಕೆಯನ್ನು ಮಾಡದಿರಿ. ಇದು ಒಮ್ಮೆ ನೋವು ರಹಿತವಾದ ಪದ್ಧತಿ ಎನಿಸುತ್ತದೆಯಾದರೂ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸಾಮಾನ್ಯ/ನೈಸರ್ಗಿಕ ವಿಧಾನದ ಪ್ರಸವ ವಿಧಾನ ತಾಯಿ ಮತ್ತು ಮಗುವಿಗೆ ಅಪಾಯವನ್ನುಂಟುಮಾಡುವ ಸಾಧ್ಯತೆ ಕಡಿಮೆ.

English summary

C-section Versus Normal Delivery: Which Is Safe?

A caesarean delivery is pre-planned, where there is an incision made near the stomach and the baby is delivered. The use of anaesthesia during the procedure makes it completely painless. A lot of women nowadays are opting for a C-section, as they are scared of the pain that they have to go through during a normal delivery. It has long been a topic of debate as to which is a safer method of delivery. Although both have their pros and cons, doctors have always been recommending the normal route of delivery, as it is healthy for both the mother and baby. Here are a few advantages of normal delivery to support the claims.
Subscribe Newsletter