ಗರ್ಭಿಣಿಯರೇ ಅಪ್ಪಿತಪ್ಪಿಯೂ ಮನಸ್ತಾಪ ಬೆಳೆಸಿಕೊಳ್ಳಬೇಡಿ!

By Arshadh

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹ ಹಲವು ಮಾರ್ಪಾಡುಗಳನ್ನು ಹೊಂದುತ್ತದೆ. ಮಾನಸಿಕವಾಗಿಯೂ ಕೆಲವು ಬದಲಾವಣೆಗಳನ್ನು ಗಮನಿಸಬಹುದು. ಸುಸ್ತು, ವಾಕರಿಕೆ, ಹುಳಿ ತಿನ್ನುವ ಬಯಕೆ ಮೊದಲಾದವು ಈ ಸಮಯದಲ್ಲಿ ಸಾಮಾನ್ಯ.

ಈ ಬದಲಾವಣೆಗಳನ್ನು ಸ್ವಾಭಾವಿಕವೆಂದು ಒಪ್ಪಿ ಮನೆಯವರು ನಡೆದುಕೊಂಡಷ್ಟೂ ಉತ್ತಮ. ಬದಲಿಗೆ ಪತಿ ಅಥವಾ ಮನೆಯ ಇತರ ಸದಸ್ಯರೊಂದಿಗೆ ಯಾವುದೋ ಕಾರಣಕ್ಕೆ ಜಗಳವಾಡುವುದು, ಮನಸ್ತಾಪ ಬೆಳೆಸಿಕೊಂಡಷ್ಟೂ ಗರ್ಭಿಣಿಯ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಮಾರಕವಾಗಿದೆ.

Why Pregnant Moms Should Stay Away From Arguments And Quarrels

ಏನೇ ತೊಂದರೆ ಇದ್ದರೂ ತಂಪು ಮನಸ್ಸಿನಿಂದ ಸಾವಕಾಶವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮನೆಯ ಎಲ್ಲಾ ಸದಸ್ಯರು ಸಹಕರಿಸುವುದು ಮುಖ್ಯ. ಇದಕ್ಕೇ ಹಿರಿಯರು ಬಸುರಿಯ ಕಣ್ಣಲ್ಲಿ ಕಣ್ಣೀರು ಬರಿಸಿದರೆ ತಟ್ಟುವ ಶಾಪ ಭಯಂಕರ ಎಂದು ಹೇಳುತ್ತಾರೆ. ಒಂದು ವೇಳೆ ಪರಿಸ್ಥಿತಿ ಹದಗೆಟ್ಟು ಜಗಳ ಕದನಗಳು ಪ್ರಾರಂಭವಾದರೆ, ವಾಗ್ಯುದ್ಧದ ಮೂಲಕ ರಕ್ತದೊತ್ತಡ ಹೆಚ್ಚಿದರೆ, ಇದರಿಂದ ಗರ್ಭಿಣಿಯ ದೇಹಕ್ಕೆ ಆಗುವ ಮಾರಕ ಪರಿಣಾಮಗಳನ್ನು ಇಲ್ಲಿ ವಿವರಿಸಲಾಗಿದೆ. ಗರ್ಭಿಣಿಯರ ಪಾಲಿನ ಸ೦ಜೀವಿನಿ ಸೀತಾಫಲ ಹಣ್ಣಿನ ಮಹತ್ವವೇನು?

ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತತೆ
ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ ಸಂಪೂರ್ಣವಾಗಿ ತಾಯಿಯ ಕರುಳುಬಳ್ಳಿಯಿಂದ ಬರುವ ಹಾರ್ಮೋನುಗಳನ್ನು ಅವಲಂಬಿಸಿದೆ. ಜಗಳ ಕದನಗಳ ವೇಳೆ ಅನಗತ್ಯವಾದ ಹಾರ್ಮೋನು ಅಧಿಕವಾಗಿ ಸ್ರವಿಸುವ ಅಥವಾ ಅಗತ್ಯವಾದ ಹಾರ್ಮೋನು ಸ್ರವಿಸದೇ ಇರುವ ಕಾರಣ ಮಗುವಿನ ಮೆದುಳಿನ ಬೆಳವಣಿಗೆ ಪ್ರಭಾವಗೊಳ್ಳುತ್ತದೆ. ಇಡಿಯ ಗರ್ಭಾವಸ್ಥೆಯಲ್ಲಿ ಜಗಳ ಕಾದು ಬಂದ ಮಹಿಳೆಯರಿಗೆ ಹುಟ್ಟಿದ ಮಕ್ಕಳು ಬುದ್ಧಮಾಂದ್ಯರಾಗಿರುವುದೇ ಇದಕ್ಕೆ ಮುಖ್ಯ ಪುರಾವೆಯಾಗಿದೆ.

ಹುಟ್ಟುವ ಮಗುವಿನ ನಡವಳಿಕೆಯಲ್ಲಿಯೂ ಪ್ರಭಾವ ಬೀರುತ್ತದೆ
ಜಗಳ ಕದನಗಳಿಂದ ಮಗುವಿನ ಮೆದುಳಿಗೆ ತಲುಪುವ ತಾಯಿಯ ಹಾರ್ಮೋನುಗಳು ವಿಭಿನ್ನವಾಗಿ ಪರಿಣಾಮ ಬೀರಬಹುದು. ಮೆದುಳು ಸರಿಯಾಗೆ ಬೆಳವಣಿಗೆಯಾಗದೇ ಅಥವಾ ಬೆಳವಣಿಗೆಯಾದರೂ ತಪ್ಪು ಹಾರ್ಮೋನಿನ ಪ್ರಮಾಣ ಹೆಚ್ಚಿರುವುದರಿಂದ ಮಗುವಿನ ನಡವಳಿಕೆ ಬೇರೆಯೇ ಆಗಬಹುದು. ಮುಂದೆ ಈ ನಡವಳಿಕೆ ತಪ್ಪುದಾರಿ ಹಿಡಿದರೆ ಸಮಾಜಕಂಟಕನಾಗಿಯೂ ಬೆಳೆಯಬಹುದು. ಗರ್ಭಿಣಿ ಮಹಿಳೆಯರು ಅಪ್ಪಿತಪ್ಪಿಯೂ ಹಸಿರು ಚಹಾ ಸೇವಿಸಬಾರದು!

ಹೆರಿಗೆಯಲ್ಲಿಯೂ ತೊಂದರೆ
ಜಗಳ ಕದನಗಳಿಂದ ತಮ್ಮ ಗರ್ಭಸ್ಥ ದಿನಗಳನ್ನು ಕಳೆದ ಮಹಿಳೆಯರ ಹೆರಿಗೆ ಕಷ್ಟಕರವಾಗಿರುವುದನ್ನು ವೈದ್ಯರು ಗಮನಿಸಿದ್ದಾರೆ. ಅದೇ ಶಾಂತಿಯುತ ದಿನಗಳನ್ನು ಕಳೆದ ಮಹಿಳೆಯರ ಹೆರಿಗೆ ಸುಲಭವಾಗಿ ಮತ್ತು ಸುಸೂತ್ರವಾಗಿ ನಡೆದಿರುವುದೂ ಗಮನಕ್ಕೆ ಬಂದಿದೆ. ಈ ಅಂಕಿ ಅಂಶಗಳು ಗರ್ಭಿಣಿಯ ಮಾನಸಿಕ ಸ್ಥಿತಿ ಮಗುವಿನ ಮಾನಸಿಕ ಸ್ಥಿತಿಗೆ ಕಾರಣ ಎಂಬುದನ್ನು ಸಾಬೀತುಪಡಿಸುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಶಾಂತಿಯುತ ವಾತಾವರಣ ಮುಖ್ಯವಾಗಿದೆ. ಇದಕ್ಕೆ ಮನೆಯ ಪ್ರತಿ ಸದಸ್ಯನೂ ಸಹಕರಿಸುವುದು ಅಗತ್ಯವಾಗಿದೆ.

ಖಿನ್ನತೆಗೆ ಮೂಲ
ಗರ್ಭಾವಸ್ಥೆಯಲ್ಲಿ ಮಹಿಳೆಯರು ಇತರ ಹೊತ್ತಿಗಿಂತ ಹೆಚ್ಚು ಭಾವುಕರಾಗಿರುತ್ತಾರೆ. ಮಗುವಿನ ಕುರಿತು ನೂರಾರು ಕನಸುಗಳನ್ನು ಹೆಣೆಯುವುದರಿಂದ ಈ ಸಮಯದಲ್ಲಿ ಆಡುವ ಯಾವುದೇ ಜಗಳ, ವಾಕ್ಸಮರಗಳು ಮೆದುಳಿನಲ್ಲಿ ಗೊಂದಲವುಂಟು ಮಾಡಿ ಖಿನ್ನತೆಗೆ ಕಾರಣವಾಗುತ್ತದೆ. ಈ ಕಾರಣಕ್ಕೆ ಮನಸ್ಸನ್ನು ಪೂರ್ಣವಾಗಿ ಶಾಂತಿಯುತವಾಗಿರಿಸಿಕೊಳ್ಳುವುದು ಅತಿ ಮುಖ್ಯವಾಗಿದೆ.

X
Desktop Bottom Promotion