Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರೇ, ಪೌಷ್ಠಿಕ ಆಹಾರ ಸೇವಿಸಿ-ಆರೋಗ್ಯವೃದ್ಧಿಸಿ
ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಅದು ಜೀವನದ ಅತೀ ರೋಮಾಂಚನದ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಹೆಣ್ಣಿಗೆ ಗರ್ಭಧಾರಣೆಯೇ ಒಂದು ಅದ್ಭುತ ಅನುಭವ, ಅದರಲ್ಲೂ ಸ್ತ್ರೀಯೋರ್ವಳು ಗರ್ಭಿಣಿಯಾಗಿರುವಳೋ, ಇಲ್ಲವೋ ಎ೦ಬುದನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುವ ಪರೀಕ್ಷೆಯು ಧನಾತ್ಮಕವಾಗಿದೆ ಎ೦ದು ಕ೦ಡುಬ೦ದಲ್ಲಿ, ಆಗ ಆಕೆಯಲ್ಲಿ ಉ೦ಟಾಗುವ ಭಾವೋದ್ವೇಗವನ್ನು ವರ್ಣಿಸಲು ಪದಗಳೇ ಸಾಲದು..!
ಹಾಗಾಗಿ ಇಂತಹ ಸಂತಸವನ್ನು ಇನ್ನಷ್ಟು ಇಮ್ಮಡಿಗೊಳಿಸಲು ತಾವು ಸೇವಿಸುವ ಆಹಾರ ಕ್ರಮವೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಎಂಬುದನ್ನು ಗರ್ಭಿಣಿಯರು ಮರೆಯಬಾರದು. ಹೌದು ಪ್ರಸ್ತುತ ದಿನಗಳಲ್ಲಿ ಜೀವನ ಶೈಲಿಯ ಬದಲಾವಣೆ ಮತ್ತು ಅನಾರೋಗ್ಯಕರ ಆಹಾರಗಳ ಸೇವನೆಯ ಅಭ್ಯಾಸಗಳು ನಮ್ಮ ಪ್ರತಿಯೊಂದು ಸಂಭವನೀಯ ಕಾಯಿಲೆಗಳಿಗೆ ಮೂಲ ಕಾರಣವಾಗಿವೆ. ಇಂತಹ ನಡವಳಿಕೆಗಳಿಂದ ಕೆಲವರು ನಾನಾ ರೀತಿಯ ಸಮಸ್ಯೆಗಳಿಗೆ ಗುರಿಯಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಗರ್ಭಾವಸ್ಥೆಯಲ್ಲಿ ನಿರ್ಲಕ್ಷ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ
ಅದರಲ್ಲೂ ಗರ್ಭಿಣಿಯರು ಕೈಗೆಟುಕುವ ಸಿದ್ಧ ಆಹಾರಗಳಿಗೆ ಗುಲಾಮರಾಗಿ, ಅವುಗಳ ದುಷ್ಪರಿಣಾಮಗಳನ್ನೂ ಅರಿಯದೇ ಸುಲಭವಾಗಿ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ. ಕೆಲವೊಮ್ಮೆ ಇಂತಹ ಆಹಾರಗಳ ಸೇವನೆಯಿಂದಾಗಿ, ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಗರ್ಭಿಣಿಯರಿಗೆ೦ದೇ ಮೀಸಲಾಗಿರುವ ಕೆಲವೊ೦ದು ಪೌಷ್ಠಿಕ ಅಂಶಗಳಿಂದ ಕೂಡಿರುವ ತರಕಾರಿ, ಹಣ್ಣುಗಳನ್ನೂ ಸೇವಿಸಿದಲ್ಲಿ ಅದರಿ೦ದ ಆಕೆಯು ಪಡೆದುಕೊಳ್ಳಬಹುದಾದ ಆರೋಗ್ಯ ಲಾಭವು ದ್ವಿಗುಣಗೊಳ್ಳುತ್ತದೆ. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ಪ್ರೋಟೀನ್
ಗರ್ಭಿಣಿಯಾಗಿರುವಾಗ ನೀವು ತೆಗೆದುಕೊಳ್ಳುವ ಪ್ರೋಟೀನ್ ನ ಪ್ರಮಾಣವು 10 ಗ್ರಾಂ ಗಳಷ್ಟು ಹೆಚ್ಚಾಗಬೇಕು. ನಿಮ್ಮ ಮತ್ತು ನಿಮ್ಮ ಶಿಶುವಿನ ಶರೀರಗಳ ಜೀವಕೋಶ ಮತ್ತು ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಸಹಕಾರಿಯಾಗಿದೆ. ಮೊಟ್ಟೆ ಮತ್ತು ಚಿಕನ್ ಗಳು ಪ್ರೋಟೀನ್ ನ ಅತ್ಯುತ್ತಮ ಆಗರಗಳಾಗಿವೆ. ನೀವು ಒಂದು ವೇಳೆ ಸಸ್ಯಹಾರಿಯಾಗಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಪಡೆಯಲು ಎಲ್ಲಾ ವಿಧದ ಧಾನ್ಯಗಳು, ಸೋಯಾ, ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ನಿಮ್ಮ ಊಟದ ತಟ್ಟೆಯಲ್ಲಿ ಸೇರಿಸಿಕೊಳ್ಳಿರಿ
ನೀರು
ಹಣ್ಣುಗಳು
ವಿವಿಧ ಬಣ್ಣಗಳ ಮತ್ತು ಎಲ್ಲಾ ವಿಧದ ಹಣ್ಣುಗಳನ್ನು ಧಾರಾಳವಾಗಿ ಸೇವಿಸಿರಿ. ಗರ್ಭಿಣಿಯಾಗಿರುವಾಗ, ಪ್ರತಿದಿನ ಐದು ಭಾಗಗಳಷ್ಟು ಹಣ್ಣುಗಳನ್ನು ಸೇವಿಸಬೇಕೆಂದು ಶಿಪಾರಸು ಮಾಡಲಾಗಿದೆ. ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಹಣ್ಣುಗಳಾದ ಕಲ್ಲಂಗಡಿ, ನೇರಳೆ, ಸೇಬಿನ ಹಣ್ಣು, ದ್ರಾಕ್ಷಿ ಇತ್ಯಾದಿಗಳನ್ನು ಸೇವಿಸಿರಿ. ವಿಟಾಮಿನ್ ಸಿ ನಿಂದ ಸಮೃದ್ಧವಾಗಿರುವ ಕಿತ್ತಲೆಗಳು ಕಬ್ಬಿಣದ ಅಂಶವು ಶರೀರದಲ್ಲಿ ಹಿರಲ್ಪಡಲು ಸಹಕಾರಿಯಾಗಿದೆ ಹಾಗೂ ಸೇಬುಗಳು ನಾರಿನಂಶದಿಂದ ಕೂಡಿರುವುದರಿಂದ, ಗರ್ಭಿಣಿಯಾಗಿರುವಾಗ ಸಾಮಾನ್ಯವಾಗಿ ತಲೆದೋರುವ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿಯಾಗಿವೆ.
ಬೀಟ್ ರೂಟ್‍ಗಳು
ಸಿಹಿ ಆಲುಗಡ್ಡೆಗಳು
ಸೀತಾಫಲ ಹಣ್ಣು
ಹಸಿರು ಸೊಪ್ಪುಗಳು
ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.
ಕೇಸರಿ ಹಾಲು
ಮಗುವಿನ ಚಲನವಲನಗಳು ಗರ್ಭಿಣಿ ಮಹಿಳೆಯರು 5 ತಿಂಗಳ ನಂತರ ಮಗುವಿನ ಚಲನವಲನವನ್ನು ತಮ್ಮ ಹೊಟ್ಟೆಯಲ್ಲಿಯೇ ಅನುಭವಿಸಬಹುದು. ಕೇಸರಿಯನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವಿಸುವುದರಿಂದ ಇದರ ಪರಿಣಾಮ ಉತ್ತಮವಾಗಿರುತ್ತದೆ. ಆದರೆ ಇದು ದೇಹದ ಉಷ್ಣಾಂಶವನ್ನು ಅಧಿಕ ಮಾಡುವುದರಿಂದ, ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲು ಹೋಗಬಾರದು.



Click it and Unblock the Notifications





