ಶೀಘ್ರ ಗರ್ಭಧಾರಣೆಗೆ ಸಹಾಯಕವಾಗಿರುವ 20 ಆಹಾರಗಳು

ತಾಯಿಯಾಗುವುದು ಪ್ರತಿಯೊಂದು ಹೆಣ್ಣಿನ ಕನಸಾಗಿದೆ. ವಿವಾಹವಾದ ಬಳಿಕ ಅನಿವಾರ್ಯ ಕಾರಣಗಳಿಲ್ಲದೇ ಆದಷ್ಟು ಶೀಘ್ರ ಮಗುವೊಂದನ್ನು ಹೊಂದಲು ಎಲ್ಲರೂ ಬಯಸುತ್ತಾರೆ. ಆದರೆ ಕಾರಣಾಂತರಗಳಿಂದ ಎಲ್ಲರಲ್ಲೂ ಈ ಬಯಕೆ ಈಡೇರುವುದಿಲ್ಲ.

ಬಂಜೆತನಕ್ಕೆ ಪುರುಷ ಮತ್ತು ಸ್ತ್ರೀ ಇಬ್ಬರೂ ಸಮಾನವಾಗಿ ಕಾರಣರಾಗಿದ್ದಾರೆ. ಒಂದು ವೇಳೆ ತೊಂದರೆ ಮಹಿಳೆಯಲ್ಲಿದೆ ಎಂದರೆ ಅದಕ್ಕೆ ಹಲವಾರು ಕಾರಣಗಳಲ್ಲಿವೆ. ದೇಹದಲ್ಲಿ ಹಾರ್ಮೋನುಗಳ ಸ್ರವಿಕೆಯಲ್ಲಿ ಏರುಪೇರು, ಸಾಕಷ್ಟು ಪೌಷ್ಟಿಕ ಆಹಾರವಿಲ್ಲದಿರುವುದು, ಋತುಚಕ್ರದಲ್ಲಿ ಏರುಪೇರು, ಗರ್ಭನಾಳದಲ್ಲಿ ಸೋಂಕು ಮೊದಲಾದ ಹಲವು ತೊಂದರೆಗಳಿವೆ.

ಇದರಲ್ಲಿ ಮುಖ್ಯವಾಗಿ ಪೌಷ್ಟಿಕ ಆಹಾರದ ಕೊರತೆ ಮುಖ್ಯವಾದ ತೊಡಕಾಗಿದೆ. ದೇಹದ ಆರೋಗ್ಯದ ಜೊತೆ ಸಂತಾನಫಲಕ್ಕೆ ನೆರವಾಗುವ ಇಪ್ಪತ್ತೊಂದು ಆಹಾರಗಳನ್ನು ಆಹಾರ ತಜ್ಞೆ ಡಾ. ನೇಹಾ ಸನ್ವಾಲ್ಕಾರವರು ಸೂಚಿಸುತ್ತಾರೆ. ಈ ಆಹಾರಗಳ ಸಮರ್ಪಕ ಸೇವನೆಯಿಂದ ಹಾರ್ಮೋನುಗಳ ಏರುಪೇರು ಸರಿಯಾಗಿ ಸಂತಾನಫಲ ಬಯಸುವ ಪ್ರತಿ ಹೆಣ್ಣಿಗೂ ಆಶಾಭಾವನೆ ಮೂಡಿಸುತ್ತದೆ.

ತರಕಾರಿಗಳು

ತರಕಾರಿಗಳು

ಗಾಢ ಹಸಿರು ಎಲೆಗಳು

ಡಾ. ನೇಹಾರವರ ಪ್ರಕಾರ ಗಾಢ ಹಸಿರು ಬಣ್ಣದ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಮತ್ತು ಕಬ್ಬಿಣ ಇರುವುದರಿಂದ ಗರ್ಭಧರಿಸಲು ಬಯಸುವ ಮಹಿಳೆಯರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಈ ಪೋಷಕಾಂಶಗಳು ಗರ್ಭಾಶಯದ ಒಳಭಾಗದ ಪದರವನ್ನು ಬಲಪಡಿಸುತ್ತದೆ. ವಿಶೇಷವಾಗಿ ಕಬ್ಬಿಣ ಅಂಡವನ್ನು ಗರ್ಭಾಶಯದಲ್ಲಿ ಅಂಟಿಕೊಂಡಿರಲು ಸಹಕರಿಸುತ್ತದೆ. ಬಸಲೆ, ಪಾಲಕ್ ಮೊದಲಾದ ಸೊಪ್ಪುಗಳು ಉತ್ತಮವಾಗಿವೆ.

ಬ್ರೋಕೋಲಿ

ಬ್ರೋಕೋಲಿ

ಇದುವರೆಗೂ ನಮ್ಮ ಹೂಕೋಸು ಹಸಿರು ರೂಪ ಧರಿಸಿದಂತಿದ್ದ ಬ್ರೋಕೋಲಿ ಕೇವಲ ಶ್ರೀಮಂತರಿಗೆ ಮಾತ್ರ ಎಂಬ ಭಾವನೆ ಇತ್ತು. ಆದರೆ ಇದರಲ್ಲಿರುವ ಪೋಷಕಾಂಶಗಳ ಶ್ರೀಮಂತಿಕೆ ಗಮನಿಸಿದರೆ ಗರ್ಭ ಧರಿಸಲು ಬಯಸುವ ಯಾವುದೇ ಹಣ್ಣಿಗೆ ಅತ್ಯುತ್ತಮವಾದ ತರಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಫೋಲಿಕ್ ಆಮ್ಲ ಗರ್ಭ ಧರಿಸಲು ಸಹಕರಿಸುತ್ತದೆ. ಹೆಚ್ಚಿನ ಪ್ರಮಾಣದ ಕಬ್ಬಿಣ ಅಂಡವನ್ನು ಗರ್ಭಾಶಯದಲ್ಲಿ ಅಂಟಿಕೊಂಡಿರಲು , ವಿಟಮಿನ್ ಸಿ ಅಂಡಾಶಯದಲ್ಲಿ ಅಂಡಗಳು ಉತ್ಪತ್ತಿಯಾಗಲು ಸಹಕರಿಸುತ್ತವೆ.

ಸಿಟ್ರಸ್ ಆಮ್ಲ ಹೆಚ್ಚಿರುವ ಹಣ್ಣುಗಳು

ಸಿಟ್ರಸ್ ಆಮ್ಲ ಹೆಚ್ಚಿರುವ ಹಣ್ಣುಗಳು

ಗರ್ಭವತಿಯಾಗಬಯಸುವ ಮಹಿಳೆಯರಿಗೆ ಹೆಚ್ಚಿನ ವಿಟಮಿನ್ ಸಿ. ಅಗತ್ಯವಿದೆ. ಗರ್ಭಾಶಯದಿಂದ ಅಂಡಾಣು ಬಿಡುಗಡೆಗೊಳ್ಳಲು ವಿಟಮಿನ್ ಸಿ ಅಗತ್ಯವಾಗಿದೆ. ವಿಟಮಿನ್ ಸಿ. ಹೆಚ್ಚಿರುವ ಮೂಸಂಬಿ, ಲಿಂಬೆ, ಕಿತ್ತಳೆ, ಕಿವಿ ಮೊದಲಾದ ಹಣ್ಣುಗಳು ಫಲಕಾರಿಯಾಗಿವೆ.

ದಾಳಿಂಬೆ

ದಾಳಿಂಬೆ

ದಾಳಿಂಬೆಯಲ್ಲಿರುವ ಇನ್ನಿತರ ಆರೋಗ್ಯಕರ ಗುಣಗಳ ಹೊರತಾಗಿ ದಂಪತಿಗಳಲ್ಲಿ ಲೈಂಗಿಕಾಪೇಕ್ಷೆಯನ್ನು ಹೆಚ್ಚಿಸುವ ಹಲವು ಪೋಷಕಾಂಶಗಳಿವೆ.

ಬಾಳೆಹಣ್ಣು

ಬಾಳೆಹಣ್ಣು

ಏಕಕ್ರಮದ ಋತುಚಕ್ರ ಹೊಂದಿರುವ ಮಹಿಳೆಯರಲ್ಲಿ ಗರ್ಭ ಧರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಪ್ರಸೂತಿ ತಜ್ಞರ ಅಭಿಪ್ರಾಯವಾಗಿದೆ. ಗರ್ಭ ಧರಿಸಲು ಬಯಸುವ ಮಹಿಳೆಯರು ಬಾಳೆಹಣ್ಣುಗಳನ್ನು ಹೆಚ್ಚಾಗಿ ಸೇವಿಸಲು ಇವರು ಸಲಹೆ ನೀಡುತ್ತಾರೆ. ಏಕೆಂದರೆ ಬಾಳೆಹಣ್ಣಿನಲ್ಲಿರುವ ವಿಟಮಿನ್ B6 ನಿಯಮಿತವಾದ ಋತುಚಕ್ರವನ್ನು ಪಾಲಿಸಲು ನೆರವಾಗುತ್ತದೆ.

ಅನನಾಸು

ಅನನಾಸು

ಅನಾನಾಸು ಹಣ್ಣಿನಲ್ಲಿ ಹೇರಳವಾದ ಮ್ಯಾಂಗನೀಸ್ ಇದೆ. ಈ ಖನಿಜವು ಮಹಿಳೆಯರಲ್ಲಿ ವಿವಿಧ ಸಂತಾನೋತ್ಪತ್ತಿಯ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಅಗತ್ಯವಾಗಿದೆ. ಗರ್ಭ ಧರಿಸಲು ವಿಫಲರಾದ ಮಹಿಳೆಯರಲ್ಲಿ ಮ್ಯಾಂಗನೀಸ್ ಅಂಶ ಕಡಿಮೆ ಇರುವುದು ಸಂಶೋಧನೆಗಳಿಂದ ತಿಳಿದುಬಂದಿದೆ.

ಮೊಟ್ಟೆ

ಮೊಟ್ಟೆ

ಕೋಳಿಮೊಟ್ಟೆ ಫಲವತ್ತತೆಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕೋಲಿನ್, ಫೋಲಿಕ್ ಆಮ್ಲ, ಒಮೆಗಾ ೩ ಕೊಬ್ಬಿನ ಆಮ್ಲ (omega 3 fatty acid) ಮತ್ತು ವಿಟಮಿನ್ ಡಿ ಇದ್ದು ಎಲ್ಲವೂ ಗರ್ಭಾಂಕುರಕ್ಕೆ ನೆರವಾಗುತ್ತವೆ.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಮೀನು ಸೇವಿಸುವ ಮಹಿಳೆಯರಿಗೆ ಸಾಲ್ಮನ್ ಮೀನು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರಲ್ಲಿ ಹೇರಳ ಪ್ರಮಾಣದಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲ (omega 3 fatty acid) ಮತ್ತು ಇತರ ಪೋಷಕಾಂಶಗಳು ಗರ್ಭಾಂಕುರಕ್ಕೆ ಸಹಕರಿಸುತ್ತವೆ.

ಸಿಂಪಿ (Oysters)

ಸಿಂಪಿ (Oysters)

ಮೃದ್ವಂಗಿಗಳ ಗುಂಪಿಗೆ ಸೇರಿದ ಚಿಪ್ಪು ಅಥವಾ ಸಿಂಪಿಯನ್ನು ಗರ್ಭಧರಿಸಬಯಸುವ ಮಹಿಳೆಯರು ಕಡ್ಡಾಯವಾಗಿ ಸೇವಿಸಬೇಕು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸತು (zinc) ಅಂಡಾಣು ರೂಪುಗೊಳ್ಳಲು ಅತ್ಯಗತ್ಯವಾಗಿದೆ.

ಕಪ್ಪೆಚಿಪ್ಪು (Shell fish)

ಕಪ್ಪೆಚಿಪ್ಪು (Shell fish)

ಕಪ್ಪೆಚಿಪ್ಪು ಅಥವಾ shell fish ನಲ್ಲಿ ಹೇರಳ ಪ್ರಮಾಣದಲ್ಲಿ ವಿಟಮಿನ್ B12 ಮಹಿಳೆಯರಲ್ಲಿ ಸಾಮಾನ್ಯ ಮಟ್ಟದ ಈಸ್ಟ್ರೋಜೆನ್ ಎಂಬ ಹಾರ್ಮೋನು ಸ್ರವಿತವಾಗಲು ಸಹಕರಿಸುತ್ತವೆ. ಇದರಿಂದಾಗಿ ಫಲಿತಗೊಂಡ ಅಂಡಾಣು ಫೆಲೋಪಿಯನ್ ನಾಳದಲ್ಲಿ ಆಸ್ಥಾನವಾಗಲು ಸಹಕರಿಸುತ್ತದೆ.

ಅರಿಶಿನ

ಅರಿಶಿನ

ಅರಿಶಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮಹಿಳೆಯರಲ್ಲಿ ಗರ್ಭಧರಿಸುವ ಸಂಭವತೆಯನ್ನು ಹೆಚ್ಚಿಸುತ್ತದೆ.

ಮೆಣಸಿನ ಪುಡಿ

ಮೆಣಸಿನ ಪುಡಿ

ಮೆಣಸಿನ ಪುಡಿ ನಾಲಿಗೆಗೆ ಖಾರವಾದರೂ ಆರೋಗ್ಯದ ಮಟ್ಟಿಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರಿಂದ ರಕ್ತಸಂಚಾರ ತೀವ್ರಗೊಂಡು ಇಡಿಯ ದೇಹ ಉತ್ತಮ ಆರೋಗ್ಯ ಪಡೆಯುವಲ್ಲಿ ನೆರವಾಗುತ್ತದೆ. ಅಲ್ಲದೇ ದೇಹದ ಉದ್ರೇಕವನ್ನು ಕಡಿಮೆ ಮಾಡುವ ಎಂಡಾರ್ಫಿನ್ ಎಂಬ ಹಾರ್ಮೋನುಗಳನ್ನು ಬಿಡುಗಡೆಗೊಳಿಸಿ ದೇಹವನ್ನು ನಿರಾಳಗೊಳಿಸುತ್ತದೆ ಹಾಗೂ ಗರ್ಭಧರಿಸಲು ದೇಹವನ್ನು ಅಣಿಗೊಳಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ಸೆಲೆನಿಯಂ ಎಂಬ ಖನಿಜ ಫಲಿತವಾಗಿದ್ದ ಅಂಡಾಣು ಸುಲಭವಾಗಿ ದೇಹದಿಂದ ಹೊರಹೋಗದಂತೆ ತಡೆಯುತ್ತದೆ. ಇದರಿಂದಾಗಿ ಗರ್ಭ ನಿಲ್ಲುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಫಲವತ್ತತೆಯ ನಿಟ್ಟಿನಲ್ಲಿ ಬೆಳ್ಳುಳ್ಳಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ಕುಂಬಳ ಬೀಜಗಳು

ಕುಂಬಳ ಬೀಜಗಳು

ಕುಂಬಳಕಾಯಿಯ ಬೀಜಗಳನ್ನು ಚೆನ್ನಾಗಿ ಒಣಗಿಸಿ ಸೇವಿಸುವ ಮೂಲಕ ಮಹಿಳೆಯರ ಸಂತಾನೋತ್ಪತ್ತಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತವೆ. ಹೆಚ್ಚಿನ ಪ್ರಮಾಣದ ಸತು ಜೀವಕೋಶಗಳ ಉತ್ಪತ್ತಿಯಲ್ಲಿ ಸಹಕರಿಸಿ ಜೀವಾಂಕುರಕ್ಕೆ ನೆರವಾಗುತ್ತವೆ.

ನಾರಿನ ಬೀಜ (Flax seeds)

ನಾರಿನ ಬೀಜ (Flax seeds)

ನಾರಿನ ಬೀಜದಲ್ಲಿ ಹೇರಳವಾಗಿರುವ ಒಮೆಗಾ ೩ ಕೊಬ್ಬಿನ ಆಮ್ಲ (omega 3 fatty acid) ಫಲವತ್ತತೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಇನ್ನೊಂದು ಪೋಷಕಾಂಶ ಲಿಗ್ನಿನ್ ಗರ್ಭಾಶಯದಲ್ಲಿ ಉಂಟಾಗುವ ಫೈಬ್ರಾಯ್ಡ್ ಎಂಬ ಗಡ್ಡೆಗಳು ಕಿರಿದಾಗುವಂತೆ ನೋಡಿಕೊಳ್ಳುತ್ತವೆ. ಇದರಿಂದಾಗಿ ಗರ್ಭಾಶಯ ಪೂರ್ಣಪ್ರಮಾಣದಲ್ಲಿ ಲಭ್ಯವಾಗಿ ಗರ್ಭಾಂಕುರಕ್ಕೆ ನೆರವಾಗುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಹೃದಯ ಮತ್ತು ಸುಗಮ ರಕ್ತಸಂಚಾರಕ್ಕೆ ಅತ್ಯುತ್ತಮವಾಗಿರುವ ಆಲಿವ್ ಎಣ್ಣೆ ದೇಹದಲ್ಲಿ ಉರಿಯೂತದಿಂದ ಕಾಪಾಡುತ್ತದೆ. ತನ್ಮೂಲಕ ಬಸಿರಿನ ಅವಧಿಯಲ್ಲಿ ಯಾವುದೇ ತೊಂದರೆಯಾಗುವ ಸಂಭವಗಳು ಕಡಿಮೆಯಾಗುತ್ತದೆ.

ಮೀನೆಣ್ಣೆ (Cod-liver oil)

ಮೀನೆಣ್ಣೆ (Cod-liver oil)

ಒಮೆಗಾ ೩ ಕೊಬ್ಬಿನ ಆಮ್ಲ (omega 3 fatty acid) ಹೆಚ್ಚಾಗಿರುವ ಮೀನೆಣ್ಣೆಯಲ್ಲಿರುವ ಹಲವು ಪೋಷಕಾಂಶಗಳು ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಮತ್ತು ಕ್ಲುಪ್ತ ಕಾಲದಲ್ಲಿ ಸ್ರವಿಸುವಂತೆ ಮಾಡಿ ಮಹಿಳೆಯರ ಸಂತಾನೋತ್ಪತ್ತಿಗೆ ಸಹಕರಿಸುತ್ತವೆ.

ಬಾದಾಮಿ

ಬಾದಾಮಿ

ಗರ್ಭ ಧರಿಸಬಯಸುವ ಮಹಿಳೆಯರಿಗೆ ಅಲ್ಲಾ ಒಣಹಣ್ಣುಗಳು ಉಪಯುಕ್ತವಾಗಿದೆ. ಅದರಲ್ಲೂ ಬಾದಾಮಿ ಅತ್ಯುತ್ತಮವಾಗಿದೆ. ಇದರಲ್ಲಿ ಹೇರಳ ಪ್ರಮಾಣದಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲ (omega 3 fatty acid) ಮತ್ತು ವಿಟಮಿನ್ ಇ ಫಲವತ್ತತೆಯನ್ನು ಹೆಚ್ಚಿಸುತ್ತವೆ.

ಪ್ರಯೋಜನಗಳು

ಪ್ರಯೋಜನಗಳು

ಈ ಆಹಾರಗಳಲ್ಲಿ ಕೆಲವು ಕೊಂಚ ದುಬಾರಿಯಾದರೂ ಸಹಾ ಮುಂಬರುವ ಮಗುವಿನ ಅಪೇಕ್ಷೆಗಾಗಿ ಸೇವಿಸುವುದು ಒಳ್ಳೆಯದು. ಆದರೆ ಹೆಚ್ಚಿನವು ಸ್ಥಳೀಯವಾಗಿ ಲಭ್ಯವಾಗುವಂತಹವೂ ಹಾಗೂ ಸುಲಭ ಬೆಲೆಯಲ್ಲಿ ಲಭ್ಯವೂ ಆಗಿರುವುದರಿಂದ ಶೀಘ್ರ ಫಲ ಕಂಡುಬರುವುದು.

X
Desktop Bottom Promotion