ಗರ್ಭಾವಸ್ಥೆಯಲ್ಲಿ ಕಿಬ್ಬೊಟ್ಟೆಯ ಸೆಳೆತಕ್ಕೆ 7 ಕಾರಣಗಳು

By Super

ಗರ್ಭಾವಸ್ಥೆ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಒಂದು ಅದ್ಭುತ ಮತ್ತು ಒತ್ತಡದ ಸಮಯ. ಯಾವುದೇ ಅಸಾಮಾನ್ಯ ಭಾವನೆಗಳೂ ನಿಮ್ಮನ್ನು ಈ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿಸುತ್ತದೆ. ಜೊತೆಗೆ ಈ ಸಮಯದಲ್ಲಿ ನೀವು ಸದಾ ನಿಮ್ಮ ಹುಟ್ಟುವ ಮಗುವಿನ ಸುರಕ್ಷತೆಯ ಬಗ್ಗೆಯೇ ಹೆಚ್ಚಿನ ಚಿಂತೆಯನ್ನು ಮಾಡುತ್ತಿರುತ್ತೀರಿ. ಆದರೆ ಗರ್ಭಧಾರಣೆಗೆ ಸಂಬಂಧಿಸಿದ ದೈಹಿಕ ಮತ್ತು ಮಾನಸಿಕ ಬದಲಾವಣೆಯನ್ನು ಅನುಭವಿಸುವುದು ಸಹಜ.

ಗರ್ಭಾವಸ್ಥೆಯಲ್ಲಿನ ನೋವು ಈ ವರ್ಗಕ್ಕೆ ಸೇರುತ್ತವೆ. ಗರ್ಭಾವಸ್ಥೆಯಲ್ಲಿ ಗರ್ಭಿಣಿ ಮಹಿಳೆಗೆ ಹೊಟ್ಟೆ ಸೆಳೆತ, ಆಸಿಡಿಟಿ ಬದಲಾವಣೆಯಿಂದ ಹಿಡಿದು ಗರ್ಭಪಾತದ ಸಾಧ್ಯತೆಗಳ ಬಗ್ಗೆ ಹಲವಾರು ಅನುಮಾನಗಳನ್ನು ಸೃಷ್ಟಿಸಬಹುದು. ಕೆಲವರು ಹೆಚ್ಚುವರಿ ಕಾಳಜಿ ಮತ್ತು ಗಮನವನ್ನು ಈ ಸಮಯದಲ್ಲಿ ತೆಗೆದುಕೊಳ್ಳಬೇಕಾಗಿದ್ದರೆ ಕೆಲವರಿಗೆ ಇದು ತೀರಾ ಸಹಜ. ಗರ್ಭಾವಸ್ಥೆಯಲ್ಲಿ ಹೊಟ್ಟೆ ಸೆಳೆತಕ್ಕೆ ಅನೇಕ ಕಾರಣಗಳಿವೆ. ಗರ್ಭಾವಸ್ಥೆಯಲ್ಲಿ ಹೊಟ್ಟೆ ಸೆಳೆತ, ಅದರ ತೀರ್ವತೆ, ಅವಧಿ ಮತ್ತು ಪುನರಾವರ್ತನೆಯನ್ನು ಅವಲಂಬಿಸಿ ಒಬ್ಬರಿಂದೊಬ್ಬರಿಗೆ ವಿಭಿನ್ನವಾಗಿರುತ್ತದೆ.

ಮಹಿಳೆಯರು ತಾವು ಗರ್ಭಿಣಿ ಎಂದು ಗೊತ್ತಿಲ್ಲದ ಸಮಯದಲ್ಲಿ ಅಂದರೆ ಗರ್ಭಾವಸ್ಥೆಯ ಆರಂಭದಲ್ಲಿ ಹೊಟ್ಟೆ ಸೆಳೆತವನ್ನು ಅನುಭವಿಸುವ ಸಾಧ್ಯತೆಗಳಿರುತ್ತವೆ. ಆದರೆ ಹೆಚ್ಚಿನ ಮಹಿಳೆಯರು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಒಂದು ಭಾಗವಾಗಿ ಸಂಭವಿಸುವ ಮುಟ್ಟಿನ ಸಮಯದ ಹೊಟ್ಟೆ ನೋವು ಹಾಗೂ ಗರ್ಭಾವಸ್ಥೆಯ ಹೊಟ್ಟೆನೋವನ್ನು ಪ್ರತ್ಯೇಕವಾಗಿ ಗುರುತಿಸುವಲ್ಲಿ ವಿಫಲರಾಗುತ್ತಾರೆ.

7 Reasons For Abdominal Cramps During Pregnancy

ವೈದ್ಯಕೀಯ ಸಲಹೆಯನ್ನು ಪಡೆದು ಗರ್ಭಾವಸ್ಥೆಯಲ್ಲಿ ಸೆಳೆತ ಕಾರಣಗಳನ್ನು ತಿಳಿದು ನಿಮ್ಮ ನಿರ್ದಿಷ್ಟ ಆರೋಗ್ಯ ಸ್ಥಿತಿಯನ್ನು ಕಾಯ್ದುಕೊಳ್ಳಲು, ಆರೈಕೆಮಾಡಿಕೊಳ್ಳಲು ಸಹಾಯವಾಗುತ್ತದೆ. ಇಲ್ಲಿ ನಾವು ಗರ್ಭಾವಸ್ಥೆಯಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳಲು ಸಾಮಾನ್ಯ ಕಾರಣಗಳನ್ನು ನೋಡಬಹುದು.

ಗರ್ಭಾವಸ್ಥೆಯ ಬಗೆಯ ಸುಳ್ಳು ಕಲ್ಪನೆಗಳ ಗುಟ್ಟು ಬಯಲು

ಇಂಪ್ಲಾನ್‌ಟೇಶನ್ (Implantation)
ಇಂಪ್ಲಾನ್‌ಟೇಶನ್ (Implantation) ಸಂದರ್ಭದಲ್ಲಿ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುವುದು ಸಹಜ. ಇದು ಸಾಮಾನ್ಯವಾಗಿ ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಅಂದರೆ ಅಂಡೋತ್ಪತ್ತಿಯ 6-10 ದಿನಗಳಲ್ಲಿ ಕಾಣಿಸಿಕೊಳ್ಳಬಹುದು. ಇದು ಮಂದ ರಕ್ತಸ್ರಾವವನ್ನು ಉಂಟುಮಾಡಬಹುದು. ಇದು ಗಂಭೀರವಾದ ಸಮಸ್ಯೆಯೇನೂ ಅಲ್ಲ. ನೀವು ಗರ್ಭಾವಸ್ಥೆಗೆ ಒಳಗಾಗುತ್ತಿದ್ದಂತೆ ಸಹಜವಾಗಿಯೇ ಕಡಿಮೆಯಾಗುತ್ತದೆ.

ಆಸಿಡಿಟಿ (ಗ್ಯಾಸ್)
ಆಸಿಡಿಟಿ ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ. ಇದು ಗರ್ಭಾವಸ್ಥೆಯಲ್ಲಿ ಹೊಟ್ಟೆ ಸೆಳೆತದ ಪ್ರಮುಖ ಕಾರಣಗಳಲ್ಲಿ ಒಂದು. ನೋವಿನ ಮಟ್ಟ ಮತ್ತು ತೀವ್ರತೆಯನ್ನು ಪರೀಕ್ಷಿಸಿದರೆ ಗರ್ಭಾವಸ್ಥೆಯಲ್ಲಿ ಇತರೆ ನೋವುಗಳಿಗೂ ಈ ನೋವಿಗೂ ವ್ಯತ್ಯಾಸವನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ. ಇದರಿಂದ ಅಗತ್ಯ ಔಷಧೋಪಚಾರಗಳನ್ನು ಮಾಡಲೂ ಸಹಾಯಕವಾಗುತ್ತದೆ.

ಹಸು ಗೂಸುಗಳಿಗೆ ಸಾಮಾನ್ಯವಾಗಿ ಕಾಡುವ 8 ತ್ವಚೆಯ ಸಮಸ್ಯೆಗಳು

ಅಪಸ್ಥಾನೀಯ ಗರ್ಭಧಾರಣೆ (Ectopic pregnancy)
ನೀವು ಕೇವಲ ಒಂದು ಬದಿಯಲ್ಲಿ ಬಲವಾದ ಮತ್ತು ಅಸಹನೀಯ ನೋವನ್ನು ಅನುಭವಿಸಿದರೆ ಅದು ಅಪಸ್ಥಾನೀಯ ಗರ್ಭಧಾರಣೆಯ ಅವಕಾಶಗಳನ್ನು ಸೂಚಿಸುತ್ತದೆ. ಅಪಸ್ಥಾನೀಯ ಗರ್ಭಧಾರಣೆ ಸಾಮಾನ್ಯವಾಗಿ ಡಿಂಬನಾಳ ಗರ್ಭಕೋಶ ಬಿಟ್ಟು ಬೇರೆ ಎಲ್ಲಿಯಾದರೂ ಭ್ರೂಣ ಉತ್ಪತ್ತಿಯನ್ನು ಸೂಚಿಸುತ್ತದೆ. ಈ ಸ್ಥಿತಿಯಲ್ಲಿ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ.

ಗರ್ಭಪಾತ
ಗರ್ಭಿಣಿಯರಿಗೆ ಅತ್ಯಂತ ಆತಂಕವನ್ನು ಉಂಟುಮಾಡುವ ಪರಿಸ್ಥಿತಿ ಗರ್ಭಪಾತ. ಇದೂ ಸಹ ಗರ್ಭಾವಸ್ಥೆಯಲ್ಲಿ ಹೊಟ್ಟೆ ನೋವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದು ಗರ್ಭಾವಸ್ಥೆಯ ಯಾವುದೇ ಹಂತಗಳಲ್ಲಿ ಸಂಭವಿಸಬಹುದು ಮತ್ತು ಸಾಮಾನ್ಯವಾಗಿ ರಕ್ತಸ್ರಾವದ ಮೂಲಕ ಕಾಣಿಸಿಕೊಳ್ಳುತ್ತದೆ. ನಿಮಗೆ ಈ ಮೊದಲು ಗರ್ಭಪಾತ ಸಂಭವಿಸಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಮೂತ್ರದ ಸೋಂಕು
ಗರ್ಭಿಣಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿದ್ದು ಅತ್ಯಂತ ಬೇಗ ಮೂತ್ರದ ಸೋಂಕು ಉಂಟಾಗುವ ಸಂಭವವಿರುತ್ತದೆ. ಮೂತ್ರದ ಸೋಂಕು ಮೂತ್ರಕೋಶದ ಮೇಲೆ ಪರಿಣಾಮಬೀರುತ್ತದೆ ಇದು ಗರ್ಭಾವಸ್ಥೆಯಲ್ಲಿ ಹೊಟ್ಟೆ ಸೆಳೆತಕ್ಕೆ ಕಾರಣವಾಗುತ್ತದೆ. ಮೂತ್ರದ ಸೋಂಕು ಯಾವುದೇ ಗರ್ಭಧಾರಣೆಯ ತೊಡಕುಗಳನ್ನು ಉಂಟುಮಾಡುವುದಕ್ಕಿಂತ ಮೊದಲು ಅದಕ್ಕೆ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು.

ಗರ್ಭಪಾತದ ನಂತರ ಮಹಿಳೆಯರ ದೇಹದಲ್ಲಿ ಆಗುವ 10 ಬದಲಾವಣೆಗಳು.

ಪ್ರಸವಪೂರ್ವ ಮಗುವಿನ ಜನನ
ಗರ್ಭಧಾರಣೆಯ 37 ವಾರಗಳ ಮೊದಲು ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಮತ್ತೊಂದು ಗಂಭೀರ ತೊಡಕು. ಬೆನ್ನಿನ ಕೆಳಭಾಗದಲ್ಲಿ ನೋವು, ರಕ್ತಸ್ರಾವ ಮತ್ತು ಯೋನಿ ಬಿಡುಗಡೆ ( ಡಿಸ್ಚಾರ್ಜ್ ) ಪ್ರಸವ ಪೂರ್ವ ಮಗುವಿನ ಹುಟ್ಟಿನ ಆರಂಭಿಕ ಲಕ್ಷಣಗಳು ಇವೆ.

ಗರ್ಭಾಶಯದ ಸ್ಟ್ರೆಚ್ಚಿಂಗ್
ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಸೆಳೆತ ಸಾಮಾನ್ಯ ಕಾರಣಗಳಲ್ಲಿ ಒಂದು ಬೆಳೆಯುತ್ತಿರುವ ಗರ್ಭಕೋಶ. ಗರ್ಭಕೋಶ ಭ್ರೂಣಕ್ಕೆ ಸಾಕಷ್ಟು ಜಾಗವನ್ನು ನೀಡಲು ಹರಡಿಕೊಳ್ಳುತ್ತಾ ಹೋಗುತ್ತದೆ. ಇದು ಭ್ರೂಣ ಗಾತ್ರ ಹೆಚ್ಚಾಗಲು ಆರಂಭಿಸಿದಾಗ ಸಾಮಾನ್ಯವಾಗಿ ಏಳು ತಿಂಗಳ ನಂತರ ನೋವು ಸಂಭವಿಸುತ್ತದೆ. ಗರ್ಭಧಾರಣೆಯ ಸಂದರ್ಭದಲ್ಲಿ ಗರ್ಭಿಣಿಗೆ ಉದರ ಸಂಬಂಧಿ ಸಮಸ್ಯೆಗಳೂ ಸಾಮಾನ್ಯವಾಗಿದ್ದರೂ ಅದರ ಬಗ್ಗೆ ಎಚ್ಚರಿಕೆಯನ್ನು, ಮುಂಜಾಗ್ರತೆಯನ್ನು ವಹಿಸುವುದು ಒಳ್ಳೆಯದು!

Story first published: Monday, June 30, 2014, 16:04 [IST]
X
Desktop Bottom Promotion