ಗರ್ಭಿಣಿಯೆಂದು ಹೇಳುವ ಲಕ್ಷಣಗಳಿವು

ಮಹಿಳೆಯೊಬ್ಬಳು ಪರಿಪೂರ್ಣ ಎನಿಸಬೇಕಾದರೆ ಆಕೆ ತಾಯಿಯಾಗುವುದರಿಂದ ಮಾತ್ರ ಸಾಧ್ಯ ಎಂಬುದು ನಮ್ಮಲ್ಲಿ ಮೊದಲಿನಿಂದಲೂ ನಂಬಿಕೆಯಲ್ಲಿರುವ ಮಾತು. ಈ ಮಾತಿಗೆ ತಕ್ಕಂತೆ ತಾಯ್ತನದ ಸುಖವನ್ನು ಅನುಭವಿಸಿದ ತಾಯಿಗೆ ಮಾತ್ರವೇ ಗೊತ್ತು! ಹೊಟ್ಟೆಯಲ್ಲಿರುವಾಗಲೇ ತುಂಟತನದಿಂದ ಒದೆಯುವ ಮಗುವನ್ನು ಅದೇಷ್ಟೋ ನೋವನ್ನು ಅನುಭವಿಸಿ ಹಡೆದು ಸಾರ್ಥಕತೆಯನ್ನು ಕಾಣುತ್ತಾಳೆ ತಾಯಿ.

ಹಾಗಾದರೆ ಆಕೆ ತಾಯಿಯಾಗುತ್ತಿದ್ದಾಳೆ ಎಂಬ ವಿಷಯವನ್ನು ಮನದಟ್ಟು ಮಾಡಿಕೊಳ್ಳುವುದಾದರೂ ಹೇಗೆ? ಮದುವೆಯಾಗಿ ಸಹಜವಾಗಿಯೇ ತಾಯಿಯಾಗ ಬಯಸುವ ಸ್ತ್ರೀ ತಾನು ತಾಯಿಯಾಗುತ್ತಿದ್ದೇನೆ ಎಂಬ ಅಂಶವನ್ನು ಹೇಗೆ ತಿಳಿಯಬಹುದು ಎಂಬುದನ್ನು ಹೇಳುತ್ತದೆ ಈ ಲೇಖನ!

ಉಸಿರುಕಟ್ಟುವಿಕೆ

ಉಸಿರುಕಟ್ಟುವಿಕೆ

ಮೆಟ್ಟಿಲುಗಳನ್ನು ಹತ್ತುವಾಗ ತಕ್ಷಣವೇ ಸುಸ್ತಾದಂತೆ ಅನುಭವವಾಗುತ್ತಿದೇಯೇ? ಹಾಗಾದರೆ ಇದು ನೀವು ಗರ್ಭಿಣಿಯಾಗಿರುವ ಲಕ್ಷಣ! ನಿಮ್ಮ ಹೊಟ್ಟೆಯಲ್ಲಿರುವ ಮಗುವಿಕೆ ಆಮ್ಲಜನಕದ ಅಗತ್ಯವಿರುತ್ತದೆ. ಆದ್ದರಿಂದ ನಿಮಗೆ ಉಸಿರುಗಟ್ಟಿದ ಅನುಭವವಾಗುತ್ತದೆ. ವಿಷಾದನೀಯ ವಿಷಯವೆಂದರೆ ಇದು ನಿಮ್ಮ ಗರ್ಭಧಾರಣೆಯ ಕೊನೆಯವರೆಗೂ ಮುಂದುವರಿಯಬಹುದು! ನಿಮ್ಮ ಮಗು ಬೆಳೆಯುತ್ತಿದ್ದಂತೆ ನಿಮ್ಮ ಶ್ವಾಸಕೋಶದ ಮೇಲೆ ಮತ್ತು ಧ್ವನಿಫಲಕ (diaphragm ) ದ ಮೇಲೆ ಒತ್ತಡ ಹಾಕಲು ಪ್ರಾರಂಭಿಸುತ್ತದೆ.

ಸ್ತನಗಳಲ್ಲಿ ನೋವು

ಸ್ತನಗಳಲ್ಲಿ ನೋವು

ನಿಮ್ಮ ಸ್ತನಗಳು ಇತ್ತೀಚಿಗೆ ದೊಡ್ಡ ಗಾತ್ರವನ್ನು ಪಡೆದಿರುವುದನ್ನು ಗಮನಿಸಿದ್ದೀರಾ? ಇಂತಹ ಲಕ್ಷಣಗಳು ಕಂಡುಬಂದಲ್ಲಿ ಗರ್ಭಧರಿಸಿದ್ದೀರಿ ಎಂದು ನಿರ್ಧರಿಸಬಹುದು. ಅದರಲ್ಲೂ ಗರ್ಭಧಾರಣೆಯ ಸಂದರ್ಭದಲ್ಲಿ ಮೊದಲು ಕಾಣಿಸಿಕೊಳ್ಳುವ ಲಕ್ಷಣವಿದು. ಎದೆಯ ಭಾಗ ದೊಡ್ಡದಾಗಿ ದಟ್ಟವಾಗಿ ಕಾಣಿಸುತ್ತದೆ. ಇದು ಬೇರೆಲ್ಲ ಸಮಯಕ್ಕಿಂತ ಗರ್ಭಧಾರಣೆಯ ಸಂದರ್ಭದಲ್ಲಿ ತುಸು ವಿಭಿನ್ನ ಲಕ್ಷಣವನ್ನು ಹೊಂದಿರುತ್ತದೆ.

ಆಯಾಸ

ಆಯಾಸ

ಹಿಂದಿನ ರಾತ್ರಿ ಇರದ ಸುಸ್ತು, ಆಯಾಸ ಈ ರಾತ್ರಿ ಮಲಗುವ ಮುನ್ನ ಕಾಣಿಸಿಕೊಳ್ಳುತ್ತಿದೇಯೇ? ಇದಕ್ಕೆ ಕಾರಣ ದೇಹದಲ್ಲಿ ಹೆಚ್ಚುತ್ತಿರುವ ಹಾರ್ಮೋನ್ ಗಳು. ಹಲವು ಮಹಿಳೆಯರಿಗೆ ಗರ್ಭಧಾರಣೆಯ ಮೊದಲ ಮೂರು ತಿಂಗಳು ಸಾಕಷ್ಟು ಆಯಾಸ ಕಂಡುಬರುತ್ತದೆ. ಆದರೆ ನಂತರದಲ್ಲಿ ಈ ದಣಿವು ಕಡಿಮೆಯಾಗುತ್ತಾ ಬರುತ್ತದೆ.

ವಾಕರಿಕೆ

ವಾಕರಿಕೆ

ಗರ್ಭಾವಸ್ಥೆಯ ಮೊದಲ 6 ವಾರಗಳು ವಾಕರಿಕೆ ವಾರ ಎನ್ನಬಹುದು. ಕೆಲವರಲ್ಲಿ ಇದು ಅತ್ಯಂತ ಹೆಚ್ಚಾಗಿರುತ್ತದೆ. ಇನ್ನೂ ಕೆಲವು ಮಹಿಳೆಯರಿಗೆ ಬೆಳಗಿನ ಹೊತ್ತಿನಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ತ್ರೈ ಮಾಸಿಕದ ನಂತರ ಇದು ಕಡಿಮೆಯಾಗುತ್ತದೆ. ಗರಿಗರಿಯಾದ ತಿಂಡಿಗಳು ಅಥವಾ ಶುಂಠಿಯನ್ನು ಬಾಯಲ್ಲಿಟ್ಟು ವಾಕರಿಕೆ ಬಾರದಂತೆ ತುಸು ತಡೆಗಟ್ಟಬಹುದು.

ಪದೇಪದೇ ಮೂತ್ರವಿಸರ್ಜನೆ

ಪದೇಪದೇ ಮೂತ್ರವಿಸರ್ಜನೆ

ಇಡೀ ರಾತ್ರಿ ನಿದ್ದೆ ಮಾಡಲಾಗದೇ ಆಗಾಗ ಮೂತ್ರಮಾಡಬೇಕೆನಿಸಿದರೆ ಇದೂ ಗರ್ಭಧಾರಣೆಯ ಒಂದು ಲಕ್ಷಣ. ಈ ಸಂದರ್ಭದಲ್ಲಿ ನಿಮ್ಮ ದೇಹ ಹೆಚ್ಚು ದ್ರವವನ್ನು ಉತ್ಪಾದಿಸುತ್ತದೆ. ಆದ್ದರಿಂದ ಗರ್ಭಿಣಿಯಾಗಿರುವಾಗ ಮೂತ್ರಮಾಡಲು ಆಗಾಗ ಬ್ರೇಕ್ ತೆಗೆದುಕೊಳ್ಳುತ್ತಿರಬೇಕು!

 ತಲೆನೋವು

ತಲೆನೋವು

ಹಾರ್ಮೋನ್ ಬದಲಾವಣೆಯ ಪರಿಣಾಮವಾಗಿ ಉಂಟಾಗುವ ತಲೆನೋವು ಗರ್ಭಧಾರಣೆಯ ಅತ್ಯಂತ ಪ್ರಮುಖ ಲಕ್ಷಣ! ಈ ನೋವು ಎದುರಿಸಲು ಅಸೆಟಾಮಿನೋಫೆನ್ ಬದಲಿಗೆ ಐಬುಪ್ರೊಫೇನ್ ತೆಗೆದುಕೊಳ್ಳಬಹುದು.

ಬೆನ್ನು ನೋವು

ಬೆನ್ನು ನೋವು

ನಿಮ್ಮ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣೀಸಿಕೊಳ್ಳುತ್ತಿದೆಯೇ? ನಿಮಗೆ ಸಾಮಾನ್ಯವಾಗಿ ಬೆನ್ನುನೋವು ಬರದೇ ಇತ್ತೀಚಿಗೆ ಬೆನ್ನಿನಲ್ಲಿ ನೋವು ಕಾಣಿಸಿಕೊಂಡರೆ ಇದು ಮೂಳೆ ಸಾಂದ್ರತೆಯನ್ನು ಕಡಿಮೆ ಮಾಡುವ ಲಕ್ಷಣ. ಅಂದರೆ ಗರ್ಭಧಾರಣೆಯ ಲಕ್ಷಣ. ನಿಮ್ಮ ಗರ್ಭಧಾರಣೆಯ ಸಂದರ್ಭದಲ್ಲಿ ನಿಮ್ಮ ತೂಕ ಹೆಚ್ಚಾದಂತೆ ಇಂತಹ ನೋವುಗಳೂ ಮುಂದುವರೆಯಬಹುದು! ಆದರೆ ಕೆಲವು ವ್ಯಾಯಾಮದ ಮೂಲಕ ಈ ನೋವನ್ನು ಕೊಂಚ ಕಡಿಮೆಮಾಡಬಹುದು.

ಮಾಂಸ ಖಂಡಗಳ ಸೆಳೆತ

ಮಾಂಸ ಖಂಡಗಳ ಸೆಳೆತ

ಇದು ಗರ್ಭಧಾರಣೆಯ ಲಕ್ಷಣವಿರಬಹುದೇ? ಖಂಡಿತ ನಿಜ. ಸೆಳೆತದ ಅನುಭವವಾದರೆ ಅದು ಮಗುವನ್ನು ಸಿದ್ಧ ಪಡೆಯಲು ಹರಡಿಕೊಂಡ ನಿಮ್ಮ ಗರ್ಭಕೋಶ ಇರಬಹುದು!

ಕಡುಬಯಕೆಗಳು

ಕಡುಬಯಕೆಗಳು

ಹುಳಿ ತಿನ್ನ ಬೇಕೆನಿಸುವುದು, ಜೊತೆಗೆ ನೀವು ಇಷ್ಟಪಡುವ ಹಲವಾರು ಆಹಾರಗಳು ಇಷ್ಟವಾಗದೆ ಇರುವುದು ಕೂಡ ಗರ್ಭಿಣಿಯಾಗಿದೆಯೆಂದು ತಿಳಿಸುವ ಲಕ್ಷಣ.

ಮಲಬದ್ಧತೆ ಮತ್ತು ಹೊಟ್ಟೆ ಊದಿಕೊಳ್ಳುವಿಕೆ

ಮಲಬದ್ಧತೆ ಮತ್ತು ಹೊಟ್ಟೆ ಊದಿಕೊಳ್ಳುವಿಕೆ

ಕಳೆದ ವಾರ ಸರಿಹೊಂದುತ್ತಿದ್ದ ಪ್ಯಾಂಟ್/ಜೀನ್ಸ್ ಇಂದು ಸರಿಯಾಗುತ್ತಿಲ್ಲವೇ? ಹಾಗಾದರೆ ಇದು ಗರ್ಭಧಾರಣೆಯ ಲಕ್ಷಣವೇ! ಗರ್ಭಧಾರಣೆಯಿಂದಾಗಿ ಜೀರ್ಣಕ್ರಿಯೆ ನಿಧಾನಗೊಳಿಸುವ ಹೆಚ್ಚುವರಿ ಪ್ರೊಜೆಸ್ಟ್ರಾನ್ ಆಗಿರಬಹುದು.

ಲಹರಿಯ ಬದಲಾವಣೆಗಳು

ಲಹರಿಯ ಬದಲಾವಣೆಗಳು

ನಿಮ್ಮ ದೇಹ, ಹೊಸ ಹಾರ್ಮೋನ್ ಗಳ ಬದಲಾವಣೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ನಿಮ್ಮ ಭಾವನೆಗಳಲ್ಲೂ ಬದಲಾವಣೆಗಳಾಗಬಹುದು. ಇಂತಹ ಬದಲಾವಣೆಗಳು ದೇಹದ ಜೊತೆಗೆ ಭಾವನೆಗಳಲ್ಲಿಯೂ ಕಾಣಿಸಿಕೊಳ್ಳುವುದರಿಂದ ನೀವು ಗರ್ಭಿಣಿಯಾಗಿದ್ದೀರಾ ಎಂಬುದನ್ನು ಖಚಿತಗೊಳಿಸಿಕೊಳ್ಳಬಹುದು.

ದೇಹದ ತಾಪಮಾನ

ದೇಹದ ತಾಪಮಾನ

ನೀವು ಗರ್ಭಿಣಿಯಾಗುವುದರಲ್ಲಿ ಸಕ್ರಿಯವಾಗಿದ್ದರೆ ಅಂಡೋತ್ಪತ್ತಿಯನ್ನು ಗುರುತಿಸಲು ನಿಮ್ಮ ದೇಹದ ತಾಪಮಾನವನ್ನು ಗಮನಿಸಬೇಕು. ಸಾಮಾನ್ಯವಾಗಿ ಅಂಡೋತ್ಪತ್ತಿಯಿಂದ, ನಿಮ್ಮ ಋತುಚಕ್ರದ ಅನಿರ್ದಿಷ್ಟ ಸಮಯದವರೆಗೆ ಬಿಬಿಟಿ (BBT) ಏರಿಕೆಯಾಗುತ್ತದೆ. ಈ ಏರಿಕೆ 2 ವಾರಗಳವರೆಗೆ ಹಾಗೆಯೇ ಮುಂದುವರಿದರೆ ನೀವೂ ಗರ್ಭಿಣಿಯಾಗಿದ್ದೀರಾ ಎಂದು ಖಚಿತಪಡಿಸಬಹುದು.

ಸೂಪರ್ ಸ್ಮೆಲ್!

ಸೂಪರ್ ಸ್ಮೆಲ್!

ಕಸವೂ ನಿಮ್ಮನ್ನು ತಮಾಷೆ ಮಾಡಲು ಪ್ರಾರಂಭಿಸಬಹುದು! ಆಶ್ವರ್ಯವಾಗುತ್ತಿದೆಯೇ? ಹೌದು ನಿಮಗೆ ವಾಸನೆಗಳಲ್ಲಿ ಸೂಕ್ಷ್ಮ ಸಂವೇದನೆ ಆರಂಭವಾಗಿದ್ದರೆ ನೀವು ಗರ್ಭಿಣಿಯಾಗಿದ್ದೀರೆಂದೇ ಅರ್ಥ! ನಿಮಗೆ ಹಿತವೆನಿಸುವ ಅಥವಾ ನಿಮಗೆ ಅಸಹನೀಯವಾದ ವಾಸನೆಗಳು ಬೇರೆಯವರಿಗೆ ಸಹಜವಾಗಿಯೇ ಇರುತ್ತವೆ.

ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವುದು

ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವುದು

ಸಾಮಾನ್ಯವಾಗಿ ಈ ಲಕ್ಷಣವನ್ನು ಚಲನಚಿತ್ರಗಳಲ್ಲಿ ಗರ್ಭಿಣಿ ಎಂಬುದನ್ನು ಗುರುತಿಸಲು ತೋರಿಸುವುದನ್ನು ಕಾಣುತ್ತೇವೆ. ಆದರೆ ಇದು ವಾಸ್ತವಿಕ ಲಕ್ಷಣ ಕೂಡ! ಲೋ ಬ್ಲಡ್ ಶುಗರ್ (ಕಡಿಮೆ ಸಕ್ಕರೆ ಪ್ರಮಾಣ) ಮತ್ತು ರಕ್ತದೊತ್ತಡ ತಲೆತಿರುಗುವಿಕೆಗೆ ಕಾರಣವಾಗಬಹುದು. ನೀವು ಸರಿಯಾಗಿ ಆರೋಗ್ಯಕರವಾದ ಆಹಾರವನ್ನೇ ಈ ಸಂದರ್ಭದಲ್ಲಿ ಸೇವಿಸತಕ್ಕದ್ದು!

ಗುರುತಿಸಿ

ಗುರುತಿಸಿ

ನಿಮಗೆ ಈ ತಿಂಗಳು ಮುಟ್ಟು/ಋತುಚಕ್ರ ಸಂಭವಿಸಿದೆಯೇ? ರಕ್ರಸ್ರಾವ ಎಂದಿನಂತೆಯೇ ಆಗುತ್ತಿದೇಯೇ ಅಥವಾ ಬದಲಾವಣೆಗಳಾಗಿವೆಯೇ? ಅವಧಿಗೆ ಸರಿಯಾಗಿ ಋತುಚಕ್ರವಾಗಿದೆಯೇ? ಇಂತಹ ಬದಲಾವಣೆಗಳು ಗರ್ಭಧಾರಣೆಯ ಸಂದರ್ಭದಲ್ಲಿ ಕಾಣೀಸಿಕೊಳ್ಳುತ್ತದೆ. ಅಲ್ಲದೇ ಗರ್ಭವನ್ನು ಧರಿಸಿದಾಗಲೂ ಗರ್ಭ ನಿಲ್ಲುವಾಗ ಕಿಂಚಿತ್ ರಕ್ರಸ್ರಾವ ಕೂಡ ಸಂಭವಿಸಬಹುದು.

ತಡವಾಗಿ ಋತುಚಕ್ರ/ಮುಟ್ಟು

ತಡವಾಗಿ ಋತುಚಕ್ರ/ಮುಟ್ಟು

ಇದು ಗರ್ಭಧಾರಣೆಯ ಅತ್ಯಂತ ಮೊದಲ ಲಕ್ಷಣ. ಈ ವ್ಯತ್ಯಾಸವನ್ನು ಗುರುತಿಸುವುದು ಹೇಗೆ? ಸರಿಯಾದ ಸಮಯಕ್ಕೆ ಬರದೇ ಇರುವ ಋತುಚಕ್ರವೇ ಗರ್ಭಧಾರಣೆಯ ಸುಳಿವು! ನಿಮ್ಮ ಋತುಚಕ್ರ ಸಾಮಾನ್ಯವಾಗಿದ್ದು ಈ ಅವಧಿ ತಡವಾಗಿದ್ದರೆ ಶೀರ್ಘವೇ ತಪಾಸಣೆ ಮಾಡಿಕೊಳ್ಳಿ.

ಪಾಸಿಟೀವ್ ಪ್ರೆಗ್ನೆಸ್ನಿ ಟೆಸ್ಟ್ (ಧನಾತ್ಮಕ ಗರ್ಭಧಾರಣಾ ತಪಾಸಣೆ)

ಪೀ-ಸ್ಟಿಕ್ ತಪಾಸಣೆಯ ಮೂಲಕ ನಿಮ್ಮಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಿ. ಈ ತಪಾಸಣೆಯಲ್ಲಿ ನಕಾರಾತ್ಮಕ ಉತ್ತರ ಬಂದೂ ನಿಮಗಿನ್ನೂ ಋತುಚಕ್ರವಾಗದಿದ್ದರೆ ಬೇಗನೇ ತಪಾಸಣೆ ಮಾಡಿಸಿದ್ದೀರೆಂದರ್ಥ. ಆದ್ದರಿಂದ ಸ್ವಲ್ಪ ಸಮಯದ ನಂತರ ಪುನಃ ಪರೀಕ್ಷಿಸಿ. ಮತ್ತು ಈ ತಪಾಸಣೆ ಧನಾತ್ಮಕವಾಗಿದ್ದರೆ - ಅಭಿನಂದನೆಗಳು!!

X
Desktop Bottom Promotion