Latest Updates
-
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ!
ಹೆರಿಗೆಯ ಬಳಿಕ ತೆಂಗಿನ ಹೂವಿನ ಈ ಲೇಹ್ಯ ತುಂಬಾನೇ ಒಳ್ಳೆಯದು, ಮಾಡುವುದು ಹೇಗೆ?
ಉತ್ತರ ಕನ್ನಡ ಭಾಗದಲ್ಲಿ ಜನರು ಎಲ್ಲದಕ್ಕೂ ಔಷಧಿಯ ಮೊರೆ ಹೋಗುವುದಕ್ಕಿಂತಲೂ ಹೆಚ್ಚಾಗಿ ಮನೆಮದ್ದನ್ನೇ ಬಳಸುತ್ತಾರೆ. ಮನೆಯಲ್ಲಿಯೇ ಇರುವಂತಹ ಕೆಲವು ಸಾಂಬಾರ ಪದಾರ್ಥಗಳು ಇರಬಹುದು ಅಥವಾ ತೋಟದಲ್ಲಿ ಸಿಗುವಂತಹ ಸೊಪ್ಪು, ಬೇರು ಮೊದಲಾದವುಗಳಿರಬಹುದು ಇವುಗಳನ್ನು ಬಳಸಿ ಮನೆಯಲ್ಲಿಯೇ ಮದ್ದನ್ನು ತಯಾರಿಸಿ ಬಳಸುತ್ತಾರೆ.

ಈ ಎಲ್ಲಾ ಮನೆ ಮದ್ದುಗಳು ಎಷ್ಟು ಪರಿಣಾಮಕಾರಿಯಾಗಿ ಇರುತ್ತದೆ ಅಂದ್ರೆ ಕೆಲವೇ ದಿನಗಳಲ್ಲಿ ಅದರ ಅತ್ಯುತ್ತಮ ಪರಿಣಾಮ ಕೂಡ ನೀವು ಕಾಣಬಹುದು. ಮೈ ಕೈ ನೋವು, ಜ್ವರ, ಶೀತ, ಕಫ ಇಂತಹ ಸಮಸ್ಯೆಗೆ ಯಾವುದೇ ಔಷಧಗಳನ್ನು ತೆಗೆದುಕೊಳ್ಳದೆ ಕೇವಲ ಮನೆ ಮದ್ದು ಮಾಡಿ ಅದರಲ್ಲಿ ಕಡಿಮೆ ಮಾಡಿಕೊಳ್ಳುತ್ತಾರೆ. ಜೊತೆಗೆ ವರ್ಷಕ್ಕೊಮ್ಮೆಯಾದರೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕೆಲವು ಲೇಹ್ಯವನ್ನು ಕೂಡ ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತಾರೆ. ಅವುಗಳಲ್ಲಿ ಒಂದು ತೆಂಗಿನಕೊನೆ ಲೇಹ್ಯ.
ನೀವು ಅಡಿಕೆ ಕೊನೆ ಕೇಳಿರಬಹುದು. ಅದೇ ರೀತಿಯಾಗಿ ತೆಂಗಿನ ಕೊನೆ ಕೂಡ ಉತ್ತರ ಕನ್ನಡ ಭಾಗದಲ್ಲಿ ಬಹಳ ಫೇಮಸ್. ತೆಂಗಿನ ಮರಕ್ಕೆ ತೆಂಗಿನಕಾಯಿ ಆಗುವುದಕ್ಕೂ ಮೊದಲು ಎಳೆದ ತೆಂಗಿನ ಹೂವನ್ನು ಕೊಯ್ದು ತೆಗೆಯುತ್ತಾರೆ ಇದನ್ನು ತೆಂಗಿನ ಕೊನೆ ಎನ್ನಲಾಗುತ್ತದೆ. ಇದು ನೋಡುವುದಕ್ಕೂ ಅಡಿಕೆಯ ಸಿಂಗಾರದಂತೆ ಕಾಣಿಸುತ್ತದೆ. ಈ ತೆಂಗಿನ ಕೊನೆ ತೆಗೆದು ಅದರಿಂದ ಒಂದು ಅಮೃತದಂತಹ ಲೇಹ್ಯವನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಈ ಲೇಹ್ಯವನ್ನು ಬಾಣಂತಿಯರಿಗೆ ಕೊಡಲಾಗುತ್ತದೆ.
ಆರೋಗ್ಯಕರ ಪ್ರಯೋಜನಗಳು:
ಬಹು ಮುಖ್ಯವಾಗಿ ತೆಂಗಿನ ಕೊನೆ ಲೇಹ್ಯವನ್ನು ನೀವು ತಿಂಗಳುಗಳವರೆಗೆ ಶೇಖರಿಸಿ ಇಡಬಹುದು ಅದು ಹಾಳಾಗುವುದಿಲ್ಲ ಹಾಗಾಗಿ ಬಾಣಂತಿಯರಿಗೆ ಮೂರು ತಿಂಗಳು ಕಳೆದ ನಂತರ ನಾಲ್ಕು ಐದನೇ ತಿಂಗಳಿನವರೆಗೂ ಈ ಲೇಹ್ಯವನ್ನು ತಿನ್ನಲು ಕೊಡಲಾಗುತ್ತದೆ. ಈ ಲೇಹ್ಯ ಶಕ್ತಿ ವರ್ಧಕವಾಗಿದೆ. ಇದರಲ್ಲಿ ದೇಹಕ್ಕೆ ಬೇಕಾಗುವ ಎನರ್ಜಿ ಬೂಸ್ಟರ್ ಹೆಚ್ಚಾಗಿರುತ್ತದೆ. ಹಾಗಾಗಿಯೇ ಬಾಣಂತಿಯರಿಗೆ ಇದನ್ನು ಮಾಡಿ ತಿನ್ನಿಸಲಾಗುತ್ತದೆ ಈ ಲೇಹ್ಯದಲ್ಲಿ ತೆಂಗಿನಕೊನೆ ಅಥವಾ ತೆಂಗಿನ ಹೂವಿನ ಜೊತೆಗೆ ಇನ್ನೂ ಕೆಲವು ಸಾಂಬಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಇದರಲ್ಲಿ ಬಳಸುವ ಜೀರಿಗೆಯಲ್ಲಿ ಬಾಣಂತಿಯರ ಎದೆ ಹಾಲು ಹೆಚ್ಚಿಸುವ ಶಕ್ತಿ ಇದ್ದರೆ ಕಾಳು ಮೆಣಸು ಹಾಗೂ ಬೆಲ್ಲದಲ್ಲಿ ಇರುವ ಕಬ್ಬಿನಾಂಶ ಹಾಗೂ ಇತರ ಜೀವ ಸತ್ವಗಳು ಬಾಣಂತಿಯರ ದೇಹವನ್ನು ಗಟ್ಟಿಗೊಳಿಸುತ್ತವೆ.
ಈ ಲೇಹ್ಯವನ್ನು ಕೇವಲ ಬಾಣಂತಿಯರು ಮಾತ್ರವಲ್ಲ ಇತರರು ಕೂಡ ಸೇವಿಸಬಹುದು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಮೈಕೈಯಲ್ಲಿ ಇರುವ ಎಂತದ್ದೇ ನೋವಾನಾದರೂ ಕೂಡ ಇದು ನಿವಾರಿಸುತ್ತದೆ. ಹಾಗಾಗಿ ಉತ್ತರ ಕನ್ನಡ ಭಾಗದಲ್ಲಿ ವರ್ಷಕ್ಕೊಮ್ಮೆಯಾದರೂ ಈ ತೆಂಗಿನಕೊನೆ ಲೇಹ್ಯವನ್ನು ತಯಾರಿಸಿಕೊಂಡು ತಿನ್ನಲಾಗುತ್ತದೆ. ಹಾಗಾದ್ರೆ ಈ ಅತ್ಯಂತ ಆರೋಗ್ಯಕರವಾದಂತಹ ತೆಂಗಿನ ಕೊನೆ ಲೇಹ್ಯ ತಯಾರಿಸುವುದು ಹೇಗೆ ನೋಡೋಣ.
ತೆಂಗಿನ ಕೊನೆ ಲೇಹ್ಯ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಎಳೆಯದಾದ ತೆಂಗಿನಕಾಯಿ ಅಥವಾ ತೆಂಗಿನ ಹೂವು
ಐದು ಚಮಚ ಕೊತ್ತಂಬರಿ ಬೀಜ
ಎರಡುವರೆ ಚಮಚ ಜೀರಿಗೆ
ಎರಡು ಚಮಚ ಕಾಳು ಮೆಣಸು
ಒಂದು ದೊಡ್ಡ ಕಫ್ ನಷ್ಟು ಜೋನಿ ಬೆಲ್ಲ
ಶುದ್ಧವಾದ ದೇಸಿ ತುಪ್ಪ
ತೆಂಗಿನ ಕೊನೆ ಲೇಹ್ಯ ತಯಾರಿಸುವ ವಿಧಾನ;
ಮೊದಲಿಗೆ ತೆಂಗಿನಕಾಯಿ ಹೂವನ್ನು ಅಥವಾ ತೆಂಗಿನಕೊನೆಯನ್ನು ತಂದು ಅದನ್ನು ಬಿಡಿಸಿ, ತೊಳೆದು, ಹೆಚ್ಚಿ ಒಂದು ಕುಕ್ಕರ್ ಪಾತ್ರೆಗೆ ಹಾಕಿ. ನಂತರ ಅದಕ್ಕೆ ಕೊತ್ತಂಬರಿ ಬೀಜ ಜೀರಿಗೆ ಕಾಳು ಮೆಣಸು ಹಾಕಿ ಕುಕ್ಕರ್ ನಲ್ಲಿ ಮುಚ್ಚಳ ಮುಚ್ಚಿ ಮೂರರಿಂದ ನಾಲ್ಕು ವಿಜಲ್ ಕೂಗಿಸಿ. ಅದು ಸ್ವಲ್ಪ ಆರಿದ ನಂತರ ಒಂದು ಮಿಕ್ಸರ್ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಹೆಚ್ಚು ನೀರನ್ನು ಬಳಸಬಾರದು ನೀರನ್ನ ಬಳಸಿದರೆ ಇದನ್ನು ತಿಂಗಳುಗಳವರೆಗೆ ಶೇಖರಿಸಿ ಇಡಲು ಸಾಧ್ಯವಿಲ್ಲ.
ಇನ್ನು ತೆಂಗಿನ ಹೂವು ಬೆಳೆದಿದ್ದರೆ ಅದನ್ನು ಹೀಗೆ ನುಣುಪಾಗಿ ರುಬ್ಬಲು ಸಾಧ್ಯವಿಲ್ಲ ಹಾಗಾಗಿ ಆದಷ್ಟು ಎಳೆಯ ತಂಗಿನ ಕೊನೆ ಬಳಸಬೇಕು. ರುಬ್ಬಿದ ಮಿಶ್ರಣವನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ. ರುಬ್ಬಿದ ಮಿಶ್ರಣ ಎಷ್ಟಿರುತ್ತದೆಯೋ ಅದೇ ಅಳತೆಯಲ್ಲಿ ಜೋನಿ ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿ. ತೆಂಗಿನ ಕೊನೆ ಲೇಹ್ಯ ತಯಾರಿಸಲು ಮುಖ್ಯವಾಗಿ ಜೋನಿ ಬೆಲ್ಲವನ್ನೇ ಬಳಸಬೇಕು ಇದರಲ್ಲಿ ಕಬ್ಬಿಣ, ಸತು ಮೊದಲಾದ ಅಂಶಗಳು ಹೇರಳವಾಗಿರುತ್ತವೆ. ಇದು ದೇಹಕ್ಕೆ ಎನರ್ಜಿ ಕೊಡುವುದು ಮಾತ್ರವಲ್ಲದೆ ಹಿಮೋಗ್ಲೋಬಿನ್ ಮಟ್ಟವನ್ನ ಸಮತೋಲನದಲ್ಲಿ ಇಡಲು ಕೂಡ ಸಹಾಯ ಮಾಡುತ್ತದೆ.
ಈಗ ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿದ ಲೇಹ್ಯ ಸರಿಯಾದ ಪಾಕ ಬರುವವರೆಗೂ ಮಧ್ಯಮ ಉರಿಯಲ್ಲಿ ಕಾಯಿಸಬೇಕು. ಈ ಮಿಶ್ರಣ ಸರಿಯಾಗಿ ಲೇಹ್ಯದಂತೆ ಬರಲು ಸುಮಾರು ಒಂದು ಗಂಟೆಗಳ ಕಾಲ ನೀವು ಕಾಯಿಸಬೇಕಾಗುತ್ತದೆ. ತಳ ಹಿಡಿಯದಂತೆ ಸೌಟ್ನಿಂದ ದೇಶವನ್ನ ಮಗುಚುತ್ತಲೇ ಇರಬೇಕು. ಬೆಲ್ಲದ ಪಾಕ ಬಂದು ಲೇಗ್ಯದ ಹದಕ್ಕೆ ಬಂದ ನಂತರ ಅದಕ್ಕೆ ಶುದ್ಧ ದೇಸಿ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ ಆರಲು ಬಿಡಿ.
ಸೇವಿಸುವ ಕ್ರಮ:
ಈ ಲೇಹ್ಯದಲ್ಲಿ ಕಾಳುಮೆಣಸು ಸೇರಿಸುವುದರಿಂದ ಹೆಚ್ಚು ತಿಂದರೆ ದೇಹಕ್ಕೆ ಉಷ್ಣ ಆಗಬಹುದು ಹಾಗಾಗಿ ಬಾಣಂತಿಯರಿಗೆ ಆದರೆ ದಿನಕ್ಕೆ ಒಂದು ಸಾರಿ ಇದನ್ನ ಕೊಟ್ಟರೆ ಸಾಕು. ಬಾಣಂತಿಯರಿಗೆ ಬೆಳಿಗ್ಗೆ ಸಮಯದಲ್ಲಿ ಅಥವಾ ರಾತ್ರಿ ಊಟವಾದ ನಂತರ ಒಂದು ಚಮಚ ಲೇಹ್ಯಕ್ಕೆ ಒಂದು ಚಮಚ ತುಪ್ಪವನ್ನು ಸೇರಿಸಿ ತಿನ್ನಲು ಕೊಡಿ ನಂತರ ಒಂದು ಲೋಟ ಹಾಲನ್ನು ಕುಡಿದರೆ ದೇಹದಲ್ಲಿ ಶಕ್ತಿ ದುಪ್ಪಟ್ಟಾಗುವುದು ಮಾತ್ರವಲ್ಲದೆ ಬಾಣಂತಿಯರ ಎದೆ ಹಾಲು ಕೂಡ ಹೆಚ್ಚಾಗುತ್ತದೆ.
ಇನ್ನು ಈ ಲೇಹ್ಯವನ್ನು ಸಾಮಾನ್ಯರು (ಬಾಣಂತಿ ಅಲ್ಲದವರು ಯಾರಾದರು ಸೇವಿಸಬಹುದು) ಸೇವಿಸುವುದಾದರೆ ಬೆಳಿಗ್ಗೆಯ ಸಮಯದಲ್ಲಿ ಸೇವಿಸಿದರೆ ಒಳ್ಳೆಯದು ಇದು ಮೈಕೈ ನೋವು ಅಥವಾ ಕಾಲು ಗಂಟು ನೋವು ಇಂತಹ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅತ್ಯಂತ ಆರೋಗ್ಯಕರವಾದ ಈ ತೆಂಗಿನ ಕೊನೆಯನ್ನು ಬಾಣಂತಿಯರಿಗೆ ತಪ್ಪದೇ ಮಾಡಿಕೊಡಬೇಕು ಇನ್ನು ಈ ತೆಂಗಿನ ಹೂವು ಮಾರುಕಟ್ಟೆಯಲ್ಲಿಯೂ ಸಿಗುತ್ತದೆ ಅಥವಾ ನೀವು ಎಲ್ಲಿಯಾದರೂ ತೆಂಗಿನ ಮರದಿಂದ ಇದನ್ನು ತೆಗೆಸಿಕೊಳ್ಳಬಹುದು. ಅದು ಸಾಧ್ಯವಾಗದೇ ಇದ್ದರೆ ಉತ್ತರ ಕನ್ನಡದಲ್ಲಿ ಕೆಲವರು ಈ ಲೇಹ್ಯವನ್ನು ತಯಾರಿಸಿ ಕೊಡುತ್ತಾರೆ ಅದನ್ನು ಕೂಡ ನೀವು ಖರೀದಿಸಿ ಸೇವಿಸಬಹುದು. ಒಟ್ಟಿನಲ್ಲಿ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಅಮೃತದಂತಹ ತೆಂಗಿನ ಕೊನೆ ಲೇಹ್ಯವನ್ನು ವರ್ಷದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ.



Click it and Unblock the Notifications











