Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ಹೆರಿಗೆಯ ನಂತರ ತಾಯಿಯ ಕಾಳಜಿಗಾಗಿ ಸಲಹೆಗಳು
ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಯು ಒಂದು ದೈಹಿಕ ಕ್ರಿಯೆಯಾಗಿದ್ದು, ಪ್ರಸವದ ನಂತರ ನಮ್ಮ ದೇಹ ಯಥಾಸ್ಥಿತಿಗೆ ಬರಲು ಹಲವಾರು ದಿನಗಳು ಬೇಕಾಗುತ್ತದೆ. ನಿಮ್ಮ ದೇಹವು ಯಥಾಸ್ಥಿತಿಗೆ ಬರಲು ಆರೋಗ್ಯ, ಪಥ್ಯ ಮತ್ತು ನಿಮ್ಮ ದೇಹದ ಶಕ್ತಿ ಮತ್ತು ತಾಳಿಕೆಗೆ ಸಂಬಂಧಿಸಿದಂತೆ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಹಾಗು ನೀವು ಈ ವಿಚಾರಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಾದದ್ದು ಅತ್ಯಾವಶ್ಯಕ.
ಮಗುವಿಗೆ ಜನ್ಮ ನೀಡಿದ ನಂತರ ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದು ಅತ್ಯಗತ್ಯ. ಇಲ್ಲಿ ನಾವು ನಿಮಗೆ ಮತ್ತು ನಿಮ್ಮ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಶುಚಿತ್ವದ ಸಲಹೆಗಳನ್ನು ನೀಡಿದ್ದೇವೆ. ಓದಿ ತಿಳಿದುಕೊಳ್ಳಿ. ಇದರಿಂದ ಮುಂದೆ ಒದಗಬಹುದಾದ ಆಪತ್ತಿನಿಂದ ಪಾರಾಗಲು ಇಂದೇ ಮನಸ್ಸು ಮಾಡಿ.
ಶುಚಿತ್ವವನ್ನು ಕಾಪಾಡಿರಿ
ಒಂದು ವೇಳೆ ಸಿಸೇರಿಯನ್ ಆದ ನಂತರ ನಿಮಗೆ ಹೊಲಿಗೆ ಹಾಕಿದ ಭಾಗದಲ್ಲಿ ಏನಾದರು ಸಮಸ್ಯೆ ಇದ್ದಲ್ಲಿ ಅದರ ಬಗ್ಗೆ ಎಚ್ಚರವಹಿಸಿ. ಹೊಟ್ಟೆಯ ಭಾಗದಲ್ಲಿ ಯಾವಾಗಲು ಶುಚಿತ್ವವನ್ನು ಕಾಯ್ದುಕೊಳ್ಳಿ. ಯಾವುದೇ ರೀತಿಯ ಗಾಯ ಮತ್ತು ಇನ್‍ಫೆಕ್ಷನ್ ಈ ಭಾಗವನ್ನು ಕಾಡದಂತೆ ಕಾಪಾಡಿಕೊಳ್ಳಿ. ಒಟ್ಟಾರೆಯಾಗಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿ. ಮಕ್ಕಳಿಗಾಗಿ ಟಾಪ್ 6 ಆರೋಗ್ಯಕರ ಮಿಲ್ಕ್‌ಶೇಕ್‌ಗಳು

ಯಾವಾಗ ಕೈ ತೊಳೆಯಬೇಕು?
ಕೈ ತೊಳೆದುಕೊಳ್ಳಲು ಎರಡು ಪ್ರಶ್ನೆಗಳು ಎದುರಾಗುತ್ತವೆ. " ಯಾವಾಗ ಕೈ ತೊಳೆಯಬೇಕು" ಮತ್ತು "ಹೇಗೆ ಕೈ ತೊಳೆಯಬೇಕು?" ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ನೀವು ಆಹಾರ ಸ್ವೀಕರಿಸಿದ ನಂತರ ಕೈತೊಳೆಯಿರಿ. ನಿಮ್ಮ ಗಾಯಕ್ಕೆ ಮುಲಾಮು ಹಾಕಿದ ನಂತರ ಮತ್ತು ಔಷಧಿಯನ್ನು ಸ್ವೀಕರಿಸಿದ ನಂತರ ಕೈತೊಳೆಯಿರಿ. ನಿಮ್ಮ ಮಗುವನ್ನು ಎತ್ತಿಕೊಳ್ಳುವ ಮೊದಲು ಮತ್ತು ಡೈಪರ್ ಬದಲಾಯಿಸಿದ ನಂತರ ಕೈತೊಳೆಯಿರಿ
ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಿ
ಪ್ರಸವದ ನಂತರ ಕೆಲವು ವಾರಗಳ ಕಾಲ ಯೋನಿಯಿಂದ ದ್ರವವು ಸ್ರವಿಸುತ್ತಿರುತ್ತದೆ. ಅದಕ್ಕಾಗಿ ಪೆರಿನಿಯ ಭಾಗವನ್ನು ಒಣರಕ್ತವಿರದಂತೆ ಸ್ವಚ್ಛಗೊಳಿಸಿ ಕಾಪಾಡಿ. ಇದಕ್ಕಾಗಿ ಟ್ಯಾಂಪನ್‍ಗಳನ್ನು ಬಳಸುವ ಬದಲು ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸಿ. ಪ್ರತಿ 4 ಗಂಟೆಗಳಿಗೆ ಒಮ್ಮೆ ನಿಮ್ಮ ಸ್ಯಾನಿಟರಿ ಪ್ಯಾಡನ್ನು ಬದಲಾಯಿಸಿ. ಪ್ರತಿ ಬಾರಿ ಮೂತ್ರ ವಿಸರ್ಜಿಸುವಾಗ ಮತ್ತು ಪ್ಯಾಡ್‍ಗಳನ್ನು ಬದಲಾಯಿಸುವಾಗ ನಿಮ್ಮ ಪೆರಿನಿಯ (ಯೋನಿ ಪ್ರದೇಶ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ. ಈ ಭಾಗವು ಕೆಂಪು ಬಣ್ಣಕ್ಕೆ ಬದಲಾದಾಗ ಅಥವಾ ದುರ್ವಾಸನೆಯನ್ನು ಸೂಸಲು ಆರಂಭಿಸಿದಾಗ ತಡ ಮಾಡದೆ ವೈಧ್ಯರನ್ನು ಕಾಣಿರಿ. ಗರ್ಭಾವಸ್ಥೆಯಲ್ಲಿ ಸುರಕ್ಷಿತ ವ್ಯಾಯಾಮಕ್ಕಾಗಿ 7 ಸಲಹೆಗಳು
ಮೂತ್ರದ ಸಮಸ್ಯೆ
ಹೆರಿಗೆಯ ನಂತರದಲ್ಲಿ ಮೂತ್ರಾಶಯದ ಸಮಸ್ಯೆಯು ತಾಯಂದಿರಲ್ಲಿ ಸಾಮಾನ್ಯ. ಏಕೆಂದರೆ ನಿಮ್ಮ ಗರ್ಭಾಶಯವು ಮೂತ್ರಾಶಯದ ಮೇಲೆ ಬೀಳುವುದರಿಂದ ನೀವು ಮೂತ್ರವನ್ನು ತಡೆಯಲು ಅಸಾಧ್ಯವಾಗುತ್ತದೆ. ಮುಂದೆ ಇದು ಪ್ರಸವದ ನಂತರ ಸಣ್ಣದಾಗುತ್ತ ಸಾಗುತ್ತದೆ. ಅದರಲ್ಲು ನೀವು ಕೆಮ್ಮಿದಾಗ ಮತ್ತು ನಕ್ಕಾಗ ಸ್ವಲ್ಪ ಮೂತ್ರವು ಸೋರಿಕೆಯಾಗುತ್ತದೆ. ಅದಕ್ಕಾಗಿ ಬಾಣಂತಿಯಾಗಿದ್ದಾಗ ಶುಚಿತ್ವವನ್ನು ಕಾಪಾಡಲು ಪ್ರೆಸ್ ಪ್ಯಾಡ್‍ಗಳನ್ನು ಬಳಸಿ, ಮೂತ್ರವನ್ನು ಹೀರುವಂತೆ ಮಾಡಿ. ಈ ಮೂತ್ರ ಸಮಸ್ಯೆಯು ಕೆಲವು ವಾರಗಳ ನಂತರವು ನಿಲ್ಲದಿದ್ದರೆ, ಸೂಕ್ತ ವೈದ್ಯರನ್ನು ಕಂಡು ನಿಮ್ಮ ಸಮಸ್ಯೆಗೆ ಪರಿಹಾರ ಕಾಣಿರಿ.



Click it and Unblock the Notifications