For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ಹೆರಿಗೆಯ ಅಡ್ಡಪರಿಣಾಮಗಳು

|

ಈ ದಿನಗಳಲ್ಲಿ ನಾರ್ಮಲ್ ಡೆಲಿವರಿ ತುಂಬಾ ಅಪರೂಪವಾಗುತ್ತದೆ. ಮಹಿಳೆಯರ ಮುಂದಿನ ಆರೋಗ್ಯದ ದೃಷ್ಟಿಯಿಂದ ಸಿಸೇರಿಯನ್ ಗಿಂತ ನಾರ್ಮಲ್ ಡೆಲಿವರಿ (ಸಾಮಾನ್ಯ ಹೆರಿಗೆ) ತುಂಬಾ ಒಳ್ಳೆಯದು. ಹೆರಿಗೆಯಲ್ಲಿ ತುಂಬಾ ತೊಂದರೆಯಾದರೆ ಮಾತ್ರ ಸಿಸೇರಿಯನ್ ಮಾಡಿಸಿಕೊಳ್ಳಬೇಕು. ಇತ್ತೀಚಿಗೆ ಹೆಚ್ಚಿನವರು ಹೆರಿಗೆ ನೋವು ತಡೆದುಕೊಳ್ಳಲು ಸಾಧ್ಯವಿಲ್ಲವೆಂದು ಸಿಸೇರಿಯನ್ ಮಾಡಿಸಿಕೊಳ್ಳುತ್ತಾರೆ. ಹೀಗೆ ಮಾಡದಿರುವುದು ಒಳ್ಳೆಯದು.

ಅಲ್ಲದೆ ಸಿಸೇರಿಯನ್ ಆದವರು ನಾರ್ಮಲ್ ಡೆಲಿವರಿಯಾದವರಿಗಿಂತ ಹೆಚ್ಚಿನ ರೆಸ್ಟ್ ತೆಗೆದುಕೊಳ್ಳಬೇಕು. ಸಿಸೇರಿಯನ್ ಆದವರು ಸರಿಯಾದ ರೆಸ್ಟ್ ತೆಗೆದುಕೊಳ್ಳತ್ತಿದ್ದರೆ ಈ ಕೆಳಗಿನ ಸಮಸ್ಯೆಗಳು ಕಂಡು ಬರುತ್ತದೆ:

Long Term Side Effects Of A C-Section

ಗಾಯ ಬೇಗನೆ ಒಣಗುವುದಿಲ್ಲ
ಸಿಸೇರಿಯನ್ ಆದ ಮೇಲೆ ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರವಹಿಸಬೇಕು ಹಾಗೂ ದೈಹಿಕ ಶ್ರಮವಿರುವ ಯಾವುದೇ ಕೆಲಸ ಮಾಡಬಾರದು. ಸರಿಯಾದ ಆರೈಕೆ ಮಾಡದಿದ್ದರೆ ಸ್ಟಿಚ್ ಬಿಟ್ಟು ಹೋಗಿ ತೊಂದರೆ ಆಗುತ್ತದೆ.

3 ತಿಂಗಳ ವಿಶ್ರಾಂತಿ ಅವಶ್ಯಕ
ಸಿಸೇರಿಯನ್ ಆದರೆ ಕಮ್ಮಿಯೆಂದರೂ 3 ತಿಂಗಳು ರೆಸ್ಟ್ ತೆಗೆದುಕೊಳ್ಳಬೇಕು. ನಿಮ್ಮ ದೇಹವನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡದಿದ್ದರೆ ಹರ್ನಿಯಾ ಸಮಸ್ಯೆ ಕಂಡು ಬರುವುದು.

ಎರಡನೇ ಹೆರಿಗೆ
ಮೊದಲು ಸಿಸೇರಿಯನ್ ಹೆರಿಗೆಯಾಗಿ, ಎರಡನೇಯದು ಸಿಸೇರಿಯನ್ ಆದರೆ ಮತ್ತೆ ಮಕ್ಕಳ ಪ್ಲಾನ್ ಮಾಡಬಾರದು. ಎರಡು ಬಾರಿ ಸಿಸೇರಿಯನ್ ಆಗಿದ್ದರೆ ಮತ್ತೆ ಗರ್ಭಿಣಿ ಆದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

ಸೊಂಟ ನೋವು
ಸಿಸೇರಿಯನ್ ಆದ ನಂತರ ಸಿ ಸೆಕ್ಷನ್ ಬೆಲ್ಟ್ ದೊರೆಯುತ್ತದೆ. ಅದನ್ನು ಧರಿಸುವುದು ಒಳ್ಳೆಯದು. ಮೂಳೆಯನ್ನು ಬಲವಾಗಿಸುವ ಆಹಾರ ತಿನ್ನಬೇಕು. ಇಲ್ಲದಿದ್ದರೆ ಸೊಂಟ ನೋವು ಉಂಟಾಗುವುದು.

English summary

Long Term Side Effects Of A C-Section | Tips For Women | ಸಿಸೇರಿಯನ್ ಹೆರಿಗೆಯ ಅಡ್ಡಪರಿಣಾಮಗಳು | ಮಹಿಳೆಯರಿಗೆ ಕೆಲ ಸಲಹೆಗಳು

All said and done, you must be aware that c-section has many side effects. A normal vaginal birth is always better than a caesarean delivery. The side effects of a c-section delivery becomes apparent only in the long run.
X
Desktop Bottom Promotion