For Quick Alerts
ALLOW NOTIFICATIONS  
For Daily Alerts

ಜಾರ್ಖಂಡ್‌ನಲ್ಲಿ ರುಬೆಲ್ಲಾ 2 ಮಕ್ಕಳ ಬಲಿ, 40 ಮಕ್ಕಳಲ್ಲಿ ಕಾಯಿಲೆ: ಪೋಷಕರೇ ಎಚ್ಚರ

|

ಜಾರ್ಖಂಡ್‌ನಲ್ಲಿ ಕಳೆದ ಎರಡು ತಿಂಗಳಿನಲ್ಲಿ ನಾಲ್ವರು ಮಕ್ಕಳು ಮೀಸೆಲ್ಟ್ ರುಬೆಲ್ಲಾಗೆ ಬಲಿಯಾಗಿದ್ದಾರೆ, ಆ ಎಲ್ಲಾ ಮಕ್ಕಳು ಧನ್ಬಾದ್ ಜಿಲ್ಲೆಗೆ ಸೇರಿದವರು ಎಂದು ಅಲ್ಲಿಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಾಲ್ವರು ಮಕ್ಕಳಲ್ಲಿ ಎರಡು ಮಕ್ಕಳು ಗೋವಿದಪುರಕ್ಕೆ ಸೇರಿದವರು ಇನ್ನೆರಡು ಮಕ್ಕಳು ನಿಸ್ರಾ ಪ್ರದೇಶಕ್ಕೆ ಸೇರಿದವರು.

ಇದೀಗ ಅದೇ ಜಿಲ್ಲೆಯಲ್ಲಿ ಸುಮಾರು 40 ಮಕ್ಕಳಲ್ಲಿ ಈ ಕಾಯಿಲೆ ಕಂಡು ಬಂದಿದೆ, ಹಾಗಾಗಿ ಆರೋಗ್ಯ ಇಲಾಖೆ ಈ ಬಗ್ಗೆ ಜಾಗ್ರತೆವಹಿಸಿದ್ದು ನೀಡಲಾಗುತ್ತಿದೆ.

ಪೋಷಕರೇ ಎಚ್ಚರ

ಪೋಷಕರೇ ಎಚ್ಚರ

ಮೀಸೆಲ್ಸ್ ರುಬೆಲ್ಲಾ ಬೇಗನೆ ಹರಡುವ ಕಾಯಿಲೆಯಾಗಿದೆ. ಈ ಕಾಯಿಲೆ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಗಾಳಿಯ ಮುಖಾಂತರ ಹರಡುತ್ತದೆ, ಈ ಕಾಯಿಲೆ ಇರುವವರು ಮಾತನಾಡಿದರೂ ಕಾಯಿಲೆ ಹರಡುವುದು.

ಮೀಸೆಲ್ಸ್ ರುಬೆಲ್ಲಾ ಕಾಯಿಲೆಯ ಲಕ್ಷಣಗಳೇನು?

ಮೀಸೆಲ್ಸ್ ರುಬೆಲ್ಲಾ ಕಾಯಿಲೆಯ ಲಕ್ಷಣಗಳೇನು?

* ಬೇಧಿ

* ತಲೆನೋವು

* ಕೆಮ್ಮು

* ಕಣ್ಣು ಕೆಂಪಾಗುವುದು

* ಜ್ವರ

* ಮೈಯಲ್ಲಿ ಕೆಂಪು ಗುಳ್ಳೆಗಳು

ಮನೆಮದ್ದುಗಳನ್ನು ಮಾಡಲೇಬೇಡಿ

ಮನೆಮದ್ದುಗಳನ್ನು ಮಾಡಲೇಬೇಡಿ

ಮಕ್ಕಳ ಮೈ ಮೇಲೆ ಗುಳ್ಳೆ, ಜ್ವರ ಕಂಡು ಬಂದಾಗ ಮನೆಮದ್ದು ಮಾಡುವುದರಿಂದ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡುವುದು, ಮನೆಮದ್ದು ಮಾಡಲೇಬೇಡಿ ಮೈಕ್ರೋಬಯೋಲಾಜಿಸ್ಟ್ ಡಾ. ಜಿತೇಂದ್ರ ಕುಮಾರ್‌ ಸಲಹೆ ನೀಡಿದ್ದಾರೆ.

ಯಾವ ಮಕ್ಕಳಿಗೆ ಅಪಾಯ ಹೆಚ್ಚು?

ಯಾವ ಮಕ್ಕಳಿಗೆ ಅಪಾಯ ಹೆಚ್ಚು?

ಯಾವ ಮಕ್ಕಳಿಗೆ ಮೀಸೆಲ್ಸ್ ಹಾಗೂ ರುಬೆಲ್ಲಾ ಲಸಿಕೆ ಪಡೆದಿರುವುದಿಲ್ಲವೋ ಅಂಥ ಮಕ್ಕಳಿಗೆ ಈ ಕಾಯಿಲೆ ಅಪಾಯ ಹೆಚ್ಚು. ಮಗುವಿಗೆ 9-15 ತಿಂಗಳಿನ ಒಳಗಾಗಿ ಮೊದಲ ಡೋಸ್ ಕೊಡಿಸಬೇಕು. ಎರಡನೇ ಡೋಸ್ ಅನ್ನು 4-6 ವರ್ಷದೊಳಗಾಗಿ ಕೊಡಿಸಬೇಕು.

ಈ ಲಸಿಕೆ ಸುರಕ್ಷಿತವಾಗಿದ್ದು ರುಬೆಲ್ಲಾ ತಡೆಗಟ್ಟುವಲ್ಲಿ ಶೇ. 97ರಷ್ಟು ಪರಿಣಾಮಕಾರಿ.

English summary

Measles-Rubella affecting Kids In India: Causes, Symptoms, and Treatments in Kannada

Measles-Rubella:Who is affecting more, symptoms,treatment read on...
Story first published: Saturday, October 15, 2022, 17:24 [IST]
X
Desktop Bottom Promotion