For Quick Alerts
ALLOW NOTIFICATIONS  
For Daily Alerts

ಪೋಷಕರ ಜಗಳ ಮಕ್ಕಳ ಮೇಲೆ ಹೇಗೆಲ್ಲಾ ಕೆಟ್ಟ ಪರಿಣಾಮ ಬೀರತ್ತೆ ಗೊತ್ತೆ?

|

ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ, ಮಕ್ಕಳ ಬೆಳವಣಿಗೆಯ ಪ್ರತಿ ಹಂತವೂ ಅಮೂಲ್ಯ. ಮಕ್ಕಳ ಬೆಳವಣಿಗೆ ಹಂತದಲ್ಲಿ ಪೋಷಕರು ಏನು ಮಾಡುತ್ತಾರೆ, ತಮ್ಮ ಸುತ್ತಮುತ್ತ ಏನನ್ನು ನೋಡುತ್ತಾರೆ ಅದೆಲ್ಲವೂ ಅವರ ಮೇಲೆ ಪ್ರಭಾವ ಬೀರುತ್ತದೆ.

Effects of Parents Fighting in Front of Children in kannada

ಆದರೆ ಇತ್ತೀಚಿನ ಕಾಲದ ದುರಂತದ ಸಂಗತಿ ಎಂದರೆ ಪೋಷಕರು ಮಕ್ಕಳ ಮುಂದೆಯೇ ಜಗಳವಾಡುವುದು. ಇದು ಬಿಸಿಯಾದ ಚರ್ಚೆಯಾಗಲಿ ಅಥವಾ ಸಾಂದರ್ಭಿಕ ಸಮರವಾಗಲಿ ಇದು ಮಕ್ಕಳಿಗೆ ಎಂದಿಗೂ ಆಹ್ಲಾದಕರವಲ್ಲ.

ಮಕ್ಕಳು ಸ್ಪಂಜುಗಳಂತೆ ಅವರು ಸೂಕ್ಷ್ಮ ಭಾವನಾತ್ಮಕ ಮನಸ್ಸಿನವರು. ಪೋಷಕರು ತಮ್ಮ ಮುಂದೆ ಉತ್ತಮವಾಗಿ ವರ್ತಿಸುತ್ತಿಲ್ಲ ಎಂದು ಅವರಿಗೆ ಅನಿಸಿದಲ್ಲಿ, ಅಸಮಾಧಾನ ಹೊಂದಿದ್ದಾರೆಂದು ಅವರು ಗ್ರಹಿಸಿದಲ್ಲಿ ಅವರ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವಬೀರಬಹುದು, ಇದು ನಕಾರಾತ್ಮಕ ಪರಿಣಾಮ ಬೀರಬಹುದು. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಮುಂದೆಯೇ ಆಡುವ ಜಗಳ, ಮನಸ್ತಾಪ, ಅವರ ನಕಾರಾತ್ಮಕ ವರ್ತನೆಗಳು ಮಕ್ಕಳ ಮನಸ್ಸಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಡಲಿದ್ದೇವೆ:

1. ಅಭದ್ರತೆ

1. ಅಭದ್ರತೆ

ಪೋಷಕರು ಪರಸ್ಪರ ಜಗಳವಾಡಿದಾಗ, ಅವರು ಕೋಪಗೊಂಡ ಮಾತುಗಳನ್ನು ಕೇಳಿದಾಗ ಮಕ್ಕಳು ಎಲ್ಲವನ್ನು ಕಳೆದುಕೊಂಡಂತೆ ಭಾವಿಸುತ್ತಾರೆ. ಇದ್ದಕ್ಕಿದ್ದಂತೆ ಅವರ ಸುರಕ್ಷಿತ ಸ್ವರ್ಗದಂಥ ಮನೆ ಸುರಕ್ಷಿತವಾಗಿಲ್ಲ ಎಂದುಕೊಳ್ಳುತ್ತಾರೆ. ಇದು ಅವರಲ್ಲಿ ಅಭದ್ರತೆ ಮೂಡಿಸುತ್ತದೆ. ಮಕ್ಕಳು ಭಾವನಾತ್ಮಕವಾಗಿ ಕಳೆದುಹೋಗುತ್ತಾರೆ ಮತ್ತು ಇದು ಮಕ್ಕಳು ಮಾದಕ ದ್ರವ್ಯ ಸೇವನೆ ಸೇರಿದಂತೆ ಕೆಟ್ಟ ಚಟಗಳಿಗೆ ಸಹ ಬಲಿಯಾಗಬಹುದು.

2. ವರ್ತನೆಯ ಸಮಸ್ಯೆಗಳು

2. ವರ್ತನೆಯ ಸಮಸ್ಯೆಗಳು

ಬಹಳ ಸಂತೋಷವಾಗಿ, ಚುರುಕಾಗಿ, ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದ ಮಗು ಇದ್ದಕ್ಕಿದ್ದಂತೆ ಈ ಎಲ್ಲಾ ವರ್ತನೆಗಳಲ್ಲೂ ವಿರುದ್ಧವಾದ ಬದಲಾವಣೆಗಳು ಕಾಣಲು ಆರಂಭಿಸುತ್ತಾರೆ. ಸ್ನೇಹಿತರಿಂದ ದೂರ ಸರಿಯಲು ಪ್ರಾರಂಭಿಸುತ್ತಾರೆ, ಹಸಿವೆ ಆಗುವುದಿಲ್ಲ, ಮನೆಯಲ್ಲಿನ ಸಮಸ್ಯೆಗಳು ಸರಿ ಹೋಗುತ್ತದೆ ಎಂಬ ಭರವಸೆಯೇ ಅವರಿಗೆ ಇಲ್ಲವಾಗುತ್ತದೆ. ಮಕ್ಕಳು ತಮ್ಮ ಹೆತ್ತವರನ್ನು ಗಾಢವಾಗಿ ಪ್ರೀತಿಸುತ್ತಾರೆ, ಅದರೆ ಅವರು ಜಗಳವಾಡುವುದನ್ನು ನೋಡಿದಾಗ, ಅವರು ಇನ್ನು ಮುಂದೆ ತಮ್ಮ ಭಾವನೆಯನ್ನು ಹೇಳಿಕೊಳ್ಳುವುದಿಲ್ಲ ಮತ್ತು ಭಾವನೆಗಳನ್ನು ಆಂತರಿಕಗೊಳಿಸುತ್ತಾರೆ.

3. ಸಂಬಂಧದ ಆಯ್ಕೆಯಲ್ಲಿ ಗೊಂದಲ

3. ಸಂಬಂಧದ ಆಯ್ಕೆಯಲ್ಲಿ ಗೊಂದಲ

ಸಂಘರ್ಷಗಳ ನಡುವೆಯೇ ಬೆಳೆದ ಮಕ್ಕಳು ದೊಡ್ಡವರಾದ ಮೇಲೆ ಕಳಪೆ ಅಥವಾ ಮೋಸದ ಸಂಬಂಧಗಳಿಗೆ ತುತ್ತಾಗುತ್ತಾರೆ. ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು, ಇಲ್ಲಿನ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕೆಂದು ಕಲಿಯಲು ಯಾವುದೇ ರೋಲ್ ಮಾಡೆಲ್ ಇಲ್ಲದೆ ಸಂಬಂಧಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು, ಹೆತ್ತವರಂತೆಯೇ ತಪ್ಪುಗಳನ್ನು ಮಾಡಬಹುದು.

4. ಒತ್ತಡ, ಅನಾರೋಗ್ಯ

4. ಒತ್ತಡ, ಅನಾರೋಗ್ಯ

ಮಕ್ಕಳು ಹೆಚ್ಚಾಗಿ ಒತ್ತಡಕ್ಕೊಳಗಾದಾಗ, ಆತಂಕಕ್ಕೊಳಗಾಗುತ್ತಾರೆ ಮತ್ತು ಹತಾಶರಾಗುತ್ತಾರೆ. ಕೆಲವರು ಆಕ್ರಮಣಕಾರಿಯಾದರೆ ಇತರರು ನಿದ್ರಾ ಭಂಗ ಮತ್ತು ತಲೆನೋವು ಮತ್ತು ಹೊಟ್ಟೆ ನೋವುಗಳಂತಹ ಆರೋಗ್ಯ ಸಮಸ್ಯೆಗಳು ಎದುರಾಗಬಹುದು, ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಬಹುದು.

5. ಕಲಿಕೆ

5. ಕಲಿಕೆ

ನೀವು ಭಿನ್ನಾಭಿಪ್ರಾಯಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ನಿಮ್ಮ ಮಕ್ಕಳು ನೋಡುತ್ತಾರೆ ಮತ್ತು ಅವರು ನಿಮ್ಮಿಂದ ಸಮಸ್ಯೆ ಪರಿಹರಿಸುವ ಕೌಶಲ್ಯಗಳು, ಭಾವನಾತ್ಮಕ ನಿಯಂತ್ರಣ ಕೌಶಲ್ಯಗಳು ಮತ್ತು ಸಂಘರ್ಷ ಪರಿಹಾರ ಕೌಶಲ್ಯಗಳನ್ನು ಕಲಿಯುತ್ತಾರೆ.

ಪ್ರೀತಿಯ ಸಂಬಂಧಗಳ ಬಗ್ಗೆ ಮಕ್ಕಳಿಗೆ ಕಳುಹಿಸುವ ಸಂದೇಶದ ಬಗ್ಗೆ ಯೋಚಿಸುವುದು ಸಹ ಮುಖ್ಯವಾಗಿದೆ. ನೀವು ಮತ್ತು ನಿಮ್ಮ ಸಂಗಾತಿ ಒಬ್ಬರಿಗೊಬ್ಬರು ಅಗೌರವದಿಂದ ವರ್ತಿಸಿದರೆ, ನಿಮ್ಮ ಮಕ್ಕಳು ಅದೇ ರೀತಿ ಮಾಡುವುದು ಸರಿಯೆಂದು ಭಾವಿಸಿ ಬೆಳೆಯುತ್ತಾರೆ, ಬಹುಶಃ ಇತರರು ಸಹ ಅವರನ್ನು ಕೀಳಾಗಿ ಪರಿಗಣಿಸಲು ಅವಕಾಶ ನೀಡುವುದು ಸರಿ ಎಂದು ಅವರು ನಂಬುತ್ತಾರೆ.

English summary

Effects of Parents Fighting in Front of Children in kannada

Here we are discussing about Effects of Parents Fighting in Front of Children in kannada. Children who witness frequent fights at home often suffer a lot of emotional and mental trauma which can be manifested in various ways like: Read more.
X
Desktop Bottom Promotion