For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ರಕ್ತ ಹೀನತೆಗೆ ಕಾರಣ, ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?

|

ಮಕ್ಕಳಿರಲಿ, ದೊಡ್ಡವರಿರಲಿ ಕಬ್ಬಿಣದಂಶ ತುಂಬಾನೇ ಮುಖ್ಯ. ಮಕ್ಕ ಬೆಳವಣಿಗೆಗೆಯಂತೂ ಕಬ್ಬಿಣದಂಶ ತುಂಬಾನೇ ಅವಶ್ಯಕವಾಗಿದೆ. ಕಬ್ಬಿಣದಂಶದ ಕೊರತೆ ಉಂಟಾದರೆ ರಕ್ತ ಹೀನತೆ ಉಂಟಾಗುವುದು, ಮಕ್ಕಳು ಕಾಯಿಲೆ ಬೀಳುವುದು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿದೆ.

ಮಕ್ಕಳಲ್ಲಿ ರಕ್ತ ಹೀನತೆ ಎಂದರೇನು? ಇದನ್ನು ತಡೆಗಟ್ಟಲು ಪೋಷಕರು ಏನು ಮಾಡಬೇಕು ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ನೋಡಿ.

ಮಕ್ಕಳಲ್ಲಿ ರಕ್ತ ಹೀನತೆ ಎಂದರೇನು?

ಮಕ್ಕಳಲ್ಲಿ ರಕ್ತ ಹೀನತೆ ಎಂದರೇನು?

ರಕ್ತ ಹೀನತೆ ಎಂಬುವುದು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಶೇ. 20ರಷ್ಟು ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ. ದೇಹದಲ್ಲಿ ಹಿಮೋಗ್ಲೋಬಿನ್ ಅಥವಾ ಕೆಂಪು ರಕ್ತಕಣಗಳ ಅಂಶ ಕಡಿಮೆಯಾದಾಗ ರಕ್ತ ಹೀನತೆ ಉಂಟಾಗುವುದು. ಹಿಮೋಗ್ಲೋಬಿನ್‌ ಎನ್ನುವುದು ಒಂದು ಬಗೆಯ ಪ್ರೊಟೀನ್ ಆಗಿದ್ದು ಜೀವ ಕಣಗಳಿಗೆ ಆಮ್ಲಜನಕ ಪೂರೈಕೆಯನ್ನು ಮಾಡುತ್ತದೆ.

ಮಕ್ಕಳಲ್ಲಿ ಹಲವು ಬಗೆಯ ರಕ್ತ ಹೀನತೆ ಕಂಡು ಬರುವುದು, ಇವುಗಳಲ್ಲಿ ಯಾವುದಾದರೂ ಒಂದು ಬಗೆಯ ರಕ್ತ ಹೀನತೆ ಮಕ್ಕಳಲ್ಲಿ ಕಂಡು ಬರುವುದು.

1. ಕಬ್ಬಿಣದಂಶದ ಕೊರತೆ: ನಿಮ್ಮ ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದಂಶ ಪೂರೈಕೆಯಾಗದಿದ್ದಾಗ ಕೆಂಪು ರಕ್ತ ಕಣಗಳ ಉತ್ಪತ್ತಿ ಕಡಿಮೆಯಾಗುವುದು. ಹಿಮೋಗ್ಲೋಬಿನ್ ಉತ್ಪತ್ತಿಯಾಗಲು ಕಬ್ಬಿಣದಂಶ ಅವಶ್ಯಕ.

2. ಮೆಗಾಲೋಬೆಸ್ಟಿಕ್ ರಕ್ತಹೀನತೆ: ಫಾಲಿಕ್ ಆಮ್ಲ, ವಿಟಮಿನ್ ಬಿ12 ಕೊರತೆ ಉಂಟಾದಾಗ ಈ ಬಗೆಯ ರಕ್ತಹೀನತೆ ಉಂಟಾಗುವುದು. ಮಕ್ಕಳ ದೇಹದಲ್ಲಿ ವಿಟಮಿನ್ ಬಿ 12 ಹೀರಿಕೊಳ್ಳಲು ಸಮಸ್ಯೆವಿದ್ದಾಗ ಕೆಂಪು ರಕ್ತ ಕಣಗಳ ಉತ್ಪತ್ತಿ ಕಡಿಮೆಯಾಗಿ ರಕ್ತಹೀನತೆ ಉಂಟಾಗುವುದು.

3. ಹೆಮೊಲಿಟಿಕ್ ರಕ್ತಹೀನತೆ: ಸೋಂಕು ಅಥವಾ ಕೆಲವೊಂದು ಔಷಧಿಗಳು ಕೆಂಪು ರಕ್ತ ಕಣಗಳನ್ನು ನಾಶ ಮಾಡಿದಾಗ ರಕ್ತಹೀನತೆ ಸಮಸ್ಯೆ ಉಂಟಾಗುವುದು.

4. ಸಿಕೆಲ್ ಸೆಲ್ ಅನಿಮಿಯಾ: ಕೆಂಪು ರಕ್ತ ಕಣಗಳ ಶೇಪ್ ಅಸಹಜವಾಗಿದ್ದಾಗ ಈ ಬಗೆಯ ರಕ್ತ ಹೀನತೆ ಉಂಟಾಗುವುದು.

5. ಅಪ್ಲಾಸ್ಟಿಕ್ ರಕ್ತಹೀನತೆ: ಮೂಳೆ ಮಜ್ಜ ಕೆಂಪು ರಕ್ತ ಕಣಗಳನ್ನು ಉತ್ಪತ್ತಿ ಮಾಡಲು ವಿಫಲವಾದಾಗ ರಕ್ತಹೀನತೆ ಉಂಟಾಗುವುದು.

ಮಕ್ಕಳಲ್ಲಿ ರಕ್ತಹೀನತೆಗೆ ಕಾರಣವೇನ?

ಮಕ್ಕಳಲ್ಲಿ ರಕ್ತಹೀನತೆಗೆ ಕಾರಣವೇನ?

ರಕ್ತಹೀನತೆ ಪ್ರಮುಖ 3 ಕಾರಣಗಳು

* ಕೆಂಪು ರಕ್ತಕಣಗಳು ಕಡಿಮೆಯಾದಾಗ

* ಸಾಕಷ್ಟು ಕೆಂಪು ರಕ್ತ ಕಣಗಳನ್ನು ಉತ್ಪತ್ತಿಯಾಗಲು ವಿಫಲವಾದಾಗ

* ಕೆಂಪು ರಕ್ತ ಕಣಗಳು ನಾಶವಾದಾಗ

ಈ ಕಾರಣಗಳಿಂದ ಹಿಮೋಗ್ಲೋಬಿನ್‌ ಕಡಿಮೆಯಾಗಿರಬಹುದು

ಈ ಕಾರಣಗಳಿಂದ ಹಿಮೋಗ್ಲೋಬಿನ್‌ ಕಡಿಮೆಯಾಗಿರಬಹುದು

* ಕೆಂಪು ರಕ್ತ ಕಣಗಳ ತೊಂದರೆ ವಂಶಪಾರಂಪರ್ಯವಾಗಿ ಬಂದಿದ್ದರೆ

* ಸೋಂಕು

* ಕೆಲವೊಂದು ಕಾಯಿಲೆ

* ಕೆಲವೊಂದು ಔಷಧಗಳು

* ಕೆಲವೊಂದು ವಿಟಮಿನ್‌ಗಳು ಹಾಗೂ ಖನಿಜಾಂಶಗಳ ಕೊರತೆ ಉಂಟಾದಾಗ

ಯಾವ ಮಕ್ಕಳಲ್ಲಿ ರಕ್ತಹೀನತೆ ಅಪಾಯ ಹೆಚ್ಚು?

ಯಾವ ಮಕ್ಕಳಲ್ಲಿ ರಕ್ತಹೀನತೆ ಅಪಾಯ ಹೆಚ್ಚು?

* ಅವಧಿ ಪೂರ್ವ ಜನಿಸಿದ ಮಕ್ಕಳಲ್ಲಿ

* ತುಂಬಾ ಅಧಿಕ ಹಸುವಿನ ಹಾಲು ಕುಡಿಯುತ್ತಿದ್ದರೆ

* ಕಬ್ಬಿಣದಂಶ, ವಿಟಮಿನ್‌ಗಳು, ಖನಿಜಾಂಶಗಳು ಕಡಿಮೆ ಇರುವ ಆಹಾರ ಸೇವನೆ

* ಶಸ್ತ್ರ ಚಿಕಿತ್ಸೆ ಅಥವಾ ಅಪಘಾತದಲ್ಲಿ ತುಂಬಾ ರಕ್ತ ಹೋಗಿದ್ದರೆ

* ತುಂಬಾ ಸಮಯದಿಂದ ಕಾಯಿಲೆ ಇದ್ದರೆ

* ಕುಟುಂಬದ ಇತಿಹಾಸ

ಮಕ್ಕಳಲ್ಲಿ ರಕ್ತಹೀನತೆಯ ಲಕ್ಷಣಗಳು

ಮಕ್ಕಳಲ್ಲಿ ರಕ್ತಹೀನತೆಯ ಲಕ್ಷಣಗಳು

* ತೀವ್ರವಾದ ಎದೆಬಡಿತ

* ಉಸಿರಾಟದಲ್ಲಿ ತೊಂದರೆ

* ಶಕ್ತಿ ಕುಂದುವುದು ಅಥವಾ ಬೇಗನೆ ಸುಸ್ತಾಗುವುದು

* ತಲೆಸುತ್ತು

* ತಲೆನೋವು

* ಕಿರಿಕಿರಿ

* ಹದಿಹರೆಯದ ಮಕ್ಕಳಲ್ಲಿ ಅನಿಯಮಿತ ಮುಟ್ಟು

* ಋತುಮತಿಯಾಗಲು ತಡವಾಗುವುದು

* ನಾಲಗೆಯಲ್ಲಿ ಊತ

* ಬಿಳುಚಿದ ತ್ವಚೆ

* ತ್ವಚೆ, ಕಣ್ಣು, ನಾಲಗೆ ಹಳದಿಯಾಗುವುದು (ಕಾಮಲೆ ಕಾಯಿಲೆ)

* ಲಿವರ್ ದೊಡ್ಡದಾಗುವುದು

* ಬೆಳವಣಿಗೆ ಕುಗ್ಗುವುದು

* ಗಾಯ ಬೇಗನೆ ಒಣಗದಿರುವುದು

ಮಕ್ಕಳಲ್ಲಿ ರಕ್ತಹೀನತೆ ಕಂಡು ಹಿಡಿಯುವುದು ಹೇಗೆ?

ಮಕ್ಕಳಲ್ಲಿ ರಕ್ತಹೀನತೆ ಕಂಡು ಹಿಡಿಯುವುದು ಹೇಗೆ?

ಹೀಮೋಗ್ಲೋಬಿನ್ ಮತ್ತು ಹೆಮಟೋಕ್ರಿಟ್

ಸಿಬಿಸಿ (Complete blood count)

Peripheral smear

ಮಕ್ಕಳಿಗೆ ರಕ್ತಹೀನತೆಗೆ ಚಿಕಿತ್ಸೆ

ಮಕ್ಕಳಿಗೆ ರಕ್ತಹೀನತೆಗೆ ಚಿಕಿತ್ಸೆ

* ವಿಟಮಿನ್‌ಗಳು ಹಾಗೂ ಖನಿಜಾಂಶದ ಡ್ರಾಪ್ಸ್ ಅಥವಾ ಮಾತ್ರೆಗಳು

* ಮಕ್ಕಳ ಆಹಾರದಲ್ಲಿ ಬದಲಾವಣೆ

* ರಕ್ತಹೀನತೆ ಉಂಟು ಮಾಡುವ ಔಷಧ ಸ್ಟಾಪ್ ಮಾಡುವುದು

* ರಕ್ತ ನೀಡುವುದು

* ಸ್ಟೆಮ್‌ ಸೆಲ್‌ ಥೆರಪಿ

* ಸರ್ಜರಿ (ಇದು ತುಂಬಾ ಅಪರೂಪ)

ಮಕ್ಕಳಲ್ಲಿ ರಕ್ತಹೀನತೆ ಉಂಟಾದರೆ ಉಂಟಾಗುವ ತೊಂದರೆಗಳು

ಮಕ್ಕಳಲ್ಲಿ ರಕ್ತಹೀನತೆ ಉಂಟಾದರೆ ಉಂಟಾಗುವ ತೊಂದರೆಗಳು

* ಬೆಳವಣಿಗೆಗೆ ತೊಂದರೆ

* ಕಾಲುಗಳಲ್ಲಿ ನೋವು, ಊತ

* ಅಸ್ಥಿಮಜ್ಜ ವಿಫಲ

*ಲುಕೆಮಿಯಾ ಅಥವಾ ಇತರ ಕ್ಯಾನ್ಸರ್

ಮಗುವಿಗೆ ರಕ್ತಹೀನತೆ ತಡೆಗಟ್ಟಲು ಏನು ಮಾಡಬೇಕು?

ಮಗುವಿಗೆ ರಕ್ತಹೀನತೆ ತಡೆಗಟ್ಟಲು ಏನು ಮಾಡಬೇಕು?

* ಸಾಧ್ಯವಾದಷ್ಟು ಎದೆಹಾಲು ನೀಡಿ: ಮಗುವಿಗೆ ಎದೆಹಾಲನ್ನು 2 ವರ್ಷದವರೆಗೆ ನೀಡುವುದು ಒಳ್ಳೆಯದು

* ಕಬ್ಬಿಣದಂಶವಿರುವ ಆಹಾರ ನೀಡುವುದು

* ಹಸುವಿನ ಹಾಲು ತುಂಬಾ ನೀಡಬೇಡಿ.

* ಮಗುವಿಗೆ ಸೊಪ್ಪು, ಧಾನ್ಯಗಳು, ಮೊಟ್ಟೆ, ಮಾಂಸ, ಆಲೂಗಡ್ಡೆ, ಟೊಮೆಟೊ, ಒಣದ್ರಾಕ್ಷಿ ಇಂಥ ಆಹಾರವನ್ನು ನೀಡಿ.

ಯಾವಾಗ ತಜ್ಞರಿಗೆ ತೋರಿಸಬೇಕು?

ನಿಮ್ಮ ಮಕ್ಕಳಲ್ಲಿ ಇದರಲ್ಲಿ ಯಾವುದಾದರೂ ಲಕ್ಷಣ ಕಂಡು ಬಂದರೆ ತಜ್ಞರಲ್ಲಿ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

English summary

Anemia in Children Causes, Symptoms, Risks, Treatment and Prevention in Kannada

Anemia in Children Causes, Symptoms, Risks, Treatment and Prevention in Kannada,Read on...
X
Desktop Bottom Promotion