Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೆಚ್ಚಗಿನ ಗೂಡಲಿ ಬೇಕು ಪ್ರೀತಿಯ ಚಿಲುಮೆ

ಮಕ್ಕಳೊಡನೆ ಮನಬಿಚ್ಚಿ ಮಾತನಾಡುವುದರಿಂದ ಅವರು ಸಹ ತಮ್ಮ ಭಾವನೆಗಳನ್ನು ಅಪ್ಪ ಅಮ್ಮನ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ, ಮಕ್ಕಳನ್ನು ಬೆಳೆಸುವಾಗ ಕಟ್ಟು ನಿಟ್ಟಿರಬೇಕು ಹಾಗಂತ ಅದೆ ವಿಪರೀತವಾದರೆ ಮಕ್ಕಳ ಮನಸ್ಸಿನಲ್ಲಿ ಹೆತ್ತವರ ಬಗ್ಗೆ ಒಂದು ಭಯ ಪ್ರಾರಂಭವಾಗುತ್ತದೆ, ಅದೆ ಮುಂದಕ್ಕೆ ಮಕ್ಕಳನ್ನು ಸಾಕಷ್ಟು ವಿಷಯಗಳನ್ನು ಅಪ್ಪ-ಆಮ್ಮನಿಂದ ಮುಚ್ಚಿ ಇಡುವಂತೆ ಮಾಡುತ್ತದೆ.
ಮಕ್ಕಳಿಗೆ ಹೆತ್ತವರು ಆಚಾರ-ವಿಚಾರಗಳ ಬಗ್ಗೆ ತಿಳಿಸಿಕೊಡಬೇಕು, ನಿಮ್ಮ ನಂಬಿಕೆಗಳ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದಾಗ ಕೋಪ ಮಾಡಿಕೊಳ್ಳದೆ ನಿಮ್ಮ ನಂಬಿಕೆಗೆ ಕಾರಣಗಳನ್ನು ನೀಡಿ, ಅದಲ್ಲದೆ 'ನೀ ಅಧಿಕ ಪ್ರಸಂಗ ಮಾತನಾಡುವು ಬೇಡ' ಎಂದು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರೆ ಅದು ಅವರ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಗಮನವಿರಲಿ.
ಮಕ್ಕಳನ್ನು ಆದಷ್ಟು ಇತರ ಮಕ್ಕಳೊಂದಿಗೆ ಬೆರೆತು ಆಡಲು ಬಿಡಬೇಕು ಇದು ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಕ್ಕಳಿಗೆ ಬೇಕಾದಷ್ಟು ಹಣ ನೀಡಿ ನಾವು ನಮ್ಮ ಮಕ್ಕಳನ್ನು ಇತರಿಗಿಂತ ಚೆನ್ನಾಗಿ ನೋಡುಕೊಳ್ಳುತ್ತಿದ್ದೇವೆ ಎಂದು ಭಾವಿಸಿದರೆ ಅದರಷ್ಟು ತಪ್ಪು ಕಲ್ಪನೆ ಬೇರೊಂದಿಲ್ಲ.
ಮಕ್ಕಳಿಗೆ ಹಣದ ಮೌಲ್ಯ ತಿಳಿಯದಿದ್ದರೆ ಅವರು ಕೆಟ್ಟ ಹಾದಿಯನ್ನು ತುಳಿಯವ ಸಂಭವ ಹೆಚ್ಚು, ಹದಿಹರೆಯದ ಮಕ್ಕಳೊಂದಿಗೆ ಹೆತ್ತವರು ಸ್ನೀಹಿತರಂತೆ ವರ್ತಿಸಿ ಅವರ ಬೇಕು ಬೇಡಗಳನ್ನು ಪೂರೈಸಿ, ಕೆಟ್ಟ ನಡತೆಯನ್ನು ತಿದ್ದಬಹುದಾಗಿದೆ,
ಹದಿಹರೆಯದವರಲ್ಲಿ ವ್ಯವಹರಿಸುವಾಗ ದರ್ಪಕ್ಕಿಂತ , ಪ್ರೀತಿಯ ಮಾತೆ ಹೆಚ್ಚು ಕೆಲಸ ಮಾಡುತ್ತದೆ.ಎಷ್ಟೆ ಬ್ಯುಸಿಯಾಗಿದ್ದರೂ ಸಹ ಕಡೆಯ ಪಕ್ಷ ತಿಂಗಳಿಗೊಮ್ಮೆಯಾದರೂ ಮಕ್ಕಳೊಂದಿಗೆ ಎಲ್ಲಾದರೂ ಪಿಕಿನಿಕ್, ರೆಸ್ಟೋರೆಂಟ್ ಅಂತ ಸಮಯ ಕಳಿದರೆ ಸಂಬಂಧವು ಮತ್ತಷ್ಟು ಗಟ್ಟಿಯಾಗುತ್ತದೆ.



Click it and Unblock the Notifications
