For Quick Alerts
ALLOW NOTIFICATIONS  
For Daily Alerts

ವಿಶ್ವ ಸ್ತನಪಾನ ಸಪ್ತಾಹ: ದುಡಿಯುವ ತಾಯಂದಿರಿಗೆ ವೈದ್ಯೆ ನೀಡಿದ್ದಾರೆ ಆಪ್ತ ಸಲಹೆ

|

ಎದೆ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಆಗಸ್ಟ್‌ 1ರಿಂದ ಆಗಸ್ಟ್‌ 7ರವರೆಗೆ ವಿಶ್ವ ಸ್ತನಪಾನ ಸಪ್ತಾಹ ಆಚರಿಸಲಾಗುವುದು. ಎದೆಹಾಲು ಮಗುವಿನ ಹಕ್ಕು ಕೂಡ ಹೌದು. ಮಗುವಿನ ಬೆಳವಣಿಗೆ ದೃಷ್ಟಿಯಿಂದ ಸ್ತನಪಾನ ತುಂಬಾನೇ ಅವಶ್ಯಕವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 6 ತಿಂಗಳವರೆಗೆ ಮಗುವಿಗೆ ಎದೆ ಹಾಲು ಮಾತ್ರ ನೀಡಬೇಕು.

Pumping Strategies

ದುಡಿಯುವ ಮಹಿಳೆಯರಿಗೆ ಕೆಲವೊಮ್ಮೆ ಅದು ಸಾಧ್ಯವಾಗದೇ ಹೋಗಬಹುದು. 6 ತಿಂಗಳು ಹೆರಿಗೆಯ ರಜಾವಧಿ ಇದ್ದರೂ ಕೆಲವೊಮ್ಮೆ ಹೆರಿಗೆಯ ಮುನ್ನವೇ ರಜೆ ತೆಗದುಕೊಂಡರೆ ಬೇಗನೆ ಕೆಲಸಕ್ಕೆ ಹಿಂತಿರುಗಬೇಕಾಗುತ್ತದೆ, ಇನ್ನೂ 6 ತಿಂಗಳವರೆಗೆ ಮಗುವಿನ ಜೊತೆ ಇದ್ದರೂ ನಂತರದ ಅವಧಿಯಲ್ಲಿ ಕೆಲಸಕ್ಕೆ ಮರಳ ಬೇಕಾಗುತ್ತದೆ, ತಾನು ಮಗುವಿನ ಜೊತೆಗೆ ಇರದ ಸಮಯದಲ್ಲಿ ಕೆಲವರು ಮಗುವಿಗೆ ಫಾರ್ಮುಲಾ ಮಿಲ್ಕ್ ಕೊಡುವಂತೆ ಮಗುವಿನ ಕೇರ್‌ ಟೇಕರ್‌ ಬಳಿ ಹೇಳುತ್ತಾರೆ.

ಎದೆಹಾಲು ಸಂಗ್ರಹಿಸಿಡುವುದರ ಬಗ್ಗೆ ಮಾಹಿತಿ ನೀಡಿರುವ ತಜ್ಞೆ

ಎದೆಹಾಲು ಸಂಗ್ರಹಿಸಿಡುವುದರ ಬಗ್ಗೆ ಮಾಹಿತಿ ನೀಡಿರುವ ತಜ್ಞೆ

ಆದರೆ ಫಾರ್ಮುಲಾ ಮಿಲ್ಕ್‌ಗಿಂತ ನಿಮ್ಮ ಎದೆ ಹಾಲನ್ನೇ ಮಗುವಿಗೆ ನೀಡುವುದು ಸೂಕ್ತ, ನೀವು ಎದೆಹಾಲನ್ನು ಸ್ಟೋರ್ ಮಾಡಿ ನೀಡಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮಕ್ಕಳ ತಜ್ಞೆ ಡಾ. ರನ್ವೀತ್‌ ಜೋಷಿ (ಎಂ.ಡಿ ಮಕ್ಕಳ ತಜ್ಞೆ, ಮಣಿಪಾಲ ಆಸ್ಪತ್ರೆ, ಹಳೆಯ ಏರ್‌ಪೋರ್ಟ್ ರೋಡ್, ಬೆಂಗಳೂರು) ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ದುಡಿಯುವ ತಾಯಂದಿರಿಗೆ ಅವರು ನೀಡಿರು ಅತ್ಯಾಪ್ತ ಸಲಹೆ ಇಲ್ಲಿದೆ ನೋಡಿ:

ದುಡಿಯುವ ಮಹಿಳೆಯರು ಮಗುವಿಗೆ ಎದೆಹಾಲನ್ನು ಸಂಗ್ರಹಿಸಿಟ್ಟು ನೀಡಬಹುದು:

ದುಡಿಯುವ ಮಹಿಳೆಯರು ಮಗುವಿಗೆ ಎದೆಹಾಲನ್ನು ಸಂಗ್ರಹಿಸಿಟ್ಟು ನೀಡಬಹುದು:

ಆಫೀಸ್‌ಗೆ ಹೋಗುವವರಾದರೆ7-8 ಗಂಟೆಗಳ ಮಗುವಿನಿಂದ ದೂರವಿರಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಗುವಿಗೆ ಎದೆಹಾಲು ಸಿಗುವಂತಾಗಲು ಹಾಲನ್ನು ಸಂಗ್ರಹಿಸಿಟ್ಟು ಹೋದರೆ ಒಳ್ಳೆಯದು. ಇದರಿಂದ ಮಗುವಿಗೆ ಅಗ್ಯತವಾದ ಪೋಷಕಾಂಶ ದೊರೆಯುವುದು, ನಿಮಗೂ ಮಗುವಿಗೆ ಎದೆ ಹಾಲುಣಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು, ಬೇಸರ ದೂರಾಗುವುದು.

ಹಾಲನ್ನು ಹೇಗೆ ಸಂಗ್ರಹಿಸಿಡಬಹುದು?

ಹಾಲನ್ನು ಹೇಗೆ ಸಂಗ್ರಹಿಸಿಡಬಹುದು?

ಹಾಲನ್ನು ಕೈಯಿಂದ ಪ್ರೆಸ್‌ ಮಾಡಿ ಅಥವಾ ಪಂಪ್‌ ಮಾಡುವ ಸಾಧನ ಬಳಸಿ ಸಂಗ್ರಹಿಸಿಡಬಹುದು. ಕೈಯಲ್ಲಿ ಪ್ರೆಸ್‌ ಮಾಡಿ ಹಾಲು ಹಿಂಡುವುದಾದರೆ 15-20 ನಿಮಿಷ ಬೇಕಾಗುತ್ತದೆ, ಅದೇ ಪಂಪ್‌ ಮಾಡುವ ಸಾಧನವಾದರೆ ಬೇಗನೆ ಹಾಲನ್ನು ಸಂಗ್ರಹಿಸಬಹುದು.

 ಹಾಲು ಸಂಗ್ರಹಿಸಿಡಲು ಯಾವ ಬಾಟಲಿ/ ಪಾತ್ರೆ ಬಳಸಬಹುದು?

ಹಾಲು ಸಂಗ್ರಹಿಸಿಡಲು ಯಾವ ಬಾಟಲಿ/ ಪಾತ್ರೆ ಬಳಸಬಹುದು?

ಸ್ವಚ್ಛವಾಗಿರುವ ಯಾವುದೇ ಗ್ಲಾಸ್‌ ಅಥವಾ ಪಾತ್ರೆ ಬಳಸಬಹುದು. ಇನ್ನ ಹಾಲು ಸಂಗ್ರಹಿಸಿಡಲು ಸ್ಟೋರೇಜ್ ಪ್ಯಾಕ್‌ಗಳು ದೊರೆಯುತ್ತೆ, ಅದರಲ್ಲೂ ಸಂಗ್ರಹಿಸಿಡಬಹುದು.

ಎದೆಹಾಲನ್ನು ಎಷ್ಟು ಸಮಯ ಸಂಗ್ರಹಿಸಿಡಬಹುದು?

ಫ್ರೀಝರ್‌ನಲ್ಲಿ ಇಡುವುದಾದರೆ ನಾಲ್ಕು ತಿಂಗಳವರೆಗೆ ಇಡಬಹುದು, ಫ್ರಿಡ್ಜ್‌ನಲ್ಲಾದರೆ 2 ದಿನದವರೆಗೆ ಇಡಬಹುದು, ರೂಂನ ಉಷ್ಣತೆಯಲ್ಲಾದರೆ 4-6 ಗಂಟೆಗಳ ಕಾಲ ಇಡಬಹುದು.

 ಸಂಗ್ರಹಿಸಿಟ್ಟ ಎದೆಹಾಲನ್ನು ಮಗುವಿಗೆ ಹೇಗೆ ನೀಡಬೇಕು?

ಸಂಗ್ರಹಿಸಿಟ್ಟ ಎದೆಹಾಲನ್ನು ಮಗುವಿಗೆ ಹೇಗೆ ನೀಡಬೇಕು?

ಎದೆಹಾಲನ್ನು ಕಾಯಿಸುವುದಾಗಲಿ ಅಥವಾ ಮೈಕ್ರೋವೇವ್‌ನಲ್ಲಿ ಬಿಸಿ ಮಾಡುವುದಾಗಲಿ ಮಾಡಬಾರದು. ಎದೆ ಹಾಲಿನ ಪಾತ್ರೆಯನ್ನು ಹದ ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಇಟ್ಟು ನಂತರ ಮಗುವಿಗೆ ಸ್ಪೂನ್‌ನಲ್ಲಿ ನೀಡಿ.

ಆಫೀಸ್‌ನಿಂದ ಮರಳಿದ ಮೇಲೆ ಮಗುವಿಗೆ ನೇರವಾಗಿ ಎದೆ ಹಾಲು ನೀಡಬಹುದೇ? ಅಥವಾ ಸ್ವಲ್ಪ ಹೊರಚೆಲ್ಲಿ ನೀಡಬೇಕೆ?

ಎದೆಯಲ್ಲಿರುವ ಹಾಲು ಹಾಳಾಗುವುದಿಲ್ಲ, ಆದ್ದರಿಂದ ಆಫೀಸ್‌ನಿಂದ ಮರಳಿದ ಮೇಲೆ ಮೊಲೆ ತೊಟ್ಟನ್ನು ಒರೆಸಿ ಮಗುವಿಗೆ ಕುಡಿಯಲು ನೀಡಬಹುದು.

ಆಫೀಸ್‌ನಲ್ಲಿರುವ ಎದೆಹಾಲು ತುಂಬಿ ನೋವು ಬಂದರೆ ಏನು ಮಾಡಬೇಕು?

ಆಫೀಸ್‌ನಲ್ಲಿರುವ ಎದೆಹಾಲು ತುಂಬಿ ನೋವು ಬಂದರೆ ಏನು ಮಾಡಬೇಕು?

ಆಫೀಸ್‌ನಲ್ಲಿ ಎದೆಹಾಲು ತುಂಬಿ ಬಂದರೆ ಆಫೀಸ್‌ನಲ್ಲಿ ಹಾಲನ್ನು ಪಂಪ್ ಮಾಡಿ ಸಂಗ್ರಹಿಸಿಡಲು ವ್ಯವಸ್ಥೆಯಿದ್ದರೆ ಬಾಟಲಿ ತೆಗೆದುಕೊಂಡು ಹೋಗಿ ಸಂಗ್ರಹಿಸಿಡಬಹುದು, ಇಲ್ಲದಿದ್ದರೆ ಹಿಂಡಿ ಹೊರ ಚೆಲ್ಲಿದರೆ ಎದೆ ನೋವು ಕಡಿಮೆಯಾಗುವುದು.

 6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಕುಡಿಯಲು ನೀರು ಕೊಡಬಹುದೇ?

6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಕುಡಿಯಲು ನೀರು ಕೊಡಬಹುದೇ?

6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಎದೆಹಾಲು ಬಿಟ್ಟು ಬೇರೇನೂ ಕೊಡಬೇಕಾಗಿಲ್ಲ. ಚಿಕ್ಕ ಮಕ್ಕಳಿಗೆ ಮಲಬದ್ಧತೆ ಕಾಡಬಹುದು, ಮಗು 7 ದಿನದವರೆಗೆ ಮಲ ವಿಸರ್ಜನೆ ಮಾಡದಿದ್ದರೂ ತೊಂದರೆಯಿಲ್ಲ, ಆದರೆ ಮಗುವಿಗೆ 6 ತಿಂಗಳವಾರವರೆಗೆ ಎದೆಹಾಲು ಬಿಟ್ಟು ಬೇರೇನೂ ನೀಡಬಾರದು.

ಎದೆಹಾಲನ್ನು ಎಷ್ಟು ಸಮಯದವರೆಗೆ ನೀಡಬಹುದು?

ಅದು ತಾಯಿ ಹಾಗೂ ಮಗುವಿನ ಆಯ್ಕೆಯಾಗಿದೆ, ಮಕ್ಕಳಿಗೆ 2 ವರ್ಷದವರೆಗೆ ಎದೆ ಹಾಲುಣಿಸಿದರೆ ಒಳ್ಳೆಯದು, ಇನ್ನೂ ಹೆಚ್ಚಿನ ಸಮಯ ಕೊಡಲು ತಾಯಿ ಬಯಸುವುದಾದರೆ ನೀಡಬಹುದು.

ಮಗುವನ್ನು ಎದೆಹಾಲು ಬಿಡಿಸುವಾಗ ಏನು ಮಾಡಬೇಕು?

ಮಗುವನ್ನು ಎದೆಹಾಲು ಬಿಡಿಸುವಾಗ ಏನು ಮಾಡಬೇಕು?

ಮಗುವಿಗೆ 2 ವರ್ಷ ಕಳೆದ ಮೇಲೆ ಎದೆಹಾಲು ಕೊಡುವುದನ್ನು ನಿಲ್ಲಿಸಲು ಬಯಸುವುದಾದರೆ ನಿಧಾನಕ್ಕೆ ಬಿಡಿಸಬೇಕು, ಮಗುವನ್ನು 2 ದಿನ ತಂದೆಯ ಜೊತೆ ಅಥವಾ ಅಜ್ಜಿಯ ಜೊತೆ ಮಲಗಿಸಿ, ಹಾಲು ಬಿಡಿಸುವ ಸಮಯದಲ್ಲಿ ಮಗುವಿಗೆ ಯಾವುದೇ ಒತ್ತಡ ಉಂಟಾಗದಂತೆ ನೋಡಿಕೊಳ್ಳಬೇಕು.

ಸಲಹೆ: ದೀರ್ಘ ಸಮಯ ಎದೆಹಾಲುಣಿಸುವುದರಿಂದ ತಾಯಿ-ಮಗುವಿಗೆ ದೊರೆಯುವ ಪ್ರಯೋಜನಗಳು:

2 ವರ್ಷದವರೆಗೆ ಮಗುವಿಗೆ ಎದೆಹಾಲುಣಿಸುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಸ್ತನ ಕ್ಯಾನ್ಸರ್‌ ಉಂಟಾಗುವುದಿಲ್ಲ. ಮಗುವಿನ ಬುದ್ಧಿಶಕ್ತಿ ಅಭಿವೃದ್ಧಿಯಾಗುವುದು, ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

English summary

Pumping Strategies For The Working Mother By Expert in kannada

Here Dr. Ravneet Joshi, M D Paediatrician Manipal Hospital are share information about breast milk pumping Strategies for the Working Mother, have a look...
Story first published: Wednesday, August 3, 2022, 21:39 [IST]
X
Desktop Bottom Promotion