For Quick Alerts
ALLOW NOTIFICATIONS  
For Daily Alerts

ಈ ಪರೀಕ್ಷೆ ಮಾಡಿಸಿದರೆ ಪುರುಷ ಹಾಗೂ ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವೇನು ಎಂದು ತಿಳಿಯುವುದು

|

ಬಂಜೆತನ ಎಂಬುವುದು ಇತ್ತೀಚಿನ ವರ್ಷಗಳಲ್ಲಿ ತುಂಬಾನೇ ಹೆಚ್ಚಾಗುತ್ತಿದೆ, ಅನೇಕ ಕಾರಂಗಳಿಂದಾಗಿ ಈ ಸಮಸ್ಯೆ ಉಂಟಾಗುತ್ತಿದೆ. ಬಂಜೆತನ ಎಂಬುವುದು ಮಹಿಳೆಯರಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಮಸ್ಯೆಯಲ್ಲ, ಪುರುಷರಲ್ಲೂ ಬಂಜೆತನದ ಸಮಸ್ಯೆ ಇರುತ್ತದೆ.

ಆದ್ದರಿಂದ ಕೆಲವು ತಿಂಗಳುಗಳು ಅಥವಾ ವರ್ಷಗಳಿಂದ ಮಗುವಿಗಾಗಿ ಪ್ರಯತ್ನಿಸಿ ಗರ್ಭಧಾರಣೆ ಹೋದರೆ ಈ ಪರೀಕ್ಷೆಗಳನ್ನು ಮಾಡಿಸಿದರೆ ವೈದ್ಯರು ನಿಮಗೆ ಯಾವ ವಿಧಾನದ ಮೂಲಕ ಮಗು ಪಡೆಯಬಹುದು ಎಂಬ ಸಲಹೆ ನೀಡುತ್ತಾರೆ.

Infertility

ನಮ್ಮಲ್ಲಿರುವ ಸಮಸ್ಯೆ ಬೇಗನೆ ಗೊತ್ತಾದರೆ ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆದು ಬೇಗನೆ ಮಗುವನ್ನು ಪಡೆಯಬಹುದು.

ಪುರುಷರಿಗೆ ಹಾಗೂ ಮಹಿಳೆಯರಿಗೆ ಮಾಡುವ ಫರ್ಟಿಲಿಟಿ (ಸಂತಾನೋತ್ಪತ್ತಿ ಸಾಮರ್ಥ್ಯದ ಪರೀಕ್ಷೆ) ಪರೀಕ್ಷೆಗಳಾವುವು ಎಂದು ನೋಡೋಣ:
ಈ ಕುರಿತು ಕೇಳಲಾಗುವುದು

ಕಾಯಿಲೆ: ಏನಾದರೂ ಕಾಯಿಲೆ ಇದೆಯೇ ಎಂದು ಕೇಳಿ ತಿಳಿದುಕೊಳ್ಳಲಾಗುವುದು.
ಏನಾದರೂ ಸೋಂಕು ಇದೆಯೇ: ಈ ಹಿಂದೆ ಏನಾದರೂ ಸೋಂಕು ತಗುಲಿತ್ತೇ ಅಥವಾ ಈಗ ಸೋಂಕಿನ ಸಮಸ್ಯೆ ಹೊಂದಿದ್ದೀರಾ ಎಂದು ಕೇಳಿ ತಿಳಿದುಕೊಳ್ಳಲಾಗುವುದು. ಈ ಕುರಿತು ತಿಳಿಯಲು ರಕ್ತ ಪರೀಕ್ಷೆ ಕೂಡ ಮಾಡಲಾಗುವುದು.
* ಜೀವನಶೈಲಿ: ಬಂಜೆತನಕ್ಕೆ ಪ್ರಮುಖ ಕಾರಣ ಜೀವನಶೈಲಿ, ನೀವು ಒತ್ತಡದ ಜೀವನಶೈಲಿ ಹೊಂದಿದ್ದೀರಾ? ಎಂದೆಲ್ಲಾ ಕೇಳಿ ಮಾಹಿತಿ ಪಡೆಯಲಾಗುವುದು.

ಹೆಚ್‌ಐವಿ ಹಾಗೂ ಹೆಪಟೈಟಿಸ್‌ ಇದೆಯೇ ಎಂದು ತಿಳಿಯಲು ಈ ರಕ್ತ ಪರೀಕ್ಷೆ ಮಾಡಿಸಲಾಗುವುದು:
anti-HBc
HBsAg
anti-HCV
anti-HIV 1/2

ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಬಗ್ಗೆ ತಿಳಿಯಲು ಮಾಡುವ ಪರೀಕ್ಷೆಗಳು
ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗೆ ಹಲವಾರು ಅಂಶಗಳು ಕಾರಣವಾಗುವುದು. ಅತ್ಯಧಿಕ ಮಾನಸಿಕ ಒತ್ತಡ, ಸೋಂಕು, ಅನಿಯಮಿತ ಮುಟ್ಟು, ಪಿಸಿಒಡಿ, ಹಾರ್ಮೋನ್‌ ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಬಂಜೆತನ ಉಂಟಾಗುವುದು. ಈ ಕುರಿತು ತಿಳಿಯಲು ವೈದ್ಯರು ನಿಮ್ಮ ಬಳಿ ಈ ಕುರಿತು ಪ್ರಶ್ನಿಸುತ್ತಾರೆ.
* ಮುಟ್ಟಿನ ಚಕ್ರದ ಬಗ್ಗೆ ಮಾಹಿತಿ ಪಡೆಯುತ್ತಾರೆ
* ಈ ಮೊದಲು ಗರ್ಭಧಾರಣೆಯಾಗಿತ್ತೇ, ಗರ್ಭಪಾತವಾಗಿತ್ತೇ ಎಂಬ ಮಾಹಿತಿ ಪಡೆಯುತ್ತಾರೆ
* ಇತರ ಯಾವುದಾದರೂ ಕಾಯಿಲೆ ಇದೆಯೇ ಎಂದು ಕೇಳಲಾಗುವುದು
* ಜೀವನಶೈಲಿ ಬಗ್ಗೆ ಮಾಹಿತಿ ಪಡೆಯಲಾಗುವುದು
* ಬಂಜೆತನಕ್ಕೆ ಇನ್ನಿತರ ಕಾರಣಗಳೇನು ಎಂದು ಕೇಳಿ ಮಾಹಿತಿ ಪಡೆಯಲಾಗುವುದು.

ಸ್ತ್ರೀರೋಗ ತಜ್ಞರು ಈ ಪರೀಕ್ಷೆ ಮಾಡಿಸಲು ಸೂಚಿಸಬಹುದು
* ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿ ಗರ್ಭಕೋಶ ಹಾಗೂ ಅಂಡಾಣುಗಳ ಉತ್ತತ್ತಿ ಹೇಗಿದೆ ಎಂದು ನೋಡಲಾಗುವುದು
* ಗರ್ಭಕಂಠದಿಂದ pap smear ಪರೀಕ್ಷೆ ಮಾಡಲಾಗುವುದು
* ಗರ್ಭಕಂಠದಲ್ಲಿ ಏನಾದರೂ ಬ್ಯಾಕ್ಟಿರಿಯಾಗಳಿವೆಯೇ ಎಂದು ತಿಳಿಯಲು ಪರೀಕ್ಷೆ ಮಾಡಿಸಲಾಗುವುದು.
* HSG ಪರೀಕ್ಷೆ ಮಾಡಿಸಿ ಫಾಲೋಪಿಯನ್ ಟ್ಯೂಬ್‌ನ ಆರೋಗ್ಯದ ಹೇಗಿದೆ ಎಂದು ನೋಡಲಾಗುವುದು.

ಈ ರಕ್ತ ಪರೀಕ್ಷೆ ಮಾಡಿಸಲು ಸೂಚಿಸುತ್ತಾರೆ
LH
FSH
Oestradiol
AMH
Prolactin
TSH

ಹೆಚ್‌ಐವಿ ಹಾಗೂ ಹೆಪಟೈಟಿಸ್‌ ಇದೆಯೇ ಎಂಬ ಮಾಹಿತಿಗೆ ಈ ಪರೀಕ್ಷೆ ಮಾಡಲಾಗುವುದು
anti-HBc
HBsAg
anti-HCV
anti-HIV 1/2
Rubella

ಈ ಪರೀಕ್ಷೆಗಳು ಬಂಜೆತನಕ್ಕೆ ಕಾರಣವೇನು ಎಂಬುವುದನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಬಂಜೆತನಕ್ಕೆ ಕಾರಣ ಗೊತ್ತದರೆ ವೈದ್ಯರಿಗೆ ಚಿಕಿತ್ಸೆ ನೀಡಲು ಸುಲಭವಾಗುವುದು, ಇದರಿಂದ ನೀವು ಮಗು ಪಡೆಯುವ ಸಾಧ್ಯತೆ ಹೆಚ್ಚುವುದು.

English summary

Infertility Tests For Both Men And Women in Kannada

Infertility: These Tests helps to identify the problem in men and women read on...
X
Desktop Bottom Promotion