Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಸಿಂಗಲ್ ಮಾದರ್ ಆಗಿ ಜೀವನದಲ್ಲಿ ನೊಂದಿದ್ದೀರಾ? ಈ ಟಿಪ್ಸ್ ಫಾಲೋ ಮಾಡಿ
ಒಬ್ಬಂಟಿ ಮಹಿಳೆ ಅದ್ರಲ್ಲೂ ಒಬ್ಬಂಟಿ ತಾಯಿ ಅಂದ್ರೆ ಆಕೆಗೆ ಸಮಾಜದಲ್ಲಿ ಬದುಕೋದಕ್ಕೆ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಆಕೆಯ ಗಂಡ ತೀರಿಕೊಂಡಿರಬಹುದು. ಅಥವಾ ವೈವಾಹಿಕ ಕಾರಣಕ್ಕೆ ಇಬ್ಬರು ಬೇರೆ ಬೇರೆಯಾಗಿರಬಹುದು. ಇಂತಹ ಸಂದರ್ಭದಲ್ಲಿ ಬದುಕು ಸಾಗಿಸೋದು ಹೇಗಪ್ಪಾ ಅನ್ನುವ ಭಯ ಮಾತ್ರ ಮಹಿಳೆಯರನ್ನು ಕಾಡದೇ ಇರೋದಿಲ್ಲ.
ಅದ್ರಲ್ಲೂ ಮುಖ್ಯವಾಗಿ ಒಬ್ಬಂಟಿಯಾಗಿ ಮಕ್ಕಳೊಂದಿಗೆ ತಾನು ಖುಷಿಯಾಗಿರಬಹುದಾ ಎಂದು ಮಹಿಳೆಯರು ಚಿಂತಾಕ್ರಾಂತರಾಗುತ್ತಾರೆ. ಆದ್ರೆ ಈ ಟಿಪ್ಸ್‌ಗಳನ್ನು ಪಾಲಿಸಿದ್ರೆ ಸಿಂಗಲ್ ಮದರ್ ಆಗಿಯೂ ನೀವು ಸಂತೋಷವಾದ ಜೀವನ ನಡೆಸಬಹುದು.

1. ನಿಮ್ಮ ಪ್ರಾಮುಖ್ಯತೆ ಏನು ಎಂಬುವುದನ್ನು ಮೊದಲು ತಿಳಿದುಕೊಳ್ಳಿ
ಒಬ್ಬಂಟಿ ತಾಯಿ ಕೂಡ ಈ ಸಮಾಜದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಆದರೆ ಮೊದಲು ನೀವು ಮಾಡಬೇಕಾದದ್ದು ನಿಮ್ಮ ಪ್ರಾಮುಖ್ಯತೆ ಏನು ಅನ್ನೋದನ್ನ ತಿಳಿದುಕೊಳ್ಳಿ. ನೀವು ಹಾಗೂ ನಿಮ್ಮ ಮಕ್ಕಳು ಇಷ್ಟೇ ನಿಮ್ಮ ಪ್ರಪಂಚ. ಇದನ್ನು ಬಿಟ್ಟು ನೀವು ಬೇರೆಯವರಿಗಾಗಿ ಚಿಂತೆ ಮಾಡೋದಕ್ಕೆ ಹೋಗಲೇಬೇಡಿ. ನಿಮ್ಮ ಬದುಕಿಗಾಗಿ ಏನು ಮಾಡಬೇಕು ಅದರ ಬಗ್ಗೆ ಮಾತ್ರ ಯೋಚಿಸಿದರೆ ಸಾಕು. ಆಗ ನೀವು ಸಂತೋಷವಾಗಿರುತ್ತೀರಿ.
2. ನಿಮ್ಮ ಬದುಕಿನ ನಿರ್ಧಾರವನ್ನೇ ನೀವೇ ಮಾಡಿ
ನೀವು ಒಬ್ಬಂಟಿ ತಾಯಿಯಾಗಿದ್ದಂತಹ ಸಂದರ್ಭದಲ್ಲಿ ಸಾಕಷ್ಟು ಜನ ನಿಮ್ಮ ಸ್ನೇಹಿತರು, ಸಂಬಂಧಿಕರು ನಿಮ್ಮ ಮೇಲೆ ಕರುಣೆ ತೋರಿಸೋದಕ್ಕೆ ಮುಂದಾಗುತ್ತಾರೆ. ಇದಕ್ಕೆಲ್ಲಾ ನೀವು ಅವಕಾಶ ಕೊಡಬಾರದು. ನೀವು ಗಟ್ಟಿಯಾಗಿದ್ದರೆ ಯಾರು ನಿಮ್ಮ ಮೇಲೆ ಅಯ್ಯೋ ಪಾಪ ಎಂದು ಕರುಣೆ ತೋರೋದಿಲ್ಲ. ಕೆಲವೊಂದು ಸಲ ನಿಮ್ಮ ಸಂಬಂಧಿಕರು ನಿಮ್ಮ ಬದುಕಿನಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳೋದಕ್ಕೆ ಮುಂದೆ ಬರುತ್ತಾರೆ. ಅಂತಹದಕ್ಕೆ ಅವಕಾಶ ಕೊಡಬೇಡಿ. ನಿಮ್ಮ ಬದುಕನ್ನು ನಿರ್ಧರಿಸುವವರು ನೀವಾಗಿರಬೇಕೇ ಹೊರತು ಬೇರೆಯವರಲ್ಲ.
3. ಜೀವನದ ಬಗ್ಗೆ ನಿಖರವಾದ ಗುರಿಯಿರಲಿ
ಸಿಂಗಲ್ ಮದರ್ ಎಂದ ಮೇಲೆ ನಿಮ್ಮ ಮಕ್ಕಳ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ನೀಡಿ ಅವರನ್ನು ಸದೃಢರನ್ನಾಗಿಸಿ. ಅವರನ್ನು ಗುರಿಯ ಕಡೆಗೆ ಕೊಂಡೊಯ್ಯುವುದು ತಾಯಿಯ ಜವಾಬ್ದಾರಿ. ನಿಮ್ಮ ಮಕ್ಕಳು ನಿಮ್ಮಂತೆಯೇ ಜವಾಬ್ದಾರಿಯಿಂದ ನಡೆದುಕೊಂಡರೆ ಅದಕ್ಕಿಂತ ಖುಷಿ ಬೇರೇನೂ ಬೇಕು ಹೇಳಿ.
4. ನಿಮಗಾಗಿ ಕಾಲಾವಕಾಶ ನೀಡಿ
ನೀವು ಒಬ್ಬಂಟಿ ತಾಯಿಯಾಗಿರಬಹುದು, ಮನೆಯ ಎಲ್ಲಾ ಜವಾಬ್ದಾರಿಗಳು ನಿಮ್ಮ ಮೇಲೆ ಇರಬಹುದು. ಹಾಗಂತ ನೀವು ಈ ಬಗ್ಗೆ ಚಿಂತೆ ಮಾಡಿ ತಲೆ ಹಾಳು ಮಾಡಿಕೊಳ್ಳಬೇಡಿ. ಕೆಲಸಕ್ಕೆ ಹೋಗಿ ಮನೆಗೆ ಬಂದು, ಮನೆಯ ಎಲ್ಲಾ ಕೆಲಸಗಳನ್ನು ಬೇಗನೆ ಮುಗಿಸಿ. ನಿಮಗಾಗಿ ಕೊಂಚ ಸಮಯ ಮೀಸಲಿಡಿ. ಈ ಸಂದರ್ಭದಲ್ಲಿ ಹೊರಗೆ ಹೋಗಿ ವಾಕಿಂಗ್ ಅಥವಾ ಪಾರ್ಕ್‌ನಲ್ಲಿ ಅಡ್ಡಾಡಿ, ಮನೆಯಲ್ಲೇ ಕುಳಿತು ಪುಸ್ತಕ ಓದಿ, ನಿಮ್ಮ ಸ್ನೇಹಿತೆಯರ ಜೊತೆಗೆ ಯಾವಾಗಲಾದರೂ ಒಮ್ಮೆ ಸುಂದರ ಕ್ಷಣಗಳನ್ನು ಕಳೆಯಿರಿ. ನಿಮಗೇನು ಇಷ್ಟ ಆಗುತ್ತೋ ಆ ಕೆಲಸ ಮಾಡಿ.
5. ಯೋಗ, ಧಾನ್ಯ, ವ್ಯಾಯಾಮ ಮಾಡಿ
ಒಬ್ಬಂಟಿ ತಾಯಿ ಎಂದ ಮೇಲೆ ಆಕೆಯ ಮೇಲೆ ಜವಾಬ್ದಾರಿಯ ಮೂಟೆಯೇ ಇರುತ್ತದೆ. ಕೆಲಸಕ್ಕೆ ಹೋಗಬೇಕು ಮಕ್ಕಳನ್ನು ನೋಡಿಕೊಳ್ಳಬೇಕು. ಎಲ್ಲವನ್ನೂ ಒಬ್ಬಳೇ ನಿಭಾಯಿಸಬೇಕಾಗಿರೋದ್ರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಪ್ರತಿನಿತ್ಯ ಯೋಗ, ಧಾನ, ವ್ಯಾಯಾಮ ಮಾಡೋದ್ರಿಂದ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ. ಹೀಗಾದಾಗ ನಿಮ್ಮ ಮನಸ್ಸು ಕೊಂಚ ಹಗುರವಾಗುತ್ತದೆ.
6. ಮಕ್ಕಳ ಸಹಾಯ ಪಡೆದುಕೊಳ್ಳಿ
ಮಕ್ಕಳು ಕೊಂಚ ದೊಡ್ಡವರಾಗುತ್ತಿದ್ದಂತೆ ನಿಮ್ಮ ತಲೆ ಮೇಲಿನ ಭಾರವನ್ನು ಸ್ವಲ್ಪ ಮಟ್ಟಿಗೆ ಇಳಿಸಿ. ಮನೆಯ ಎಲ್ಲಾ ಕೆಲಸವನ್ನು ಈಗಲೂ ನೀವೆ ಮಾಡಬೇಕೆಂದಿಲ್ಲ. ಸಣ್ಣ-ಪುಟ್ಟ ಕೆಲಸಗಳನ್ನು ಮಕ್ಕಳ ಕೈಯಿಂದ ಮಾಡಿಸಿ. ಹೀಗಾದಾಗ ಅವರಿಗೆ ಮನೆಯ ಜವಾಬ್ದಾರಿಗಳು ಗೊತ್ತಾಗುತ್ತದೆ. ಮನೆಗೆ ಬೇಕಾದ ಸಾಮಾಗ್ರಿಗಳನ್ನು ಅವರಿಂದಲೇ ತರಿಸಿಕೊಳ್ಳಿ. ಇದರಿಂದ ಮಕ್ಕಳಿಗೂ ಜವಾಬ್ದಾರಿ ಬರುತ್ತದೆ. ನೀವೂ ಕೊಂಚ ಮಟ್ಟಿಗೆ ಖುಷಿಯಾಗಿರಬಹುದು.
7. ಯಾರ ಮೇಲೆಯೂ ಅವಲಂಬಿತರಾಗಬೇಡಿ
ನೀವು ಒಬ್ಬಂಟಿ ತಾಯಿಯಾಗಿದ್ದರೂ ಕೂಡ ಯಾರೊಬ್ಬರ ಮೇಲೆ ಅವಲಂಬಿತರಾಗೋದಕ್ಕೆ ಹೋಗಬೇಡಿ. ಒಂದು ವೇಳೆ ಕಷ್ಟದ ಕಾಲದಲ್ಲಿ ಒಬ್ಬರಿಂದ ಹಣದ ಸಹಾಯ ಪಡೆದರೂ ಕೂಡ ಅದನ್ನು ಹಿಂತಿರುಗಿಸೋದನ್ನು ಮರೆಯಬೇಡಿ. ಯಾರ ಋಣವನ್ನೂ ಇಟ್ಟುಕೊಳ್ಳಬೇಡಿ. ಆದಷ್ಟು ಸ್ವಾಭಿಮಾನದ ಬದುಕನ್ನೇ ಬದುಕಿ. ಇದು ನಿಮಗೆ ಕೊಂಚ ಕಷ್ಟವಾದರೂ ಕೂಡ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ ಜೊತೆಗೆ ನೀವು ಸಂತೋಷವಾಗಿಯೂ ಇರಬಹುದು.
ಸಂತೋಷವಾಗಿರಲು ನೂರಾರು ದಾರಿಗಳಿಗೆ. ಯಾರಾದರೊಬ್ಬರು ನಮ್ಮ ಜೀವನದಿಂದ ದೂರ ಹೋದರೆಂದು ಕೊರಗುತ್ತಾ ಕೂರೋದು ಸರಿಯಲ್ಲ. ಯಾರು ಇಲ್ಲದೆ ಕೂಡ ಒಬ್ಬಂಟಿಯಾಗಿ ಬದುಕೋದು ಹೇಗೆ ಅನ್ನೋದು ನಮಗೆ ಗೊತ್ತಿರಬೇಕು.



Click it and Unblock the Notifications


