For Quick Alerts
ALLOW NOTIFICATIONS  
For Daily Alerts

ಮಗು ಮತ್ತಷ್ಟು ಮುದ್ದಾಗಿ ಕಾಣಿಸಲು ಕ್ರಿಯೇಟಿವ್ ಫೋಟೋಶೂಟ್ ಐಡಿಯಾ

|

ಮಕ್ಕಳೆಂದರೆ ಮುದ್ದು, ಅವುಗಳು ನಕ್ಕರೆ ಚೆಂದ, ಚೇಷ್ಟೆ ಮಾಡಿದರೆ ಚೆಂದ, ಅತ್ತಾಗಲೂ ಮುದ್ದಾಗಿ ಕಾಣುತ್ತವೆ. ಮಕ್ಕಳು ಬೆಳೆಯುತ್ತಿದ್ದಂತೆ ಅವರಲ್ಲಿ ಆ ಮುಗ್ಧತೆ ಕಡಿಮೆಯಾಗುತ್ತಾ ಬರುತ್ತದೆ. ಆಗ ತಂದೆ ತಾಯಿ ನೀನು ಹಾಗಿದ್ದೆ, ಹೀಗಿದ್ದೆ ಅಂತೆಲ್ಲಾ ಮಕ್ಕಳ ಬಳಿ ಹೇಳುವಾಗ ಮಕ್ಕಳಿಗೂ ತಾವು ಹೇಗಿದ್ದೆವು ಎಂಬ ಕುತೂಹಲ ಮೂಡುತ್ತದೆ.

ಇನ್ನು ಹೆತ್ತವರಿಗೆ ಆ ಮಧುರ ನೆನಪುಗಳನ್ನು ನೆನಪಿಸಿಕೊಳ್ಳುವುದೇ ಚೆಂದ. ಆದರೆ ಈಗ ಆ ಎಲ್ಲಾ ನೆನಪುಗಳನ್ನು ಸೆರೆ ಹಿಡಿದುಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಮೊಬೈಲ್‌ಗಳಿವೆ, ಕ್ಯಾಮರಾಗಳಿವೆ ಮಗುವಿನ ಪ್ರತಿಯೊಂದು ಭಂಗಿಯನ್ನೂ ಅದರ ಪ್ರತಿಯೊಂದು ಚಟುವಟಿಕೆಯನ್ನು ಸೆರೆ ಹಿಡಿದು ಸುಂದರ ನೆನಪುಗಳನ್ನು ಪೋಣಿಸುತ್ತಾ ಹೋಗಬಹುದು. ಮಗು ಬೆಳೆಯುತ್ತಿದ್ದಂತೆ ಒಂದೊಂದು ಹಂತದಲ್ಲಿ ಫೋಟೋಶೂಟ್‌ ಮಾಡಿಸಿದರೆ ಮುಂದೆ ಆ ಫೋಟೋಗಳನ್ನು ನೋಡು ತುಂಬಾ ಖುಷಿಯಾಗುತ್ತದೆ. ಇನ್ನು ಫೋಟೋಶೂಟ್‌ ಮಾಡಿಸುವಾಗ ಅದಕ್ಕೆ ಸ್ವಲ್ಪ ಕ್ರಿಯೇಟಿವಿಟಿ ಬಳಸಿದರೆ ಮಕ್ಕಳು ಮತ್ತಷ್ಟು ಮುದ್ದಾಗಿ ಕಾಣುತ್ತವೆ.

Baby Photo Shoot Idea

ಕೆಲವರು ಗ್ರ್ಯಾಂಡ್‌ ಡ್ರೆಸ್‌ ಹಾಕಿ ಫೋಟೋಶೂಟ್‌ ಮಾಡಿಸುತ್ತಾರೆ. ಆದರೆ ಮಕ್ಕಳಿಗೆ ಗ್ರ್ಯಾಂಡ್‌ ಡ್ರೆಸ್‌ ಹಾಕಿದಾಗ ಕಂಫರ್ಟ್ ಅನಿಸದೆ ಕಿರಿಕಿರಿ ಮಾಡಬಹುದು. ಆಗ ನೀವು ಬಯಸಿದ ರೀತಿಯಲ್ಲಿ ಫೋಟೋ ತೆಗೆಯಲು ಸಾಧ್ಯವಾಗುವುದಿಲ್ಲ. ಮಕ್ಕಳಿಗೆ ಯಾವುದೇ ಕಿರಿಕಿರಿ ಅನಿಸಬಾರದು, ಅವರು ಆಟ ಆಡುತ್ತಲೇ ಇರುವಾಗ ಸಿಂಪಲ್ ಆದ ಡ್ರೆಸ್‌ನಲ್ಲಿಯೇ ಸಕತ್‌ ಕ್ರಿಯೇಟಿವ್ ಆಗಿ ಫೋಟೋಗಳನ್ನು ತೆಗೆಯಬಹುದು.

ಇತ್ತೀಚೆಗೆ ಯಶ್‌-ರಾಧಿಕಾ ತಮ್ಮ ಮಗಳ ಫೋಟೋಶೂಟ್‌ ಮಾಡಿಸಿದರು. ಅದರಲ್ಲಿ ಐರಾ ನೀಡಿದ ಪ್ರತಿಯೊಂದು ಪೋಸ್‌ ಯಶ್‌, ರಾಧಿಕಾ ಅಭಿಮಾನಿಗಳ ಹಾಗೂ ನೆಟ್ಟಿಗರ ಮನಗೆದ್ದಿದೆ. ಆ ರೀತಿಯ ಫೋಟೋಗಳನ್ನು ನೋಡುವಾಗ ಪೋಷಕರಿಗೆ ತಮ್ಮ ಮಗುವಿನ ಫೋಟೋವನ್ನು ಇಷ್ಟು ಮುದ್ದಾಗಿ ತೆಗೆಯಬೇಕು ಎಂದು ಅನಿಸದೆ ಇರಲ್ಲ. ಇಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆದ ಕೆಲವೊಂದು ಮುದ್ದಾದ ಮಕ್ಕಳ ಫೋಟೋ ನೀಡಿದ್ಧೇವೆ. ನಿಮ್ಮ ಮಗುವಿಗೆ ಫೋಟೋಶೂಟ್‌ ಮಾಡಿಸುವಾಗ ಈ ಐಡಿಯಾಗಳು ಸಹಾಯಕ್ಕೆ ಬರುತ್ತವೆ ನೋಡಿ.

ಮಗುವಿಗೆ ಫೋಟೋಶೂಟ್‌ ಮಾಡಿಸುವಾಗ ಅದಕ್ಕಾಗಿಯೇ ಕ್ಲಿಪ್, ಬ್ಯಾಂಡ್ ಅವುಗಳನ್ನು ಕೊಂಡು ತರಬೇಕಾಗಿಲ್ಲ, ಏಕೆಂದರೆ ತುಂಬಾ ಗ್ರ್ಯಾಂಡ್‌ ಡ್ರೆಸ್‌ಗಳು, ಅದಕ್ಕೆ ಬಳಸುವ ಆಕ್ಸೆಸ್ಸರಿಗಳು ಮತ್ತೆ ಬಳಸುವುದಿಲ್ಲ, ಹಾಗಾಗಿ ಸುಮ್ಮನೆ ಹಣ ವ್ಯರ್ಥವಾಗುತ್ತದೆ, ಅದೇ ಹಣದಲ್ಲಿ ಮಗುವಿಗೆ ಆಟಿಕೆ ತರಬಹುದು. ಫೋಟೋಶೂಟ್‌ಗಾಗಿ ತುಂಬಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಸ್ವಲ್ಪ ಕ್ರಿಯಾತ್ಮಕವಾಗಿ ಬಳಸಿ ಕೊಂಡರೆ ಸಾಕು. ಉದಾಹರಣೆಗೆ ಬಾತ್‌ ಟಬ್‌ಗೆ ಹೂವಿನ ಎಸಳು ಅಥವಾ ಸ್ಟ್ರಾಬೆರಿ ಹಣ್ಣುಗಳನ್ನು ಹಾಕಿ ಫೋಟೋ ತೆಗೆಯುವುದು, ಆಕರ್ಷಕವಾದ ಸೀರೆ ಅಥವಾ ಉಣ್ಣೆಯ ಬಟ್ಟೆಯ ಮೇಲೆ ಮಲಗಿಸಿ ಫೋಟೋಗಳನ್ನು ತೆಗೆಯಬಹುದು.

ಫೋಟೋ ತೆಗೆಯುವಾಗ ನೀವು ಮುಖ್ಯವಾಗಿ ಗಮನಿಸಬೇಕಾದದು ಗಾಳಿ ಬೆಳಕು. ಇನ್ನು ಫೋಟೋ ತೆಗೆಯುವಾಗ ಮಕ್ಕಳಿಗೆ ತುಂಬಾ ಅಲಂಕಾರ ಮಾಡಬೇಡಿ, ನಾವು ಭಾರತೀಯರು ದೃಷ್ಟಿ ಆಗುತ್ತದೆಯೆಂದು ಮುಖ ತುಂಬಾ ಕಪ್ಪು ಬೊಟ್ಟು ಹಾಕುತ್ತೇವೆ. ಫೋಟೋಶೂಟ್‌ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಲು ಇಷ್ಟವಿಲ್ಲದಿದ್ದರೆ ಹಾಕಬೇಡಿ, ಆದರೆ ಮುಂದೆ ಆ ಮಗು ಬೆಳೆದು ದೊಡ್ಡದಾಗ ನನಗೆ ಇಷ್ಟೊಂದು ಅಲಂಕಾರ ಏಕೆ ಮಾಡಿದೆ ಎಂದು ಕೇಳುವಂತೆ ಮಾಡಬೇಡಿ. ಮಗುವಿಗೆ ಫೋಟೋಶೂಟ್‌ಗೆ ಮೃದುವಾದ ಬಟ್ಟೆಗಳನ್ನು ಧರಿಸಿ, ಆಗ ಮಗು ಕೂಡ ಕಂಫರ್ಟ್‌ ಆಗಿರುತ್ತದೆ, ನೀವು ಬಯಸಿದ ರೀತಿಯಲ್ಲಿ ಫೋಟೋಗಳು ದೊರೆಯುತ್ತವೆ.

English summary

Photoshoot idea for baby

All parents want to click their baby photos in a creative way. Here we have given some idea which is taken from Instagram, that will help you to do baby photo shoot. Take a look.
X
Desktop Bottom Promotion