Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಗುವನ್ನು ಎಲ್ಲಿ ಮಲಗಿಸಿದರೆ ಒಳ್ಳೆಯದು?
ಚಿಕ್ಕ ಮಕ್ಕಳ ಬೆಳವಣಿಗೆಗೆ ಸಾಕಷ್ಟು ನಿದ್ದೆ ಅವಶ್ಯಕ. ಆದ್ದರಿಂದ ಮಕ್ಕಳ ನಿದ್ದೆಗೆ ಭಂಗವಾಗದ ರೀತಿಯಲ್ಲಿ ತುಂಬಾ ಬೆಚ್ಚಗೆ ಇರುವಂತೆ ಮಗುವನ್ನು ಮಲಗಿಸಬೇಕು. ಹೀಗೆ ಮಗುವನ್ನು ಬೆಚ್ಚಗೆ ಮಲಗಿಸಲು ಬೆಡ್ ನಲ್ಲಿ ತಾಯಿ ಪಕ್ಕ ಮಲಗಿಸಬೇಕಾ ಅಥವಾ ತೊಟ್ಟಿಲಿನಲ್ಲಿ ಮಲಗಿಸಬೇಕಾ ಎಂಬ ಗೊಂದಲ ಚೊಚ್ಚಲ ಮಗುವನ್ನು ಪಡೆದ ದಂಪತಿಗಳಲ್ಲಿ ಇರುತ್ತದೆ. ಈ ಲೇಖನ ಓದಿದರೆ ನಿಮ್ಮ ಗೊಂದಲಕ್ಕೆ ಉತ್ತರ ದೊರಕುವುದು.

ಮಗುವನ್ನು ತಾಯಿ ಪಕ್ಕ ಮಲಗಿಸಿದರೆ ದೊರೆಯುವ ಪ್ರಯೋಜನಗಳು:
1. ಮಗುವನ್ನು 1-2 ತಿಂಗಳವರೆಗೆ ತಾಯಿ ಪಕ್ಕ ಬೆಡ್ ನಲ್ಲಿ ಮಲಗಿಸುವುದು ಒಳ್ಳೆಯದು. ಏಕೆಂದರೆ ಹುಟ್ಟಿದ ಮಗುವನ್ನು ಬೆಚ್ಚನೆ ಇಡಬೇಕು. ಮಗುವನ್ನು ತಾಯಿ ಪಕ್ಕ ಮಲಗಿಸಿದರೆ ತಾಯಿಯ ಮೈ ಶಾಖ ಮಗುವಿಗೆ ತಾಗುವುದರಿಂದ ಮಗು ಬೆಚ್ಚಗೆ ಇರುತ್ತದೆ ಹಾಗೂ ತಾಯಿ ಮಗು ನಡುವೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ.
2. ಮಗುವನ್ನು ಪಕ್ಕದಲ್ಲಿ ಮಲಗಿಸಿದರೆ ಮಗು ಎಚ್ಚರವಾದ ತಕ್ಷಣ ಗೊತ್ತಾಗುತ್ತದೆ. ಅಲ್ಲದೆ ತೊಟ್ಟಿಲಿನಲ್ಲಿ ಮಲಗಿಸಿದರೆ ಮಗು ಒದ್ದೆ ಮಾಡಿದರೆ ಗೊತ್ತಾಗುವುದೇ ಇಲ್ಲ, ನೀವೇ ಹಾಗೇ ನಿದ್ದೆಯಲ್ಲಿರುತ್ತೀರ. ಮಗುವನ್ನು ಮೂತ್ರ ಬಟ್ಟೆಯಲ್ಲಿಯೇ ಮಲಗಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
3. ಮಗು ತಾಯಿ ಜೊತೆ ಮಲಗಿದರೆ ತೊಟ್ಟಿಲಿನಲ್ಲಿ ಮಲಗಿರುವುದಕ್ಕಿಂತ ಹೆಚ್ಚು ಹೊತ್ತು ನಿದ್ದೆ ಮಾಡುತ್ತದೆ.
ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿದರೆ ದೊರೆಯುವ ಪ್ರಯೋಜನಗಳು:
1. ಮಗು ಹುಟ್ಟಿ 28-30 ದಿನದ ಬಳಿಕ ಮಗು ನಿದ್ದೆ ಮಾಡಿದಾಗ ತೊಟ್ಟಿಲಿನಲ್ಲಿ ಮಲಗಿಸುವುದು ಒಳ್ಳೆಯದು. ಏಕೆಂದರೆ ಬಾಣಂತಿಯಲ್ಲಿ ಒಂದು ತಿಂಗಳವರೆಗೆ ಮಲಗಿ ವಿಶ್ರಾಂತಿ ತೆಗೆಯುತ್ತಾರೆ. ನಂತರ ಬಾಣಂತಿಯರು ಮಲಗಿಕೊಂಡೇ ಇರಲು ಇಷ್ಟಪಡುವುದಿಲ್ಲ, ಎದ್ದು ಮೆಲ್ಲನೆ ಓಡಾಡಲು ಪ್ರಾರಂಭಿಸುತ್ತಾರೆ. ಹೀಗೆ ಓಡಾಡುವಾಗ ಬೆಡ್ ನಲ್ಲಿ ಮಲಗಿಸಿದರೆ ತಾಯಿ ಪಕ್ಕದಲ್ಲಿ ಇಲ್ಲದಿದ್ದಾಗ ಚೆನ್ನಾಗಿ ಹೊದಿಕೆ ಹೊದಿಸಿದರೂ ಮಗು ಬೇಗನೆ ಎಚ್ಚರವಾಗುತ್ತದೆ. ಆದ್ದರಿಂದ ತೊಟ್ಟಿಲಿನಲ್ಲಿ ಮಲಗಿಸುವುದು ಒಳ್ಳೆಯದು.
2. 3 ತಿಂಗಳ ಬಳಿಕ ಮಗು ಮಗುಚಿ ಮಲಗಲು ಪ್ರಾರಂಭಿಸುತ್ತದೆ, ಆದ್ದರಿಂದ ಸಮಯದಲ್ಲಿ ತೊಟ್ಟಿಲಿನಲ್ಲಿ ಮಲಗಿಸುವುದು ಒಳ್ಳೆಯದು.
3. ದಂಪತಿಗಳ ನಡುವೆ ಮಗುವನ್ನು ಮಲಗಿಸಿದರೆ, ನಿದ್ದೆಯಲ್ಲಿ ಕೈ ಕಾಲು ಎಲ್ಲಿ ಮಗುವಿನ ಮೇಲೆ ಹಾಕುತ್ತೇವೊ ಎಂಬ ಭಯದಿಂದ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ತೊಟ್ಟಿಲಿನಲ್ಲಿ ಮಲಗಿಸಿದರೆ ನೆಮ್ಮದಿಯಾಗಿ ನಿದ್ದೆ ಮಾಡಬಹುದು.
ಆದ್ದರಿಂದ ಮಗು ಮತ್ತು ನಿಮಗೆ ಕಂಫರ್ಟ್ ಆಗುವಂತೆ ಬೆಡ್ ಪಕ್ಕ ತೊಟ್ಟಿಲು ಇಟ್ಟು ಅದರಲ್ಲಿ ಮಲಗಿಸುವುದು ಒಳ್ಳೆಯದು.



Click it and Unblock the Notifications
