Latest Updates
-
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ
ಅಸಭ್ಯವಾಗಿ ನಿಮ್ಮಿಷ್ಟದ ಬಟ್ಟೆ ಹಾಕುವ ಹಕ್ಕು ನಿಮಗಿದ್ರೆ, ಕಾಮೆಂಟ್ ಮಾಡೋ ಹಕ್ಕು ಬೇರೆಯವ್ರಿಗೆ ಇರುತ್ತೆ- ಇಂದ್ರಜಾ
ಇತ್ತೀಚೆಗೆ ಸೆಲೆಬ್ರೆಟಿಗಳ ವೇಷಭೂಷಣದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ನೆಗೆಟಿವ್ ಟ್ರೆಂಡ್ ಜೋರಾಗಿದೆ. ನಮ್ಮಿಷ್ಟದ ಬಟ್ಟೆ ತೊಡುವುದು ತಪ್ಪಾ? ಎಂದು ನಟಿಯರು ತಿರುಗೇಟು ಕೊಡುವುದು ಇದೆ. ಇತ್ತೀಚೆಗೆ ಕನ್ನಡದ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಡೀಪ್ ನೆಕ್ ಗೌನ್ ಧರಿಸಿ ಸಿನಿಮಾ ಪ್ರೀಮಿಯರ್ ಶೋ ನೋಡಲು ಬಂದಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು.
ಆ ವೀಡಿಯೋಗಳು ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗಿತ್ತು. ಯೂಟ್ಯೂಬರ್ ಒಬ್ಬರ ವೀಡಿಯೋ ನೋಡಿ ನಟಿ ನಿಶ್ವಿಕಾ ನಾಯ್ಡು ಕೆಂಡ ಕಾರಿದ್ದರು. ಹೆಣ್ಣು ಮತ್ತು ಆಕೆ ಧರಿಸುವ ಬಟ್ಟೆಯ ಬಗ್ಗೆ ಠೀಕೆ ಮಾಡುವ ನಿಮಗೆ ನಾಚಿಕೆಯಾಗಬೇಕು ಎಂದಿದ್ದರು. ಹೆಣ್ಣು ಬೆ*ತ್ತಲೆ ಇದ್ದರೂ ನೀನು ಕಣ್ಣೆತ್ತಿ ನೋಡಬಾರದು ಎಂದು ಆಕ್ರೋಶ ಹೊರ ಹಾಕಿದ್ದರು.

ಹೆಣ್ಣು ಮಕ್ಕಳು ತೊಡುವ ಬಟ್ಟೆ ಅದರಲ್ಲೂ ಇತ್ತೀಚೆಗೆ ಸಾರ್ವಜನಿಕ ಜೀವನದಲ್ಲಿ ಇರುವವರು, ಪಬ್ಲಿಕ್‌ನಲ್ಲಿ ಹೀಗೆ ಅಂಗಾಂಗ ಪ್ರದರ್ಶನ ಮಾಡುವವರ ಬಗ್ಗೆ ಬಹುಭಾಷಾ ನಟಿ ಇಂದ್ರಜಾ ಪ್ರತಿಕ್ರಿಯಿಸಿದ್ದಾರೆ. ನಿಮ್ಮಿಷ್ಟ ಬಂದಂತೆ ಬಟ್ಟೆ ಹಾಕಿಕೊಂಡು ಸಾರ್ವಜನಿಕ ಸ್ಥಳಗಳಿಗೆ ಬಂದ್ರೆ, ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಎಲ್ಲಿ ಹೇಗೆ ಬಟ್ಟೆ ಧರಿಸಬೇಕು ಎನ್ನುವ ಪರಿಜ್ಞಾನ ಇರವೇಕು ಎಂದು ನಟಿ ಇಂದ್ರಜಾ ಹೇಳಿದ್ದಾರೆ.
ಚೆನ್ನೈ ಮೂಲದ ನಟಿ ಇಂದ್ರಜಾ ಕನ್ನಡದ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಗ್‌ಟಿವಿ ಪ್ಲಸ್ ತೆಲುಗು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯುವ ಜನತೆಯಲ್ಲಿ ಕೆಲವರು ತೊಡುವ ಬಟ್ಟೆ ಬಗ್ಗೆ ಕೇಳಿದ ಪ್ರಶ್ನೆಗೆ "ಅಂತ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು, ಸೋಶಿಯಲ್ ಮೀಡಿಯಾದಲ್ಲಿ ಫೋಟೊ, ವೀಡಿಯೋ ಹಾಕಲು ನಿಮಗೆಷ್ಟು ಹಕ್ಕು ಇದ್ಯೋ, ಅದು ಸರಿ ಇಲ್ಲದಿದ್ದರೆ ಅಸಭ್ಯವಾಗಿದ್ದರೆ ಅದರ ಬಗ್ಗೆ ಕಾಮೆಂಟ್ ಮಾಡುವ ಹಕ್ಕು ಬೇರೆಯವರಿಗೂ ಇರುತ್ತದೆ" ಎಂದು ಇಂದ್ರಜಾ ಹೇಳಿದ್ದಾರೆ.
ನಾನು ಎಲ್ಲಿ ಇದ್ದೀವಿ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ವರ್ತಿಸಬೇಕು ಎಂದು ಇಂದ್ರಜಾ ಹೇಳಿದ್ದಾರೆ. "ಮೊದಲು ನೀವು ಎಲ್ಲಿ ಬಂದಿದ್ದಾರೆ ಎನ್ನುವುದು ಗಮನದಲ್ಲಿ ಇರಬೇಕು. ಸಾರ್ವಜನಿಕ ಜಾಗದಲ್ಲಿ ಹೇಗಿರಬೇಕೋ ಆ ರೀತಿ ಇರಬೇಕು. ನಾವು ಮನೆಯಲ್ಲಿ ಮಾತನಾಡಿದ್ದಂತೆ ಸ್ನೇಹಿತರ ಜೊತೆ ಮಾತನಾಡಿದಂತೆ ಪಬ್ಲಿಕ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ. ಮಾತನಾಡಬಾರದು ಕೂಡ. ಅದೇ ರೀತಿ ಧರಿಸುವ ಕಾಸ್ಟ್ಯೂಮ್ ವಿಚಾರದಲ್ಲಿ ಸಹ ರೀತಿ ನೀತಿ ಇದೆ. ಆದರೆ ಇದು ನನ್ನಿಷ್ಟ, ನಾನು ಹಾಕಿಕೊಳ್ಳುತ್ತೇನೆ ಎನ್ನುವುದು ಪರವಾಗಿಲ್ಲ. ಆದರೆ ನೀನು ಕೇಳೋಕೆ ಯಾರು ಎನ್ನುವುದಕ್ಕೆ ಅವಕಾಶ ಇಲ್ಲ" ಎಂದು ಇಂದ್ರಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾತು ಮುಂದುವರೆಸಿರುವ ನಟಿ ಇಂದ್ರಜಾ "ನಿಮ್ಮ ಮನೆಯಲ್ಲೇ ವಿಭಿನ್ನ ಅಭಿಪ್ರಾಯಗಳಿರುತ್ತವೆ. ಒಬ್ಬೊಬ್ಬರ ಒಂದೊಂದು ರೀತಿ ಮಾತನಾಡುತ್ತಾರೆ. ಕೆಲವೊಮ್ಮೆ ನಿಮ್ಮ ಬಟ್ಟೆ ಬಗ್ಗೆ ಕೂಡ ಏಯ್, ಏನೇ ಇಂತ ಬಟ್ಟೆ ಹಾಕಿಕೊಂಡಿದ್ದೀಯಾ ಎನ್ನುತ್ತಾರೆ. ಅದೇ ರೀತಿಯ ಭಿನ್ನ ಅಭಿಪ್ರಾಯ ಇರುವವರು ಹೊರಗಡೆ ಸಹ ಇರ್ತಾರೆ. ಅಷ್ಟು ಅಸಭ್ಯವಾಗಿ ಮತ್ತೊಬ್ಬರು ನೋಡಿ ಛೀ ಎನ್ನುವಂತೆ ಬಟ್ಟೆ ಹಾಕಿಕೊಳ್ಳಬೇಡಿ. ಬೇಕಿದ್ದರೆ ನಿಮ್ಮ ಮನೆಯಲ್ಲಿ ಹಾಕ್ಕೊಳ್ಳಿ. ಅದು ನಿಮ್ಮಿಷ್ಟ. ಆದರೆ ಪಬ್ಲಿಕ್‌ನಲ್ಲಿ ಕೆಟ್ಟದಾಗಿ ಬಟ್ಟೆ ಧರಿಸಿದ್ರೆ, ಕಾಮೆಂಟ್ ಮಾಡ್ತಾರೆ. ಅದನ್ನು ಸ್ವೀಕರಿಸಲು ಸಿದ್ಧರಿದ್ದರೆ ಮಾತ್ರ ಧರಿಸಿ" ಎಂದಿದ್ದಾರೆ.
1998ರಲ್ಲಿ 'ಗಡಿಬಿಡಿ ಕೃಷ್ಣ' ಚಿತ್ರದ ಮೂಲಕ ಇಂದ್ರಜಾ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ಕೂಲಿ ರಾಜ', 'ದಿ ಕಿಲ್ಲರ್', 'ಪ್ರತ್ಯರ್ಥ', 'ಅವಳೇ ನನ್ನ ಹುಡುಗಿ', 'ಸುಂದರ ಪುರುಷ', 'ಖಡ್ಗ' ಹೀಗೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.
Credit: Filmibeat



Click it and Unblock the Notifications












