Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Gold-Silver Rate Today: 3 ಲಕ್ಷ ಗಡಿ ದಾಟಿದ ಬೆಳ್ಳಿ, ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆ! ಕಾರಣವೇನು ಗೊತ್ತಾ?
ಅಮೆರಿಕಾ-ಇರಾನ್ (America-Iran) ನಡುವಿನ ತೀವ್ರ ಉದ್ವಿಗ್ನತೆ ನಡುವೆ, ಅತ್ತ ಟ್ರಂಪ್ ಆಡಳಿತದ ಗ್ರೀನ್‌ಲ್ಯಾಂಡ್ (Greenland-Trump) ಸಂಬಂಧಿತ ನಿಲುವಿಗೆ ವಿರೋಧಿಸಿದ ಯುರೋಪ್ ದೇಶಗಳ ಮೇಲೆ ಟ್ಯಾರಿಫ್ ವಿಧಿಸಿದ ಹಿನ್ನೆಲೆ ಅತ್ತ ಚಿನ್ನದ ಬೆಲೆಯೂ ಏರಿಕೆ ಕಂಡಿದೆ. ಇನ್ನು ಗಾಜಾದಲ್ಲಿ ಶಾಂತಿ ಮತ್ತು ಆಡಳಿತ ಪುನರ್ ನಿರ್ಮಾಣಕ್ಕಾಗಿ ಟ್ರಂಪ್ ಹೊಸ ನಿರ್ಧಾರ ಕೈಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಭಾರತದಲ್ಲಿ ಚಿನ್ನ-ಬೆಳ್ಳಿ ದರ ಭಾರೀ ಏರಿಕೆ ಕಂಡಿದೆ (Gold-Silver Price Rise). ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟು ಏರಿಕೆ ಕಂಡಿದೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಒಂದು ಗ್ರಾಂ ಬೆಲೆ 14,569 ರೂ. ಆಗಿದ್ದು, ನಿನ್ನೆ 14,378 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ಪ್ರತೀ ಗ್ರಾಂ ಚಿನ್ನದ ಬೆಲೆ ₹191 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,16,552 ರೂ. ಆಗಿದ್ದು, ನಿನ್ನೆ 1,15,024 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,528 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,45,690 ರೂ. ಆಗಿದ್ದು, ನಿನ್ನೆ 1,43,780 ರೂ. ಇತ್ತು. ನಿನ್ನೆಗಿಂತ ಇಂದು 1,910 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹14,56,900 ರೂ. ಆಗಿದ್ದು, ನಿನ್ನೆ 14,37,800 ರೂ. ಇತ್ತು. ಒಂದೇ ದಿನದಲ್ಲಿ 19,100 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 13,355 ರೂ. ಆಗಿದ್ದು, ನಿನ್ನೆ 13,180 ರೂ. ಇತ್ತು. ನಿನ್ನೆಗಿಂತ ಇಂದು ₹175 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,06,840 ರೂ. ಆಗಿದ್ದು, ನಿನ್ನೆ 1,05,440 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,400 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,33,550 ರೂ. ಆಗಿದ್ದು, ನಿನ್ನೆ 1,31,800 ರೂ. ಇತ್ತು. ಒಟ್ಟು 1,750 ರೂ. ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 13,35,500ರೂ. ಆಗಿದ್ದು, ನಿನ್ನೆ 13,18,000 ರೂ. ಇತ್ತು. ನಿನ್ನೆಗಿಂತ ಇಂದು 100 ಗ್ರಾಂ ಚಿನ್ನದಲ್ಲೂ ಭಾರೀ ಏರಿಕೆ ಕಂಡಿದ್ದು, 17,500 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 10,927 ರೂ. ಆಗಿದ್ದು, ನಿನ್ನೆ 10,784 ರೂ. ಇತ್ತು. ನಿನ್ನೆಗಿಂತ ಇಂದು ₹143 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹87,416 ರೂ. ಆಗಿದ್ದು, ನಿನ್ನೆ 86,272 ರೂ. ಇತ್ತು. ನಿನ್ನೆಗೆ ಹೋಳಿಸಿದ್ರೆ ಇಂದು 1,144 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,09,270 ರೂ. ಆಗಿದ್ದು, ನಿನ್ನೆ 1,07,840 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,430 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 10,92,700 ರೂ. ಆಗಿದ್ದು, ನಿನ್ನೆ 10,78,400 ರೂ. ಇತ್ತು.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 14,673, 22K ರೂ. 13,450, 18K ರೂ. 11,230
ಮುಂಬೈ: 24K ರೂ. 14,569, 22K ರೂ. 13,355, 18K ರೂ. 10,927
ದೆಹಲಿ: 24K ರೂ. 14,584, 22K ರೂ. 13,370, 18K ರೂ. 10,942
ಕೋಲ್ಕತ್ತಾ: 24K ರೂ. 14,569, 22K ರೂ. 13,355, 18K ರೂ. 10,927
ಬೆಂಗಳೂರು: 24K ರೂ. 14,569, 22K ರೂ. 13,355, 18K ರೂ. 10,927
ಹೈದರಾಬಾದ್: 24K ರೂ. 14,569, 22K ರೂ. 13,355, 18K ರೂ. 10,927
ಕೇರಳ: 24K ರೂ. 14,569, 22K ರೂ. 13,355, 18K ರೂ. 10,927
ಪುಣೆ: 24K ರೂ. 14,569, 22K ರೂ. 13,355, 18K ರೂ. 10,927
ವಡೋದರಾ: 24K ರೂ. 14,574, 22K ರೂ. 13,360, 18K ರೂ. 10,932
ಅಹಮದಾಬಾದ್: 24K ರೂ. 14,574, 22K ರೂ. 13,360, 18K ರೂ. 10,932
ಬೆಳ್ಳಿ ಬೆಲೆ:
ಅತ್ತ ಬಂಗಾರದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ದರ ನೋಡಿದ್ರೆ ತಲೆ ತಿರುಗುತ್ತೆ. ಒಂದೇ ದಿನ ಬೆಳ್ಳಿ ಬೆಲೆ ಕೂಡಾ ಭಾರೀ ಏರಿಕೆ ಕಂಡಿದೆ. ಅಲ್ಲದೇ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದ್ದಲ್ಲದೇ, ಇತಿಹಾಸದಲ್ಲೇ ಮೊದಲ ಬಾರಿಗೆ 3 ಲಕ್ಷ ಗಡಿ ದಾಟಿದೆ. ಇದೀಗ 1 ಗ್ರಾಂ ಬೆಳ್ಳಿ ಬೆಲೆ ₹305 ರೂ. ಆಗಿದ್ದು, ನಿನ್ನೆ ₹295 ರೂ. ಇತ್ತು. ಒಂದೇ ದಿನದಲ್ಲಿ ದಿಢೀರ್ ₹10 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,440 ರೂ. ಆಗಿದ್ದು, ನಿನ್ನೆ ₹2,360 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹80 ರೂ. ಹೆಚ್ಚಳ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,050 ರೂ., 100 ಗ್ರಾಂ ಬೆಳ್ಳಿ ಬೆಲೆ ₹30,500 ರೂ., 1000 ಗ್ರಾಂ ಬೆಳ್ಳಿ ದರ ₹3,05,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 19ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ ಯುರೋಪಿಯನ್ ರಾಷ್ಟ್ರಗಳ ಮೇಲೆ ಸುಂಕದ ಬೆದರಿಕೆಯೊಡ್ಡಿದ ನಂತರ, ಅಮೆರಿಕ-ಇರಾನ್ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಅದೇ ಕಾರಣದಿಂದ ಚಿನ್ನ-ಬೆಳ್ಳಿ ಬೆಲೆ ಸೋಮವಾರ ಭಾರೀ ಏರಿಕೆ ಕಂಡಿದೆ. ಸ್ಪಾಟ್ ಚಿನ್ನದ ದರವು GMT 0335 ವೇಳೆಗೆ ಪ್ರತೀ ಔನ್ಸ್‌ಗೆ 1.5% ಏರಿಕೆಯಾಗಿ $4,663.37 ಕ್ಕೆ ತಲುಪಿದೆ.
Credit: Goodreturns



Click it and Unblock the Notifications
