Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
BBK12: ಗಿಲ್ಲಿ ಮೇಲೆ ಕೈ ಮಾಡಿದ ರಿಷಾ ಗೌಡಗೆ ಶಿಕ್ಷೆ; ಮನೆ ದಾರಿ ತೋರಿಸಿದ ಕಿಚ್ಚ
ಬಿಗ್‌ಬಾಸ್ ಮನೆಯಲ್ಲಿ ಒಂದಷ್ಟು ನಿಯಮಗಳಿವೆ. ಅದನ್ನು ಸ್ಪರ್ಧಿಗಳು ಪಾಲಿಸಲೇ ಬೇಕು. ತಪ್ಪಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಸಹ ಸ್ಪರ್ಧಿಗಳ ಮೇಲೆ ಕೈ ಮಾಡುವುದು, ಅವಾಚ್ಯ ಶಬ್ಧಗಳಿಂದ ನಿಂದಿಸಬಾರದು. ಈ ತಪ್ಪು ಮಾಡಿ ಈಗಾಗಲೇ ಕೆಲವರು ಶಿಕ್ಷೆ ಅನುಭವಿಸಿದ್ದಾರೆ. ಇದೀಗ ರಿಷಾಗೂ ಅದೇ ಸ್ಥಿತಿ ಬಂದೊದಗಿದೆ.
ಕಳೆದ ವೀಕೆಂಡ್ ಕಿಚ್ಚ ಎಲ್ಲರಿಗೂ ಪಾಠ ಮಾಡಿ ಹೋದ ಬೆನ್ನಲ್ಲೇ ಸೋಮವಾರ(ನವೆಂಬರ್ 3) ಗಿಲ್ಲಿ ಹಾಗೂ ರಿಷಾ ನಡುವೆ ಕಿರಿಕ್ ಆಗಿತ್ತು. ಆತನ ಬೆನ್ನಿಗೆ ಬಲವಾಗಿ ಹೊಡೆದಿದ್ದರು. ಇದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಯಾವುದೇ ಸ್ಪರ್ಧಿ ಮೇಲೆ ಕೈ ಮಾಡುವಂತಿಲ್ಲ. ಆದರೆ ರಿಷಾ ಮಾಡಿದ್ದು ಎಷ್ಟು ಸರಿ, ಆಕೆಗೆ ಶಿಕ್ಷೆ ಆಗಲೇಬೇಕು ಮನೆಯಿಂದ ಹೊರಗೆ ಹಾಕಬೇಕು ಎಂದು ವೀಕ್ಷಕರು ಆಗ್ರಹಿಸಿದ್ದರು. ಕೊನೆಗೂ ಆ ಸಮಯ ಬಂದಂತೆ ಕಾಣುತ್ತಿದೆ.

ಸ್ಪರ್ಧಿಗಳ ಕೈಗೆ ರೆಡ್ ಕಾರ್ಡ್ ಕೊಟ್ಟು ರಿಷಾ ಮನೆಯಲ್ಲಿ ಇರಬೇಕಾ? ಬೇಡವಾ? ಎಂದು ನಿರ್ಧರಿಸುವಂತೆ ಸುದೀಪ್ ಸೂಚಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಬಂದು ಸದ್ದು ಮಾಡ್ತಿದೆ. ಒಬ್ಬರ ಮೇಲೆ ಕೈ ಎತ್ತಿದ್ರೆ ಅದು ಬಿಗ್‌ಬಾಸ್ ಮನೆಯಲ್ಲಿ ಓಕೆ ಅಲ್ಲ, ಭಗವಂತ ಕೊಟ್ಟಿರುವ 2 ಕೈಗಳನ್ನು ಒಳ್ಳೆಯದ್ದಕ್ಕೆ ಅಥವಾ ಗೆಲ್ಲುವುದಕ್ಕೆ ಬಳಸಬೇಕು, ಒಬ್ಬ ಹುಡುಗ ಇದೇ ರೀತಿ ಒಬ್ಬ ಹುಡುಗಿಗೆ ಹೊಡೆದಿದ್ದರೆ ಏನೇನು ಆಗ್ತಿತ್ತು ಎಂದು ಸುದೀಪ್ ಹೇಳಿರುವುದು ವೈರಲ್ ಆಗ್ತಿದೆ.
ಸ್ಪರ್ಧಿಗಳ ಕೈಗೆ ಯೆಲ್ಲೋ ಕಾರ್ಡ್ ಹಾಗೂ ರೆಡ್ ಕಾರ್ಡ್ ಕೊಟ್ಟು ರಿಷಾಗೆ ವಾರ್ನಿಂಗ್ ಕೊಟ್ಟು ಮನೆಯಲ್ಲಿ ಉಳಿಸಿಕೊಳ್ಳಬೇಕಾ? ಅಥವಾ ತಪ್ಪಿಗೆ ಶಿಕ್ಷೆ ಎನ್ನುವಂತೆ ಮನೆಯಿಂದ ಹೊರಗೆ ಹಾಕಬೇಕಾ? ಎಂದು ನಿರ್ಧರಿಸಲು ಹೇಳಿದ್ದಾರೆ. ಇಂತಹ ತಪ್ಪುಗಳಿಗೆ ಶಿಕ್ಷೆ ಏನು ಎನ್ನುವ ಶಂಕುಸ್ಥಾಪನೆ ಆಗಲಿ ಎಂದು ಸುದೀಪ್ ಹೇಳಿದ್ದಾರೆ. ಎಷ್ಟು ಜನ ರೆಡ್ ಕಾರ್ಡ್ ಕೊಡ್ತಾರಾ? ಎಷ್ಟು ಜನ ಯೆಲ್ಲೋ ಕಾರ್ಡ್ ಕೊಟ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಕಾದು ನೋಡಬೇಕಿದೆ.
ವೀಕೆಂಡ್ ಒಬ್ಬರು ಎಲಿಮಿನೇಟ್ ಆಗಬೇಕಿದೆ. ಆ ಶಿಕ್ಷೆ ರಿಷಾ ಗೌಡಗೆ ಸಿಗುತ್ತಾ ಕಾದು ನೋಡಬೇಕಿದೆ. ಬಕೆಟ್ ವಿಚಾರಕ್ಕೆ ಗಿಲ್ಲಿ ಹಾಗೂ ರಿಷಾ ನಡುವೆ ಕಿರಿಕ್ ಆಗಿತ್ತು. ಇದೇ ಕಾರಣಕ್ಕೆ ಆತನ ಮೇಲೆ ಹಲ್ಲೆ ಸಹ ಮಾಡಿದ್ದರು. ಸ್ನಾನಕ್ಕೆ ಹೋಗಲು ರಿಷಾ, ಗಿಲ್ಲಿ ಹಾಗೂ ಸೂರಜ್ ಸಾಲಲ್ಲಿ ಇದ್ದರು. ಆಗ ಬಕೆಟ್‌ನಲ್ಲಿ ನೀರು ಕೊಡುವಂತೆ ರಿಷಾ ಬಳಿ ಗಿಲ್ಲಿ ಕೇಳಿದ್ದರು. ಆಕೆ ನೀರು ಕೊಡದೇ ಇದ್ದಿದ್ದೆ ಜಗಳಕ್ಕೆ ಕಾರಣವಾಗಿತ್ತು.
ರಿಷಾ ತಮ್ಮ ಮಾತು ಕೇಳದೇ ಇದ್ದಾಗ ಗಿಲ್ಲಿ ಹೋಗಿ ಆಕೆಯ ಬಟ್ಟೆಗಳನ್ನು ತಂದು ಬಾತ್‌ರೂಮ್ ಏರಿಯಾದಲ್ಲಿ ಬಿಸಾಕಿದ್ದರು. ಸ್ನಾನ ಮಾಡಿ ಹೊರ ಬಂದ ರಿಷಾ ಇದನ್ನು ನೋಡಿ ಕೆಂಡಾಮಂಡಲವಾಗಿದ್ದರು. 10 ನಿಮಿಷ ಸ್ನಾನ ಮಾಡಿ ಬರವಷ್ಟರಲ್ಲಿ ಏನು ಮಾಡಿದ್ದೀಯಾ ಅಂತ ಕೂಗಾಡಿದ್ದರು. ಕೋಪದಲ್ಲಿ ಗಿಲ್ಲಿ ಬೆನ್ನಿಗೆ ಬಲವಾಗಿ ಹೊಡೆದಿದ್ದರು.
ಒಗೆದ ಬಟ್ಟೆಯನ್ನು ಹೀಗೆ ಮಾಡಿದ್ದು ಸರೀನಾ? ಗೊತ್ತಾಗಲ್ವಾ ನಿಂಗೆ ಅಂತ ರಿಷಾ ಮತ್ತೆ ಜೋರು ಮಾಡಿದ್ದರು. ನಿಂಗೆ ಮಾನ ಮರ್ಯಾದೆ ಇಲ್ವಾ? ಬಕೆಟ್ ನೀರು ಕೇಳಿದ್ರೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದೀಯಾ ಎಂದು ಗಿಲ್ಲಿ ಗಲಾಟೆ ಮಾಡಿದ್ದರು. ಬಳಿಕ ಬೆಡ್ ರೂಲ್ ಏರಿಯಾದಲ್ಲಿ ಗಿಲ್ಲಿಯನ್ನು ರಿಷಾ ತಳ್ಳಿದ್ದರು.
ರಕ್ಷಿತಾ ಬಂದು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದರು. ಗಿಲ್ಲಿ ಪರ ಸೂರಜ್ ಹಾಗೂ ಕಾವ್ಯ ಮಾತನಾಡಿದ್ದರು. ಗಿಲ್ಲಿ ಕೇಳಿದಾಗ ನೀರು ಕೊಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದಿದ್ದರು. ಇನ್ನು ಗಿಲ್ಲಿ ಮಾಡಿದ್ದು ಸರೀನಾ? ಎಂದು ಕೆಲ ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.
Credit: Filmibeat



Click it and Unblock the Notifications