Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕನ್ನಡದ ಖ್ಯಾತ ಹಾಸ್ಯನಟ ಎಂ.ಎಸ್ ಉಮೇಶ್ ವಿಧಿವಶ
ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಖ್ಯಾತ ಹಾಸ್ಯನಟ ಉಮೇಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಮೇಶ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಇದೇ ಅಕ್ಟೋಬರ್ 10ರಂದು ಜಾರಿಬಿದ್ದು ಉಮೇಶ್ ಪೆಟ್ಟು ಮಾಡಿಕೊಂಡಿದ್ದರು. 350ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಬಹುತೇಕ ಹಾಸ್ಯ ಪಾತ್ರಗಳಲ್ಲೇ ಮಿಂಚಿದ್ದರು. ತನ್ನ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು.

ಎಂ. ಎಸ್ ಉಮೇಶ್ ಅಗಲಿಕೆಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ತಮ್ಮ ಪರಿಶುದ್ಧ ಹಾಸ್ಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅವರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾರೆ. 1960ರಲ್ಲಿ ಬಿ.ಆರ್ ಪಂಥುಲು ನಿರ್ದೇಶನದ 'ಮಕ್ಕಳ ರಾಜ್ಯ' ಸಿನಿಮಾ ಮೂಲಕ ಬಾಲನಟನಾಗಿ ಉಮೇಶ್ ಚಿತ್ರರಂಗ ಪ್ರವೇಶಿಸಿದ್ದರು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಕಥಾ ಸಂಗಮ' ಸಿನಿಮಾದಲ್ಲಿ ಪ್ರಮುಖ ಪಾತ್ರ ಸಿಕ್ಕಿತ್ತು. ಅಲ್ಲಿಂದ ಮುಂದೆ ಸಾಲು ಸಾಲು ಅವಕಾಶಗಳು ಅರಸಿ ಬಂದಿತ್ತು. 'ಗುರು ಶಿಷ್ಯರು', 'ಕಾಮನಬಿಲ್ಲು', 'ಗೋಲ್ಮಾಲ್ ರಾಧಾಕೃಷ್ಣ', 'ಶ್ರಾವಣ ಬಂತು', 'ಮಲಯ ಮಾರುತ', 'ಅಪೂರ್ವ ಸಂಗಮ', 'ಶೃತಿ ಸೇರಿದಾಗ', 'ನಾಗರಹೊಳೆ', 'ಅಪೂರ್ವ ಸಂಗಮ', 'ಹಸಿದ ಹೆಬ್ಬುಲಿ', 'ಹಗಲುವೇಷ', 'ಹಿಮಪಾತ' ಉಮೇಶ್ ನಟನೆಯ ಪ್ರಮುಖ ಚಿತ್ರಗಳು.
ಮೈಸೂರಿನಲ್ಲಿ ಉಮೇಶ್ 1945 ರ ಏಪ್ರಿಲ್ 24 ರಂದು ಎ.ಎಲ್. ಶ್ರೀಕಂಠಯ್ಯ ಮತ್ತು ನಂಜಮ್ಮ ದಂಪತಿ ಮಗನಾಗಿ ಹುಟ್ಟಿ ಬೆಳೆದ ಉಮೇಶ್ ರಂಗಭೂಮಿ ಸೆಳೆತಕ್ಕೆ ಒಳಗಾಗಿದ್ದರು. 4 ನೇ ವಯಸ್ಸಿನಲ್ಲಿ ಕೆ. ಹಿರಣ್ಣಯ್ಯ ನಡೆಸುತ್ತಿದ್ದ ಜನಪ್ರಿಯ ರಂಗಭೂಮಿ ತಂಡ ಸೇರಿ ಬಾಲ ಕಲಾವಿದರ ಪಾತ್ರಗಳಲ್ಲಿ ನಟಿಸಿದ್ದರು. ಬಳಿಕ ಗುಬ್ಬಿ ವೀರಣ್ಣ ಅವರ ಕಂಪನಿ ಸೇರಿದ ಮೇಲೆ ಸಿನಿಮಾ ಅವಕಾಶಗಳು ಬರಲು ಆರಂಭವಾಗಿತ್ತು. ಅದೇ ಸಮಯದಲ್ಲಿ ಬಿ. ಆರ್ ಪಂತುಲು ಅವರ 'ಮಕ್ಕಳರಾಜ್ಯ' ಚಿತ್ರದ ಅವಕಾಶ ಸಿಕ್ಕಿತ್ತು.
ಪುಟ್ಟಣ್ಣ ಸಲಹೆ ಮೇರೆಗೆ 'ಮಕ್ಕಳರಾಜ್ಯ' ಚಿತ್ರದಲ್ಲಿ ಉಮೇಶ್ ನಟಿಸುವಂತಾಗಿತ್ತು. ಮತ್ತೆ ಪುಟ್ಟಣ್ಣ ಕರೆದು ತಮ್ಮ 'ಕಥಾಸಂಗಮ' ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. 'ಗೋಲ್ಮಾಲ್ ರಾಧಾಕೃಷ್ಣ' ಚಿತ್ರದ ಸೀತಾಪತಿ ಪಾತ್ರದಲ್ಲಿ ಉಮೇಶ್ ಅವರನ್ನು ಮರೆಯೋಕೆ ಸಾಧ್ಯವಿಲ್ಲ. ಇನ್ನು ರಮೇಶ್ ಅರವಿಂದ್ ನಿರ್ದೇಶನದ 'ವೆಂಕಟ ಇನ್ ಸಂಕಟ' ಚಿತ್ರದಲ್ಲಿ ಅಜ್ಜಿ ವೇಷದಲ್ಲಿ ಉಮೇಶ್ ಮೋಡಿ ಮಾಡಿದ್ದರು.
Credit: Filmibeat



Click it and Unblock the Notifications

