Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
LPG Gas Price Hike: ಎಲ್‌ಪಿಜಿ ಗ್ಯಾಸ್ ಬೆಲೆ ಭಾರೀ ಏರಿಕೆ! ಹೊಸ ವರ್ಷದ ದಿನವೇ ಬಿಗ್ ಶಾಕ್
ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹಲವು ನಿಯಮಗಳು, ಹೊಸ ದರಗಳು ಬರೋದು ಸಾಮಾನ್ಯ. ಆದ್ದರಿಂದ ಹೊಸ ಆರಂಭದಲ್ಲೇ ಜನಸಾಮಾನ್ಯರಿಗೆ ಬಿಗ್‌ಶಾಕ್ ಎದುರಾಗಿದೆ. ಹೊಸ ವರ್ಷದ ಮೊದಲ ದಿನ, ಜನವರಿ 1, 2026 ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ ಕಂಡಿದೆ. 19 ಕಿಲೋಗ್ರಾಂ ತೂಕದ ಈ ಸಿಲಿಂಡರ್ ದರವು ₹111 ರೂ. ಹೆಚ್ಚಾಗಿದ್ದು, ಇದೀಗ ಜಾರಿಗೆ ಬಂದಿದೆ. ಎಲ್‌ಪಿಜಿ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವಾಣಿಜ್ಯ ಉದ್ಯಮಿಗಳ ಮೇಲೆ ಭಾರೀ ಪರಿಣಾಮ ಬೀರಲಿದೆ.

ಜನಸಾಮಾನ್ಯರ ಜೇಬಿಗೆ ಕತ್ತರಿ!
ಬೆಲೆ ಏರಿಕೆಯ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು ₹1580.50 ರಿಂದ ₹1691.50 ಕ್ಕೆ ತಲುಪಿದೆ. ಇದೇ ರೀತಿ, ಕೋಲ್ಕತ್ತಾದಲ್ಲಿ ಈ ಬೆಲೆ ₹1684 ರಿಂದ ₹1795 ಕ್ಕೆ ಏರಿದೆ. ಮುಂಬೈನಲ್ಲಿ ಹಿಂದೆ ₹1531.50 ಇದ್ದ ಸಿಲಿಂಡರ್ ಈಗ ₹1642.50 ಕ್ಕೆ ಲಭ್ಯವಿದ್ದರೆ, ಚೆನ್ನೈನಲ್ಲಿ ಇದು ₹1739.5 ರಿಂದ ₹1849.50 ಕ್ಕೆ ಹೆಚ್ಚಳವಾಗಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪ್ರಮುಖವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧಾಬಾಗಳು ಮತ್ತು ಇನ್ನಿತರ ವಾಣಿಜ್ಯ ಸಂಸ್ಥೆಗಳಲ್ಲಿ ಬಳಸಲಾಗುತ್ತದೆ. 2025ರ ಡಿಸೆಂಬರ್‌ನಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿತ್ತು. ಅಂದರೆ ಡಿಸೆಂಬರ್ 1, 2025 ರಂದು ದೆಹಲಿ ಮತ್ತು ಕೋಲ್ಕತ್ತಾದಲ್ಲಿ ₹10 ಹಾಗೂ ಮುಂಬೈ ಮತ್ತು ಚೆನ್ನೈನಲ್ಲಿ ₹11 ರಷ್ಟು ಇಳಿಕೆ ಕಂಡಿತ್ತು. ಆದರೆ ಇದೀಗ ಜನವರಿ ಆರಂಭದಲ್ಲೆ ಸಿಲಿಂಡರ್ ಬೆಲೆ ಏರಿಕೆ, ಗ್ರಾಹಕರಿಗೆ ಶಾಕ್ ಕೊಟ್ಟಿದೆ.
ಬೆಲೆಯಲ್ಲಿ ಬದಲಾವಣೆ ಇಲ್ಲ
ಆದರೆ ಮನೆಗಳಲ್ಲಿ ಬಳಸುವ 14.2 ಕಿಲೋಗ್ರಾಂ ತೂಕದ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಲಾಗಿದೆ. ಈ ದರಗಳು ಕೊನೆಯದಾಗಿ 2025ರ ಏಪ್ರಿಲ್ 8 ರಂದು ಪರಿಷ್ಕರಣೆಯಾಗಿತ್ತು.
ಪ್ರಸ್ತುತ ದೇಶದ ಪ್ರಮುಖ ನಗರಗಳಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ ಹೀಗಿದೆ:
ದೆಹಲಿ - ₹853, ಕೋಲ್ಕತ್ತಾ - ₹879, ಮುಂಬೈ - ₹852.50, ಚೆನ್ನೈ - ₹868.50, ಲಕ್ನೋ - ₹890.50, ಅಹಮದಾಬಾದ್ - ₹860, ಹೈದರಾಬಾದ್ - ₹905, ವಾರಣಾಸಿ - ₹916.50 ಮತ್ತು ಪಾಟ್ನಾ - ₹951.
ಇನ್ನು 2025ರಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಭಾರೀ ಇಳಿಕೆ ಕಂಡಿತ್ತು. ಅಂದರೆ 2025ರ ತಿಂಗಳ ಬದಲಾವಣೆಗಳನ್ನು ನೋಡಿದ್ರೆ, ಏಪ್ರಿಲ್, ಜುಲೈ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಬೆಲೆಗಳು ತೀವ್ರವಾಗಿ ಕುಸಿತ ಕಂಡಿತ್ತು. ಜುಲೈನಲ್ಲಿ ಅತೀ ಹೆಚ್ಚು ಕುಸಿತ ಕಂಡಿದ್ದು, ಕಳೆದ ವರ್ಷದ ಈ ಬೆಳವಣಿಗೆಗಳು ವ್ಯಾಪಾರ ಸಂಸ್ಥೆಗಳು ಮತ್ತು ಹೋಟೆಲ್ ಮಾಲೀಕರಿಗೆ ಈ ಕಡಿತವು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಇದೀಗ ಹೊಸ ವರ್ಷದ ಆರಂಭದಲ್ಲಿ ಬಿಗ್ ಶಾಕ್ ಕೊಟ್ಟಂತಾಗಿದೆ.
Credit: Goodreturns



Click it and Unblock the Notifications