Latest Updates
-
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ!
ಆತಂಕ,ದುಗುಡ, ದುಮ್ಮಾನ ; ರಜನಿಕಾಂತ್ ಅಣ್ಣನಿಗೆ ಹೃದಯಾಘಾತ -ಬೆಂಗಳೂರಿಗೆ ಓಡೋಡಿ ಬಂದ ತಲೈವಾ
ರಜನಿಕಾಂತ್ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ಅಭಿಮಾನಿಗಳ ಪಾಲಿನ ತಲೈವಾ. ಇಡೀ ವಿಶ್ವಕ್ಕೆ ಗೊತ್ತಿರುವ ಮಹಾನಾಯಕ. ಚೆನ್ನೈ-ಹೈದ್ರಾಬಾದ್- ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜನಿಕಾಂತ್ ಒಡೆತನದ ಆಸ್ತಿಗಳಿವೆ. ಇಡೀ ಜಗತ್ತಿನಲ್ಲಿ ರಜನಿಕಾಂತ್ ಅವರಿಗೆ ತಾವು ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಗೊತ್ತಿಲ್ಲ.ಆದರೆ ಇಂಥ ರಜನಿಕಾಂತ್ ಮನಸ್ಸು ಮಾತ್ರ ಹುಟ್ಟೂರಿನಲ್ಲಿ...
ತಾನು ಓಡಾಡಿದ, ಕಷ್ಟದ ನಡುವೆಯೇ ನೆಮ್ಮದಿ ಕಂಡುಕೊಂಡಿದ್ದ ಜಾಗಗಳೆಡೆಗೇ ಜಾರುತ್ತಿರುತ್ತದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವಾರು ಬಾರಿ ರಜನಿಕಾಂತ್ ಬೆಂಗಳೂರಿಗೆ ಸದ್ದಿಲ್ಲದೇ ಬಂದು ಹೋಗಿದ್ದಾರೆ. ಬದುಕಿನಲ್ಲಿ ಯಶಸ್ಸಿನ ಉತ್ತುಂಗವನ್ನು ಕಂಡರೂ ಮತ್ತೆ ಆರಂಭದ ಶೂನ್ಯಕ್ಕೆ ಮರಳಿ ತಮ್ಮನ್ನು ತಾವು ಅವಲೋಕಿಸಿಕೊಂಡಿದ್ದಾರೆ. ಮಹಾನ್ ಸಾಧಕನೊಬ್ಬ ಹೀಗೆ ಬರಿಗೈದಾಸನಂತೆ, ತನಗಿರುವ ಅಂತಸ್ತು, ಐಶ್ವರ್ಯಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದಾರೆ.

ಇಂಥಾ ರಜನಿಕಾಂತ್ ಇವತ್ತು ಏನೇ ಆಗಿರಬಹುದು. ಆದರೆ ಇವರ ಈ ಸಾಧನೆಯ ಹಿಂದೆ ಹಲವರ ಪರಿಶ್ರಮ ಇದೆ. ಹಲವರ ಬೆವರಿನ ಹನಿ ಇದೆ. ಈ ಮಾತನ್ನು ಖುದ್ದು ರಜನಿಕಾಂತ್ ಕೂಡ ಅಲ್ಲಗಳೆಯಲಾರರು. ತಮ್ಮ ಸ್ನೇಹಿತ ರಾಜ್ ಬಹದ್ದೂರ್ ಮತ್ತು ತಮ್ಮ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ ಅವರ ಬೆಂಬಲ ಮತ್ತು ಪ್ರೀತಿಯನ್ನು ರಜನಿ ಯಾವತ್ತೂ ಮರೆಯಲಾರರು.
ಆದರೆ.. ವಿಧಿ, ಆಗಾಗ ಅಗ್ನಿ ಪರೀಕ್ಷೆಯನ್ನೊಡ್ಡುತ್ತೆ. ಜೀವಕ್ಕೆ ಜೀವ ಎನ್ನುವಂತೆ ಇರುವವರಿಗೆ ಸವಾಲೊಡ್ಡುತ್ತೆ. ಬದುಕಿನ ಬಂಧ.. ಬಾಂಧವ್ಯ.. ಕಳಚುವ ಪ್ರಯತ್ನ ಮಾಡುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ರಜನಿಯ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ ಜೀವನ್ಮರಣದ ಹೋರಾಟವನ್ನು ಸದ್ಯ ಮಾಡುತ್ತಿದ್ದಾರೆ.
ಹೌದು, ಬೆಂಗಳೂರಿನ ಹೊಸಕೆರೆಹಳ್ಳಿಯ ''ನಂದಿ ಕಾರಿಡಾರ್''ನಲ್ಲಿ ವಾಸ ಮಾಡುವ 84 ವರ್ಷದ ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರಿಗೆ ಹೃದಯಾಘಾತವಾಗಿದೆ ಎನ್ನುವ ಆತಂಕಕಾರಿ ಸುದ್ದಿ ಸದ್ಯ ಹೊರ ಬಿದ್ದಿದೆ. ''TV 9 ಕನ್ನಡ'' ವರದಿಯ ಪ್ರಕಾರ ಈ ಆಘಾತಕಾರಿ ಸುದ್ದಿಯನ್ನು ತಿಳಿದ ತಕ್ಷಣ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರಜನಿಕಾಂತ್ ಚೆನ್ನೈದಿಂದ ಓಡೋಡಿ ಬಂದಿದ್ದಾರೆ. ''ನ್ಯೂಸ್ 18 ಕನ್ನಡ'' ಮತ್ತು ''TV 9 ಕನ್ನಡ'' ವರದಿಯ ಪ್ರಕಾರ ತೀವೃ ಅನಾರೋಗ್ಯಕ್ಕೀಡಾದ ತಮ್ಮ ಸಹೋದರನನ್ನು ಖುದ್ದು ರಜನಿಕಾಂತ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರಜನಿಯ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ರಜನಿಕಾಂತ್ ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳಲ್ಲಿ ಕೂಡ ದುಗುಡ ಮನೆ ಮಾಡಿದೆ. ಆಸ್ಪತ್ರೆಯ ವೈದ್ಯರಿಂದ ಹೆಲ್ತ್ ಬುಲೆಟಿನ್‌ನನ್ನೂ ಕೂಡ ನಿರೀಕ್ಷೆ ಮಾಡಲಾಗುತ್ತಿದೆ.
ರಜನಿಕಾಂತ್ ಅವರಾಗಲಿ.. ಅವರ ಕುಟುಂಬಸ್ಥರಾಗಲಿ.. ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿಯನ್ನು ಕೂಡ ಇನ್ನೂ ಹಂಚಿಕೊಂಡಿಲ್ಲವಾದರು ಹಲವರು ರಜಿನಿಕಾಂತ್ ಅವರ ಅಣ್ಣ ಸತ್ಯನಾರಾಯಣ್ ಗಾಯಕ್ವಾಡ್ ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಜಿನಿಯವರ ಅಣ್ಣ ಸತ್ಯನಾರಾಯಣ್ ಚೇತರಿಸಿಕೊಳ್ಳಲಿ, ಮನೆ ಮಾಡಿರುವ ಈ ಆತಂಕ ದುಗುಡ ಮತ್ತು ದುಮ್ಮಾನ ದೂರವಾಗಲಿ ಎನ್ನುವುದು ನಮ್ಮ ಆಶಯ ಮತ್ತು ಪ್ರಾರ್ಥನೆ ಕೂಡ.
Credit: Filmibeat



Click it and Unblock the Notifications
