Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಶಾಕ್! ಬಂಗಾರದ ಬೆಲೆ 5,400 ರೂ. ಹೆಚ್ಚಳ
ಅಯ್ಯೋ, ನಿನ್ನೆಯಷ್ಟೇ ಇಳಿಕೆ ಕಂಡಿದ್ದ, ಭಾರತದಲ್ಲಿ ಚಿನ್ನದ ಬೆಲೆ (Gold Rate India) ಇಂದು ದಿಢೀರ್ ಏರಿಕೆ ಕಂಡಿದೆ. ಅತ್ತ ಚಿನ್ನ ಇಂದೂ ಇಳಿಕೆ ಕಾಣಬಹುದು, ಸ್ವಲ್ಪವಾದ್ರೂ ಹೂಡಿಕೆ ಮಾಡಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೂ ಕೊನೆಗೂ ನಿರಾಸೆಯಾಗಿದೆ. ಇಂದಿನ ಚಿನ್ನದ ಬೆಲೆ ನೋಡಿದ್ರೆ ಅಯ್ಯಯ್ಯೋ ಎಂಬಂತಾಗಿದೆ. ಪ್ರತೀ ಗ್ರಾಂ ಚಿನ್ನದಲ್ಲಿ ಬರೋಬ್ಬರಿ 500 ಕ್ಕಿಂತಲೂ ಹೆಚ್ಚು ಏರಿಕೆ ಕಂಡಿದ್ದು, 10 ಗ್ರಾಂ ಚಿನ್ನದಲ್ಲಿ ಭಾರೀ ಏರಿಕೆಯಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಬೆಲೆ ಇಂದು ಭಾರೀ ಹೆಚ್ಚಳವಾಗಿದೆ. ಒಂದು ಗ್ರಾಂ ಬೆಲೆಯಲ್ಲಿ ಒಟ್ಟು ₹540 ರೂ. ಹೆಚ್ಚಳ ಕಂಡಿದ್ದು, ಒಂದು ಗ್ರಾಂ ಚಿನ್ನದ ಬೆಲೆ 15,971 ರೂ. ಆಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,27,768 ರೂ. ಆಗಿದ್ದು, ನಿನ್ನೆ 1,23,448 ರೂ. ಇತ್ತು. ನಿನ್ನೆಗಿಂತ ಇಂದು 4,320 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,59,710 ರೂ. ಆಗಿದ್ದು, ನಿನ್ನೆ 1,54,310 ರೂ. ಇತ್ತು. ನಿನ್ನೆಗಿಂತ ಇಂದು 5,400 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹15,97,100 ರೂ. ಆಗಿದ್ದು, ನಿನ್ನೆ 15,43,100 ರೂ. ಇತ್ತು. ದಿಢೀರ್ 54,000 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 14,640 ರೂ. ಆಗಿದ್ದು, ನಿನ್ನೆ 14,145 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹495 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,17,120 ರೂ. ಆಗಿದ್ದು, ನಿನ್ನೆ 1,13,160 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,960 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,46,400 ರೂ. ಆಗಿದ್ದು, ನಿನ್ನೆ 1,41,450 ರೂ. ಇತ್ತು. ಒಟ್ಟು 4,950 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 14,64,000 ರೂ. ಆಗಿದ್ದು, ನಿನ್ನೆ 14,14,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 49,500 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ ಇಂದು 11,978 ರೂ. ಆಗಿದ್ದು, ನಿನ್ನೆ 11,573 ರೂ. ಇತ್ತು. ನಿನ್ನೆಗಿಂತ ಇಂದು ₹405 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹95,824 ರೂ. ಆಗಿದ್ದು, ನಿನ್ನೆ 92,584 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,240 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,19,780 ರೂ. ಆಗಿದ್ದು, ನಿನ್ನೆ 1,15,730 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 4,050 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,97,800 ರೂ. ಆಗಿದ್ದು, ನಿನ್ನೆ 11,57,300 ರೂ. ಇತ್ತು. ಒಟ್ಟು 40,500 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 15,982, 22K ರೂ. 14,650, 18K ರೂ. 12,220
ಮುಂಬೈ: 24K ರೂ. 15,971, 22K ರೂ. 14,640, 18K ರೂ. 11,978
ದೆಹಲಿ: 24K ರೂ. 15,986, 22K ರೂ. 14,655, 18K ರೂ. 11,993
ಕೋಲ್ಕತ್ತಾ: 24K ರೂ. 15,971, 22K ರೂ. 14,640, 18K ರೂ. 11,978
ಬೆಂಗಳೂರು: 24K ರೂ. 15,971, 22K ರೂ. 14,640, 18K ರೂ. 11,978
ಹೈದರಾಬಾದ್: 24K ರೂ. 15,971, 22K ರೂ. 14,640, 18K ರೂ. 11,978
ಕೇರಳ: 24K ರೂ. 15,971, 22K ರೂ. 14,640, 18K ರೂ. 11,978
ಪುಣೆ: 24K ರೂ. 15,971, 22K ರೂ. 14,640, 18K ರೂ. 11,978
ವಡೋದರಾ: 24K ರೂ. 15,976, 22K ರೂ. 14,645, 18K ರೂ. 11,983
ಅಹಮದಾಬಾದ್: 24K ರೂ. 15,976, 22K ರೂ. 14,645, 18K ರೂ. 11,983
ಬೆಳ್ಳಿ ಬೆಲೆ ಎಷ್ಟಿದೆ?
ಅತ್ತ ಬೆಳ್ಳಿ ಕೂಡಾ ಭಾರೀ ಏರಿಕೆ ಕಂಡಿದ್ದು, ಪ್ರತೀ ಗ್ರಾಂ ಬೆಳ್ಳಿಯಲ್ಲಿ 15 ರೂ. ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ₹340 ರೂ. ಆಗಿದ್ದು, ನಿನ್ನೆ ₹325 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹15 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,720 ರೂ. ಆಗಿದ್ದು, ನಿನ್ನೆ ₹2,600 ರೂ. ಇತ್ತು. ನಿನ್ನೆಗಿಂತ ಇಂದು ₹120 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಬೆಳ್ಳಿ ದರ ₹3,400 ರೂ., 100 ಗ್ರಾಂ ಬೆಳ್ಳಿ ಬೆಲೆ ₹34,000 ರೂ., 1000 ಗ್ರಾಂ ಬೆಳ್ಳಿ ದರ ₹3,40,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 23ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ಚಿನ್ನ ಮತ್ತೊಂದು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಅತ್ತ ಬೆಳ್ಳಿ ಮತ್ತು ಪ್ಲಾಟಿನಂ ಕೂಡಾ ಭಾರೀ ಹೆಚ್ಚಳವಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ನಡುವ, ಲೋಹಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.
ಸ್ಪಾಟ್ ಚಿನ್ನದ ದರವೂ 0358 GMT ವೇಳಗೆ ಪ್ರತೀ ಔನ್ಸ್‌ಗೆ 0.3% ಏರಿಕೆ ಕಂಡಿದ್ದು, ಒಟ್ಟು $4,951.91 ಕ್ಕೆ ತಲುಪಿದೆ.
Credit: Goodreturns



Click it and Unblock the Notifications
