Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
BBK12: ಮತ್ತೆ ಶಾಕಿಂಗ್ ಎಲಿಮಿನೇಷನ್; ಕಾಕ್ರೋಚ್ ಸುಧಿ ರೀತಿ ಫೈನಲಿಸ್ಟ್ ಆಗಬೇಕಿದ್ದವರು ಹೊರಕ್ಕೆ
ಬಿಗ್‌ಬಾಸ್ ಕನ್ನಡ ಸೀಸನ್ 12 ಅರ್ಧ ಶತಕ ಪೂರೈಸಿ ನೂರನೇ ದಿನದತ್ತ ಸಾಗಿದೆ. ದಿನದಿಂದ ದಿನಕ್ಕೆ ಶೋ ಮತ್ತಷ್ಟು ಇಂಟ್ರೆಸ್ಟಿಂಗ್ ಅನ್ನಿಸ್ತಿದೆ. ಈ ವಾರ ಮಾಜಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಬಂದು ಸಖತ್ ಮಜಾ ಕೊಟ್ಟಿದ್ದಾರೆ. ಗಿಲ್ಲಿ ಅವರನ್ನು ಕೆಣಕಿದ್ದು ಅವರೆಲ್ಲಾ ತಿರುಗಿ ಬಿದ್ದಿದ್ದು ಗೊತ್ತೇಯಿದೆ. ಯಾರದ್ದು ಸರಿ ಯಾರದ್ದು ತಪ್ಪು ಎನ್ನುವುದು ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆ ನಡೆದಿದೆ.
ವೀಕೆಂಡ್ ಅಂದಾಕ್ಷಣ ನಾಮಿನೇಟ್ ಆಗಿರುವವರ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿರುತ್ತದೆ. ಈ ವಾರ ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಕುತೂಹಲ ಮೂಡುತ್ತದೆ. ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ಈ ವಾರ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಒಬ್ಬರು ಹೊರ ಬಂದಿದ್ದಾರೆ.

ಈಗಾಗಲೇ 'ಸೂಪರ್ ಸಂಡೇ ವಿತ್ ಸುದೀಪ' ಶೋ ಚಿತ್ರೀಕರಣ ಮುಗಿದಿದ್ದು ಒಬ್ಬರು ಎಲಿಮಿನೇಟ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಫಿನಾಲೆವರೆಗೂ ಉಳಿದುಕೊಳ್ಳುತ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಹೊರಬಂದಿದ್ದಾರೆ ಎನ್ನಲಾಗ್ತಿದೆ. ಬಿಗ್‌ಬಾಸ್ ಇತಿಹಾಸದಲ್ಲಿ ಇಂತಹ ಶಾಕಿಂಗ್ ಎಲಿಮಿನೇಷನ್ ಸಾಕಷ್ಟು ಬಾರಿ ನಡೆದಿದೆ. ಬಿಗ್‌ಬಾಸ್ ಸೀಸನ್ 12ರಲ್ಲಿ ಕೂಡ ಕಾಕ್ರೋಚ್ ಸುಧಿ ಬಹಳ ಬೇಗ ಔಟ್ ಆಗಿದ್ದರು.
49 ದಿನಗಳ ಕಾಲ ಸುಧಿ ಮನೆ ಒಳಗೆ ಇದ್ದರು. ಆರಂಭದಿಂದಲೂ ತಮ್ಮ ಡೈಲಾಗ್‌ಗಳ ಮೂಲಕ ಪ್ರಬಲ ಸ್ಪರ್ಧಿ ಎನ್ನುವಂತೆ ಆಡಿದ್ದರು. ಕೆಲ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರಿಂದ ಅಭಿಮಾನಗಳ ಬೆಂಬಲ ಕೂಡ ಇತ್ತು. ಹಾಗಾಗಿ ಅವರು ಫಿನಾಲೆವರೆಗೂ ಉಳಿದುಕೊಳ್ಳುತ್ತಾರೆ ಎಂದೇ ಜನ ಭಾವಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಅಚ್ಚರಿ ಅಂದರೆ ಈ ವಾರ ಘಟಾನುಘಟಿ ಸ್ಪರ್ಧಿಗಳೇ ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದಾರೆ.
ಬಿಗ್‌ಬಾಸ್ ಶೋ ಸಾಕಷ್ಟು ಅಚ್ಚರಿಗಳನ್ನು ಹೊತ್ತು ಬರುತ್ತದೆ. ಇಂತಹ ಶಾಕಿಂಗ್ ಎಲಿಮಿನೇಷನ್‌ಗಳು ಹೊಸದೇನು ಅಲ್ಲ. ಜನರು, ಸ್ಪರ್ಧಿಗಳು ಊಹಿಸಿದಂತೆ ಇಲ್ಲಿ ಏನು ನಡೆಯುವುದಿಲ್ಲ. ಜನರಿಗೆ ಯಾರು ಚೆನ್ನಾಗಿ ಆಡ್ತಿಲ್ಲ, ಯಾರು ವೀಕ್ ಅನ್ನಿಸುತ್ತಾರೆ ಅವರು ಸಹಜವಾಗಿಯೇ ಹೊರ ಬರುತ್ತಾರೆ. ಆದರೆ ಬಿಗ್‌ಬಾಸ್ ವೋಟಿಂಗ್‌ನಲ್ಲಿ ಬೇರೆಯದ್ದೇ ಲೆಕ್ಕ ಸಿಗುತ್ತದೆ. ಸ್ಪರ್ಧಿಗಳನ್ನು ಮನೆ ಒಳಗೆ ಉಳಿಸಲು ವೋಟ್ ಮಾಡುವ ಜನರಿಗೆ ನಾನಾ ಕಾರಣಗಳಿರುತ್ತವೆ. ಎಲ್ಲವೂ ಜನರ ಕೈಯಲ್ಲೇ ಇರುತ್ತದೆ.
ಮೇಲ್ನೋಟಕ್ಕೆ ಸ್ಟ್ರಾಂಗ್ ಎನಿಸಿಕೊಂಡವರು ಜನರ ಗಮನ ಸೆಳೆಯುವಲ್ಲಿ ವಿಫಲವಾಗಬಹುದು. ಕೆಲವೊಮ್ಮೆ ವೀಕ್ ಎಂದು ಕಾಣಿಸಿಕೊಳ್ಳುವವರಿಗೆ ಅಭಿಮಾನಿಗಳ ಬೆಂಬಲ ಇರುತ್ತದೆ. ಅಂತಹವರು ಬಹಳ ದಿನ ಮನೆಯೊಳಗೆ ಉಳಿದುಕೊಂಡು ಅಚ್ಚರಿ ಮೂಡಿಸುತ್ತಾರೆ. ಆದರೆ ಈ ವಾರ ಬಿಗ್‌ಬಾಸ್ ಮನೆ ಎಲಿಮಿನೇಷನ್ ಕಾಕ್ರೋಚ್ ಸುಧಿಗಿಂತಲೂ ಶಾಕಿಂಗ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಶೀಘ್ರದಲ್ಲೇ ಇದ್ದಕ್ಕೆಲ್ಲಾ ಉತ್ತರ ಸಿಗಲಿದೆ.
ಶನಿವಾರ ಎಪಿಸೋಡ್ ಜನರ ಮನಗೆದ್ದಿತ್ತು. ಬಿಗ್‌ಬಾಸ್ ಪ್ಯಾಲೇಸ್ ಟಾಸ್ಕ್‌ನಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎನ್ನುವ ಚಿಂತನ ಮಂತನ ನಡೆದಿದೆ. ಮನೆಗೆ ಬಂದ ಅತಿಥಿಗಳ ಬಗ್ಗೆ ತಮಾಷೆ ಮಾಡಿ ಗಿಲ್ಲಿ ತಪ್ಪು ಮಾಡಿದ್ದು ಬಳಿಕ ಅದರಿಂದ ಏನೆಲ್ಲಾ ಆಯಿತು ಎಂದು ಸುದೀಪ್ ಚರ್ಚಿಸಿದರು. ಅತಿಥಿಗಳ ಅತಿರೇಕದ ಬಗ್ಗೆ ಕೂಡ ಹೇಳಿ ಕಿವಿ ಹಿಂಡಿದ್ದಾರೆ. ನಾಲಿಗೆಯಿಂದಲೇ ನೀವು ಹಾಳಾಗಬಾರದು ಎಂದು ಗಿಲ್ಲಿಗೆ ಸುದೀಪ್ ಸಲಹೆ ನೀಡಿದ್ದಾರೆ.
ರಜತ್, ಚೈತ್ರಾ, ತ್ರಿವಿಕ್ರಮ್, ಮಂಜು ಹಾಗೂ ಮೋಕ್ಷಿತಾ ಅತಿಥಿಗಳಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಅವರಲ್ಲಿ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಹೊರಬಂದಿದ್ದಾರೆ. ರಜತ್ ಹಾಗೂ ಚೈತ್ರಾ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಯೊಳಗೆ ಉಳಿದುಕೊಂಡಿದ್ದಾರೆ. ಮುಂದೆ ರಜತ್ ಹಾಗೂ ಗಿಲ್ಲಿ ಫೈಟ್ ಹೇಗಿರುತ್ತೆ ಕಾದು ನೋಡಬೇಕಿದೆ.
Credit: Filmibeat



Click it and Unblock the Notifications

