Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Best Recharge: ಒಂದು ರೀಚಾರ್ಜ್, ವರ್ಷವಿಡೀ ಲಾಭ! ಏರ್‌ಟೆಲ್ ಗ್ರಾಹಕರಿಗೆ ಬಂಪರ್
ಭಾರತದಲ್ಲಿ (India) ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿಯೆಂದರೆ ಅದು ಜಿಯೋ. ಎರಡನೇ ಸ್ಥಾನದಲ್ಲಿ ಏರ್‌ಟೆಲ್ (Jio-Airtel) ಇದೆ. ದೇಶದಲ್ಲಿ 380 ಮಿಲಿಯನ್‌ಗಿಂತಲೂ (38 ಕೋಟಿ) ಹೆಚ್ಚು ಗ್ರಾಹಕರನ್ನು ಹೊಂದಿರುವ ಏರ್‌ಟೆಲ್, ಮತ್ತಷ್ಟು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಆದರೆ ಇದೀಗ ತನ್ನ ಗ್ರಾಹಕರಿಗಾಗಿ ಮತ್ತೊಂದು ಆಫರ್ ಬಿಡುಗಡೆ ಮಾಡಿದೆ ನೋಡಿ. ಈ ಯೋಜನೆ ಮೂಲಕ ಗ್ರಾಹಕರು ವರ್ಷವಿಡೀ ಆರಾಮದಾಯಕವಾಗಿ ಪ್ರಯೋಜನಗಳನ್ನು ಪಡೆಯಬಹುದು.

ಟ್ರಾಯ್ ನಿರ್ದೇಶನಗಳಂತೆ, ಈ ವರ್ಷದ ಆರಂಭದಲ್ಲಿ ಏರ್‌ಟೆಲ್ ಎರಡು ವಾಯ್ಸ್-ಓನ್ಲಿ ಯೋಜನೆಗಳನ್ನು ಪರಿಚಯಿಸಿತು. ಇವು 84 ಮತ್ತು 365 ದಿನಗಳ ವ್ಯಾಲಿಡಿಯ ಜೊತೆಗೆ ಅನಿಯಮಿತ ಕರೆ ಹಾಗೂ ಉಚಿತ ಎಸ್‌ಎಂಎಸ್ ಸೌಲಭ್ಯ, ಡೇಟಾ ಸೌಲಭ್ಯವನ್ನು ನೀಡುತ್ತದೆ.
ಈ ಯೋಜನೆಗಳು, ಯಾರೆಲ್ಲಾ ಎರಡು ಸಿಮ್ ಹೊಂದಿದ್ದಾರೋ ಅಥವಾ ಕೇವಲ ಕರೆ ಮಾಡಲು ಮಾತ್ರ ಸಿಮ್ ಹೊಂದಿದ್ದಾರೋ ಅವರಿಗೆ ಬೆಸ್ಟ್ ಆಗಿದೆ. ಪ್ರತೀ ತಿಂಗಳು ರೀಚಾರ್ಜ್ ಮಾಡುವವರು, ಕೇವಲ ಕರೆಗಾಗಿ 365 ದಿನಗಳ ವ್ಯಾಲಿಡಿಟಿಯೊಂದಿಗೆ ಈ ಯೋನೆಯನ್ನು ಆಯ್ಕೆ ಮಾಡಬಹುದು..
ಏರ್‌ಟೆಲ್‌ನ 1,849 ರೂ. ಪ್ರಿಪೇಯ್ಡ್ ಯೋಜನೆ:
ಏರ್‌ಟೆಲ್‌ನ 1,849 ರೂ. ಪ್ರಿಪೇಯ್ಡ್ ಯೋಜನೆಯು 365 ದಿನಗಳ ವ್ಯಾಲಿಡಿಟಿ, ಭಾರತದಾದ್ಯಂತ ಅನಿಯಮಿತ ಕರೆ (ರಾಷ್ಟ್ರೀಯ ರೋಮಿಂಗ್ ಸಹಿತ), 3,600 ಉಚಿತ ಎಸ್‌ಎಂಎಸ್ ಮತ್ತು ಉಚಿತ ಹಲೋ ಟ್ಯೂನ್ಸ್ ನೀಡುತ್ತದೆ.
ಈ ಯೋಜನೆ ಕರೆ ಹಾಗೂ ಎಸ್‌ಎಂಎಸ್ ಪ್ರಯೋಜನ ಪಡೆಯುವವರಿಗೆ ಸಹಕಾರಿಯಾಗಲಿದೆ. ಇದರಲ್ಲಿ ಡೇಟಾ ನೀಡಲಾಗುವುದಿಲ್ಲ. ಒಂದು ವೇಳೆ ಬೇಕೆಂದರೆ ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡಿಕೊಳ್ಳಬೇಕು.
ಏರ್‌ಟೆಲ್‌ನ 2,249 ರೂ. ಪ್ರಿಪೇಯ್ಡ್ ಯೋಜನೆ:
ಏರ್‌ಟೆಲ್‌ನ 2,249 ರೂ. ಪ್ರಿಪೇಯ್ಡ್ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು ಅನಿಯಮಿತ ಕರೆ (ರಾಷ್ಟ್ರೀಯ ರೋಮಿಂಗ್ ಸಹಿತ), 30GB ಹೈ-ಸ್ಪೀಡ್ ಡೇಟಾ, 3,600 ಉಚಿತ ಎಸ್‌ಎಂಎಸ್ ಹಾಗೂ ಉಚಿತ ಹಲೋ ಟ್ಯೂನ್ಸ್ ಸೌಲಭ್ಯ ನೀಡಲಿದೆ.
ಏರ್‌ಟೆಲ್‌ನ 199 ರೂ. ರೀಚಾರ್ಜ್ ಪ್ಲಾನ್:
ಏರ್‌ಟೆಲ್ ಪರಿಚಯಿಸಿರುವ 199 ರೂ. ರೀಚಾರ್ಜ್ ಪ್ಲಾನ್ ಕಮ್ಮಿ ಡೇಟಾ ಬಳಕೆದಾರರಿಗೆ ಉಪಯುಕ್ತವಾಗಲಿದೆ. ಇದು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಜೊತೆಗೆ ಅನಿಯಮಿತ ಕರೆ, ಒಟ್ಟು 2 ಜಿಬಿ ಡೇಟಾ ಸೌಲಭ್ಯ, 300 ಎಸ್‌ಎಮ್‌ಎಸ್ ಸೌಲಭ್ಯ ನೀಡಲಾಗುತ್ತದೆ. ಇನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಗ್ರಾಹಕರು ಉಚಿತ ಹೆಲೋ ಟ್ಯೂನ್ಸ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.
ಏರ್‌ಟೆಲ್‌ನ 838 ರೂ. ರೀಚಾರ್ಜ್ ಪ್ಲಾನ್:
ಏರ್‌ಟೆಲ್‌ನ ಬೆಸ್ಟ್ ರೀಚಾರ್ಜ್ ಪ್ಲಾನ್‌ಗಳಲ್ಲಿ 838 ರೂ. ರೀಚಾರ್ಜ್ ಕೂಡಾ ಒಂದು. ಇದು ಅನ್ಲಿಮಿಟೆಡ್ ಕರೆ ಸೌಲಭ್ಯ ನೀವುದಲ್ಲದೇ, ದಿನನಿತ್ಯ 3ಜಿಬಿ ಡೇಟಾ ಸೌಲಭ್ಯವನ್ನು ಸಹ ನೀಡುತ್ತದೆ. 56 ದಿನಗಳ ಮಾನ್ಯತೆಯೊಂದಿಗೆ ಇದು ಬರುತ್ತದೆ. ಜೊತೆಗೆ ಓಟಿಟಿ ಚಂದಾದಾರಿಕೆ ಸೌಲಭ್ಯವನ್ನು ಸಹ ಇದು ನೀಡಲಿದೆ. 56 ದಿನ ಉಚಿತವಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆಯಬಹುದು.
Credit: Goodreturns



Click it and Unblock the Notifications
