Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 8 ರಾಶಿಯವರು ನೋವನ್ನು ಮನಸ್ಸಿನಲ್ಲಿಟ್ಟುಕೊಂಡು ಒಳಗೊಳಗೆ ಕೊರಗುತ್ತಾರೆ!
ಪ್ರತಿಯೊಬ್ಬ ಮನುಷ್ಯನೂ ಕೂಡ ಒಂದಲ್ಲ ಒಂದು ರೀತಿಯ ನೋವನ್ನು ಅನುಭವಿಸಿರುತ್ತಾನೆ. ಕಷ್ಟ ಬಂದಾಗ ಅಥವಾ ನಾವು ತುಂಬಾನೇ ನೋವಿನಲ್ಲಿ ಇದ್ದಾಗ ಆ ನೋವನ್ನು ಯಾರ ಬಳಿಯಾದರೂ ಹೇಳಿಕೊಂಡರೆ ಆ ನೋವು ಕಡಿಮೆಯಾಗುತ್ತೆ. ಮನಸ್ಸಿಗೆ ಕೊಂಚ ಸಮಾಧಾನ ಸಿಕ್ಕಂತಾಗುತ್ತದೆ.
ಆದರೆ ಕೆಲ ರಾಶಿಯವರು ತಮ್ಮ ಮನಸ್ಸಿನ ನೋವನ್ನು ಯಾರೊಂದಿಗೂ ಹೇಳಿಕೊಳ್ಳೋದಕ್ಕೂ ಇಷ್ಟ ಪಡೋದಿಲ್ಲ. ಆ ನೋವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಒಳಗೊಳಗೆ ಕೊರಗುತ್ತಾರೆ. ಅಷ್ಟಕ್ಕು ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ದೌರ್ಬಲ್ಯ ಅಥವಾ ನೋವಿನ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ಎದೆಯೊಳಗೆ ಎಷ್ಟೇ ನೋವಿದ್ದರೂ ಒಬ್ಬರೇ ಅನುಭವಿಸುತ್ತಾರೆ ವಿನಹ ಬೇರೆಯವರ ಬಳಿ ಮಾತ್ರ ಅದನ್ನು ಹೇಳಿಕೊಳ್ಳೋದಿಲ್ಲ. ಹಾಗೂ ಈ ರಾಶಿಯವರು ತುಂಬಾನೇ ಭಾವನಾತ್ಮಕ ಜೀವಿಗಳು.
ಮಕರ ರಾಶಿ
ಮಕರ ರಾಶಿಯವರು ಕೂಡ ತಮ್ಮ ನೋವನ್ನು ಯಾರೊಂದಿಗೂ ಮುಕ್ತವಾಗಿ ಹಂಚಿಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ಇವರು ನೋಡೋದಕ್ಕೆ ಸಂತೋಷವಾಗಿರೋದಕ್ಕೆ ಕಂಡರೂ ಕೂಡ ಇವರ ಮನದಾಳದಲ್ಲಿ ನೋವು ತುಂಬಿರುತ್ತದೆ. ಈ ರಾಶಿಯವರ ಒಳ ಮನಸ್ಸನ್ನು ಅರ್ಥ ಮಾಡಿಕೊಳ್ಳೋದಕ್ಕೆ ಯಾರಿಗೂ ಸಾಧ್ಯವಾಗೋದಿಲ್ವಂತೆ.
ಮೀನ ರಾಶಿ
ಮೀನ ರಾಶಿಯವರು ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದಾರೆ. ಮತ್ತು ಇವರು ಸಹಾನುಭೂತಿ ಹೊಂದಿರುವ ವ್ಯಕ್ತಿಗಳು. ಈ ರಾಶಿಯವರು ಎದೆಯಲ್ಲಿ ಕಲ್ಲಿಟ್ಟುಕೊಂಡಿದ್ದರೂ ಕೂಡ ಅದನ್ನು ಮರೆ ಮಾಚಿ ಸಂತೋಷವಾಗಿರುವಂತೆ ನಟಿಸುತ್ತಾರೆ. ಹೀಗಾಗಿ ಇವರಿಗೆ ಎಷ್ಟೇ ನೋವಿದ್ದರೂ ಅದು ಖಾಸಗಿಯಾಗಿರುತ್ತೆ ಹೊರತು ಅದು ಹೊರಗಿನ ಜಗತ್ತಿಗೆ ಗೊತ್ತಾಗೋದಿಲ್ಲ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಒಬ್ಬರ ಮೇಲೆ ಸಹಾನುಭೂತಿಯನ್ನು ಹೊಂದಿರುತ್ತಾರೆ. ಮತ್ತು ಒಬ್ಬರ ಮೇಲೆ ಕಾಳಜಿ ಮಾಡುತ್ತಾರೆ ಮತ್ತು ಅವರನ್ನು ಪೋಷಿಸುತ್ತಾರೆ. ಇತರರ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಅವರು ತಮ್ಮ ನೋವನ್ನು ಮರೆಮಾಚುತ್ತಾರೆ. ಈ ರಾಶಿಯವರು ತಮ್ಮ ಪ್ರೀತಿಪಾತ್ರರನ್ನು ಚಿಂತೆ ಅಥವಾ ಒತ್ತಡದಿಂದ ರಕ್ಷಿಸಲು ಧೈರ್ಯಶಾಲಿಗಳಾಗಿರುವಂತೆ ಮುಖವಾಡ ಹಾಕುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಸಾಮಾನ್ಯವಾಗಿ ಪ್ರಾಯೋಗಿಕ ಮತ್ತು ವಿಶ್ಲೇಷಣಾತ್ಮಕ ವ್ಯಕ್ತಿಗಳಾಗಿದ್ದು ಇವರು ಜವಾಬ್ದಾರಿಗಾಗಿ ತಮ್ಮ ನೋವನ್ನು ಮರೆಮಾಚುತ್ತಾರೆ. ಇವರು ತಮ್ಮ ಭಾವನಾತ್ಮಕ ಮನಸ್ಥಿತಿಯಿಂದ ದೂರ ಇರೋದಕ್ಕೆ ನಿರಂತರ ಹೋರಾಟ ಮಾಡುತ್ತಾರೆ ಆದರೆ ಅದು ಸಾಧ್ಯವಾಗೋದಿಲ್ಲ. ಹೀಗಾಗಿ ಇವರ ನೋವು ಮನಸ್ಸಿನಲ್ಲೇ ಉಳಿದು ಬಿಡುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ನೋವಿನಲ್ಲಿ ಇದ್ದಾರೆ ಎಂದು ಗುರುತಿಸುವುದೇ ನಿಮಗೆ ಕಷ್ಟ ಆಗಬಹುದು ಆ ರೀತಿ ನಟಿಸುತ್ತಾರೆ. ಈ ರಾಶಿಯವರು ತಮ್ಮ ನೋವನ್ನು ಮರೆಮಾಚಲು ಬೇರೆ ದಾರಿಯನ್ನು ಹುಡುಕುತ್ತಾರೆ. ಎಷ್ಟೇ ನೋವಿದ್ದರೂ ತಮ್ಮ ಮನಸ್ಸನ್ನು ಇವರು ಬೇರೆ ಕಡೆಗೆ ಕೇಂದ್ರೀಕರಿಸಿ ಸಂತೋಷವಾಗಿರಲು ಯತ್ನಿಸುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ಸ್ಥಿರತೆ ಮತ್ತು ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದಾರೆ. ಇವರ ಬದುಕಿನಲ್ಲಿ ನಿರಂತರ ಹೋರಾಟ ಇದ್ದರೂ ಕೂಡ ಅದನ್ನು ಒಬ್ಬರೇ ಎದುರಿಸುತ್ತಾರೆ. ಆದರೆ ಯಾರ ಬಳಿಯೂ ಈ ಬಗ್ಗೆ ಹೇಳಿಕೊಳ್ಳುವವರಲ್ಲ. ತಮ್ಮ ನೋವನ್ನು ಇತರರ ಬಳಿ ಹಂಚಿಕೊಂಡು ಅವರಿಗೆ ನೋವು ನೀಡೋದಕ್ಕೆ ಇವರಿಗೆ ಇಷ್ಟ ಆಗೋದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯವರು ಸುಲಭವಾಗಿ ಯಾರೊಂದಿಗಾದರೂ ಹೊಂದಿಕೊಳ್ಳುತ್ತಾರೆ. ಇವರು ನಗು ನಗುತ್ತಿರುವ ಸಂತೋಷದ ಮುಖವನ್ನು ಮಾತ್ರ ನೀವು ನೋಡಿರುತ್ತೀರಿ. ಆದರೆ ಇವರೊಳಗೂ ದುಃಖ ಇದೆ ಅನ್ನೋದು ನಿಮಗೆ ಗೊತ್ತಾಗೋದೇ ಇಲ್ಲ. ಈ ರಾಶಿಯವರು ಕೂಡ ಭಾವನಾತ್ಮಕ ಜೀವಿಗಳು. ಎಷ್ಟೇ ನೋವಿದ್ದರೂ ಮನಸ್ಸಿನಲ್ಲೇ ಇಟ್ಟು ಕೊರಗುತ್ತಾರೆ.



Click it and Unblock the Notifications