Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರು ಹೃದಯದ ಮಾತನ್ನೇ ಕೇಳುತ್ತಾರೆ!
ಮನುಷ್ಯರೂ ಅಂತ ಬಂದಾಗ ಅವರು ಪ್ರತಿಯೊಂದು ವಿಚಾರಕ್ಕೂ ಆಲೋಚಿಸುತ್ತಾರೆ. ಅದ್ರಲ್ಲಿ ಕೆಲವರು ಆಳವಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಂಡರೆ, ಇನ್ನೂ ಕೆಲವರು ಹೆಚ್ಚು ಆಲೋಚಿಸಿದೆ ತಕ್ಷಣ ನಿರ್ಧಾರ ಕೈಗೊಳ್ಳುತ್ತಾರೆ.
ಆದ್ರೆ ಕೆಲವರು ಮಾತ್ರ ತಮ್ಮ ಹೃದಯದ ಮಾತನ್ನು ಕೇಳುತ್ತಾರೆ. ಮನಸ್ಸು ಏನೇ ಹೇಳಿದರೂ ಅದನ್ನು ಕೇಳದೆ ತಮ್ಮ ಹೃದಯ ಹೇಳಿದ ರೀತಿಯೇ ಕೇಳುತ್ತಾರೆ. ಅಷ್ಟಕ್ಕು ಮನಸ್ಸಿನ ಬದಲಾಗಿ ಹೃದಯದ ಮಾತನ್ನು ಕೇಳುವ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಧೈರ್ಯವಂತರು ಹಾಗೂ ಇವರು ನಿರ್ಣಯಕ ಗುಣವನ್ನು ಹೊಂದಿರುತ್ತಾರೆ. ಮೇಷ ರಾಶಿಯವರು ಅತಿಯಾಗಿ ಯೋಚಿಸುತ್ತಾ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಬದಲಾಗಿ ತಕ್ಷಣಕ್ಕೆ ಒಂದು ನಿರ್ಧಾರಕ್ಕೆ ಬರುತ್ತಾರೆ. ಯಾವುದೇ ದಾರಿಯಲ್ಲಿ ಮುನ್ನಡೆಯಬೇಕಾದರೂ ಇವರು ಹೃದಯದ ಮಾತನ್ನು ಕೇಳುತ್ತಾರೆ. ಇವರು ದೈರ್ಯದಿಂದ ತೆಗೆದುಕೊಂಡ ನಿರ್ಧಾರವು ಇವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಯಾವುದೇ ವಿಚಾರ ಇದ್ರೂ ಕೂಡ ತಮ್ಮ ಹೃದಯದ ಮಾತಿನಂತೆ ನಡೆಯುತ್ತಾರೆ. ಇವರು ಸೌಮ್ಯ ಸ್ವಭಾವದವರು, ಸಹಾನುಭೂತಿಯನ್ನು ಹೊಂದಿರುತ್ತಾರೆ ಹಾಗೂ ತಮ್ಮ ಭಾವನೆಗಳ ಜೊತೆಗೆ ಆಳವಾದ ಸಂಪರ್ಕ ಹೊಂದಿರುತ್ತಾರೆ. ತಮ್ಮ ಹೃದಯದ ದಿಕ್ಸೂಚಿಯನ್ನು ಅನುಸರಿಸುತ್ತಾರೆ ಇವರು. ಈ ರಾಶಿಯವರು ಯಾವಾಗಲೂ ತಮ್ಮ ಪ್ರೀತಿಪಾತ್ರರ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ವರ್ಚಸ್ಸನ್ನು ಹೊಂದಿರುತ್ತಾರೆ. ಈ ರಾಶಿಯವರು ಕೂಡ ಯಾವಾಗಲೂ ಮನಸ್ಸಿನ ಮಾತನ್ನೇ ಕೇಳುತ್ತಾರೆ. ಈ ರಾಶಿಯವರು ಉತ್ಸಾಹಭರಿತ ಜೀವಿಗಳು ತಮ್ಮ ಬಗ್ಗೆ ಅಚಲವಾದ ನಂಬಿಕೆಯನ್ನು ಹೊಂದಿದ್ದು ತಮ್ಮ ಕನಸುಗಳನ್ನು ನಿರ್ಭಯವಾಗಿ ಬೆನ್ನಟ್ಟುತ್ತಾರೆ. ಇವರು ಉತ್ಸಾಹ ಮತ್ತು ಸ್ವಯಂ-ಭರವಸೆಯಿಂದ ಉತ್ತೇಜಿಸಲ್ಪಟ್ಟಿರುತ್ತಾರೆ. ಮನಸ್ಸಿನ ಮಾತನ್ನು ಬದಿಗಿಟ್ಟು ಹೃದಯದ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ಶುಕ್ರನಿಂದ ಆಳಲ್ಪಡುತ್ತಾರೆ. ಹೀಗಾಗಿ ಇವರು ಜೀವನದ ಪ್ರತಿಯೊಂದು ಹಂತದಲ್ಲೂ ಸೌಂದರ್ಯ ಮತ್ತು ಪರಿಪೂರ್ಣತೆಯನ್ನು ಬಯಸುತ್ತಾರೆ. ಯಾವುದೇ ವಿಚಾರದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವಾಗ ಒಳಿತು ಹಾಗೂ ಕೆಡುಕುಗಳ ಬಗ್ಗೆ ಆಲೋಚಿಸುತ್ತಾರೆ. ಹಾಗೂ ಹೃದಯ ಏನು ಹೇಳುತ್ತೋ ಅದನ್ನೇ ಕೇಳುತ್ತಾರೆ. ಇವರು ತಮ್ಮ ಜೀವನವನ್ನು ಉತ್ಕೃಷ್ಟಗೊಳಿಸುವ ಸಂಬಂಧಗಳಿಗಾಗಿ ಶ್ರಮಿಸುತ್ತಾರೆ. ಈ ರಾಶಿಯವರು ಎಲ್ಲಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಂಪರ್ಕವನ್ನು ಗೌರವಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಕನಸುಗಾರರು. ಇವರು ತಮ್ಮ ಅಂತಃಪ್ರಜ್ಞೆ ಮತ್ತು ಕಲ್ಪನೆಯನ್ನು ಸ್ಪರ್ಶಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರು ಸಹಾನುಭೂತಿಯನ್ನು ಹೊಂದಿದ್ದಾರೆ. ಮತ್ತು ಯಾವಾಗಲೂ ತಮ್ಮ ಹೃದಯದ ಮಾತನ್ನು ಮಾತ್ರ ಕೇಳುತ್ತಾರೆ. ಈ ರಾಶಿಯವರು ಭಾವನಾತ್ಮಕ ಜೀವಿಗಳೂ ಹೌದು. ಎಷ್ಟೇ ದೊಡ್ಡ ನಿರ್ಧಾರ ಆದರೂ ಕೂಡ ಮನಸ್ಸಿನ ಮಾತು ಕೇಳುವವರಲ್ಲ ಇವರು. ಹೃದಯ ಏನು ಹೇಳುತ್ತೋ ಅದನ್ನೇ ಪಾಲಿಸುತ್ತಾರೆ.



Click it and Unblock the Notifications