Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಂಖ್ಯಾಶಾಸ್ತ್ರ (ಡಿಸೆಂಬರ್ 24-30): ವರ್ಷದ ಕೊನೆಯ ವಾರ ಈ 4 ಸಂಖ್ಯೆಯವರಿಗೆ ಅದ್ಭುತ ವಾಗಿರಲಿದೆ
ಸಂಖ್ಯಾಶಾಸ್ತ್ರವು ನಮ್ಮ ಜನ್ಮ ದಿನಾಂಕದ ಪ್ರಕಾರ ನಮ್ಮ ಭವಿಷ್ಯ ಹೇಗಿರಲಿದೆ ಎಂದು ಹೇಳುತ್ತದೆ. ಉದಾಹರಣೆಗೆ ನಾವು ಯಾವುದೇ ತಿಂಗಳಿನ 25ರಂದು ಜನಿಸಿದರೆ ನಮ್ಮ ಸಂಖ್ಯೆ 7 (2+5=7 ) ಆಗಿದೆ. ಈ ವಾರದ ಸಂಖ್ಯಾಶಾಸ್ತ್ರ ಪ್ರಕಾರ ಈ ರಾಶಿಯವರಗೆ ಅನುಕೂಲಕರವಾಗಿದೆ
ಸಂಖ್ಯೆ 3:
3, 12, 21, 30ನೇ ದಿನಾಂಕದಂದು ಜನಿಸಿದ್ದರೆ ನಿಮ್ಮ ಸಂಖ್ಯೆ 3. ಈ ವಾರ ನಿಮಗೆ ತುಂಬಾ ಅನುಕೂಲಕರವಾಗಿದೆ. ಈ ವಾರ ನೀವು ಪ್ರಯಾಣ ಮಾಡುವ ಸಾಧ್ಯತೆ ಇದೆ. ವೈವಾಹಿಕ ಜೀವನ ರೊಮ್ಯಾಂಟಿಕ್ ಆಗಿರಲಿದೆ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ನೀವು ಹೆಚ್ಚೇನು ಶ್ರಮ ಹಾಕದೆ ಒಳ್ಳೆಯ ಲಾಭ ಕೂಡ ಸಿಗಲಿದೆ.
ನೀವು ಈ ವಾರ ಓಂ ಗುರುವೇ ನಮಃ ಮಂತ್ರವನ್ನು 21 ಬಾರಿ ಪಠಿಸಿ.

ಸಂಖ್ಯೆ 5
ನೀವು ಯಾವುದೇ ತಿಂಗಳಿನ 5ನೇ, 14ನೇ, 23ನೇ ತಾರೀಕಿನಲ್ಲಿ ಜನಿಸಿದ್ದರೆ ನಿಮ್ಮ ಸಂಖ್ಯೆ 5. ನೀವು ವಿಭಿನ್ನ ಪರಿಸ್ಥಿತಿಯಲ್ಲಿ ಬುದ್ಧಿ ಉಪಯೋಗಿಸಿ ಅದರಿಂದ ಲಾಭ ಪಡೆಯುತ್ತೀರಿ. ಪ್ರೇಮಿಗಳ ಬಾಂಧವ್ಯ ಗಟ್ಟಿಯಾಗಿರಲಿದೆ. ವಿವಾಹಿತರು ಸಂಗಾತಿಯೊಂದಿಗೆ ತುಂಬಾನೇ ಚೆನ್ನಾಗಿರುತ್ತೀರಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕವಾಗಿದೆ.
ವೃತ್ತಿ ಜೀವನದಲ್ಲಿ ನೀವು ನಿಮ್ಮಲ್ಲಿರುವ ಕೌಶಲ್ಯದಿಂದ ಗುರುತಿಸಿಕೊಳ್ಳುತ್ತೀರಿ, ಉದ್ಯೋಗದಲ್ಲಿ ಹೊಸ ಅವಕಾಶ ದೊರೆಯಲಿದೆ. ಇಡೀ ವಾರ ತುಂಬಾನೇ ಶಕ್ತಿಯುತವಾಗಿರುತ್ತೀರಿ.
ಪ್ರತಿದಿನ ಓಮ ನಮೋ ನಾರಾಯಣ ಮಂತ್ರವನ್ನು 41 ಬಾರಿ ಪಠಿಸಿ.
ಸಂಖ್ಯೆ 6
ಯಾವುದೇ ತಿಂಗಳಿನ 6, 15, 24ನೇ ತಾರೀಕಿನಲ್ಲಿ ಜನಿಸಿದವರ ಜನ್ಮಸಂಖ್ಯೆ 6. ನೀವು ನಿಮಗೆ ನೀಡಿದ ಕೆಲಸವನ್ನು ತುಂಬಾನೇ ಚೆನ್ನಾಗಿ ಪೂರ್ಣಗೊಳಿಸುತ್ತೀರಿ. ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ತುಂಬಾನೇ ಅನುಕೂಲಕರವಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಕೂಡ ತುಂಬಾ ಚೆನ್ನಾಗಿರಲಿದೆ. ' ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತೀರಿ.
ನೀವು ಪ್ರತಿದಿನ ಓಂ ಭಾರ್ಗವ್ಯ ನಮಃ ಎಂದು 33 ಬಾರಿ ಪಠಿಸಿದರೆ ಒಳ್ಳೆಯದು.
ಸಂಖ್ಯೆ 9
ನೀವು ಯಾವುದೇ ತಿಂಗಳಿನ 9, 27, 18 ತಾರೀಕಿನಂದು ಜನಿಸಿದ್ದರೆ ನಿಮ್ಮ ಜನ್ಮ ಸಂಖ್ಯೆ 9. ನೀವು ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿರುತ್ತದೆ, ನೀವು ವೃತ್ತಿ ಬದುಕಿನಲ್ಲಿ ತುಂಬಾ ಉತ್ತಮ ಬೆಳವಣಿಗೆಯನ್ನು ಕಾಣುತ್ತೀರಿ, ವಿದ್ಯಾರ್ಥಿಗಳಿಗೆ ಈ ವಾರ ಅನುಕೂಲಕರವಾಗಿದೆ.
ಓಂ ಗುರುವೇ ನಮಃ ಮಂತ್ರವನ್ನು ಪ್ರತಿದಿನ 27 ಬಾರಿ ಪಠಿಸಿ.



Click it and Unblock the Notifications
