Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸ್ತ್ರೀ-ಪುರುಷನ ಜಾತಕದಲ್ಲಿ ನಾಡಿ ದೋಷವಿದ್ದರೆ ದಾಂಪತ್ಯ ಜೀವನಕ್ಕೆ ಆಪತ್ತೇ?
ಹಿಂದೂ ಧರ್ಮದಲ್ಲಿ ಮದುವೆಯ ಸಂದರ್ಭದಲ್ಲಿ ಗುರು ಹಿರಿಯರು ಕೂಡಿ ಗಂಡು ಹಾಗೂ ಹೆಣ್ಣಿನ ಜಾತಕ ನೋಡುವ ಕ್ರಮವಿದೆ. ಇಬ್ಬರ ಜಾತಕ ಕೂಡಿ ಬಂದರೆ ಮಾತ್ರ ಶುಭ ಕಾರ್ಯಕ್ಕೆ ಮುಂದಡಿ ಇಡಲಾಗುತ್ತದೆ. ಜಾತಕವನ್ನು ಹೊಂದಿಸುವಾಗ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಸರಿ ಹೊಂದುತ್ತಾ ಎಂದು ನೋಡಲಾಗುತ್ತದೆ.
ಇವುಗಳಲ್ಲಿ ನಾಡಿಯೂ ಕೂಡ ಒಂದು. ಹುಡುಗ ಹುಡುಗಿಯ ಜಾತಕದಲ್ಲಿ ಅಷ್ಟ ಕೂಟಗಳು ಹೊಂದಾಣಿಕೆಯಾದರೆ ಅವರ ದಾಂಪತ್ಯ ಚೆನ್ನಾಗಿರುತ್ತಂತೆ. ಅಷ್ಟ ಕೂಟಗಳೆಂದರೆ ವಶ್ಯ, ವರ್ಣ, ತಾರಾ, ಗ್ರಹ ಮೈತ್ರಿ, ಗಣ, ಭಕೂಟ, ನಾಡಿಗಳಾಗಿದೆ. ಅಷ್ಟಕ್ಕು ಜಾತಕದಲ್ಲಿ ನಾಡಿಯ ಸ್ಥಿತಿಯನ್ನು ತಿಳಿಯುವುದು ಹೇಗೆ? ಇದರ ಪರಿಣಾಮವೇನು? ನಾಡಿ ದೋಷಕ್ಕೆ ಪರಿಹಾರ ಏನು ಅನ್ನೋದನ್ನು ತಿಳಿಯೋಣ.

ನಾಡಿ ದೋಷ ಎಂದರೇನು?
ಜ್ಯೋತಿಷಿಗಳ ಪ್ರಕಾರ ವಧು ಮತ್ತು ವರ ಇಬ್ಬರಿಗೂ ಒಂದೇ ನಾಡಿ ಇದ್ದರೆ ಈ ದೋಷದ ಫಲವನ್ನು ಮದುವೆಯಾದ ನಂತರ ಇಬ್ಬರೂ ಅನುಭವಿಸಬೇಕಾಗುತ್ತಂತೆ.
ನಾಡಿ ದೋಷಗಳಲ್ಲಿ ಮೂರು ವಿಧ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಡಿ ಧೋಷಗಳಲ್ಲಿ ಮೂರು ವಿಧ. ಅವುಗಳೆಂದರೆ ಆದಿ ನಾಡಿ, ಮಧ್ಯ ನಾಡಿ ಮತ್ತು ಅಂತ್ಯ ನಾಡಿ. ನಮ್ಮ ಜಾತಕದಲ್ಲಿ ಹುಟ್ಟಿದ ಸಮಯವನ್ನು ಅವಲಂಬಿಸಿ ಚಂದ್ರನು ನಿರ್ದಿಷ್ಟ ನಕ್ಷತ್ರದಲ್ಲಿ ಇರುತ್ತಾನೆ. ಚಂದ್ರನ ಸ್ಥಾನವನ್ನು ನೋಡಿದರೆ ಮಾತ್ರ ವ್ಯಕ್ತಿಯ ನಾಡಿಮಿಡಿತ ತಿಳಿಯುತ್ತದೆ. ಒಟ್ಟು 27 ನಕ್ಷತ್ರಗಳಲ್ಲಿ ಚಂದ್ರನು ಯಾವುದೇ 9 ನಕ್ಷತ್ರಗಳಲ್ಲಿ ನೆಲೆಸಿದ್ದಾನೆ.
ನಾಡಿ ದೋಷದ ಪರಿಣಾಮ ಹೇಗಿರುತ್ತೆ?
- ವಿವಾಹದ ಸಮಯದಲ್ಲಿ ಭಾವಿ ವಧುವರರ ಜಾತಕವು ಹೊಂದಾಣಿಕೆಯಾಗಬೇಕು. ಇದರೊಂದಿಗೆ ನಾಡಿ ದೋಷವಿಲ್ಲದಿದ್ದರೆ ಮಾತ್ರ ಸಂಬಂಧವನ್ನು ಮದುವೆಯಾಗಿ ಪರಿವರ್ತಿಸಬೇಕು. ಒಂದು ವೇಳೆ ನಾಡಿ ದೋಷವಿದ್ದರೆ ಸಮಸ್ಯೆ ಎದುರಾಗುತ್ತದೆ.
- ವಧು-ವರರ ಜಾತಕದಲ್ಲಿ ನಾಡಿ ದೋಷವಿದ್ದು, ಅವರು ವಿವಾಹವಾಗಿದ್ದರೆ ಅಂತಹ ವೈವಾಹಿಕ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಒಂದಲ್ಲ ಒಂದು ಕಾರಣದಿಂದ ಮುರಿದು ಬೀಳುತ್ತದೆ.
- ವಧು-ವರರ ಜಾತಕದಲ್ಲಿ ನಾಡಿ ದೋಷವಿದ್ದರೆ ಜೀವನದುದ್ದಕ್ಕೂ ಹೆಚ್ಚಾಗಿರುತ್ತದೆ.
- ಮಧು-ವರರ ಜಾತಕದಲ್ಲಿ ಮಧ್ಯ ನಾಡಿಯಿದ್ದರೆ ಅವರು ವಿವಾಹಿತರಾಗಿದ್ದರೆ ಯಾವುದಾದರೂ ಘಟನೆ ಅಥವಾ ಅಪಘಾತದಲ್ಲಿ ಇಬ್ಬರೂ ಸಾಯುವ ಸಾಧ್ಯತೆಯಿದೆ.
ಈ ಪರಿಸ್ಥಿತಿಗಳಲ್ಲಿ ನಾಡಿ ದೋಷವು ಸಂಭವಿಸುವುದಿಲ್ಲ
- ಪುರುಷ ಮತ್ತು ಮಹಿಳೆಯ ಜಾತಕದಲ್ಲಿ ಜನ್ಮ ನಕ್ಷತ್ರಗಳು ಒಂದೇ ಆಗಿದ್ದರೂ ಅವರ ಹಂತಗಳು ವಿಭಿನ್ನವಾಗಿದ್ದರೆ ನಾಡಿ ದೋಷವಿಲ್ಲ.
- ಸ್ತ್ರೀ ಮತ್ತು ಪುರುಷನ ಜನ್ಮ ನಕ್ಷತ್ರ ಒಂದೇ ಆಗಿದ್ದರೂ ರಾಶಿಗಳು ಬೇರೆ ಬೇರೆಯಾಗಿದ್ದರೆ ಆಗಲೂ ನಾಡಿ ದೋಷವಿರೋದಿಲ್ಲ
- ಸ್ತ್ರೀ ಮತ್ತು ಪುರುಷನ ರಾಶಿ ಒಂದೇ ಆಗಿದ್ದರೂ ಜನ್ಮ ರಾಶಿಗಳು ಬೇರೆ ಬೇರೆಯಾಗಿದ್ದರೆ ನಾಡಿದೋಷವೂ ಇರುವುದಿಲ್ಲ.
ನಾಡಿ ದೋಷಕ್ಕೆ ಪರಿಹಾರವೇನು?
- ನಾಡಿ ದೋಷವನ್ನು ತೊಡೆದುಹಾಕಲು ನಾಡಿ ದೋಷ ನಿವಾರಣೆ ಪೂಜೆಯನ್ನು ಮಾಡಬೇಕು. ಆಗ ನಿಮ್ಮ ಸಮಸ್ಯೆ ಬಗೆ ಹರಿಯುವುದು.
- ನಾಡಿ ದೋಷ ಪರಿಹಾರಕ್ಕಾಗಿ ದಂಪತಿಗಳು ಬಡವರು ಮತ್ತು ನಿರ್ಗತಿಕರಿಗೆ ಹಣ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಉತ್ತಮ.
- ಮದುವೆಯಾದ ನಂತರ ನಾಡಿ ದೋಷ ಪರಿಹಾರಕ್ಕಾಗಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಆಗ ದಂಪತಿಗಳ ವೈವಾಹಿಕ ಜೀವನವು ಬಲವಾಗಿರುತ್ತದೆ ಮತ್ತು ಮಂಗಳಕರವಾಗಿರುತ್ತದೆ.
ಸೂಚನೆ : ನಮಗೆ ಗೊತ್ತಿರೋ ವಿಚಾರವನ್ನು ನಿಮಗೆ ತಿಳಿಸುವ ಪ್ರಯತ್ನವಷ್ಟೇ. ಹೀಗಾಗಿ ನಾಡಿ ದೋಷದ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ತಜ್ಞರನ್ನು ಸಂಪರ್ಕಿಸಿ. ನಂತರ ದೋಷ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡರೆ ಉತ್ತಮ.



Click it and Unblock the Notifications
