Latest Updates
-
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು!
ಈ 6 ರಾಶಿಯವರು ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ!
ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಅವರು ಹಗಲು-ರಾತ್ರಿ ಕಷ್ಟ ಪಡುತ್ತಾರೆ. ಆದರೆ ಕಷ್ಟ ಪಟ್ಟವರಿಗೆ ಎಲ್ಲರಿಗೂ ತಮ್ಮ ಗುರಿಯನ್ನು ಮುಟ್ಟೋದಕ್ಕೆ ಸಾಧ್ಯವಾಗೋದಿಲ್ಲ. ಕೆಲವೊಂದು ಕಾರಣಗಳಿಂದಾಗಿ ತಮ್ಮ ಗುರಿಯನ್ನು ಈಡೇರಿಸಿಕೊಳ್ಳೋದ್ರಲ್ಲಿ ಸೋತು ಹೋಗುತ್ತಾರೆ.

ಆದರೆ ಎಷ್ಟೇ ಕಠಿಣ ಹಾದಿಗಳು ಎದುರಾದ್ರೂ ಕೂಡ ಎದೆಗುಂದದೇ ಕೊನೆಯವರೆಗೂ ಯಾರು ಹೋರಾಡುತ್ತಾರೆಯೋ ಅವರು ತಾವು ಅಂದುಕೊಂಡ ಗುರಿಯನ್ನು ಮುಟ್ಟುತ್ತಾರೆ. ಹಾಗೂ ಎಲ್ಲರೂ ಅವರ ಬಗ್ಗೆ ಹೆಮ್ಮೆ ಪಡುವ ಹಾಗೆ ಬೆಳೆಯುತ್ತಾರೆ. ಅಷ್ಟಕ್ಕು ಯಾವ ರಾಶಿಯವರು ತಮ್ಮ ಬಗ್ಗೆ ತಾವು ಹೆಮ್ಮೆ ಪಟ್ಟುಕೊಳ್ಳುವಂತೆ ಬೆಳೆಯುತ್ತಾರೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ತಮ್ಮ ಜೀವನದ ಬಗ್ಗೆ ಬಹಳ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಮೇಷ ರಾಶಿಯ ಆಡಳಿತ ಗ್ರಹ ಮಂಗಳ ಗ್ರಹ. ಮೇಷ ರಾಶಿಯವರಲ್ಲಿ ಆತ್ಮ ವಿಶ್ವಾಸ ಹಾಗೂ ದೃಢತೆ ಹೆಚ್ಚಾಗಿ ಇರುತ್ತದೆ. ನಿರ್ಭಯವಾಗಿ ದೊಡ್ಡ ಗುರಿಗಳನ್ನು ಮುಟ್ಟುವತ್ತ ಕೆಲಸ ಮಾಡುತ್ತಾರೆ. ಇವರು ಉತ್ತಮ ನಾಯಕನಾಗಿ ಬೆಳೆಯುತ್ತಾರೆ. ಇವರ ಕೆಲಸ ನೋಡಿ ಇತರರು ಹೆಮ್ಮೆ ಪಟ್ಟುಕೊಳ್ಳುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ತಮ್ಮ ಬಗ್ಗೆ ತಾವು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಸಿಂಹ ರಾಶಿಯನ್ನು ಸೂರ್ಯನು ಆಳುತ್ತಿದ್ದಾನೆ. ಹೀಗಾಗಿ ಈ ರಾಶಿಯವರು ಪ್ರಕಾಶಮಾನವಾಗಿ ಹೊಳೆಯುತ್ತಾರೆ. ಇವರಲ್ಲಿರುವ ಸೃಜನಶೀಲತೆ ಮತ್ತು ವರ್ಚಸ್ಸು ಇವರನ್ನು ಜೀವನದಲ್ಲಿ ಬಹಳಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಮಾಡುತ್ತದೆ. ಈ ರಾಶಿಯವರು ಕೂಡ ಭವಿಷ್ಯದ ಉತ್ತಮ ನಾಯಕರಾಗಿ ಬೆಳೆಯುವ ವಿಶ್ವಾಸ ಹೊಂದಿರುತ್ತಾರೆ. ಇವರಿಗೆ ತಮ್ಮ ಬಗ್ಗೆ ಅತಿಯಾದ ವಿಶ್ವಾಸ ಇರುತ್ತದೆ. ಹಾಗೂ ಸ್ಪರ್ಧಾತ್ಮಕ ಮನೋಭಾವ ಇವರಲ್ಲಿ ಹೆಚ್ಚಾಗಿ ಇರುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ನಿಗೂಢ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಏನು ಕೆಲಸ ಮಾಡುತ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತಾಗೋದಿಲ್ಲ. ಸದ್ದಿಲ್ಲದ ಹಾಗೆ ಕೆಲಸ ಮಾಡುತ್ತಾರೆ. ಆದರೆ ಇವರ ಫಲಿತಾಂಶ ಯಾವಾಗಲೂ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತದೆ. ಇವರಲ್ಲಿ ಆಳವಾದ ತಿಳುವಳಿಕೆ ಇರುತ್ತದೆ. ಅಪ್ಪ-ಅಮ್ಮ ಹಾಗೂ ಇತರರು ತಮ್ಮ ಬಗ್ಗೆ ಹೆಮ್ಮೆ ಪಡುವ ಹಾಗೆ ಬೆಳೆಯುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಇತರರು ಹೆಮ್ಮೆ ಪಡುವಂತೆ ಬೆಳೆಯುತ್ತಾರೆ. ಈ ರಾಶಿಯನ್ನು ಶನಿಯು ನಿಯಂತ್ರಿಸುತ್ತಿದ್ದಾನೆ. ಹೀಗಾಗಿ ತಮ್ಮ ಕೆಲಸದ ನೀತಿ ಮತ್ತು ಅಡೆತಡೆಗಳನ್ನು ಜಯಿಸುವ ಸಾಮರ್ಥ್ಯದ ಹೊಂದಿರುತ್ತಾರೆ. ಜೀವನದ ಎಲ್ಲಾ ಹಂತಗಳಲ್ಲಿಯೂ ಕೂಡ ಶ್ರೇಷ್ಠತೆಗಾಗಿ ಶ್ರಮಿಸುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುವವರೆಗೂ ಬಿಡುವವರಲ್ಲ. ಶ್ರಮಪಟ್ಟು ಕೆಲಸ ಮಾಡುತ್ತಾರೆ.
ಧನು ರಾಶಿ
ಧನು ರಾಶಿಯವರು ಸಾಹಸಿ ಮನೋಭಾವವನ್ನು ಹೊಂದಿರುತ್ತಾರೆ. ಈ ರಾಶಿಯವರು ಕೂಡ ಇತರರು ಹೆಮ್ಮೆ ಪಡುವಂತೆ ಬೆಳೆಯುತ್ತಾರೆ. ಜ್ಞಾನದ ಹಸಿವು ಇವರಲ್ಲಿ ಹೆಚ್ಚಾಗಿ ಇರುತ್ತದೆ. ತಮ್ಮ ಪರಿಧಿಯನ್ನು ವಿಸ್ತರಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಇವರು ಜೀವನದಲ್ಲಿ ಬಹುದೊಡ್ಡ ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತದೆ. ಬದಲಾವಣೆಯನ್ನು ಸ್ವೀಕರಿಸುವ ಗುಣ ಇವರಲ್ಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ವಿಶ್ವಾಸಾರ್ಹ ಮತ್ತು ನಿಷ್ಠೆಯ ಗುಣಕ್ಕೆ ಹೆಸರುವಾಸಿಯಾಗಿದ್ದಾರೆ. ವೃಷಭ ರಾಶಿಯವರು ಪ್ರೀತಿ ಮತ್ತು ಸೌಂದರ್ಯದ ಗ್ರಹವಾದ ಶುಕ್ರನಿಂದ ನಿಯಂತ್ರಿಸಲ್ಪಡುತ್ತಾರೆ. ಇವರು ತಮ್ಮ ನಿರ್ಣಯ ಮತ್ತು ಸ್ವ-ಮೌಲ್ಯದ ಬಗ್ಗೆ ಹೆಮ್ಮೆ ಪಡುವಂತೆ ಕೆಲಸ ಮಾಡುತ್ತಾರೆ. ಕೆಲಸದ ವಿಚಾರಕ್ಕೆ ಬಂದ್ರೆ ಇವರು ಕಾಂಪ್ರಮೈಸ್ ಆಗೋ ಮಾತೇ ಇಲ್ಲ.



Click it and Unblock the Notifications