Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿ-ಮಂಗಳ ಯುತಿ 2023 : ಷಡಾಷ್ಟಕ ಯೋಗದಿಂದಾಗಿ ಈ 4 ರಾಶಿಯವವರು ಜಾಗ್ರತೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಮತ್ತು ಶನಿ ಗ್ರಹಗಳನ್ನು ಪರಸ್ಪರ ಶತ್ರು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಮಂಗಳನು ಶನಿಯಿಂದ ಆರನೇ ಮನೆಯಲ್ಲಿದ್ದು, ಶನಿ ಮತ್ತು ಮಂಗಳನ ಸಂಯೋಜನೆಯು ಈ ಸಮಯದಲ್ಲಿ ಷಡಾಷ್ಟಕ ಯೋಗವನ್ನು ಉಂಟುಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಷಡಷ್ಟಕ ಯೋಗವನ್ನು ಅಶುಭವೆಂದು ಪರಿಗಣಿಸಲಾಗಿದೆ. ಜೂನ್ 30 ರವರೆಗೆ ಮಂಗಳನು ಕರ್ಕಾಟಕ ರಾಶಿಯಲ್ಲಿರುತ್ತಾನೆ.
ಈ ಸಂಯೋಜನೆಯು ನಾಲ್ಕು ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ಈ ರಾಶಿಯವರು ಜೂನ್ 30 ರವರೆಗೆ ಬಹಳ ಜಾಗರೂಕರಾಗಿರಬೇಕು. ಅಷ್ಟಕ್ಕು ಮಂಗಳ ಮತ್ತು ಶನಿಯ ಸಂಯೋಗದಿಂದ ಯಾವ ರಾಶಿಯವರು ತೊಂದರೆಯನ್ನು ಅನುಭವಿಸುತ್ತಾರೆ ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಈ ಸಮಯದಲ್ಲಿ ಮಂಗಳನು ಕರ್ಕಾಟ ರಾಶಿಯಲ್ಲಿ ಇರುತ್ತಾನೆ. ಕರ್ಕಾಟಕ ರಾಶಿಯವರು ಮಂಗಳ ಗ್ರಹದ ಉಪಸ್ಥಿತಿಯಿಂದಾಗಿ ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ನೀವು ಆರ್ಥಿಕ ಚಟುವಟಿಕೆಗಳ ಬಗ್ಗೆ ತುಂಬಾನೇ ಜಾಗರೂಕರಾಗಿರಬೇಕು. ನಿಮ್ಮ ಬಜೆಟ್ ಎಷ್ಟಿದೆ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಈ ಅವಧಿಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈ ಕೆಲಸದಿಂದ ಹಿಂದೆ ಸರಿಯಿರಿ. ನಷ್ಟ ಉಂಟಾಗುವ ಸಾಧ್ಯತೆಯಿದೆ. ಜೂನ್ 30 ರವರೆಗೆ ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಸಿಂಹ ರಾಶಿ
ಮಂಗಳ ಮತ್ತು ಶನಿ ಗ್ರಹಗಳ ಸಂಯೋಜನೆಯಿಂದಾಗಿ ಈ ಅವಧಿಯಲ್ಲಿ ಸಿಂಹ ರಾಶಿಯವರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ಕೆಲಸದ ಸ್ಥಳದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲವು ವಿವಾದಗಳಲ್ಲಿ ನೀವು ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ವಿವಾದಗಳನ್ನು ತಪ್ಪಿಸಲು ಪ್ರಯತ್ನಿಸುತ್ತೀರಿ ಆದರೆ ವಿಫಲರಾಗುತ್ತೀರಿ. ನಿಮ್ಮ ಖರ್ಚುಗಳು ತುಂಬಾ ಹೆಚ್ಚಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ವಿಶೇಷ ಕಾಳಜಿ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ ನೀವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಬೇಕಾಗುತ್ತದೆ.
ಧನು ರಾಶಿ
ಮಂಗಳ ಮತ್ತು ಶನಿಯ ಸಂಯೋಗದಿಂದಾಗಿ ಧನು ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಬಹಳಷ್ಟು ಏರುಪೇರುಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆಪ್ತರೊಂದಿಗೆ ಬಹಳ ಜಾಗರೂಕತೆಯಿಂದ ವ್ಯವಹರಿಸಿ. ಯಾಕಂದ್ರೆ ನೀವು ಅವರಿಂದ ಮೋಸ ಹೋಗಬಹುದು. ಈ ಸಂದರ್ಭದಲ್ಲಿ ನೀವು ಮಾಡೋ ಕೆಲಸದಿಂದ ನಿಮಗೆ ಆರ್ಥಿಕ ನಷ್ಟ ಉಂಟಾಗಬಹುದು.
ಕುಂಭ ರಾಶಿ
ಮಂಗಳ ಮತ್ತು ಶನಿಯ ಸಂಯೋಜನೆಯಿಂದಾಗಿ ಕುಂಭ ರಾಶಿಯವರು ವಾಹನ ಇತ್ಯಾದಿಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಈ ಸಮಯದಲ್ಲಿ ನೀವು ಗಾಯಗೊಳ್ಳುವ ಸಾಧ್ಯತೆಯಿದೆ. ಕೆಲಸದ ಕಡೆಗೆ ಸಂಪೂರ್ಣ ಗಮನ ಕೊಟ್ಟು ಕೆಲಸ ಮಾಡಿ. ಕೆಲಸದ ವಿಷಯದಲ್ಲಿ ನೀವು ಒತ್ತಡವನ್ನು ಎದುರಿಸಬೇಕಾಗಬಹುದು. ಒತ್ತಡ ಮುಕ್ತರಾಗಿ ಕೆಲಸ ಮಾಡಲು ಪ್ರಯತ್ನಿಸಿ. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬಹುದು.



Click it and Unblock the Notifications