Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಕೋರ್ಟ್ ಆವರಣದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವಕೀಲರು!
ಸುಪ್ರೀಂಕೋರ್ಟ್ ಆವರಣದಲ್ಲಿಯೇ ಲವ್ ಪ್ರಪೋಸ್ ಮಾಡಿದ ಸಲಿಂಗಿಗಳು. ಇವರು ಸುಪ್ರೀಂಕೋರ್ಟ್ ವಕೀಲರು! ಸುಪ್ರೀಂಕೋರ್ಟ್ ಸಲಿಂಗಿಗಳ ವಿವಾಹದ ಬಗ್ಗೆ ನೀಡಿರುವ ತೀರ್ಪನ್ನು ಕೋರ್ಟ್ ಆವರಣದಲ್ಲಿಯೇ ಲವ್ ಪ್ರಪೋಸ್ ಮಾಡುವ ಮೂಲಕ ವಿರೋಧಿಸಿ ಗಮನ ಸೆಳೆದಿದ್ದಾರೆ.
ಸಲಿಂಗಿಗಳ ವಿವಾಹಕ್ಕೆ ಸಂಬಂಧಿಸಿದಂತೆ ಕೋರ್ಟ್ ಅಕ್ಟೋಬರ್ 17ಕ್ಕೆ ಮಹತ್ವದ ತೀರ್ಪು ನೀಡಿದೆ. ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು ಸಲಿಂಗಗಳ ವಿವಾಹವನ್ನು ಶಾಸಕಾಂಗ ಪರಿಗಣಿಸಬೇಕು, ಶಾಸಕಾಂಗ ಇದರ ಬಗ್ಗೆ ಕಾನೂನು ರೂಪಿಸಿದರೆ ಮಾತ್ರ ಮಾನ್ಯವಾಗುವುದು ಎಂದು ಹೇಳಿದೆ.

ಸಲಿಂಗ ವುವಾಹಕ್ಕೆ ಕಾನೂನು ಮಾನ್ಯತೆ ನೀಡಲು ವಿರೋಧಿಸಿರುವ ಕೋರ್ಟ್, ಸಲಿಂಗ ಸಂಬಂಧದಲ್ಲಿರುವ ವ್ಯಕ್ತಿಗಳ ಹಕ್ಕು, ಅರ್ಹತೆ, ಅವರ ಸಂಬಂಧವನ್ನು ಮದುವೆ ಎಂದು ಕಾನೂನಿನಲ್ಲಿ ಪರಿಗಣಿಸಲು ಸಾಧ್ಯವಿಲ್ಲ, ಆದರೆ ಇದರ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿಲು ಒಪ್ಪಿಗೆಯನ್ನು ಸೂಚಿಸಿದೆ.
ಸಲಿಂಗಿ ಮದುವೆಗೆ ಮಾನ್ಯತೆ ದೊರೆಯಬೇಕೆಂದು ಸಲಿಂಗಿಗಳು ತುಂಬಾ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಸಲಿಂಗಿ ಮದುವೆಗೆ ಕೋರ್ಟ್ ಅನುಮೋದನೆ ನೀಡುವ ಲಕ್ಷಣಗಳು ಕಂಡಾಗ ಮಧ್ಯಪ್ರವೇಶ ಮಾಡಿದ ಶಾಸಕಾಂಗ ಕಾನೂನು ರೂಪಿಸುವುದು ಶಾಸಕಾಂಗದ ಹಕ್ಕು ಎಂದು ಪ್ರತಿಪಾದಿಸಿತು.
ಪ್ರೀತಿ, ಅಭಿವ್ಯಕ್ತಿ, ಆಯ್ಕೆ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬರಿಗೂ ಎಂದಿರುವ ಸುಪ್ರೀಂಕೋರ್ಟ್ ಈ ಹಕ್ಕುಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ಸಲಿಂಗ ಮದುವೆ ಹಕ್ಕಿನ ವಿಚಾರವು ಸಂಪೂರ್ಣವಾಗಿ ಶಾಸಕಾಂಗ ವ್ಯಾಪ್ತಿಯದ್ದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರದ ಸರ್ಕಾರದ ಪರವಾಗಿ ವಾದಿಸಿದ್ದರು.
ಸಲಿಂಗಿಗಳ ಮದುವೆ ಮಾತ್ರವಲ್ಲ ಅವರು ಮಗುವನ್ನು ದತ್ತು ತೆಗೆದುಕೊಳ್ಳುವ ಬಗ್ಗೆಯೂ ವಾದ-ವಿವಾದಗಳು ನಡೆದೆವು. ಸಲಿಂಗಿಗಳು ದತ್ತು ಪಡೆಯುವ ಮಗುವಿನ ಮನಸ್ಥಿತಿ ಕುರಿತು ಕೂಡ ಚರ್ಚೆ ನಡೆಯಬೇಕಾಗಿದೆ ಎಂದು ಮೆಹ್ತಾ ವಾದಿಸುವ ಮೂಲಕ ಗಮನ ಸೆಳೆದಿದ್ದರು.
ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಕೋರ್ಟ್ ಸಲಿಂಗಿ ವಿವಾಹ ಕಾನೂನು ರೂಪಿಸಬೇಕಾಗಿರುವುದು ಶಾಸಕಾಂಗ ನಾವಲ್ಲ ಎಂದು ಹೇಳಿರುವುದರಿಂದ ಸಲಿಂಗಿಗಳಿಗೆ ನಿರಾಸೆ ಉಂಟಾಗಿದೆ.
ಸಲಿಂಗ ವಿವಾಹಕ್ಕೆ ಭಾರತೀಯ ಕಾನೂನಿನಲ್ಲಿ ಒಪ್ಪಿಗೆಯಿಲ್ಲ, ಅಲ್ಲದೆ ಸಮಾಜವೂ ಒಪ್ಪುತ್ತಿಲ್ಲ, ಆದರೆ ನಮ್ಮ ವಿವಾಹವನ್ನು ಕೂಡ ಕಾನೂನಿನ ರೀತಿಯಲ್ಲಿ ಮಾನ್ಯಗೊಳಿಸಲು ಅನುಮೋದನೆ ನೀಡಿ ಎಂಬುವುದು ಸಲಿಂಗಿಗಳ ಬಹು ದೊಡ್ಡ ಬೇಡಿಕೆಯಾಗಿದೆ. ಶಾಸಕಾಂಗ ಈ ಕಾನೂನಿಗೆ ಅನುಮೋದನೆ ನೀಡುವುದು ಡೌಟು, ಈ ಕಾರಣಕ್ಕೆ ಸಲಿಂಗಿಗಳು ತಮ್ಮ ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಹಾಗಾಗಿ ಸುಪ್ರೀಂಕೋರ್ಟ್ ವಕೀಲರಾದ ಇವರು ಕೋರ್ಟ್ ಆವರಣದಲ್ಲಿ ಲವ್ ಪ್ರಪೋಸ್ ಮಾಡಿ ಅದರ ಪೋಸ್ಟ್ ಮಾಡುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅನನ್ಯ ಕೋಟಿಯಾ, ಉತ್ಕರ್ಷ್ ಸಕ್ಸೇನಾ ಹೀಗೆ ಪ್ರಪೋಸ್ ಮಾಡಿಕೊಂಡಿರುವ ಜೋಡಿಗಳು.
ನೆನ್ನೆ ತುಂಬಾ ಬೇಸರವಾಯ್ತು, ನಾನು ಸೆಕ್ಸೇನಾ ನಮ್ಮ ಹಕ್ಕುಗಳಿಗೆ ನಿರಾಕರಿಸಿದ ಕೋರ್ಟ್ ಬಳಿ ಹೋಗಿ ಉಂಗುರ ಬದಲಾಯಿಸಿದೆವು. ಈ ವಾರ ಲೀಗಲ್ ಲಾಸ್ ಬಗ್ಗೆ ಅಲ್ಲ, ನಮ್ಮ ಎಂಗೇಜ್‌ಮೆಂಟ್ ಬಗ್ಗೆ, ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡಲು ಮತ್ತೊಂದು ದಿನ ಬರುತ್ತೇವೆ ಎಂದು ಬರೆದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇವರ ಈ ಪೋಸ್ಟ್‌ಗೆ ಕಮೆಂಟ್‌ಗಳ ಸುರುಮಳೆ ಬರುತ್ತಿದೆ.
Yesterday hurt. Today, @utkarsh__saxena and I went back to the court that denied our rights, and exchanged rings. So this week wasn't about a legal loss, but our engagement. We'll return to fight another day. pic.twitter.com/ALJFIhgQ5I
— Kotia (@AnanyaKotia) October 18, 2023



Click it and Unblock the Notifications