Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
Somvati Amavasya 2023 : ಸೋಮಾವತಿ ಅಮಾವಾಸ್ಯೆ ದಿನ ಈ ಮಂತ್ರ ಪಠಿಸಿದರೆ ಕಷ್ಟಗಳು ದೂರಾಗುವುದು
ಸನಾತನ ಧರ್ಮದಲ್ಲಿ ಅಮವಾಸ್ಯೆಯ ತಿಥಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಸೋಮ ಅಮವಾಸ್ಯೆ ತುಂಬಾನೇ ವಿಶೇಷವಾಗಿದೆ. ಈ ಅಮವಾಸ್ಯೆಯಂದು ಪೂರ್ವಜರಿಗೆ ಶ್ರಾದ್ಧ ಮತ್ತು ತರ್ಪಣವನ್ನು ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಲಾಗುವುದು.

ಸೋಮವಾಸ್ಯೆ ಫೆಬ್ರವರಿ 20ಕ್ಕೆ ಸೋಮಾವತಿ ಅಮವಾಸ್ಯೆ ಬಂದಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಶಿವ ಮತ್ತು ವಿಷ್ಣುವನ್ನು ಪೂಜಿಸುವುದು ಮಂಗಳಕರವಾಗಿದೆ. ಈ ದಿನ ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ಸೋಮಾವತಿ ಅಮವಾಸ್ಯೆಯಂದು ಈ ರೀತಿ ಮಾಡಿದರೆ ದಾರಿದ್ರ್ಯ ದೂರಾಗುವುದು

1. ಶಿವಲಿಂಗಕ್ಕೆ ಅಭಿಷೇಕ ಮಾಡಿ
ಈ ದಿನ ತುಪ್ಪ, ಹಾಲು, ಮೊಸರು, ಜೇನುತುಪ್ಪ, ಗಂಗಾಜಲ ಮತ್ತು ಸಕ್ಕರೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಕೂಡ ಶುಭ ಫಲ ಸಿಗುವುದು. ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಮಂತ್ರಗಳನ್ನು ಪಠಿಸಿ

2. ಗಾಯತ್ರಿ ಮಂತ್ರ ಪಠಿಸಿ
ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರಃ ಪ್ರಚೋದಯಾತ್
ಅರ್ಥ: ನಾನು ದೇವತೆಗಳಿಗೆ ಆದರ್ಶ ಪುರುಷನಾಗಿರುವ ಮಹಾದೇವನನ್ನು ಪೂಜಿಸುತ್ತಿದ್ದೇನೆ. ಜ್ಞಾನದಿಂದ ನನ್ನನ್ನು ಆಶೀರ್ವದಿಸು.
ಗಾಯತ್ರಿ ಮಂತ್ರದ ಪ್ರಯೋಜನಗಳು
ನೀವು ಶಿವ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಕಷ್ಟಗಳು, ಆತಂಕ ಎಲ್ಲವೂ ದೂರಾಗುವುದು, ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಯಾವುದೋ ಅವ್ಯಕ್ತ ಭಯ ಕಾಡುತ್ತಿದ್ದರೆ ಈ ಮಂತ್ರ ಪಠಿಸಿ ಆ ಭಯ ದೂರಾಗುವುದು.

3. ನಿಮ್ಮ ಆಸೆ ನೆರವೇರಲು
ನೀವು ಮನಸ್ಸಿನಲ್ಲಿ ಏನನ್ನಾದರೂ ಯೋಚಿಸಿದ್ದರೆ ಅದು ನೆರವೇರಲು ಸೋಮಾವತಿ ಅಮವಾಸ್ಯೆಯಂದು ಬಿಳಿ ನೂಲನ್ನು 108 ಬಾರಿ ಆಲದ ಮರಕ್ಕೆ ಸುತ್ತಿ, ಹೀಗೆ ಸುತ್ತುವಾಗ ಶಿವನ ನಾಮವನ್ನು ಜಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ನೆರವೇರಲಿದೆ.
ಶಿವನನ್ನು ಮೆಚ್ಚಿಸಲು ಸೋಮಾವತಿ ಅಮಾವಾಸ್ಯೆಯ ದಿನದಂದು ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪಿಸಿ.

ಸೋಮಾವತಿ ಅಮವಾಸ್ಯೆಯಂದು ಈ ಮಂತ್ರವನ್ನು ಪಠಿಸಿ
ಓಂ ವಿಘ್ನವನಿಶಕ ದೇವತಾಭ್ಯೋ ನಮಃ ।
ಓಂ ಕುಲ ದೇವತಾಭ್ಯೋ ನಮಃ ।
ಓಂ ಗ್ರಹ ದೇವತಾಭ್ಯೋ ನಮಃ ।
ಓಂ ಲಕ್ಷ್ಮೀಪತಿ ದೇವತಾಭ್ಯೋ ನಮಃ ।
ಗ್ರಾಮ ದೇವತೆಯೇ ಓಂ ನಮಃ.
ವಿಷ್ಣು ಗಾಯತ್ರಿ ಮಹಾಮಂತ್ರ:
ಓಂ ನಾರಾಯಣಾಯ ವಿಧ್ಮಹೇ|
ವಾಸುದೇವಾಯ ಧೀಮಹೀ|
ತನ್ನೋ ವಿಷ್ಣು ಪ್ರಚೋದಯಾತ್ ||
ಈ ಮಂತ್ರಗಳನ್ನು ಹೇಳುತ್ತಾ ಶ್ರೀ ವಿಷ್ಣುವಿಗೆ ಹಳದಿ ಹೂ, ಹಣ್ಣುಗಳು ತುಳಸಿಯನ್ನು ಅರ್ಪಿಸಿ ಪೂಜೆ ಮಾಡಿ.

ಸೋಮಾವತಿ ಅಮಾವಾಸ್ಯೆಯಂದು ಈ ಕೆಲಸವನ್ನು ಮಾಡಲು ಮರೆಯಬೇಡಿ
1. ಸೋಮಾವತಿ ಅಮಾವಾಸ್ಯೆಯ ದಿನ ಪೂರ್ವಜರಿಗೆ ಆಹಾರವನ್ನು ಹೊರಗಡೆ ಇಡಿ, ಇದನ್ನು ಹಸು, ಕಾಗೆ, ನಾಯಿ ತಿಂದರೆ ಒಳ್ಳೆಯದು. ಈ ದಿನ ಅಪ್ಪಿತಪ್ಪಿಯೂ ನಾಯಿ, ಹಸುವಿಗೆ ನೋವಾಗಬಾರದು, ಇಲ್ಲವಾದಲ್ಲಿ ಪಿತೃದೋಷಕ್ಕೆ ಪಾತ್ರರಾಗುತ್ತೀರಿ ಎನ್ನುತ್ತದೆ ಶಾಸ್ತ್ರ .
2. ಸೋಮಾವತಿ ಅಮಾವಾಸ್ಯೆಯ ದಿನದಂದು, ಪೂರ್ವಜರು ತಮ್ಮ ವಂಶಸ್ಥರಿಂದ ಪಿಂಡದಾನ, ಶ್ರಾದ್ಧ ಮತ್ತು ದಾನಕ್ಕಾಗಿ ಕಾಯುತ್ತಾರೆ. ಅವರು ಇದನ್ನು ಪಡೆಯದಿದ್ದರೆ, ಪಿತೃದೋಷ ಉಂಟಾಗಿ ಸಂತೋಷ ಮತ್ತು ಶಾಂತಿ ಜೀವನದಿಂದ ಕಣ್ಮರೆಯಾಗುತ್ತದೆ. ಆದ್ದರಿಂದ ಈ ದಿನ ಪಿತೃತರ್ಪಣ ಮಾಡಿ.
3. ಸೋಮಾವತಿ ಅಮವಾಸ್ಯೆಯ ದಿನ ಮಾಂಸ, ಮೀನು ಮತ್ತು ಮದ್ಯ ಸೇವಿಸಬಾರದು. ಸೋಮಾವತಿ ಅಮಾವಾಸ್ಯೆಯ ದಿನದಂದು ಬ್ರಹ್ಮಚರ್ಯವನ್ನು ಅನುಸರಿಸಬೇಕು.



Click it and Unblock the Notifications
