Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
2023 ಸೂರ್ಯಗ್ರಹಣ: ಗರ್ಭಿಣಿಯರು ಈ ಸಮಯದಲ್ಲಿ ಹೇಗಿರಬೇಕು ಗೊತ್ತಾ?
ಸೂರ್ಯ,ಚಂದ್ರ ಹಾಗೂ ಭೂಮಿ ಒಂದೇ ರೇಖೆಯಲ್ಲಿ ಬಂದು ನಿಂತಾಗ ಗ್ರಹಣ ಸಂಭವಿಸುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹಣದ ವೇಳೆ ಸೂರ್ಯನಿಂದ ಭೂಮಿಗೆ ಬರುವ ನೇರವಾದ ಬೆಳಕನ್ನು ಚಂದ್ರನು ತಡೆಯುತ್ತಾನೆ. ಈ ವರ್ಷದ ಮೊದಲ ಸೂರ್ಯ ಗ್ರಹಣ ಏಪ್ರಿಲ್ 20 ರಂದು ಸಂಭವಿಸಲಿದೆ. ಮೊದಲಿನಿಂದಾನೂ ಜನರಿಗೆ ಗ್ರಹಣ ಅಂದರೇನೆ ಒಂದು ರೀತಿ ಭಯವಂತೂ ಖಂಡಿತ ಇದ್ದೇ ಇದೆ.

ಹಿಂದೂ ಧರ್ಮದಲ್ಲಿ ಹಾಗೂ ಜ್ಯೋತಿಶಾಸ್ತ್ರದ ಪ್ರಕಾರ ಗ್ರಹಣ ಕಾಲದಲ್ಲಿ ಕೆಲವು ನಿರ್ಬಂಧಗಳು ಹಾಗೂ ಕಟ್ಟುಪಾಡುಗಳಿವೆ. ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನಿಂದ ಬಿಡುಗಡೆಯಾಗುವ ಅತೀ ಸೂಕ್ಞ್ಮ ಕಿರಣಗಳು ಹಾನಿಕರ ಎಂದು ಹೇಳಲಾಗುತ್ತದೆ. ಆದ್ದರಿಂದ ಸೂರ್ಯಗ್ರಹಣದ ಸಮಯದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಲೇಬಾರದು ಎಂಬ ದೊಡ್ಡ ಪಟ್ಟಿಯೇ ಇದೆ.
ಗರ್ಭಿಣಿಯರ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರುತ್ತೆ?
ಗರ್ಭಿಣಿಯರು ಈ ಗ್ರಹಣದ ಸಂದರ್ಭದಲ್ಲಿ ತುಂಬಾನೇ ಜಾಗರೂಕತೆಯಿಂದ ಇರಬೇಕು. ಅದರಲ್ಲೂ ನಿತ್ಯ ವಿಶೇಷ ಕಾಳಜಿವಹಿಸುವ ಗರ್ಭಿಣಿಯರನ್ನು ಈ ಸಮಯದಲ್ಲಿ ಇನ್ನಷ್ಟು ಜಾಗ್ರತೆಯಿಂದ ನೋಡಿಕೊಳ್ಳಬೇಕು. ಅವರು ಪ್ರತಿಯೊಂದು ಹೆಜ್ಜೆಯಲ್ಲೂ ಇನ್ನಷ್ಟು ಜಾಗ್ರತೆವಹಿಸಬೇಕಿದೆ. ಗ್ರಹಣ ಮಗು ಹಾಗೂ ತಾಯಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ಈ ವರ್ಷದ ಸೂರ್ಯಗ್ರಹದ ವೇಳೆ ಗರ್ಭಿಣಿಯರು ಹೇಗಿರಬೇಕು?, ಯಾವುದನ್ನು ಮಾಡಬೇಕು?, ಏನನ್ನು ಮಾಡಲೇಬಾರದು?..... ಇಲ್ಲಿದೆ ಉತ್ತರ.
1. ಸೂರ್ಯ ಗ್ರಹಣದ ವೇಳೆ ಯಾವುದೇ ಕಾರಣಕ್ಕೂ ಗರ್ಭಿಣಿಯರು ಮನೆಯಿಂದ ಹೊರಗಡೆ ಹೋಗಲೇಬೇಡಿ.
2. ಸೂರ್ಯನನ್ನು ನೋಡುವ ಪ್ರಯತ್ನ ಮಾಡಲೇಬೇಡಿ.
3. ಗ್ರಹಣದ ವೇಳೆ ಪ್ರಯಾಣ ನಿಷಿದ್ಧ.
4. ಸೂರ್ಯ ಗ್ರಹಣದ ವೇಳೆ ಗರ್ಭಿಣಿಯರು ಯಾವುದೇ ರೀತಿಯ ಮೆಟಲ್ ವಸ್ತುಗಳನ್ನು ಧರಿಸಬೇಡಿ. ಉದಾಹರಣೆಗೆ ಹೇರ್‌ಪಿನ್, ಖಡ, ಸೂಜಿ ಇತರೆ ಯಾವುದೇ ಮೆಟಲ್ ವಸ್ತು ಬಳಸಬೇಡಿ.
5. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾನಸಿಕ ಶಾಂತಿಗೆ ಭಂಗವಾಗುವಂಥ, ರಕ್ತದೊತ್ತಡ ಹೆಚ್ಚಾಗುವಂಥ ಚಿಂತನೆಗಳನ್ನು ಮಾಡಬೇಡಿ. ಗೊಂದಲ, ಭಯ ಬೇಡ.
6. ಗ್ರಹಣದ ವೇಳೆ ಯಾವುದೇ ರೀತಿಯ ಆಹಾರ ಪದಾರ್ಥಗಳು ಹಾಗೂ ಪಾನೀಯಗಳನ್ನು ಸೇವಿಸಬೇಡಿ. ಗ್ರಹಣದ ಮುನ್ನ ಅಥವಾ ನಂತರ ಸೇವಿಸಿ.
7. ಯಾವುದೇ ತರಹದ ಚೂಪಾದ ಆಯುಧಗಳನ್ನು ಗರ್ಭಿಣಿಯರು ಸ್ಪರ್ಶಿಸಬೇಡಿ. ಇದರಿಂದ ಮಗುವಿಗೆ ಸೀಳುತುಟಿ ಅಥವಾ ಮಗುವಿನ ದೇಹದಲ್ಲಿ ಮಚ್ಚೆ ಉಂಟಾಗಬಹುದು ಎಂಬ ನಂಬಿಕೆ ಇದೆ.
8. ಮಗುವಿನ ಸುರಕ್ಷತೆಗಾಗಿ ಸೂರ್ಯ ಗ್ರಹಣದ ವೇಳೆ ಮಹಾಮೃತ್ಯುಂಜಯ ಮಂತ್ರ, ಸೂರ್ಯ ಮಂತ್ರ, ವಿಷ್ಣು ಮಂತ್ರವನ್ನು ಪಠಿಸಿ.
9. ಗ್ರಹಣದ ವೇಳೆ ಹೊಟ್ಟೆಯ ಮೇಲೆ ಕೈಗಳನ್ನು ಇಡಬೇಡಿ, ಅವರ ಕೈ ಬೆರಳುಗಳ ಗುರುತು ಹುಟ್ಟುವ ಮಗುವಿನ ಮೇಲೆ ಹಾಗೆ ಮೂಡುತ್ತದೆ ಎನ್ನುತ್ತಾರೆ.
10. ಸೂರ್ಯ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಯಾವುದೇ ಕೆಲಸಗಳನ್ನು ಮಾಡಬೇಡಿ. ಬದಲಾಗಿ ದೇವರ ಪ್ರಾರ್ಥನೆ ಮಾಡಿ ಅಥವಾ ವಿಶ್ರಾಂತಿ ಪಡೆಯಿರಿ.
11. ನಿಮ್ಮ ಮನೆಗೆ ನಿತ್ಯ ಸೂರ್ಯನ ಕಿರಣಗಳು ಪ್ರವೇಶಿಸುವಂಥ ಕಿಟಕಿಗಳಿಗೆ ದಪ್ಪದಾದ ಬಟ್ಟೆ ಅಥವಾ ರಟ್ಟಿನ ಮೂಲಕ ಮುಚ್ಚಿ. ಬಾಗಿಲುಗಳನ್ನು ತೆಗೆಯಬೇಡಿ.
12. ಗ್ರಹಣದ ವೇಳೆ ಬಟ್ಟೆ ಹೊಲೆಯುವುದು, ಒಗೆಯುವುದು. ಬಟ್ಟೆಗಳನ್ನು ಗಂಟು ಕಟ್ಟಿ ಇರುವಂಥ ಕೆಲಸಗಳನ್ನು ಮಾಡಬೇಡಿ.
13. ಸೂರ್ಯ ಗ್ರಹಣಕ್ಕೂ ಮುನ್ನ ಸ್ನಾನ ಮಾಡಬೇಡಿ, ಗ್ರಹಣದ ನಂತರ ಶುದ್ಧ ಸ್ನಾನ ಮಾಡಿ ಪೂಜೆ ಮಾಡಿ, ತುಳಸಿ ಎಲೆ ಸೇವಿಸಿ.



Click it and Unblock the Notifications



