For Quick Alerts
ALLOW NOTIFICATIONS  
For Daily Alerts

ಶನಿ ಗೋಚಾರ ಫಲ 2023: ಜ. 17ಕ್ಕೆ ಈ ರಾಶಿಗಳಿಗೆ ಶನಿಸಾಡೇಸಾತಿ ಹಾಗೂ ಶನಿ ಧೈಯಾದಿಂದ ಮುಕ್ತಿ ಸಿಗಲಿದೆ

|

ಜನವರಿ 17ಕ್ಕೆ ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಸಂಚರಿಸಲಿದೆ. ಇನ್ನು ಎರಡೂವರೆ ವರ್ಷ ಇದೇ ರಾಶಿಯಲ್ಲಿ ಇರಲಿದೆ. ಶನಿಯು ಕುಂಭ ರಾಶಿಗೆ ಸಂಚರಿಸಿದಾಗ ಇದರ ಪ್ರಭಾವ 12 ರಾಶಿಗಳ ಮೇಲೆ ಇರುತ್ತದೆ. ಆದರೆ ಶನಿಯು ನಿಮ್ಮ ರಾಶಿಯಲ್ಲಿ ಯಾವ ಸ್ಥಾನದಲ್ಲಿದೆಯೋ ಅದರಂತೆ ಪ್ರಭಾವ ಬೀರುತ್ತದೆ.

Shani Gochar 2023

ಶನಿಗ್ರಹದ ಪ್ರಭಾವ ಎಂದರೆ ಎಲ್ಲರೂ ಭಯ ಪಡುತ್ತಾರೆ. ಏಕೆಂದರೆ ಶನಿಯ ಕೆಟ್ಟ ದೃಷ್ಟಿ ಬಿದ್ದರೆ ಅದರ ಪ್ರಭಾವ ದೀರ್ಘವಾಗಿರುತ್ತದೆ. ಶನಿಯ ಕೆಟ್ಟ ದೃಷ್ಟಿ ಬಿದ್ದರೆ ಆ ವ್ಯಕ್ತಿ ತುಂಬಾ ಕಷ್ಟ, ನೋವುಗಳನ್ನು ಅನುಭವಿಸುತ್ತಾನೆ/ಳೆ.

ಈ ಸಂಚಾರದಲ್ಲಿ ಕೆಲವೊಂದು ರಾಶಿಗಳು ಶನಿಯ ಕೆಟ್ಟ ದೃಷ್ಟಿಯಿಂದ ಮುಕ್ತರಾಗಲಿದ್ದಾರೆ, ಅವರು ಶನಿ ಸಾಡೇಸಾತಿಯಿಂದ ಅಥವಾ ಶನಿಧೈಯಾದಿಂದ ಅನುಭವಿಸಿದ ಕಷ್ಟಗಳು ಜನವರಿ17ಕ್ಕೆ ಮುಕ್ತಾಯವಾಗಲಿದೆ. ಆ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಶನಿಯ ಸಾಡೇಸಾತಿ ಮತ್ತು ಧೈಯಾ ಎಂದರೇನು?

ಶನಿಯ ಸಾಡೇಸಾತಿ ಮತ್ತು ಧೈಯಾ ಎಂದರೇನು?

ಶನಿ ಸಾಡೇಸಾತಿ

ಶನಿಯು ನ್ಯಾಯದ ದೇವರು. ನಾವು ಮಾಡುವ ಕರ್ಮಕ್ಕೆ ತಕ್ಕಂತೆ ಫಲ ನೀಡುತ್ತಾನೆ. ವ್ಯಕ್ತಿಯ ಬದುಕಿನಲ್ಲಿ ಒಮ್ಮೆಯಾದರೂ ಶನಿ ಸಾಡೇಸಾತಿ ಬರುತ್ತದೆ ಎಂದು ಹೇಳಲಾಗುವುದು. ಶನಿ ಸಾಡೇಸಾತಿ ತುಂಬಾ ಕಠೋರವಾದದ್ದು, ವ್ಯಕ್ತಿಯ ಜೀವನದಲ್ಲಿ ಶನಿ ಸಾಡೇಸತಿ ಪ್ರಾರಂಭವಾದಾಗ, ಅವನು ತನ್ನ ಕೆಲಸಗಳಲ್ಲಿ ನಿರಂತರವಾಗಿ ವೈಫಲ್ಯಗಳನ್ನು ಹೊಂದಲು ಪ್ರಾರಂಭಿಸುತ್ತಾನೆ. ಶನಿಯ ಸಾಡೇ ಸತಿಯು ಏಳೂವರೆ ವರ್ಷಗಳವರೆಗೆ ಇರುತ್ತದೆ .

ಶನಿ ಧೈಯಾ

ಶನಿ ಧೈಯಾದ ಪ್ರಭಾವವು ಎರಡೂವರೆ ವರ್ಷಗಳವರೆಗೆ ಇರುತ್ತದೆ. ಶನಿಯು ರಾಶಿ ಬದಲಾಯಿಸಿದಾಗ ಶನಿಧೈಯಾದಿಂದ ಮುಕ್ತರಾಗಬಹುದು.

ಶನಿ ಧೈಯಾದಿಂದ ಯಾವ ರಾಶಿಗಳು ಮುಕ್ತರಾಗಲಿದೆ, ಯಾರಿಗೆ ಶನಿ ಸಾಡೇಸಾತಿ ಮುಗಿಯಲಿದೆ ಎಂದು ನೋಡೋಣ...

ಧನು ರಾಶಿಗೆ ಶನಿ ಸಾಡೇಸಾತಿ ಮುಕ್ತಾಯ

ಧನು ರಾಶಿಗೆ ಶನಿ ಸಾಡೇಸಾತಿ ಮುಕ್ತಾಯ

ಜನವರಿ 17, 2023 ರಂದು, ಶನಿಯು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸಿದಾಗ ಧನು ರಾಶಿಯವರು ಶನಿ ಸಾಡೇಸಾತಿಯಿಂದ ಮುಕ್ತರಾಗುತ್ತಾರೆ. ತುಲಾ ಹಾಗೂ ಮಿಥುನ ರಾಶಿಯವರಿಗೆ ಶನಿ ಧೈಯಾ ಮುಕ್ತಾಯವಾಗಲಿದೆ.

ಇದರಿಂದಾಗಿ ಶನಿ ಕುಂಭ ರಾಶಿಗೆ ಪ್ರವೇಶಿಸಿದಾಗ ಧನು ರಾಶಿ, ತುಲಾ ಮತ್ತು ಮಿಥುನ ರಾಶಿಯವರು ಒಳ್ಳೆಯ ಸಂಗತಿಗಳನ್ನು ನಿರೀಕ್ಷಿಸಬಹುದು, ಏಕೆಂದರೆ ಈ ಅವಧಿಯಲ್ಲಿ ಅನುಭವಿಸಿದ ಕಷ್ಟಗಳು ದೂರಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ನಿಮ್ಮ ವ್ಯವಹಾರ ಹಾಗೂ ವೃತ್ತಿಯಲ್ಲಿ ಪ್ರಗತಿಯನ್ನು ಹೊಂದುವಿರಿ.

ಯಾರಿಗೆ ಶನಿ ಸಾಡೇಸಾತಿ ಪ್ರಾರಂಭ

ಯಾರಿಗೆ ಶನಿ ಸಾಡೇಸಾತಿ ಪ್ರಾರಂಭ

2023ರಲ್ಲಿ ಶನಿಯ ರಾಶಿ ಬದಲಾವಣೆಯಿಂದ ಮೀನ ರಾಶಿಯವರಿಗೆ ಶನಿಯ ಸಾಡೇ ಶತದ ಮೊದಲ ಹಂತವು ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ ಮಕರ ಮತ್ತು ಕುಂಭ ರಾಶಿಯ ಮೇಲೆ ಸಾಡೇ ಸತಿ ಈ ವರ್ಷವೂ ಮುಂದುವರಿಯಲಿದೆ. ಇದಲ್ಲದೇ ಕರ್ಕಕ ಮತ್ತು ವೃಶ್ಚಿಕ ರಾಶಿಯ ಮೇಲೆ ಶನಿಯ ಧೈಯಾ ಇರಲಿದೆ.

ಶನಿ ದೇವನ ಮಂತ್ರ ಪಠಿಸಿ

ಶನಿ ದೇವನ ಮಂತ್ರ ಪಠಿಸಿ

ಶನಿ ಗಾಯತ್ರಿ ಮಂತ್ರ

ಓಂ ಶನೈಶ್ಚರಾಯ ವಿದ್ಮಯೇ

ಸೂರ್ಯಪುತ್ರಾಯ ದಹಿಮಹಿ

ತನ್ನೊ ಮಂಡಾ ಪ್ರಚೋದಾಯತ್

ಶನಿ ಮಂತ್ರ

"ಓಂ ಹಿಲ್ಮ್ ಶಾಮ್ ಶನಾಯ ನಮ"

"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"

"ಓಂ ಶಾಮ್ ಶನೇಶ್ಚಾರ ನಮಃ"

"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"

ಶನಿ ಧ್ಯಾನ ಮಂತ್ರ

ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ

ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ

English summary

Shani Transit 2023: Shani Sadesati and Shani Dhaiya Will End In These Zodiac Signs

Shani Gochar 2023: After shani transit shani sadesati and shani will end these zodiac signs,
X
Desktop Bottom Promotion