For Quick Alerts
ALLOW NOTIFICATIONS  
For Daily Alerts

ಜನ್ಮನಕ್ಷತ್ರಕ್ಕೆ ಅನುಗುಣವಾಗಿ ಮಗುವಿನ ಹೆಸರಿಗೆ ಮೊದಲ ಅಕ್ಷರ ಯಾವುದು?

|

ಹಿಂದೂ ಸಂಪ್ರದಾಯದ ಪ್ರಕಾರ ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳಿವೆ, ಇದನ್ನು ಚಂದ್ರನ ಮನೆಗಳು ಎಂದೂ ಸಹ ಕರೆಯಲಾಗುತ್ತದೆ. ಅಂದರೆ ಚಂದ್ರನು ಆಕಾಶದ ಮೂಲಕ ಚಲಿಸುವಾಗ ಈ 27 ಮನೆ ಅಥವಾ ನಕ್ಷತ್ರಗಳ ಮೂಲಕ ಹಾದುಹೋಗುತ್ತಾನೆ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಚಂದ್ರನ ಮನೆಯಲ್ಲೂ ಪ್ರಬಲ ನಕ್ಷತ್ರಪುಂಜ ಅಥವಾ ನಕ್ಷತ್ರದಿಂದ ಅದರ ಹೆಸರನ್ನು ಪಡೆಯುತ್ತದೆ.

ಮಕ್ಕಳು ಜನಿಸಿದ ಸಮಯದಲ್ಲಿ ಚಂದ್ರ ಯಾವ ಮನೆಯಲ್ಲಿದ್ದ ಎಂದು ಆಧರಿಸಿ ಜ್ಯೋತಿಶಾಸ್ತ್ರದ ಮೂಲಕ ಮಗುವಿನ ಜನ್ಮ ನಕ್ಷತ್ರವನ್ನು ನಿರ್ಧರಿಸಲಾಗುತ್ತದೆ.

ಜ್ಯೋತಿಷ್ಯದ ನಂಬಿಕೆಯ ಪ್ರಕಾರ ನಿಮ್ಮ ಮಗುವಿನ ಜನ್ಮ ನಕ್ಷತ್ರದ ಆಧಾರಲ್ಲಿ ಅವಳ ವ್ಯಕ್ತಿತ್ವ, ಗುಣ-ನಡೆಗಳ ಒಂದು ಒಳನೋಟವನ್ನು ನೀಡುತ್ತದೆ, ಅಲ್ಲದೇ ಇನ್ನೂ ಮುಖ್ಯವಾಗಿ ನಿಮ್ಮ ನವಜಾತ ಶಿಶುವಿನ ಜನ್ಮನಕ್ಷತ್ರವನ್ನು ಆಧರಿಸಿ ಉತ್ತಮ ಹೆಸರನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿಯೇ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮಗು ಹುಟ್ಟಿದ ಕೂಡಲೇ ಜ್ಯೋತಿಷಿಗಳನ್ನು ಸಂಪರ್ಕಿಸಿ ತಮ್ಮ ಮಗುವಿನ ನಕ್ಷತ್ರವನ್ನು ಕಂಡುಕೊಳ್ಳುತ್ತಾರೆ.

ಮಗುವಿಗೆ ಹೆಸರನ್ನು ಇಡಲು ನಕ್ಷತ್ರವು ಹೇಗೆ ಸಹಾಯ ಮಾಡುತ್ತದೆ?

ಮಗುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಹೆಸರನ್ನು ಇಡುವುದು ಅವರ ಜೀವನ ಮತ್ತು ಹಣೆಬರಹವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಮಗು ಯಾವ ನಕ್ಷತ್ರದ ಅಡಿಯಲ್ಲಿ ಜನಿಸಿದೆ ಎಂಬುದರ ಆಧಾರದ ಮೇಲೆ, ನಿಮ್ಮ ಮಗುವಿನ ಹೆಸರನ್ನು ಇಡಲು ಮೊದಲ ಉಚ್ಚಾರಾಂಶಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ಒಂದು ಉಚ್ಚಾರಾಂಶದಿಂದ ಪ್ರಾರಂಭವಾಗುವ ಹೆಸರನ್ನು ಆರಿಸುವುದರಿಂದ ನಿಮ್ಮ ಮಗುವಿಗೆ ಅದೃಷ್ಟ ಮತ್ತು ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.

ನಿಮ್ಮ ಮಗುವಿನ ಹೆಸರನ್ನು ಪ್ರಾರಂಭಿಸಲು ಜನ್ಮನಕ್ಷತ್ರವು ನಿಮಗೆ ಉಚ್ಚಾರಾಂಶ ಅಥವಾ ಮೊದಲ ಅಕ್ಷರವನ್ನು ಮಾತ್ರ ನೀಡುತ್ತದೆ. ಆ ಧ್ವನಿಯೊಂದಿಗೆ ಪ್ರಾರಂಭವಾಗುವ ಯಾವುದೇ ಹೆಸರನ್ನು ನೀವು ಆಯ್ಕೆ ಮಾಡಬಹುದು.

ಜನ್ಮನಕ್ಷತ್ರ ಆಧರಿಸಿ ಹೆಸರಿಗೆ ಬರುವ ಮೊದಲ ಅಕ್ಷರಗಳು ಹೀಗಿವೆ

ಅಶ್ವಿನಿ ನಕ್ಷತ್ರ

ಅಶ್ವಿನಿ ನಕ್ಷತ್ರ

ಅಶ್ವಿನಿ ನಕ್ಷತ್ರ- ಚು, ಚೆ, ಚೋ, ಚೂ, ಲಾ, ಲಾ

ಭರಣಿ ನಕ್ಷತ್ರ

ಭರಣಿ ನಕ್ಷತ್ರ

ಭರಣಿ ನಕ್ಷತ್ರ- ಲಿ, ಲು, ಲೆ, ಲೋ, ಲೀ,

ಕೃತ್ತಿಕಾ ನಕ್ಷತ್ರ

ಕೃತ್ತಿಕಾ ನಕ್ಷತ್ರ

ಕೃತ್ತಿಕಾ ನಕ್ಷತ್ರ- ಆ, ಎ, ಇ, ಇ, ಐ, ಎ, ಐ, ಓ, ಯು

ರೋಹಿಣಿ ನಕ್ಷತ್ರ

ರೋಹಿಣಿ ನಕ್ಷತ್ರ

ರೋಹಿಣಿ ನಕ್ಷತ್ರ- ಒ, ವಾ, ವಾ, ವಿ, ವೀ, ವು, ವೂ, ವಾ, ವು

ಮೃಗಶಿರಾ ನಕ್ಷತ್ರ

ಮೃಗಶಿರಾ ನಕ್ಷತ್ರ

ಮೃಗಶಿರಾ ನಕ್ಷತ್ರ- ವೆ, ವೋ, ಕಾ, ಕಾ, ಕಿ ಕೀ, ನಾ, ವೋ

ಆರಿದ್ರಾ ನಕ್ಷತ್ರ

ಆರಿದ್ರಾ ನಕ್ಷತ್ರ

ಆರಿದ್ರಾ ನಕ್ಷತ್ರ- ಕು, ಕಾಂ, ಜಾ, ಚಾ, ಘಾ, ಡಾ, ನಾ,

ಪುನರ್ವಸು ನಕ್ಷತ್ರ

ಪುನರ್ವಸು ನಕ್ಷತ್ರ

ಪುನರ್ವಸು ನಕ್ಷತ್ರ- ಕೆ, ಕೇ ಕೋ, ಹಾ, ಹಾಂ, ಹೀ

ಪುಷ್ಯ ನಕ್ಷತ್ರ

ಪುಷ್ಯ ನಕ್ಷತ್ರ

ಪುಷ್ಯ ನಕ್ಷತ್ರ- ಹೂ, ಹಿ, ಹೋ, ಡಾ

ಆಶ್ಲೇಶಾ ನಕ್ಷತ್ರ

ಆಶ್ಲೇಶಾ ನಕ್ಷತ್ರ

ಆಶ್ಲೇಶಾ ನಕ್ಷತ್ರ- ಡು, ಡಿ, ಡು, ಡೀ, ಮಿ, ಡಾ

ಮಾಘಾ ನಕ್ಷತ್ರ

ಮಾಘಾ ನಕ್ಷತ್ರ

ಮಾಘಾ ನಕ್ಷತ್ರ - ಮಾ, ಮಾ, ಮಿ, ಮೀ ಮು, ಮಿ,

ಪೂರ್ವಾ ಫಲ್ಗುಣಿ ನಕ್ಷತ್ರ

ಪೂರ್ವಾ ಫಲ್ಗುಣಿ ನಕ್ಷತ್ರ

ಪೂರ್ವಾ ಫಲ್ಗುಣಿ ನಕ್ಷತ್ರ- ಮೊ, ತಾ, ತಾ, ಟಿ, ಟೀ, ತು,

ಉತ್ತರಾ ಫಲ್ಗುಣಿ ನಕ್ಷತ್ರ

ಉತ್ತರಾ ಫಲ್ಗುಣಿ ನಕ್ಷತ್ರ

ಉತ್ತರಾ ಫಲ್ಗುಣಿ ನಕ್ಷತ್ರ- ತೆ, ತಾ, ತಾ, ತೋ, ಪಾ, ಪಾ, ಪೈ, ಪೀ

ಹಸ್ತಾ ನಕ್ಷತ್ರ

ಹಸ್ತಾ ನಕ್ಷತ್ರ

ಹಸ್ತಾ ನಕ್ಷತ್ರ - ಪು, ಶಾ, ಶಾ, ನಾ, ಪೂ, ಥಾ

ಚಿತ್ರಾ ನಕ್ಷತ್ರ

ಚಿತ್ರಾ ನಕ್ಷತ್ರ

ಚಿತ್ರಾ ನಕ್ಷತ್ರ - ಪೆ, ಪೊ, ರಾ, ರಾ, ರಿ, ರೀ

ಸ್ವಾತಿ ನಕ್ಷತ್ರ

ಸ್ವಾತಿ ನಕ್ಷತ್ರ

ಸ್ವಾತಿ ನಕ್ಷತ್ರ - ರು, ರೇ, ರೋ, ರೂ, ತಾ, ತಾ

ವಿಶಾಕಾ ನಕ್ಷತ್ರ

ವಿಶಾಕಾ ನಕ್ಷತ್ರ

ವಿಶಾಕಾ ನಕ್ಷತ್ರ - ಟಿ, ಟೀ, ಟೂ, ತೆ, ತು, ಟೇ, ಟು

ಅನುರಾಧಾ ನಕ್ಷತ್ರ

ಅನುರಾಧಾ ನಕ್ಷತ್ರ

ಅನುರಾಧಾ ನಕ್ಷತ್ರ - ನಾ, ನಾ, ನಿ, ನು, ನೆ, ನೀ, ನೂ, ನಾ

ಜೇಷ್ಠ ನಕ್ಷತ್ರ

ಜೇಷ್ಠ ನಕ್ಷತ್ರ

ಜೇಷ್ಠ ನಕ್ಷತ್ರ - ಲ್ಲ, ಯಾ, ಯಾ, ಯಿ, ಯು, ಯೀ,

ಮೂಲ ನಕ್ಷತ್ರ

ಮೂಲ ನಕ್ಷತ್ರ

ಮೂಲ ನಕ್ಷತ್ರ - ಯೆ, ಯು, ಬಾ, ಬಿ, ಯೋ, ಭಿ, ಭಾ, ಭಾ, ಭೀ

ಪೂರ್ವ ಆಷಾಢ ನಕ್ಷತ್ರ

ಪೂರ್ವ ಆಷಾಢ ನಕ್ಷತ್ರ

ಪೂರ್ವ ಆಷಾಢ ನಕ್ಷತ್ರ - ಬು, ಡಾ, ಭೂ, ಫಾ, ಧಾ, ಫಾ

ಉತ್ತರ ಆಷಾಢ ನಕ್ಷತ್ರ

ಉತ್ತರ ಆಷಾಢ ನಕ್ಷತ್ರ

ಉತ್ತರ ಆಷಾಢ ನಕ್ಷತ್ರ - ಬಿ, ಬೊ, ಜಾ, ಜಿ, ಭಾ, ಭೆ, ಭೋ, ಜಾ, ಜೀ

ಶ್ರವಣ ನಕ್ಷತ್ರ

ಶ್ರವಣ ನಕ್ಷತ್ರ

ಶ್ರವಣ ನಕ್ಷತ್ರ - ಜು, ಜೆ, ಜೋ, ಖಿ, ಸೋ, ಖು, ಖೇ, ಖೋ

ಧನಿಷ್ಟ ನಕ್ಷತ್ರ

ಧನಿಷ್ಟ ನಕ್ಷತ್ರ

ಧನಿಷ್ಟ ನಕ್ಷತ್ರ - ಗಾ, ಗಿ, ಗು, ಗೀ, ಗೀ

ಶತಾಭಿಷಾ ನಕ್ಷತ್ರ

ಶತಾಭಿಷಾ ನಕ್ಷತ್ರ

ಶತಾಭಿಷಾ ನಕ್ಷತ್ರ - ಹೋ, ಸಾ, ಸಿ, ಸು, ಸೂ, ನೋ, ಗೌ

ಪೂರ್ವಾ ಭಾದ್ರಪದ ನಕ್ಷತ್ರ

ಪೂರ್ವಾ ಭಾದ್ರಪದ ನಕ್ಷತ್ರ

ಪೂರ್ವಾ ಭಾದ್ರಪದ ನಕ್ಷತ್ರ - ಸೆ, ಸೋ, ಧಾ, ಧಿ, ಡಿ, ಡಾ, ಡಾ, ಡೀ

ಉತ್ತರ ಭಾದ್ರಪದ ನಕ್ಷತ್ರ

ಉತ್ತರ ಭಾದ್ರಪದ ನಕ್ಷತ್ರ

ಉತ್ತರ ಭಾದ್ರಪದ ನಕ್ಷತ್ರ - ಡು, ಥಾ, ನಾ, ಗ್ನಾ, ಜ್ಞಾನ, ಡಾ, ಜಿ

ರೇವತಿ ನಕ್ಷತ್ರ

ರೇವತಿ ನಕ್ಷತ್ರ

ರೇವತಿ ನಕ್ಷತ್ರ - ದೇ, ದೋ, ಚಾ, ಚಾ, ಚಿ, ಚೀ

English summary

Names based on your baby's nakshatra in Kannada

Here we are discussing about Names based on your baby's nakshatra in Kannada. The following table shows you which syllables are considered auspicious to start your baby's name with for each nakshatra. Read more.
X