For Quick Alerts
ALLOW NOTIFICATIONS  
For Daily Alerts

ಮಾರ್ಗಶಿರ ಹುಣ್ಣಿಮೆ: ಈ ದಿನ ಆಚರಿಸುವ ಹೊಸ್ತಿಲ ಹುಣ್ಣಿಮೆ, ಹುತ್ತರಿಯ ಮಹತ್ವವೇನು?

|

ಹಿಂದೂ ಸಂಪ್ರದಾಯದಲ್ಲಿ ಅಮವಾಸ್ಯೆ,ಹುಣ್ಣಿಮೆಗೆ ತುಂಬಾನೇ ಮಹತ್ವವಿದೆ. ಕೆಲವೊಂದು ಹುಣ್ಣಿಮೆ ಹಾಗೂ ಅಮವಾಸ್ಯೆ ತುಂಬಾನೇ ವಿಶೇಷ ದಿನಗಳಾಗಿರುತ್ತದೆ. ಡಿಸೆಂಬರ್‌ 8ಕ್ಕೆ ಮಾರ್ಗಶಿರ ಹುಣ್ಣಿಮೆ, ಇದು ವರ್ಷದ ಕೊನೆಯ ಹುಣ್ಣಿಮೆ.

Margashirsha Purnima

ಧಾರ್ಮಿಕ ಆಚರಣೆಗಳ ದೃಷ್ಟಿಯಿಂದ ಈ ಹುಣ್ಣಿಮೆ ತುಂಬಾನೇ ಮಹತ್ವ ಹೊಂದಿದೆ. ಈ ದಿನವನ್ನು ಹೊಸ್ತಿಲ ಹುಣ್ಣಿಮೆಯಂದು ಆಚರಿಸಲಾಗುವುದು. ಉತ್ತರ ಕರ್ನಾಟಕದ ಕಡೆ ಈ ಹುಣ್ಣಿಮೆಯನ್ನು ತುಂಬಾ ವಿಶೇಷವಾಗಿ ಆಚರಿಸಲಾಗುವುದು.

ಹುತ್ತರಿ ಹಬ್ಬ

ಈ ದಿನದಂದು ಹುತ್ತರಿ ಹಬ್ಬವನ್ನು ಆಚರಿಸಲಾಗುವುದು. ಹೊಸದಾಗಿ ಬೆಳೆದ ಪೈರನ್ನು ಕಿತ್ತು ಮನೆಗೆ ಅಂದು ಹೊಸ ಅಕ್ಕಿಯಿಂದ ಪಾಯಸ ಮಾಡಲಾಗುವುದು. ಬೆಳೆದ ಹೊಸ ಪೈರನ್ನು ಮನೆ-ಮನೆಯ ಹೊಸ್ತಿಲಿನಲ್ಲಿ ಕಟ್ಟಿ ತಂಬಿಟ್ಟು ಮುಂತಾದ ಸಿಹಿ ತಿಂಡಿಗಳನ್ನು ಮಾಡಿ ಹಬ್ಬವನ್ನು ಆಚರಿಸಲಾಗುವುದು.

ಶ್ರೀಕೃಷ್ಣನಿಗೆ ಪ್ರಿಯವಾದ ತಿಂಗಳು
ಮಾರ್ಗಶಿರ ಮಾಸ ಶ್ರೀಕೃಷ್ಣನಿಗೆ ತುಂಬಾನೇ ಪ್ರಿಯವಾದ ದಿನ. ಈ ತಿಂಗಳಿನಲ್ಲಿ ಶ್ರೀಕೃಷ್ಣ, ರಾಧೆ, ವಿಷ್ಣು-ಲಕ್ಷ್ಮಿಯರನ್ನು ಆರಾಧಿಸಲಾಗುವುದು.

ಈ ದಿನದ ಪೂಜಾ ವಿಧಿಗಳೇನು?
ಈ ದಿನ ಬೆಳಗ್ಗೆ ಬೇಗನೆ ಎದ್ದು ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ನಂತರ ಸಂಕಲ್ಪ ತೆಗೆದುಕೊಂಡು ಉಪವಾಸ ವ್ರತ ಮಾಡಬೇಕು. ನಂತರ ಪೂಜೆಯನ್ನು ಮಾಡಲಾಗುವುದು. ಈ ದಿನ ಮಾಡುವ ಧಾನ ಧರ್ಮಗಳಿಗೆ ಹೆಚ್ಚಿನ ಫಲ ಇದೆ.

ಮಾರ್ಗಶಿರ ಉಪವಾಸದ ಮಹತ್ವ
ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಚಂದ್ರನಿಗೆ ಆರ್ಘ್ಯವನ್ನು ಅರ್ಪಿಸಿದ ಬಳಿಕವಷ್ಟೇ ಉಪವಾಸ ಮುರಿಯಬೇಕು. ಯಾರು ಈ ದಿನ ಉಪವಾಸ ಇರುತ್ತಾರೋ ಅವರು ಮರಣದ ಬಂಧನದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.

ಹೊಸ್ತಿಲ ಹುಣ್ಣಿಮೆಯ ಮಹತ್ವ
ಹಿಂದೂ ಧರ್ಮಗ್ರಂಥಗಳ ಪ್ರಕಾರ ಮಾರ್ಗಶಿರ ಮಾಸದಿಂದ ಸತ್ಯಯುಗ ಪ್ರಾರಂಭವಾಯ್ತು ಎನ್ನಲಾಗುತ್ತಿದೆ. ನಮ್ಮ ರಾಶಿಯ ಮೇಲೆ ಚಂದ್ರನ ಪ್ರಭಾವ ಕೂಡ ಇರುತ್ತದೆ, ಈ ದಿನ ಶ್ರೀ ವಿಷ್ಣುವನ್ನು ಆರಾಧಿಸುವುದರಿಂದ ಒಳಿತಾಗುವುದು ಎಂಬ ನಂಬಿಕೆ.

ಮಹಾವಿಷ್ಣುವಿನ ಕೃಪೆಗೆ ಈ ಮಂತ್ರ ಪಠಿಸಿ

ಮಹಾವಿಷ್ಣುವಿನ ಕೃಪೆಗೆ ಈ ಮಂತ್ರ ಪಠಿಸಿ

'ಓಂ ನಮಃ ನಾರಾಯಣ' ಈ ಮಂತ್ರವನ್ನು ಪಠಿಸುವುದರಿಂದ ಎಲ್ಲಾ ರೀತಿಯ ದುಃಖಗಳು ದೂರವಾಗುತ್ತವೆ ಮತ್ತು ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ನಿಮಗೆ ಉಪವಾಸ ಮಾಡಲು ಸಾಧ್ಯವಾಗದಿದ್ದರೂ ಈ ಮಂತ್ರವನ್ನು ಜಪಿಸಬಹುದು.

ಆರ್ಥಿಕ ಸಮಸ್ಯೆ ದೂರ ಮಾಡಲು:

ನಿಮಗೂ ಲಕ್ಷ್ಮಿಯ ಪೃಪೆಗೆ ಪಾತ್ರರಾಗಬೇಕೆಂದರೆ ಈ ಸಂಜೆ ಆಲದ ಮರಕ್ಕೆ ಸುತ್ತು ಹಾಕಿ ತುಪ್ಪದ ದೀಪವನ್ನು ಬೆಳಗಿ. ಈ ದಿನ ವಿಷ್ಣು-ಲಕ್ಷ್ಮಿಯನ್ನು ಪೂಜಿಸಿ ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ, ಹಣದ ಕೊರತೆ ಇರುವುದಿಲ್ಲ.

ಬಾಕಿಯುಳಿದ ಕೆಲಸ ಪೂರ್ಣಗೊಳ್ಳಲು

ಬಾಕಿಯುಳಿದ ಕೆಲಸ ಪೂರ್ಣಗೊಳ್ಳಲು

ಹುಣ್ಣಿಮೆಯಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ನಿಮ್ಮ ಅಪೂರ್ಣ ಕೆಲಸ ಪೂರ್ಣವಾಗುವುದು.

ವೃತ್ತಿ ಜೀವನದಲ್ಲಿ ಬಡ್ತಿ ಪಡೆಯಲು

ವೃತ್ತಿ ಜೀವನದಲ್ಲಿ ನೀವು ಬಯಸಿದ ಎತ್ತರವನ್ನು ತಲುಪಲು ಹಸಿ ಹಾಲನ್ನು ಗಂಗಾ ಜಲಕ್ಕೆ ಬೆರೆಸಿ ಶ್ರೀ ನಾರಾಯಣನಿಗೆ ಅರ್ಪಿಸಿ. ಇದಲ್ಲದೆ ಸತ್ಯನಾರಾಯಣ ಕತೆಯನ್ನು ಓದುವುದು, ಕೇಳುವುದು ಮಾಡಿ.

 ವಾಸ್ತು ಟಿಪ್ಸ್

ವಾಸ್ತು ಟಿಪ್ಸ್

ವಾಸ್ತು ಶಾಸ್ತ್ರದ ಪ್ರಕಾರ ಮಾರ್ಗಶಿರ ಪೂರ್ಣಿಮಾ ದಿನದಂದು ಲಕ್ಷ್ಮಿ ದೇವಿಯ ಚಿತ್ರವನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಮನೆಯಲ್ಲಿ ಲಕ್ಷ್ಮಿಯ ವಾಸಸ್ಥಾನವನ್ನು ಕಾಪಾಡಿಕೊಳ್ಳಲು, ಸಂಜೆ ಮನೆಯ ಹೊಸ್ತಿಲಿನಲ್ಲಿ ದೀಪವನ್ನು ಬೆಳಗಿಸಿ.

English summary

Margashirsha Purnima 2022: Date, Time, Rituals, Puja Vidhi and Significance in Kannada

Margashirsha Purnima 2022: Here are importance of hostila hunnime and remedies to do pn this special day.... ಮರ್ಗಶಿರ ಪೂರ್ಣಿಮಾ 2022: ಹೊಸ್ತಿಲ ಹುಣ್ಣಿಮೆ ಮಹತ್ವ ಹಾಗೂ ಈ ದಿನ ಏನು ಪರಿಹಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ...
X
Desktop Bottom Promotion