Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
Holi 2021: ಬಣ್ಣಗಳ ಹಬ್ಬದ ದಿನಾಂಕ, ಮುಹೂರ್ತ ಹಾಗೂ ಮಹತ್ವ ನಿಮಗಾಗಿ
ಬಣ್ಣಗಳ ಹಬ್ಬ ಎಂದು ಕರೆಯಲ್ಪಡುವ ಹೋಳಿ ಹಬ್ಬ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಎಲ್ಲಾ ಜಾತಿ, ಧರ್ಮ, ಮತಗಳನ್ನು ಮೀರಿದ ಹಬ್ಬವೇ ಈ ಹೋಳಿ. ಹೋಲಿಕ ದಹನ ಆಚರಣೆಯನ್ನು ಹೋಳಿ ಸಂದರ್ಭದಲ್ಲಿ ನಡೆಸಲಾಗುತ್ತದೆ, ಇದು ದುಷ್ಟರ ಮೇಲೆ ಒಳ್ಳೆಯದನ್ನು ಗೆದ್ದಿರುವ ಸಂಕೇತವಾಗಿದೆ. ಆದಾಗ್ಯೂ, ಒಡಿಶಾದಂತಹ ಕೆಲವು ರಾಜ್ಯಗಳಲ್ಲಿ, ಹೋಳಿ ಹಬ್ಬವನ್ನು ಡೋಲ್ ಜಾತ್ರಾ ಅಥವಾ ಡಾಲ್ ಪೂರ್ಣಿಮಾ ಎಂದೂ ಕರೆಯುತ್ತಾರೆ, ಅದೇ ದಿನ ಹೋಲಿಕ ದಹನ. ಈ ವರ್ಷ ಹೋಳಿಯಾಟವು ಅಥವಾ ಓಕುಳಿಯಾಟ ಮಾರ್ಚ್ 29, 2021 ರಂದು (ಸೋಮವಾರ) ಹೋಲಿಕ ದಹನವು ಮಾರ್ಚ್ 28, 2021 ರಂದು ನಡೆಯಲಿದೆ.

ಇದು ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಬರುವ ಈ ಹೋಳಿಯನ್ನು ವಸಂತ ಉತ್ಸವ ಎಂದೂ ಕರೆಯುತ್ತಾರೆ, ಏಕೆಂದರೆ ಇದು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ರಸ್ತೆಬದಿಯಲ್ಲಿ ಬಣ್ಣಗಳ ರಾಶಿಗಳು ಕಂಡುಬರುವುದರಿಂದ ಮಾರುಕಟ್ಟೆಯು ವರ್ಣಮಯವಾಗುತ್ತದೆ. ಮಕ್ಕಳು ಮತ್ತು ವಯಸ್ಕರು ಇಬ್ಬರೂ ಆಡುವ ಈ ಹೋಳಿಯಿಂದ ಎಲ್ಲರ ಮನಸ್ಸು ರಂಗುಮಯವಾಗುತ್ತದೆ. ಈ ಹೋಳಿಯ ಮುಹೂರ್ತ ಹಾಗೂ ಮಹತ್ವದ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ.
ಹೋಳಿ 2021 ತಿಥಿ ಮತ್ತು ಪೂಜಾ ಮುಹೂರ್ತ:
ಪೂರ್ಣಿಮಾ ತಿಥಿ ಪ್ರಾರಂಭ - ಮಾರ್ಚ್ 28, 2021 ರಂದು ಬೆಳಿಗ್ಗೆ 03:27
ಪೂರ್ಣಿಮಾ ತಿಥಿ ಅಂತ್ಯ - ಮಾರ್ಚ್ ೨೯, 2021 ರಂದು ಬೆಳಿಗ್ಗೆ 12:17
ಹೋಲಿಕ ದಹನ ದಿನಾಂಕ: ಮಾರ್ಚ್ 28, 2021 ರ ಭಾನುವಾರ
ಹೋಲಿಕ ದಹನ ಮುಹೂರ್ತ - 06:54 PM ರಿಂದ 09:14 PM (02 ಗಂಟೆ 20 ನಿಮಿಷಗಳು)
ಭದ್ರಾ ಪಂಚ- ಬೆಳಿಗ್ಗೆ 10: 13 ರಿಂದ 11:16
ಭದ್ರಾ ಮುಖ - 11:16 ರಿಂದ 1:00
ಹೋಳಿಯಾಟ ಅಥವಾ ಓಕುಳಿಯಾಟ- ಮಾರ್ಚ್ 29, 2021
ಹೋಳಿ ಮಹತ್ವ:
ಹೋಳಿ ಆಚರಣೆಗಳು ಹೋಳಿಯ ಹಿಂದಿನ ರಾತ್ರಿ ಹೋಲಿಕ ದಹನದೊಂದಿಗೆ ಪ್ರಾರಂಭವಾಗುತ್ತವೆ, ಅಲ್ಲಿ ಜನರು ಒಟ್ಟುಗೂಡುತ್ತಾರೆ, ದೀಪೋತ್ಸವದ ಮುಂದೆ ಧಾರ್ಮಿಕ ವಿಧಿಗಳನ್ನು ಮಾಡುತ್ತಾರೆ ಮತ್ತು ರಾಕ್ಷಸ ರಾಜ ಹಿರಣ್ಯಕಶಿಪು ಅವರ ಸಹೋದರಿ ಹೋಲಿಕಾ ಬೆಂಕಿಯಲ್ಲಿ ಸುಟ್ಟುಹೋದ ರೀತಿಯಲ್ಲಿ ನಮ್ಮ ಆಂತರಿಕ ದುಷ್ಟತನ ನಾಶವಾಗಲಿ ಎಂದು ಪ್ರಾರ್ಥಿಸುತ್ತಾರೆ. ಹಿರಣ್ಯಕಶ್ಯಪ ಅವರಿಗೆ ಪ್ರಹ್ಲಾದ್ ಎಂಬ ಮಗನಿದ್ದನು.
ಹಿರಣ್ಯಕಶ್ಯಪು ಎಂಬ ರಾಕ್ಷಸ ರಾಜನು ಎಲ್ಲರೂ ತನ್ನನ್ನು ಆರಾಧಿಸಬೇಕೆಂದು ಬಯಸಿದ್ದರು, ಆದರೆ ಅವರ ಮಗ ಪ್ರಹ್ಲಾದ್ ಅವರು ವಿಷ್ಣುವಿನ ಭಕ್ತರಾಗಿದ್ದರಿಂದ ಅದನ್ನು ಮಾಡಲು ನಿರಾಕರಿಸಿದರು. ಇದಕ್ಕೆ ಕೋಪಗೊಂಡ ಹಿರಣ್ಯಕಶ್ಯಪು ತನ್ನ ಸಹೋದರಿ ಹೋಲಿಕಾಳನ್ನು ಪ್ರಹ್ಲಾದನನ್ನು ತನ್ನ ತೋಳುಗಳಲ್ಲಿ ತೆಗೆದುಕೊಂಡು ಬೆಂಕಿಯನ್ನು ಸುಡುವಂತೆ ಕೇಳಿದನು.



Click it and Unblock the Notifications

