For Quick Alerts
ALLOW NOTIFICATIONS  
For Daily Alerts

ಭೂತ-ಪ್ರೇತಗೆ ವ್ಯಕ್ತಿಯ ಶರೀರ ಸೇರಲು ಸಾಧ್ಯವೇ?

|

ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಭೂತ, ಪ್ರೇತ ಎಂದೆಲ್ಲಾ ಈಗಲೂ ನಂಬುತ್ತೇವೆ. ವಿಜ್ಞಾನ ಕೂಡ ನೆಗೆಟಿವ್‌ ಎನರ್ಜಿ ಎಂಬುವುದು ಇದೆ ಎಂಬುವುದನ್ನು ಹೇಳಿದೆ.

ದೆವ್ವ, ಭೂತದ ಪರಿಕಲ್ಪನೆ ನಮ್ಮಲ್ಲಿ ಅನೇಕರಿಲ್ಲಿದೆ. ಕೆಲವರು ಇದನ್ನು ನಂಬುವುದಿಲ್ಲ, ಆದರೆ ಹೆಚ್ಚಿನವರು ನಂಬುತ್ತಾರೆ. ಪಾಸಿಟಿವ್‌ ಎನರ್ಜಿ ಎಂಬುವುದು ಇರುವುದಾದರೆ ನೆಗೆಟಿವ್‌ ಎನರ್ಜಿ ಎಂಬುವುದು ಇರಲೇಬೇಕಲ್ಲಾ? ಎಂಬುವುದು ಅವರ ವಾದವಾಗಿರುತ್ತೆ.

Ghosts In Hindu Religion

ಭೂತದ ಪರಿಕಲ್ಪನೆ ಎಲ್ಲಾ ಧರ್ಮದಲ್ಲಿ ಇದೆ, ಯಾರು ಅಕಾಲಿಕ ಮೃತ್ಯವಾಗುತ್ತಾರೋ, ಈಡೇರದ ಆಸೆಗಳಿದ್ದರೆ ಅವರ ದೆವ್ವಗಳಾಗುತ್ತಾರೆ ಎಂದು ಹೇಳಲಾಗುವುದು. ಹಿಂದೂ ಧರ್ಮದಲ್ಲಿ ದೆವ್ವ ಹಾಗೂ ಅದರ ಸಮಸ್ಯೆ ಇಲ್ಲವಾಗಿಸುವುದರ ಬಗ್ಗೆ ಅನೇಕ ಕ್ರಮಗಳಿವೆ.

ಆದ್ದರಿಂದ ವ್ಯಕ್ತಿ ಮರಣವೊಂದಿದ ಬಳಿಕ ಅವರಿಗೆ ಶಾಂತಿಕಾರ್ಯ ಮಾಡಲಾಗುವುದು, ಪಿತೃ ತರ್ಪಣ ನೀಡಲಾಗುವುದು.

ಹಿಂದೂ ಧರ್ಮದಲ್ಲಿ ಸೂಕ್ಷ್ಮ ಶರೀರದ ಪರಿಕಲ್ಪನೆ

ಹಿಂದೂ ಧರ್ಮದಲ್ಲಿ ಸೂಕ್ಷ್ಮ ಶರೀರದ ಪರಿಕಲ್ಪನೆ

ಹಿಂದೂ ಧರ್ಮದಲ್ಲಿ ಸೂಕ್ಷ್ಮ ಶರೀರದ ಪರಿಕಲ್ಪನೆ ಇದೆ. ಅದನ್ನು ಆತ್ಮ ಎಂದು ಕರೆಯಲಾಗುವುದು. ದೇಹದಿಂದ ಆತ್ಮ ಬೇರ್ಪಟ್ಟಾಗ ಸಾವು ಸಂಭವಿಸುವುದು ಎಂದು ಹೇಳಲಾಗುವುದು. ಆತ್ಮ ಬೇರ್ಪಡುವುದನ್ನು ಬ್ರಹ್ಮ ಸೂತ್ರ ಎಂದು ಕರೆಯಲಾಗುವುದು. ಶತ್ಮ ಬೇರ್ಪಟ್ಟಾಗ ಉಳಿಯುವ ದೇಹವನ್ನು ಪಿಂಡ ಶರೀರ ಅಥವಾ ಜಡ ಶರೀರ ಎಂದು ಕರೆಯಲಾಗುವುದು.

ಆತ್ಮಕ್ಕೆ ಮುಕ್ತಿ ಕೊಡುವ ಕಾರ್ಯ

ಆತ್ಮಕ್ಕೆ ಮುಕ್ತಿ ಕೊಡುವ ಕಾರ್ಯ

ವ್ಯಕ್ತಿ ಮರಣವೊಂದಿದ ಬಳಿಕ ಆತ್ಮಕ್ಕೆ ಮುಕ್ತಿ ಕೊಡಬೇಕು, ಇಲ್ಲದಿದ್ದರೆ ಅದು ದೆವ್ವವಾಗಿ ಅಲೆಯುವುದು ಎಂಬ ನಂಬಿಕೆ ಇದೆ. ಆದ್ದರಿಂದ ಮರಣವೊಂದಿದರಿಗೆ ಅವರವರ ಪದ್ಧತಿ ಅಂತೆ ಕಾರ್ಯಗಳನ್ನು ಮಾಡಿ, ಪಿಂಡ ಪ್ರಧಾನ ಮಾಡಿ ಆತ್ಮಕ್ಕೆ ಮುಕ್ತಿ ನೀಡಲಾಗುವುದು.

ಪ್ರೇತ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುವುದೇ?

ಪ್ರೇತ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುವುದೇ?

ಇಲ್ಲ, ಸನಾತನ ಧರ್ಮದ ಪ್ರಕಾರ ಒಂದು ದೇಹ ಕೇವಲ ಒಂದು ಆತ್ಮವನ್ನು ಮಾತ್ರ ಹೊಂದಲು ಸಾಧ್ಯ.

ಹಾಗಾದರೆ ಕೆಲವರಿಗೆ ದೆವ್ವ ಹೊಕ್ಕಿದಂತೆ ಆಡುತ್ತಾರಲ್ಲಾ ಎಂದು ಕೇಳಬಹುದು. ಅವರಿಗೆ ಮರಣವೊಂದಿದ ವ್ಯಕ್ತಿ ಮೇಲೆ ಅನುಕಂಪ ಇರುತ್ತದೆ, ಆ ಅನುಕಂಪದಿಂದ ಮರಣವೊಂದಿದ ವ್ಯಕ್ತಿಗೆ ಸಹಾಯ ಮಾಡುವ ಏಜೆಂಟ್‌ ಆಗಲು ಬಯಸುತ್ತಾರೆ. ಅವರು ಅವರಿಗೆ ಅರಿವಿಲ್ಲದೆಯೇ ವಿಚಿತ್ರವಾಗಿ ಆಡಲಾರಂಭಿಸುತ್ತಾರೆ. ಇದಕ್ಕೆ ದೆವ್ವ ಹೊಕ್ಕಿದ್ದು ಎಂದು ಹೇಳುತತ್ತಾರೆ. ಕೆಲವೊಂದು ಸಿನಿಮಾಗಳಲ್ಲಿ, ಕತೆಗಳಲ್ಲಿ ದೆವ್ವ ವ್ಯಕ್ತಿಯ ದೇಹವನ್ನು ಸೇರುವ ಕತೆಗಳನ್ನು ಕೇಳಿರಬಹುದು, ಆದರೆ ಅವೆಲ್ಲಾ ಕಲ್ಪನೆಯಷ್ಟೇ, ದೆವ್ವ ವ್ಯಕ್ತಿಯ ದೇಹ ಸೇರಲು ಸಾಧ್ಯವಿಲ್ಲ.

ಪಿಂಡ ಅಥವಾ ಶ್ರಾದ್ಧ ಕಾರ್ಯ

ಪಿಂಡ ಅಥವಾ ಶ್ರಾದ್ಧ ಕಾರ್ಯ

ಪಿಂಡ ಅಥವಾ ಶ್ರಾದ್ಧ ಕಾರ್ಯ ಮಾಡುವುದರ ಮೂಲಕ ಆತ್ಮಕ್ಕೆ ಮುಕ್ತಿಯನ್ನು ನೀಡಲಾಗುವುದು. ಆತ್ಮಕ್ಕೆ ಮುಕ್ತಿ ಸಿಕ್ಕರೆ ಅದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಆದ್ದರಿಂದ ಪಿತೃ ತರ್ಪಣ ಕಾರ್ಯ ಮಾಡಲಾಗುವುದು. ಪಿತೃ ತರ್ಪಣ ಕಾರ್ಯ ಮಾಡಿದಾಗ ಎಲ್ಲಾ ಆತ್ಮಗಳಿಗೆ ಮುಕ್ತಿ ಸಿಗುವುದು ಎಂಬ ನಂಬಿಕೆ ಇದೆ.

ಆದ್ದರಿಂದಲೇ ಶ್ರಾದ್ದ, ಪಿತೃ ತರ್ಪಣ ಕಾರ್ಯಗಳಿಗೆ ತುಂಬಾನೇ ಮಹತ್ವವಿದೆ.

English summary

Ghosts In Hindu Religion – Know About Preta Concept In Hinduism in kannada

Ghosts In Hindu Religion – Know About Preta Concept In Hinduism in kannada, read on-
X
Desktop Bottom Promotion