For Quick Alerts
ALLOW NOTIFICATIONS  
For Daily Alerts

ವಿಶ್ವ ಸ್ನೇಹಿತರ ದಿನ: 2019: ಇತಿಹಾಸ ಮತ್ತು ಮಹತ್ವ

|

ಅಪರಿಚಿತರು ಪರಿಚಿತರಾಗಿ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸುಂದರ ಬಂಧವೇ ಸ್ನೇಹ. ಸ್ನೇಹಕ್ಕೆ ಯಾವುದೇ ವಯಸ್ಸಿನ, ಜಾತಿಯ, ಧರ್ಮದ ಮಿತಿಯಿಲ್ಲ. ಪರಸ್ಪರ ಅಕ್ಕರೆಯನ್ನು ತೋರುತ್ತಾ ಕೈಲಾದ ನಿಸ್ವಾರ್ಥ ಸಹಾಯ ಮಾಡುವ ಬಂಧ. ಸ್ನೇಹವನ್ನು ಅಂತವ್ರ್ಯಕ್ತೀಯ ಬಂಧದ ರೂಪ ಎಂದು ಸಹ ಹೇಳಬಹುದು. ರಕ್ತ ಸಂಬಂಧವಲ್ಲದೆ ಇದ್ದರೂ ರಕ್ತ ಸಂಬಂಧಕ್ಕೂ ಮೀರಿದ ರೀತಿಯಲ್ಲಿರುತ್ತದೆ. ಕಷ್ಟಕಾಲದಲ್ಲಿ ಯಾರು ಬರದೆ ಹೋದರೂ ಸ್ನೇಹಿತ ಎನಿಸಿಕೊಂಡವರು ಬಂದೇ ಬರುತ್ತಾರೆ.

ಸ್ನೇಹ ಸ್ಥಳದಿಂದ ಸ್ಥಳಕ್ಕೆ ಹಲವು ರೂಪಗಳಲ್ಲಿ, ಬದಲಾಗಬಹುದು. ಸ್ನೇಹ, ಕೆಲವು ಗುಣಲಕ್ಷಣಗಳನ್ನು ಹೊಂದಿದೆ. ಅಂತಹ ಗುಣಲಕ್ಷಣಗಳನ್ನು ಪ್ರೀತಿ, ಸಹಾನುಭೂತಿ, ಅನುಭೂತಿ, ಪ್ರಾಮಾಣಿಕತೆ, ಪರೋಪಕಾರ ಬುದ್ಧಿ, ಪರಸ್ಪರ ಸಾಮರಸ್ಯ ಮತ್ತು ಸಹಾನುಭೂತಿ, ಪರಸ್ಪರರ ಕಂಪನಿ ಸಂತೋಷಕ್ಕಾಗಿ, ಟ್ರಸ್ಟ್, ಮತ್ತು, ತನ್ನನ್ನೇ ಎಂದು ಒಬ್ಬರ ಭಾವನೆಗಳನ್ನು ವ್ಯಕ್ತಪಡಿಸಲು, ಮತ್ತು ಸ್ನೇಹಿತರ ತೀರ್ಪು ಭಯವಿಲ್ಲದೇ ತಪ್ಪುಗಳನ್ನು ತಿದ್ದುವ ಸಾಮರ್ಥ್ಯ ಸ್ನೇಹಕ್ಕೆ ಇದೆ.

Friendship Day

ಸ್ನೇಹ ಎಂಬುದು ಬಾಂಧವ್ಯ ಅಥವಾ ಹೊಂದಾಣಿಕೆಯ ಪ್ರಜ್ಞೆಯನ್ನು ರೂಪಿಸಿ ಜೀವನದ ಉದ್ದೇಶಕ್ಕೊಂದು ಅರ್ಥಕೊಡುವ ಸಾಧನ. ಪ್ರತಿಕೂಲ ಸನ್ನಿವೇಶಗಳು ಹಾಗೂ ಮಾನಸಿಕ ಆಘಾತಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸ್ನೇಹಕ್ಕೆ ಮಹತ್ವದ ಸ್ಥಾನವಿದೆ. ಇದು ಆತ್ಮವಿಶ್ವಾಸವನ್ನು ಗಳಿಸಿ ಗಟ್ಟಿಮಾಡಿಕೊಳ್ಳುವುದಕ್ಕೂ ಸಹಕಾರಿ, ಜೀವನದ ಆನಂದವನ್ನು ವರ್ಧಿಸುವ ಮಂತ್ರದಂಡ. ಸಮಸ್ಯೆಗಳು ತಲೆದೋರಿದಾಗ ಅದನ್ನು ಹಂಚಿಕೊಳ್ಳುವುದು ಮತ್ತು ಸಲಹೆ ಕೇಳುವುದು ಸ್ನೇಹಿತರ ಬಳಿಯೇ ಸರಾಗವೇ ಹೊರತು, ಮಿಕ್ಕವರ ಬಳಿ ಅಷ್ಟಾಗಿ ಅಲ್ಲ ಎಂಬುದು ಅನುಭವಜನ್ಯ ಮಾತು. ಸ್ನೇಹಿತರು ಯಾವಾಗಲೂ ಅತೀವ ಪ್ರಭಾವ ಬೀರುವಂಥವರಾಗಿರುವುದರಿಂದ, ವ್ಯಕ್ತಿಯೋರ್ವನ ಜೀವನ ಕೌಶಲಗಳ ಸುಧಾರಣೆಯಲ್ಲಿ ಸ್ನೇಹದ ಕೊಡುಗೆ ಹೆಚ್ಚೇ ಎನ್ನಬೇಕು. ಜಾತಿ-ಮತ, ಭಾಷೆ-ಬಣ್ಣ, ಸಾಮಾಜಿಕ ಸ್ಥಾನಮಾನ, ಶ್ರೀಮಂತಿಕೆ, ಸಾಧನೆಗಳು- ಈ ಯಾವುದೇ ಸಂಗತಿಗಳಿಗೂ ಮಿಗಿಲಾದದ್ದು ಸ್ನೇಹ.

ವ್ಯಕ್ತಿಯೊಬ್ಬ ಮೌನವಾಗಿದ್ದಾಗಲೂ ಅವನ ಅಳಲು-ಸಂಕಟವನ್ನು ಕೇಳಿಸಿಕೊಳ್ಳಬಲ್ಲಾತನೇ ನಿಜ ಸ್ನೇಹಿತ. ತನ್ನ ಆತ್ಮೀಯ ಸ್ನೇಹಿತ ಅಥವಾ ಸ್ನೇಹಿತರಿಗಾಗಿ ಸಾಕಷ್ಟು ಸಹಾಯ, ಸಾಹಸ ಹಾಗೂ ಸತ್ಸಂಗತಿಗಳನ್ನು ಒಳಗೊಂಡಂತಹ ಸ್ನೇಹದ ಕಥೆಯನ್ನು ಪುರಾಣ ಇತಿಹಾಸಗಳಲ್ಲಿಯೂ ಕಾಣಬಹುದು. ಪ್ರಸ್ತುತ ಜೀವನದಲ್ಲೂ ಉದ್ಯೋಗ, ಸಾಮಾಜಿಕ ಕೆಲಸ, ವಿದ್ಯಾಭ್ಯಾಸ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಜನರು ಪರಸ್ಪರ ಸ್ನೇಹ-ಸಹಕಾರಗಳ ಮೂಲಕ ಕೆಲಸ ನಿರ್ವಹಿಸುವುದನ್ನು ಕಾಣಬಹುದು. ಕೆಲವರು ಆತ್ಮೀಯರಾಗಿ ಮಾನಸಿಕ ಸ್ಥೈರ್ಯವನ್ನು ತುಂಬುವರು.

ನಿಜ, ಅಗತ್ಯ ಇರುವಾಗ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ. ಅಂತಹ ಸ್ನೇಹಿತರನ್ನು ನಾವು ನಮ್ಮ ಜೀವನದಲ್ಲಿ ಪಡೆದುಕೊಂಡಿದ್ದೇವೆ ಎಂದರೆ ಅದು ನಮ್ಮ ಅದೃಷ್ಟ ಹಾಗೂ ಪುಣ್ಯ ಎನಿಸಿಕೊಳ್ಳುತ್ತದೆ. ಅಂತಹ ಸುಂದರ ಸಂಬಂಧಗಳನ್ನು ನೆನೆದುಕೊಳ್ಳಲು ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ನೇಹಿತರ ದಿನಾಚರಣೆಯನ್ನು ಆಚರಿಸುತ್ತೇವೆ. ಈ ವರ್ಷ ಆಗಸ್ಟ್ 4 ರಂದು ಸ್ನೇಹಿತರ ದಿನಾಚರಣೆಯ್ನನು ಆಚರಿಸಲಾಗುತ್ತಿದೆ. ಅದ್ಭುತವಾದ ಈ ದಿನಾಚರಣೆಯ ಆಚರಣೆ, ಇತಿಹಾಸ ಹಾಗೂ ಮಹತ್ವವನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಸ್ನೇಹ ದಿನ/ ಸ್ನೇಹಿತರ ದಿನಾಚರಣೆ: ಇತಿಹಾಸ

ಸ್ನೇಹಿತನು ಜೀವನದಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸುತ್ತಾನೆ. ಅಂತಹ ಒಂದು ಸುಂದರ ಬಂಧಕ್ಕೆ ಸ್ನೇಹ ದಿನ ಎಂಬ ವಿಶೇಷ ಆಚರಣೆಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್, 1935 ರಲ್ಲಿ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು.

ಅಂದಿನಿಂದ ಸ್ನೇಹ ದಿನವು ವಾರ್ಷಿಕ ಕಾರ್ಯಕ್ರಮವಾಯಿತು. ಸ್ನೇಹ ದಿನವನ್ನು ಆಚರಿಸುವ ಯಶಸ್ಸು ಮತ್ತು ಜನಪ್ರಿಯತೆಯನ್ನು ನೋಡಿದ ನಂತರ ಹಲವಾರು ಇತರ ದೇಶಗಳು ಸಹ ಆಚರಿಸಲು ಪ್ರಾರಂಭಿಸಿದವು. ನಂತರದ ದಿನಗಳಲ್ಲಿ ಸ್ನೇಹ ದಿನವು ಜನಪ್ರಿಯವಾಯಿತು. 1997 ರಲ್ಲಿ ವಿಶ್ವಸಂಸ್ಥೆಯು ವಿನ್ನಿ-ದಿ ಪೂಹ್ ಅವರನ್ನು ವಿಶ್ವದ ಸ್ನೇಹಕ್ಕಾಗಿ ರಾಯಭಾರಿಯಾಗಿ ಹೆಸರಿಸಿದೆ ಎಂದು ಘೋಷಿಸಿತು.

2011 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯದ ಪ್ರಕಾರ ಜನಾಂಗ, ಬಣ್ಣ, ಲಿಂಗ, ಧರ್ಮ ಇತ್ಯಾದಿಗಳನ್ನು ಲೆಕ್ಕಿಸದೆ ವಿವಿಧ ದೇಶಗಳ ಜನರ ಸ್ನೇಹಕ್ಕಾಗಿ ಬಲವಾದ ಸಂಬಂಧವನ್ನು ರೂಪಿಸುವ ಉದ್ದೇಶದಿಂದ ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹ ದಿನವಾಗಿ ಆಚರಿಸಲು ನಿರ್ಧರಿಸಿತು.

ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919ರಲ್ಲಿ ಹಾಲ್ ಮಾರ್ಕ್ ಕಾರ್ಡ್ ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವಾಗಿ ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ.

1958ರ ಜುಲೈ 20ರಂದು ಡಾ. ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂಬ ಪ್ರಸ್ತಾಪವನ್ನಿಟ್ಟರು. ಪರಾಗ್ವೆಯ ಅಸುನಸಿಯೊನ್ ನಿಂದ 200 ಕಿ.ಮೀ. ಉತ್ತರದಲ್ಲಿರುವ ಪರಾಗ್ವೆ ನದಿಯ ನಗರದವಾದ ಪುರ್ಟೊ ಪಿನಾಸ್ಕೋದಲ್ಲಿ ತನ್ನ ಸ್ನೇಹಿತರೊಂದಿಗೆ ರಾತ್ರಿಯೂಟವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಾಚೋ ಅವರು ಈ ಪ್ರಸ್ತಾವವನ್ನಿಟ್ಟಿದ್ದರು.

2011 ಎಪ್ರಿಲ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜುಲೈ 30ನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಅಚರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.

ದಕ್ಷಿಣ ಅಮೆರಿಕಾದ ದಕ್ಷಿಣಭಾಗದ ಕೆಲವೊಂದು ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪರಾಗ್ವೆಯಲ್ಲಿ ಇದನ್ನು ಆಚರಿಸಲಾಗುತ್ತದೆ. 1958ರಲ್ಲಿ ಜುಲೈ 30ನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಆಚರಿಸಲು ಪರಾಗ್ವೆ ಪ್ರಸ್ತಾವ ಮಾಡಿತ್ತು. ಸಾಂಪ್ರದಾಯಿಕವಾಗಿ ಆಗಸ್ಟ್‌ನ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಕೆಲವೊಂದು ರಾಷ್ಟ್ರಗಳಲ್ಲಿ ಸ್ನೇಹಿತರ ದಿನ ಆಚರಣೆಗೆ ಯಾವುದೇ ನಿಗದಿತ ದಿನವಿಲ್ಲ.

ಗ್ರೀಟಿಂಗ್ ಕಾರ್ಡ್ ಕಂಪೆನಿಗಳಿಂದ ಆರಂಭವಾದಂತಹ ಈ ಆಚರಣೆಯು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆದುಕೊಂಡು ರಜಾದಿನವನ್ನು ತುಂಬಾ ಆಸಕ್ತಿಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಾರತ, ಬಾಂಗ್ಲಾದೇಶ ಮತ್ತು ಮಲೇಶಿಯಾದಲ್ಲಿ ಇದರ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.

ದಕ್ಷಿಣ ಏಶ್ಯಾದಲ್ಲಿ ರಜಾದಿನವನ್ನು ಪ್ರಚುರ ಮಾಡುವವರು 1935ರಲ್ಲಿ ಅಮೆರಿಕಾದಲ್ಲಿ ನೆಲೆಸಿರುವಂತಹ ತಮ್ಮ ಸ್ನೇಹಿತರಿಗಾಗಿ ಈ ದಿನವನ್ನು ಅರ್ಪಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಇದರ ನಿಜವಾದ ವರ್ಷ 1919. ಸ್ನೇಹಿತರ ದಿನದಂದು ಉಡುಗೊರೆ, ಕಾರ್ಡ್ ಮತ್ತು ಕೈಗೆ ರಿಬ್ಬನ್‌ನಂತಹ ಪಟ್ಟಿಗಳನ್ನು ಧರಿಸುವುದು ಸಾಮಾನ್ಯವಾಗಿ ಆಚರಿಸಿಕೊಂಡಿರುವಂತಹ ಸಂಪ್ರದಾಯ.

1935ರಲ್ಲಿ ಅಮೆರಿಕಾದ ಕಾಂಗ್ರೆಸ್ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಘೋಷಿಸಿತು. ಸ್ನೇಹಿತರಿಗೆ ಗೌರವ ಸೂಚಿಸುವ ಸಲುವಾಗಿ ರಾಷ್ಟ್ರೀಯ ರಜೆಯನ್ನು ಘೋಷಿಸಿದೆ. ಮಹಿಳೆಯರ ಸ್ನೇಹಿತರ ದಿನವನ್ನು ಸಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು ಆಚರಿಸಲಾಗುತ್ತದೆ.

ಪ್ರತಿಯೊಬ್ಬರು ಸ್ನೇಹಿತರ ದಿನವನ್ನು ಆಚರಿಸಿದರೆ ಬೆಸ್ಟ್ ಫ್ರೆಂಡ್ಸ್ ಅನಿಮಲ್ ಸೊಸೈಟಿಯು ಉತ್ತಮ ಸ್ನೇಹಿತರ ವಾರವನ್ನು ಆಚರಿಸುತ್ತಾ ಬಂದಿದೆ. ಅದು ಪ್ರತೀ ವರ್ಷ ಜೂನ್ 23ರಿಂದ 25ರ ತನಕ. ಇದನ್ನು ಪ್ರಾಣಿಗಳ ರಕ್ಷಣೆ ಮತ್ತು ಹಕ್ಕಿಗಾಗಿ ಆಚರಿಸುತ್ತಾ ಇದೆ. ಈ ವಾರದ ಮೊದಲ ದಿನವನ್ನು ಉತ್ತಮ ಗೆಳೆಯನ ದಿನವೆಂದು ಕರೆಯಲಾಗುತ್ತದೆ.

ಜೀವನದಲ್ಲಿ ಸ್ನೇಹಿತರ ಪ್ರಾಮುಖ್ಯತೆ

- ಕುಟುಂಬವನ್ನು ಹೊಂದುವುದು ಎಷ್ಟು ಮುಖ್ಯವೋ ಸ್ನೇಹಿತರನ್ನು ಹೊಂದುವುದು ಸಹ ಅಷ್ಟೇ ಮುಖ್ಯ. ಅದಕ್ಕಾಗಿಯೇ "ಸ್ನೇಹಿತರು ಎಂದರೆ ನಾವು ನಮ್ಮನ್ನು ಆರಿಸಿಕೊಳ್ಳುವ ಕುಟುಂಬ" ಎಂದು ಹೇಳಲಾಗುತ್ತದೆ.
- ಒಳ್ಳೆಯ ಸ್ನೇಹಿತರು ಅಥವಾ ನಿಜವಾದ ಸ್ನೇಹಿತರು ನಮಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತಾರೆ. ನಮಗೆ ಸಹಾಯ ಮಾಡುತ್ತಾರೆ. ನಮಗೆ ಅಗತ್ಯವಿರುವಾಗ ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಮತ್ತು ಬೆಂಬಲಿಸುತ್ತಾರೆ.
- ಸ್ನೇಹಿತ ಕಷ್ಟಗಳೊಂದಿಗೆ ಅಥವಾ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಇರುತ್ತಾನೆ ಮತ್ತು ನಮಗೆ ವಿಶೇಷ ಭಾವನೆ ಮೂಡಿಸುತ್ತಾನೆ.
- ಬಾಲ್ಯದ ದಿನಗಳಲ್ಲಿ ಕಾಳಜಿ ಮತ್ತು ಹಂಚಿಕೆಯ ಅಭ್ಯಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ಸ್ನೇಹವು ನಮಗೆ ಸಹಾಯ ಮಾಡುತ್ತದೆ.
- ಅವರ ಸರಿಯಾದ ಬೆಳವಣಿಗೆ ಮತ್ತು ಹಾಗೂ ಭಾವನಾತ್ಮಕ ಧೈರ್ಯಕ್ಕೆ ಸ್ನೇಹಿತರು ಮುಖ್ಯ ಎಂದು ಸಹ ಹೇಳಲಾಗುತ್ತದೆ. ಮಕ್ಕಳು ಸ್ನೇಹಿತರೊಂದಿಗೆ ಒಟ್ಟಾಗಿ ಕಲಿಯುತ್ತಾರೆ ಮತ್ತು ಆಡುತ್ತಾರೆ.
- ಪ್ರತಿಯೊಬ್ಬರ ಬುದ್ಧಿ ಹಾಗೂ ಜ್ಞಾನದ ಅಭಿವೃದ್ಧಿ ಆಗುವುದು ವಿವಿಧ ಸ್ನೇಹಿತರೊಂದಿಗೆ ಬೆರೆತಾಗಲೇ ಎಂದು ಹೇಳಬಹುದು.
- ಒಬ್ಬ ಒಳ್ಳೆಯ ಸ್ನೇಹಿತನಿಂದ ನಮ್ಮ ಪ್ರವೃತ್ತಿ ಹಾಗೂ ವರ್ತನೆಯಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ಕಾಣಬಹುದು.

English summary

Friendship Day 2019: History and Significan

As we all know that a “Friend in need is a friend indeed” which means that whenever you are in need, a friend is there for you. Friendship Day is celebrated on first Sunday of August. This year in 2019, it is celebrated on 4 August. Let us read more about Friendship Day, its history, how it is celebrated and significance. Friendship Day promotes the role of friend in life. A friend is a person that you can always rely on and is considered as closest to you. Someone trustworthy, genuine and accepts you for who you are. This year Friendship Day falls on Sunday, 4 August 2019 and most businesses follow regular Sunday opening hours in India.
X
Desktop Bottom Promotion