For Quick Alerts
ALLOW NOTIFICATIONS  
For Daily Alerts

February Festivals 2023 : ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ

|

ವರ್ಷದ ಎರಡನೇ ತಿಂಗಳ ಫೆಬ್ರವರಿಗೆ ಕಾಲಿಡುತ್ತಿದ್ದೇವೆ. ಪಂಚಾಂಗದ ಪ್ರಕಾರ, ಫೆಬ್ರವರಿ ತಿಂಗಳು ಮಾಘ ಮಾಸದ ಶುಕ್ಲ ಪಕ್ಷ ಏಕಾದಶಿ ತಿಥಿಯಿಂದ ಪ್ರಾರಂಭವಾಗಿ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯೊಂದಿಗೆ ಕೊನೆಗೊಳ್ಳುತ್ತದೆ.

ಆದ್ದರಿಂದ ಈ ತಿಂಗಳಲ್ಲಿ ಮಾಘ ಪೂರ್ಣಿಮೆ, ಮಹಾಶಿವರಾತ್ರಿ, ಜಯ ಏಕಾದಶಿಯಂತಹ ಅನೇಕ ಹಬ್ಬ, ವ್ರತಗಳನ್ನು ಆಚರಣೆ ಮಾಡಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಹಬ್ಬಗಳು ಹಾಗೂ ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Festivals and Vrats of February

ಫೆಬ್ರವರಿ 2023 ರಲ್ಲಿರುವ ಹಬ್ಬಗಳು ಹಾಗೂ ವ್ರತಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

1 ಫೆಬ್ರವರಿ 2023 ಬುಧವಾರ ಜಯ ಏಕಾದಶಿ ಮತ್ತು ಭೀಷ್ಮ ದ್ವಾದಶಿ:
ಈ ದಿನ ವಿಷ್ಣುವನ್ನು ಪೂಜಿಸುವುದರ ಜೊತೆಗೆ ಉಪವಾಸ ಇರಬೇಕೆಂಬ ನಿಯಮವಿದೆ. ಅದೇ ರೀತಿ ಜಯ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯ ಪಾಪಗಳು ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ. ಈ ಏಕಾದಶಿಯು ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಬರುತ್ತದೆ. ಮತ್ತೊಂದೆಡೆ, ಭೀಷ್ಮ ದ್ವಾದಶಿಯ ದಿನ, ಪೂರ್ವಜರಿಗೆ ಮೀಸಲಿಡಲಾಗಿದೆ. ಈ ದಿನ ಶ್ರೀ ಕೃಷ್ಣನನ್ನು ಪೂಜಿಸುವ ಸಂಪ್ರದಾಯವೂ ಇದೆ.

2 ಫೆಬ್ರವರಿ 2023, ಗುರುವಾರ ಗುರು ಪ್ರದೋಷ ವ್ರತ:
ಈ ಮಾಸದಲ್ಲಿ ಗುರುವಾರದಂರು ಪ್ರದೋಷ ವ್ರತ ಬಂದಿದ್ದು, ಇದನ್ನು ಗುರು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ.

5 ಫೆಬ್ರವರಿ 2023 ಭಾನುವಾರ ಮಾಘ ಪೂರ್ಣಿಮೆ ಅಥವಾ ಹುಣ್ಣಿಮೆ, ಗುರು ರವಿದಾಸ್ ಜಯಂತಿ:
ಮಾಘ ಪೂರ್ಣಿಮೆಯ ಮಹತ್ವ ಏನೆಂದರೆ ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಮನುಷ್ಯ ರೋಗಗಳಿಂದ ಮುಕ್ತನಾಗುತ್ತಾನೆ. ಈ ದಿನ ಎಳ್ಳನ್ನು ದಾನ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಒಬ್ಬರನ್ನೊಬ್ಬರು ಪ್ರೀತಿಸಲು ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸಲು ಕಲಿಸಿದ ಸಂತ ರವಿದಾಸರ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ.

9 ಫೆಬ್ರವರಿ 2023, ಗುರುವಾರ ದ್ವಿಜಪ್ರಿಯ ಸಂಕಷ್ಟ ಚತುರ್ಥಿ:
ಇದು ಫಾಲ್ಗುಣ ಮಾಸದ ಸಂಕಷ್ಟಿ ಚತುರ್ಥಿ ಆಗಿರುತ್ತದೆ, ಈ ದಿನ ಗಣಪತಿಯ ವಿಶೇಷ ಪೂಜೆ ಮಾಡಲಾಗುತ್ತದೆ. ಇದರಿಂದ ಸಂತೋಷ, ಸಮೃದ್ಧಿ ನೆಲೆಸುತ್ತದೆ ಮತ್ತು ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ ಎಂದು ನಂಬಿಕೆಯಿದೆ.

12 ಫೆಬ್ರವರಿ 2023 ಭಾನುವಾರ ಯಶೋದಾ ಜಯಂತಿ:
ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನವನ್ನು ಈ ದಿನ ಆಚರಿಸಲಾಗುತ್ತದೆ. ಯಶೋದೆಯನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಬರುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

13 ಫೆಬ್ರವರಿ 2023 ಸೋಮವಾರ: ಕುಂಭ ಸಂಕ್ರಾಂತಿ, ಶಬರಿ ಜಯಂತಿ, ಕಾಲಷ್ಟಮಿ:
ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ, ಫೆಬ್ರವರಿಯಲ್ಲಿ ಸೂರ್ಯ ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನದಂದು ಶಿವನನ್ನು ಕಾಲಭೈರವನ ಉಗ್ರ ರೂಪದಲ್ಲಿ ಪೂಜಿಸಲಾಗುತ್ತದೆ, ಅವನನ್ನು ಪೂಜಿಸುವುದರಿಂದ ಶತ್ರುಗಳ ಮೇಲೆ ವಿಜಯ ತಂದು ಕೊಡುತ್ತದೆ.

17 ಫೆಬ್ರವರಿ 2023 ಶುಕ್ರವಾರ ವಿಜಯ ಏಕಾದಶಿ:
ಈ ಮಹಾನ್ ಪುಣ್ಯ ವ್ರತವನ್ನು ಆಚರಿಸುವುದರಿಂದ, ಒಬ್ಬ ವ್ಯಕ್ತಿಯು ವಾಜಪೇಯಿ ಯಾಗದ ಫಲವನ್ನು ಪಡೆಯುತ್ತಾನೆ. ವಿಜಯ ಏಕಾದಶಿ ತನ್ನ ಹೆಸರಿನ ಪ್ರಕಾರ ಶತ್ರುಗಳ ವಿರುದ್ಧ ವಿಜಯವನ್ನು ನೀಡುತ್ತದೆ.

18 ಫೆಬ್ರವರಿ 2023 ಶನಿವಾರ ಮಹಾಶಿವರಾತ್ರಿ, ಮಾಸಿಕ ಶಿವರಾತ್ರಿ, ಪ್ರದೋಷ ವ್ರತ, ಶನಿ ತ್ರಯೋದಶಿ:
ಮಹಾಶಿವರಾತ್ರಿ ಹಬ್ಬವು ಶಿವ ಮತ್ತು ಶಕ್ತಿಯ ಭೇಟಿಯ ದಿನವಾಗಿದೆ. ಪುರಾಣಗಳ ಪ್ರಕಾರ, ಈ ದಿನ ತಾಯಿ ಪಾರ್ವತಿ ಮತ್ತು ಭಗವಾನ್ ಶಿವನ ವಿವಾಹವು ನಡೆದಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜೊತೆಗೆ ಈ ದಿನ 12 ಜ್ಯೋತಿರ್ಲಿಂಗಗಳು ಕಾಣಿಸಿಕೊಂಡಿವೆ ಎಂಬ ನಂಬಿಕೆ ಕೂಡ ಇದೆ.

20 ಫೆಬ್ರವರಿ 2023 ಸೋಮವಾರ ಸೋಮಾವತಿ ಅಮವಾಸ್ಯೆ:
ಸೋಮವಾರದಂದು ಅಮವಾಸ್ಯೆಯ ತಿಥಿ ಬರುವ ದಿನವನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನದಂದು ವಿವಾಹಿತ ಮಹಿಳೆಯರು ಅಶ್ವತ್ಥಮರವನ್ನು ಪೂಜಿಸುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಸೋಮಾವತಿ ಮತ್ತು ಶನಿ ಅಮಾವಾಸ್ಯೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

21 ಫೆಬ್ರವರಿ ಮಂಗಳವಾರ ರಾಮಕೃಷ್ಣ ಜಯಂತಿ:
ಈ ದಿನವನ್ನು ರಾಮಕೃಷ್ಣ ಪರಮಹಂಸರ ಜಯಂತಿಯ ದಿನವನ್ನಾಗಿ ದೇಶದಾದ್ಯಂತ ಆಚರಣೆ ಮಾಡಲಾಗುತ್ತದೆ.

23 ಫೆಬ್ರವರಿ 2023 ಗುರುವಾರ ವಿನಾಯಕ ಚತುರ್ಥಿ

25 ಫೆಬ್ರವರಿ ಶನಿವಾರ ಸ್ಕಂದ ಷಷ್ಠಿ

27 ಫೆಬ್ರವರಿ 2023 ಸೋಮವಾರ ಹೋಲಾಷ್ಟಕ ಪ್ರಾರಂಭ, ಮಾಸಿಕ ದುರ್ಗಾಷ್ಟಮಿ, ರೋಹಿಣಿ ಉಪವಾಸ:
ಹೋಳಿಗೆ ಎಂಟು ದಿನಗಳ ಮೊದಲು ಹೋಲಾಷ್ಟಕ ನಡೆಯುತ್ತದೆ. ಈ ಬಾರಿ ಹೋಳಿ ಮಾರ್ಚ್ 7, 2023 ರಂದು ನಡೆಯಲಿದ್ದು, ಈ ಹೋಲಾಷ್ಟಕ್ ಮಾರ್ಚ್ 6 ರವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ

English summary

Festivals and Vrats in the Month of February 2023

Here we talking about Festivals and Vrats of February 2023, read on
X
Desktop Bottom Promotion