For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ದಿನಾ ಎಷ್ಟು ಹೊತ್ತಿಗೆ ಪೂಜೆ ಮಾಡಿದರೆ ಒಳ್ಳೆಯದು? ಪೂಜೆ ಮಾಡುವಾಗ ಏನು ಮಾಡಬಾರದು?

|

ಪ್ರತಿದಿನ ದೀಪ ಹಚ್ಚಿ ಇಷ್ಟ ದೇವರುಗಳನ್ನು ಪ್ರಾರ್ಥಿಸುವುದು ಹಿಂದೂಗಳ ಧಾರ್ಮಿಕ ನಂಬಿಕೆ. ಜೈನರು, ಬೌದ್ಧರು ಕೂಡ ಪೂಜೆಯನ್ನು ಮಾಡುತ್ತಾರೆ. ಪ್ರತಿದಿನವೂ ಒಂದೊಂದು ದೇವರನ್ನು ಪೂಜಿಸಲಾಗುವುದು.

best Time to perform daily puja

ಕೆಲವು ವಿಶೇಷ ಸಂದರ್ಭಗಳಲ್ಲಿ ವಿಶೇಷ ಪೂಜೆಯನ್ನು ಕೂಡ ಸಲ್ಲಿಸಲಾಗುವುದು. ಅಂದ್ರೆ ಲಕ್ಷ್ಮಿ ಪೂಜೆ, ಗೌರಿ ಪೂಜೆ, ಗಣೇಶನಿಗೆ ಪೂಜೆ, ವ್ರತಗಳ ಸಂದರ್ಭದಲ್ಲಿ ಮಾಡುವ ಪೂಜೆ, ದೀಪಾವಳಿ ಸಮಯದಲ್ಲಿ ಮಾಡುವ ಪೂಜೆ ಹೀಗೆ ವಿಶೇಷ ಸಂದರ್ಭಗಳಿಗೆ ತಕ್ಕಂತೆ ಪೂಜೆಯ ವಿಧಾನ ಬದಲಾಗುವುದು, ಆದರೆ ದಿನನಿತ್ಯದ ಪೂಜೆಯಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ.

ಪೂಜೆ ಮಾಡಿದಾಗ ನಮ್ಮನ್ನು ರಕ್ಷಿಸಲು ದೇವರಿದ್ದಾನೆ ಎಂಬ ನಂಬಿಕೆ, ಮನಸ್ಸಿಗೆ ನೆಮ್ಮದಿ, ಈ ಕಾರಣಕ್ಕೆ ಪೂಜೆಯನ್ನು ಮಾಡುತ್ತೇವೆ, ಈ ಪೂಜೆಗೆ ಕೆಲವು ಸಮಯ ಕೂಡ ಇದೆ, ಅದರ ಬಗ್ಗೆ ಗೊತ್ತೇ? ಪೂಜೆಯನ್ನು ಯಾವ ಸಮಯದಲ್ಲಿ ಮಾಡಬೇಕು? ಪೂಜೆಯನ್ನು ಹೇಗೆ ಮಾಡಬೇಕು ಎಂಬುವುದನ್ನು ನೋಡೋಣ ಬನ್ನಿ:

ಪೂಜೆಗೆ ಯಾವ ಸಮಯ ತುಂಬಾ ಒಳ್ಳೆಯದು?

ಪೂಜೆಗೆ ಯಾವ ಸಮಯ ತುಂಬಾ ಒಳ್ಳೆಯದು?

* ಬೆಳಗ್ಗೆ 4:30ರಿಂದ 5ಗಂಟೆ, ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು.

* ಬೆಳಗ್ಗೆ 9 ಗಂಟೆಗೆ ಪೂಜೆ ಮಾಡಬಹುದು

* ಮಧ್ಯಾಹ್ನ 12 ಗಂಟೆಗೆ ಪೂಜೆ ಮಾಡಬಹುದು

* ಸಂಜೆ 4.30ರಿಂದ 6 ಗಂಟೆಯೊಳಗೆ ಮಾಡಬಹುದು. ಇದನ್ನು ಸಂಧ್ಯಾ ಪೂಜೆ ಎಂದು ಕರೆಯಲಾಗುವುದು.

* ರಾತ್ರಿ 9 ಗಂಟೆಗೆ ದೇವರು ಮಲಗುತ್ತಾನೆ ಎಂದು ಹೇಳಲಾಗುವುದು, ಈ ಹೊತ್ತಿನಲ್ಲಿ ಮಾಡುವ ಪೂಜೆಗೆ ಶಯನ ಪೂಜೆ ಎಂದು ಕರೆಯಲಾಗುವುದು.

 ಪೂಜಾ ವಿಧಿಗಳೇನು?

ಪೂಜಾ ವಿಧಿಗಳೇನು?

* ಮೊದಲು ಸ್ನಾನ ಮಾಡಿ ದೇಹವನ್ನು ಸ್ವಚ್ಛ ಮಾಡಿ ಮಡಿ ಬಟ್ಟೆ ಧರಿಸಿ

* ನಂತರ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು ಇಷ್ಟ ದೇವರನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು.

* ದೇವರ ಕೋಣೆಯನ್ನು ಸ್ವಚ್ಛ ಮಾಡಿ.

* ನಂತರ ಮೊದಲಿಗೆ ಗಣೇಶನ ಆರಾಧನೆಯೊಂದಿಗೆ ಪೂಜೆಯನ್ನು ಮಾಡಿ.

* ದೇಪ ಹಚ್ಚಿ, ಅಗರಬತ್ತಿ , ಧೂಪ ಹಚ್ಚಿಡಿ.

* ದೇವರಿಗೆ ಧಾನ್ಯಗಳು, ಹಣ್ಣುಗಳು, ನೈವೇದ್ಯ ಅರ್ಪಿಸಬಹುದು, ಈ ರೀತಿ ಸಾಮಾನ್ಯವಾಗಿ ವ್ರತದ ಸಂದರ್ಭದಲ್ಲಿ ಇಡಲಾಗುವುದು.

* ನಂತರ ದೇವರ ಮಂತ್ರಗಳನ್ನು ಪಠಿಸಿ, ಧ್ಯಾನ ಮಾಡಿ.

ಪೂಜೆಗೆ ಬೇಕಾಗುವ ಸಾಮಗ್ರಿ

ಪೂಜೆಗೆ ಬೇಕಾಗುವ ಸಾಮಗ್ರಿ

ದೀಪ

ದೀಪದ ಎಣ್ಣೆ(ಎಳ್ಳೆಣ್ಣೆ)

ಬತ್ತಿ

ಜಪ ಮಾಲೆ

ಘಂಟೆ

ಹೂಗಳು

ಅಗರಬತ್ತಿ

ಕರ್ಪೂರ

 ಪೂಜೆ ಮಾಡುವಾಗ ಏನು ಮಾಡಬಾರದು?

ಪೂಜೆ ಮಾಡುವಾಗ ಏನು ಮಾಡಬಾರದು?

* ಸ್ನಾನ ಮಾಡದೆ ದೇವರ ದೀಪ ಹಚ್ಚಬಾರದು.

* ಸುಖಾಸನದಲ್ಲಿ ಕೂತು ಪೂಜೆ ಪ್ರಾರಂಭಿಸಿ, ಪೂಜೆಗೆ ಕೂತಾಗ ಆಗಾಗ ಎದ್ದು ಹೋಗಬೇಡಿ.

* ನಿಮ್ಮ ಮೊಬೈಲ್ ಸೈಲೆಂಟ್‌ನಲ್ಲಿಡಿ

* ದೇವರಿಗೆ ಬೆನ್ನು ಹಾಕಿ ಕೂತು ಪೂಜೆ ಮಾಡಬೇಡಿ.

* ಬರಿಗೈಯಲ್ಲಿ ದೇವರಿಗೆ ಏನೂ ಅರ್ಪಿಸಬೇಡಿ, ತಟ್ಟೆಯಲ್ಲಿಟ್ಟು ಅರ್ಪಿಸಿ

* ಒಂದು ದೀಪದಿಂದ ಮತ್ತೊಂದು ದೀಪ ಹಚ್ಚಬೇಡಿ

* ಹಬ್ಬದ ದಿನಗಳಲ್ಲಿ, ಶುಕ್ರವಾರ, ಭಾನುವಾರ, 11, 12ನೇ ಅಂದರೆ ಏಕಾದಶಿ, ದ್ವಾದಶಿ ದಿನ ತುಳಸಿ ಎಲೆ ಕೀಳಬಾರದು.

* ಗಣೇಶ, ಲಕ್ಷ್ಮಿ, ಸರಸ್ವತಿ ನಿಂತುಕೊಂಡಿರುವ ಮೂರ್ತಿ ಅಥವಾ ಫೋಟೋ ಬಳಸಬೇಡಿ.

* 11 ಇಂಚಿಗಿಂತ ಚಿಕ್ಕದಾದ ದೇವರ ಮೂರ್ತಿ ಬಳಸಿ. ಪೂಜಾ ಸಾಮಗ್ರಿ ನೀಟಾಗಿ ಇಡಿ.

ದಿನ ನಿತ್ಯದ ಪೂಜೆಯನ್ನು ಯಾಪೂಜೆರು ಮಾಡಬಹುದು?

ದಿನ ನಿತ್ಯದ ಪೂಜೆಯನ್ನು ಯಾಪೂಜೆರು ಮಾಡಬಹುದು?

ಇವರೇ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿಲ್ಲ, ಮನೆಯಲ್ಲಿ ಪೂಜೆ ಯಾರು ಬೇಕಾದರೂ ಮಾಡಬಹುದು, ಆದರೆ ಪೂಜೆ ಮಾಡುವವರು ಮಡಿಯಿಂದ ಇರಬೇಕು. ಬೆಳಗ್ಗೆ ಎದ್ದು ಸ್ನಾನ ಮಾಡಿದ ಬಳಿಕವಷ್ಟೇ ಪೂಜೆ ಮಾಡಬೇಕು. ಪೂಜೆಗೆ ಹೂಗಳನ್ನು ಅರ್ಪಿಸಿ, ಮಂತ್ರಗಳನ್ನು ಹೇಳಬೇಕು. ಮನೆಯಲ್ಲಿ ಒಬ್ಬರು ದೀಪ ಹಚ್ಚಿದ ಮೇಲೆ ಬೇರೆಯವರು ಹಚ್ಚಬಾರದು, ಅವರು ಬಂದು ಪ್ರಾರ್ಥಿಸಿ ಹೋಗಬಹುದು. ಮನೆಯಲ್ಲಿ ಆರತಿ ಮಾಡುವಾಗ ಮನೆಮಂದಿಯೆಲ್ಲಾ ಬಂದು ಪ್ರಾರ್ಥಿಸಿದರೆ ಮನೆಗೆ ಮತ್ತಷ್ಟು ಒಳ್ಳೆಯದು.

ಯಾರು ಮತ್ತು ಯಾವಾಗ ಪೂಜೆ ಮಾಡಬಾರದು?

* ಮನೆಯಲ್ಲಿ ಸೂತಕವಿದ್ದಾಗ ಪೂಜೆ ಮಾಡಬಾರದು. ಮನೆಯಲ್ಲಿ ಮರಣ ಸಂಭವಿಸಿದರೆ, ಹೆರಿಗೆಯಾಗಿದ್ದರೆ ಪೂಜೆ ಮಾಡಬಾರದು.

* ಮುಟ್ಟಿನ ಸಮಯದಲ್ಲಿ ಮಹಿಳೆಯರು ದೀಪ ಹಚ್ಚಬಾರದು. ಮುಟ್ಟಿನ ಸಮಯದಲ್ಲಿ ರಜ ಅಂಶ ಅಧಿಕವಿರುತ್ತದೆ. ಇದು ಸಾತ್ವಿಕ ಶಕ್ತಿ ಮೇಲೆ ಪ್ರಭಾವ ಬೀರುವುದು, ಆದ್ದರಿಂದ ಪೂಜೆಯನ್ನು ಮಾಡಬಾರದು.

English summary

Best Time and Rules to Perform Daily Puja in Kannada

best Time to perform daily puja, Puja Vidhi, Things not to do while performing puja,
X
Desktop Bottom Promotion