For Quick Alerts
ALLOW NOTIFICATIONS  
For Daily Alerts

ಭಾರತದ ಲಕ್ಷುರಿ ಟ್ರೈನ್‌ಗಳು ಹೇಗಿದೆ ಗೊತ್ತಾ? ಅದರ ಪ್ರಯಾಣ ದರ ಕೇಳಿದರೆ ಶಾಕ್ ಆಗ್ತೀರಿ

|

ಟ್ರಾವೆಲ್ ಮಾಡೋದು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಮಳೆಗಾಲದಲ್ಲಂತೂ ಹಚ್ಚ ಹಸಿರ ಹೊದಿಕೆ ತೊಟ್ಟ ಬೆಟ್ಟ ಗುಡ್ಡಗಳು ಜನರನ್ನು ಆಕರ್ಷಿಸುತ್ತದೆ. ಮಳೆಗಾಲಕ್ಕೆ ಎಲ್ಲದರೂ ಪ್ರವಾಸಕ್ಕೆ ಹೋಗಣ ಎಂದು ಮನಸ್ಸು ಹೇಳುತ್ತದೆ. ಆದರೆ ಅನೇಕರು ಬಸ್, ಕಾರಿನಲ್ಲಿ ಹೋಗಲು ಹಿಂದೇಟು ಹಾಕುವುದುಂಟು. ಬಸ್ ಹಾಗೂ ಕಾರಿನಲ್ಲಿ ರಸ್ತೆಗಳಿಂದ ಆಯಾಸವಾಗುತ್ತದೆ ಎಂದು ಹೇಳುವುದುಂಟು. ಅನೇಕರು ರೈಲಿನ ಪ್ರಯಾಣ ಇಷ್ಟಪಡುತ್ತಾರೆ.

123

ಯಾವುದೇ ಅಲುಗಾಟವಿಲ್ಲದೆ ಸುಖಕರ ಪ್ರಯಾಣ. ಅದರಲ್ಲೂ ಮುಂಗಡವಾಗಿ ಸ್ಲೀಪಿಂಗ್ ಸೀಟು ಕಾಯ್ದಿರಿಸಿದರೆ ಅದಕ್ಕಿಂತ ನೆಮ್ಮದಿ ಪ್ರಯಾಣ ಬೇರೆ ಯಾವುದು ಇಲ್ಲ. ಆದರೆ ನಿಮಗೊಂದು ಗೊತ್ತಾ? ಭಾರತದಲ್ಲಿ ಹಲವು ಐಷಾರಾಮಿ ರೈಲುಗಳಿವೆ ಎನ್ನುವುದು?. ಅನೇಕರಿಗೆ ಇದು ಗೊತ್ತಿರಲಿಕಿಲ್ಲ. ಹೌದು, ಭಾರತದ ಐಷಾರಾಮಿ ರೈಲುಗಳು ಅದು ರಾಜರು ಮತ್ತು ರಾಜಮನೆತನದ ಯುಗಕ್ಕೆ ಕರೆದೊಯ್ಯುತ್ತದೆ. ಭವ್ಯವಾದ ಭಾರತದ ರಾಜಮನೆತನದ ಗತಕಾಲವನ್ನು ಪರಿಚಯಿಸುತ್ತದೆ. ಈ ಐಷಾರಾಮಿ ರೈಲುಗಳು ಭಾರತದ ಸಂಸ್ಕೃತಿಯ ಹಲವು ಅಂಶಗಳ ಅನುಭವವನ್ನು ನೀಡುತ್ತವೆ. ಹಾಗಾದರೆ ಈ ರೈಲುಗಳು ಯಾವುವು? ಇದರ ಹೆಸರೇನು? ಇವುಗಳು ನೀಡುವ ಸೇವೆ ಏನು? ಇಲ್ಲಿದೆ ಈ ಮೂರು ಟಾಪ್ ಲಕ್ಸುರಿ ರೈಲುಗಳ ಬಗ್ಗೆ ಸಂಪೂರ್ಣ ಮಾಹಿತಿ.

1. ಪ್ಯಾಲೇಸ್ ಆನ್ ವೀಲ್ಸ್ -Palace on Wheels

1. ಪ್ಯಾಲೇಸ್ ಆನ್ ವೀಲ್ಸ್ -Palace on Wheels

ಹೆಸರೇ ಹೇಳುವಂತೆ ರೈಲಿನಲ್ಲಿ ನಿಮಗೆ ಮಹಾರಾಜರ ಅರಮನೆಯ ಅನುಭವ ನೀಡುತ್ತದೆ. ರೈಲಿನ ಹೊರಗೆ ಹಾಗೂ ಒಳಗೆ ಅರಮನೆಯಂತೆ ಕಾಣುವ ರೀತಿಯಲ್ಲಿ ಪೇಂಟಿಂಗ್, ಚಿತ್ರಕಲೆ, ವಾಲ್ ಪೇಪರ್ ಸೇರಿ ವಿವಿಧ ಡೆಕೋರೇಶನ್ ಮಾಡಲಾಗುತ್ತದೆ.

ಇದರ ಒಳಗೆ ಹೋದರೆ ನಮಗೆ ಅರಮನೆಯೊಳಗೆ ಭೇಟಿ ನೀಡದಂತಹ ಅನುಭವ ಆಗುತ್ತದೆ. ಪ್ಯಾಲೇಸ್ ಆನ್ ವೀಲ್ಸ್ ಸದ್ಯ ಇರುವ ಐಷಾರಾಮಿ ರೈಲುಗಳ ಪೈಕಿ ಟಾಪ್ ಸ್ಥಾನದಲ್ಲಿದೆ. ಇನ್ನು ಈ ರೈಲು ರಾಜಮನೆತನದ ರಾಜಸ್ಥಾನದ ಹೆಮ್ಮೆಯಾಗಿದೆ.ಈ ರೈಲು ರಾಜಸ್ಥಾನದ ರಾಜಮನೆತನದ ಬಗ್ಗೆ ಬಹಳಷ್ಟು ಹೇಳುತ್ತದೆ. ಈ ರೈಲು 1982 ರಲ್ಲಿ ಬ್ರಿಟಿಷರ ಕಾಲದ ರಾಯಲ್ ಟ್ರೈನ್ ಕೋಚ್‌ಗಳನ್ನು ಆಧರಿಸಿ ಪ್ರಾರಂಭವಾಯಿತು.

ರೈಲು ದೆಹಲಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ದೆಹಲಿಗೆ ಹಿಂದಿರುಗುವ ಮೊದಲು ಜೈಪುರ, ಸವಾಯಿ ಮಾಧೋಪುರ್, ಚಿತ್ತೋರ್ಗಢ, ಉದಯಪುರ, ಜೈಸಲ್ಮೇರ್, ಜೋಧ್ಪುರ್, ಭರತ್ಪುರ್ ಮತ್ತು ಆಗ್ರಾವನ್ನು ಸುತ್ತಿಸಿಕೊಂಡು ಮತ್ತೆ ದೆಹಲಿಗೆ ಬರುತ್ತದೆ. ಒಟ್ಟು 8 ದಿನ ಹಗಲು ಹಾಗೂ 7 ದಿನ ರಾತ್ರಿ ಈ ರೈಲಿನಲ್ಲಿ ಕಳೆಯಬಹುದಾಗಿದೆ. ಇದರ ದರ ಅಂದಾಜು 485450 ರೂಪಾಯಿಯಾಗಿದೆ.

2. ದಿ ಗೋಲ್ಡನ್ ಚಾರಿಟೋ -The Golden Chariot

2. ದಿ ಗೋಲ್ಡನ್ ಚಾರಿಟೋ -The Golden Chariot

ಪ್ಯಾಲೇಸ್ ಆನ್ ವೀಲ್ಸ್ ಲಕ್ಸುರಿ ರೈಲಿನಂತೆ ದಿ ಗೋಲ್ಡನ್ ಚಾರಿಟೋ ಕೂಡ ರಾಜರ ಅರಮನೆಯಂತೆ ಸಿಂಗಾರಗೊಂಡಿರುವ ರೈಲು ಆಗಿದೆ. ರೈಲಿನೊಳಗೆ ಆಂಟಿಕ್ ಕುರ್ಚಿ, ಸೋಪಾ, ಲೈಟ್ ಗಳು ನಿಮ್ಮನ್ನು ಆಕರ್ಷಿಸುತ್ತದೆ.

ಇನ್ನು ಈ ರೈಲು ಪ್ರವಾಸೋದ್ಯಮದಲ್ಲಿ ನೀಡಿರುವ ಅತ್ಯುತ್ತಮ ಸೇವೆಗೆ 2013ರಲ್ಲಿ ಏಷ್ಯಾದ ಲೀಡಿಂಗ್ ಲಕ್ಸುರಿ ಟ್ರೇನ್ ಎಂಬ ಬಿರುದನ್ನು ಪಡೆದಿದೆ. ಇನ್ನು ಈ ದಿ ಗೋಲ್ಡನ್ ಚಾರಿಟೋದಲ್ಲಿ ರಾಜಮನೆತನದ ನಿವಾಸದಲ್ಲಿ ತಂಗುವ ಖುಷಿ ಅಲ್ಲದೇ, ಜಿಮ್, ರೆಸ್ಟೋರೆಂಟ್, ಬಾರ್ ಹಾಗೂ ಸ್ಪಾ ಸೇವೆಯನ್ನು ಕೂಡ ಹೊಂದಿದೆ. ಇನ್ನು ಎರಡು ರೂಟ್ ಗಳಲ್ಲಿ ಈ ರೈಲು ಚಲಿಸುತ್ತದೆ.

ಒಂದನೇ ರೂಟ್ : ಈ ದಿ ಗೋಲ್ಡನ್ ಚಾರಿಟೋ ಕರ್ನಾಟಕದ ಬೆಂಗಳೂರಿನಿಂದ ಆರಂಭವಾಗಿ. ಕಬಿನಿ, ಮೈಸೂರು, ಹಾಸನ, ಹಂಪಿ, ಬಾದಾಮಿಯಾಗಿ ಗೋವಾಕ್ಕೆ ತೆರಳಿ ಮತ್ತೆ ವಾಪಸ್ ಬೆಂಗಳೂರಿಗೆ ಮರಳುತ್ತದೆ.

ಎರಡನೇ ರೂಟ್ : ಈ ದಿ ಗೋಲ್ಡನ್ ಚಾರಿಟೋ ಬೆಂಗಳೂರಿನಿಂದ ಆರಂಭವಾಗಿ ಚೆನ್ನೈ-ಮಹಬಲಿಪುರಂ-ಪುದುಚೇರಿ-ತಾಂಜಾವೂರ್,ಮದುರೈ, ತಿರುವನಂತಪುರಂ, ಅಲೆಪ್ಪಿ, ಕೊಚ್ಚಿ ಬಳಿಕ ಮತ್ತೆ ಬೆಂಗಳೂರಿಗೆ ವಾಪಾಸ್.

ಇನ್ನು ಇದರಲ್ಲೂ ಕೂಡ 6 ರಾತ್ರಿಗಳಿಗೆ ಹಾಗೂ 7 ಹಗಲಿನ ಪ್ಯಾಕೇಜ್ ಇರಲಿದೆ. ಇದರ ಸುಂಕ 374460 ರೂಪಾಯಿಗಳಾಗಿದೆ.

3. ಡೆಕ್ಕನ್ ಒಡಿಸ್ಸಿ The Deccan Odyssey

3. ಡೆಕ್ಕನ್ ಒಡಿಸ್ಸಿ The Deccan Odyssey

ಪ್ಯಾಲೇಸ್ ಆನ್ ವೀಲ್ಸ್ ಮಾದರಿಯನ್ನು ಆಧರಿಸಿ, ಮಹಾರಾಷ್ಟ್ರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ರೈಲನ್ನು ಪ್ರಾರಂಭಿಸಲಾಗಿದೆ. ಇದು ಮುಂಬೈನಿಂದ ಪ್ರಾರಂಭವಾಗುತ್ತದೆ.

ರತ್ನಗಿರಿ, ಸಿಂಧುದುರ್ಗ, ಗೋವಾ, ಔರಂಗಾಬಾದ್, ಅಜಂತಾ-ಎಲ್ಲೋರಾ ನಾಸಿಕ್, ಪುಣೆ ಸೇರಿದಂತೆ 10 ಜನಪ್ರಿಯ ಪ್ರವಾಸಿ ತಾಣಗಳನ್ನು ಒಳಗೊಂಡಿದೆ, ಮುಂಬೈಗೆ ಹಿಂತಿರುಗುತ್ತದೆ. ವರದಿಗಳ ಪ್ರಕಾರ ಲಕ್ಸುರಿ ರೈಲುಗಳ ಪೈಕಿ ಅತ್ಯುತ್ತಮವಾಗಿದೆ ಎಂದು ಹೇಳಲಾಗಿದೆ.

ಟಾಟಾ ಗ್ರೂಪ್ ಸದ್ಯ ಇದರ ಮ್ಯಾನೇಜ್ ಮೆಂಟ್ ಅನ್ನು ಹೊತ್ತಿದೆ. ಇನ್ನು ಇದರಲ್ಲಿ 5 ಸ್ಟಾರ್ ಹೋಟೆಲ್ ಇದೆ. ಇನ್ನು ಇಲ್ಲು ಕೂಡ 8 ಹಗಲು 7 ರಾತ್ರಿಯ ಪ್ಯಾಕೇಜ್ ಇದಾಗಿದ್ದು, ಒಬ್ಬರಿಗೆ 5,12,400 ಆಗುತ್ತೆ.

English summary

Best Luxury Train Journeys In India

Here we are discussing about Best Luxury Train Journeys In India. Read more.
X
Desktop Bottom Promotion